- Kannada News Sports Cricket news India vs England jasprit bumrah first fast bowler captain in 35 years proves shoaib akhtar wrong
IND vs ENG: ಬುಮ್ರಾಗೆ ಟೆಸ್ಟ್ ನಾಯಕತ್ವ; ಜಸ್ಪ್ರೀತ್ ಟೆಸ್ಟ್ ಬೌಲರ್ ಅಲ್ಲ ಎಂದಿದ್ದ ಪಾಕ್ ವೇಗಿಗೆ ತಿರುಗೇಟು!
IND vs ENG: ಬುಮ್ರಾ ಬೆನ್ನು ಮತ್ತು ಭುಜದ ಮೇಲೆ ಹೆಚ್ಚಿನ ಭಾರ ಬಿಟ್ಟು ವೇಗವಾಗಿ ಬೌಲಿಂಗ್ ಮಾಡುತ್ತಾರೆ. ಹೀಗಾಗಿ ಬುಮ್ರಾ ಬೆನ್ನಿನಲ್ಲಿ ಏನಾದರೂ ಸಮಸ್ಯೆ ಉಟಾಂದರೆ, ಅವರಿಗೆ ಮುಂದೆ ಬೌಲಿಂಗ್ ಮಾಡಲು ಸಾಧ್ಯವಾಗುವುದಿಲ್ಲ ಎಂದಿದ್ದರು ಅಖ್ತರ್.
Updated on:Jun 30, 2022 | 8:08 PM

ಭಾರತ ತಂಡ ಶುಕ್ರವಾರ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯವನ್ನು ಆಡಲಿದ್ದು, ತಂಡದ ನಾಯಕತ್ವ ಟೀಂ ಇಂಡಿಯಾದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಕೈಯಲ್ಲಿದೆ. ಅಭ್ಯಾಸ ಪಂದ್ಯದ ವೇಳೆ ತಂಡದ ನಾಯಕ ರೋಹಿತ್ ಶರ್ಮಾಗೆ ಕೊರೊನಾ ಪಾಸಿಟಿವ್ ಕಂಡುಬಂದಿದ್ದರಿಂದ ಬುಮ್ರಾಗೆ ನಾಯಕತ್ವ ನೀಡಲಾಗಿದೆ.

ಬುಮ್ರಾ ನಾಯಕನಾಗುವುದು ಭಾರತದ ಕ್ರಿಕೆಟ್ ಇತಿಹಾಸದಲ್ಲಿ ಬಹಳ ವಿಶೇಷವಾದ ಸಂದರ್ಭವಾಗಿದೆ. 35 ವರ್ಷಗಳ ನಂತರ ಟೀಮ್ ಇಂಡಿಯಾದ ನಾಯಕತ್ವವನ್ನು ವೇಗದ ಬೌಲರ್ ವಹಿಸಿಕೊಳ್ಳುತ್ತಿದ್ದಾರೆ. ವಿಶ್ವ ಚಾಂಪಿಯನ್ ನಾಯಕ ಕಪಿಲ್ ದೇವ್ ನಂತರ, ಯಾವುದೇ ವೇಗದ ಬೌಲರ್ ಭಾರತದ ಟೆಸ್ಟ್ ನಾಯಕನಾಗಿರಲಿಲ್ಲ.

ಬುಮ್ರಾ ಇಂದು ವಿಶ್ವದ ಅಗ್ರ ಬೌಲರ್‌ಗಳಲ್ಲಿ ಒಬ್ಬರು. ಆದಾಗ್ಯೂ, ಅವರು ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದಾಗ, ಅವರ ಬೌಲಿಂಗ್ ಶೈಲಿಯ ಬಗ್ಗೆ ಸಾಕಷ್ಟು ಪ್ರಶ್ನೆಗಳು ಎದ್ದಿದ್ದವು. ಬುಮ್ರಾ ಟೆಸ್ಟ್ ಆಡಲು ಸೂಕ್ತ ಬೌಲರ್ ಅಲ್ಲ ಎಂದು ಕೆಲವರು ಹೇಳಿದರು. ಆದರೆ ಈ ಭಾರತೀಯ ಬೌಲರ್ ಎಲ್ಲರ ವಾದವನ್ನು ತಪ್ಪೆಂದು ಸಾಬೀತುಪಡಿಸಿದ್ದಾರೆ.

ಬುಮ್ರಾ ಅವರ ಬೌಲಿಂಗ್ ಶೈಲಿಯನ್ನು ಪ್ರಶ್ನಿಸಿದವರಲ್ಲಿ ಪಾಕಿಸ್ತಾನದ ವೇಗದ ಬೌಲರ್ ಶೋಯೆಬ್ ಅಖ್ತರ್ ಕೂಡ ಸೇರಿದ್ದಾರೆ. ಶೋಯೆಬ್ ಅಖ್ತರ್, 'ಬುಮ್ರಾ ಬೆನ್ನು ಮತ್ತು ಭುಜದ ಮೇಲೆ ಹೆಚ್ಚಿನ ಭಾರ ಬಿಟ್ಟು ವೇಗವಾಗಿ ಬೌಲಿಂಗ್ ಮಾಡುತ್ತಾರೆ. ಹೀಗಾಗಿ ಬುಮ್ರಾ ಬೆನ್ನಿನಲ್ಲಿ ಏನಾದರೂ ಸಮಸ್ಯೆ ಉಟಾಂದರೆ, ಅವರಿಗೆ ಮುಂದೆ ಬೌಲಿಂಗ್ ಮಾಡಲು ಸಾಧ್ಯವಾಗುವುದಿಲ್ಲ ಎಂದಿದ್ದರು. ಇದಕ್ಕೆ ಸೂಕ್ತ ಉದಾಹರಣೆಯಾಗಿ ಇಯಾನ್ ಬಿಷಪ್ ಮತ್ತು ಶೇನ್ ಬಾಂಡ್ ಕೂಡ ಇದ್ದಾರೆ ಎಂದಿದ್ದರು. ಪ್ರತಿ ಪಂದ್ಯದಲ್ಲೂ ಬುಮ್ರಾ ಕೇವಲ ಬೌಲಿಂಗ್ ಅಷ್ಟೇ ಮಾಡಬೇಕು, ಫೀಲ್ಡಿಂಗ್ ಮಾಡಲೇಬಾರದು ಎಂದಿದ್ದಾರು. ಪ್ರತಿ ಪಂದ್ಯದಲ್ಲೂ ಟೀಂ ಇಂಡಿಯಾ ಅವರಿಗೆ ಅವಕಾಶ ನೀಡಿದರೆ, ಬುಮ್ರಾ ಒಂದು ವರ್ಷದಲ್ಲಿ ಸಂಪೂರ್ಣವಾಗಿ ತಂಡದಿಂದ ಹೊರಹೊಗಲಿದ್ದಾರೆ ಎಂದಿದ್ದರು.

ಆದರೆ, ಬುಮ್ರಾ ವಿಷಯದಲ್ಲಿ ಇದು ಆಗಲಿಲ್ಲ. ಅವರು ಎಲ್ಲಾ ಮೂರು ಫಾರ್ಮ್ಯಾಟ್‌ಗಳಲ್ಲಿ ಟೀಮ್ ಇಂಡಿಯಾದ ಭಾಗವಾಗಿದ್ದಾರೆ, ಇದಲ್ಲದೇ ಅವರು ಐಪಿಎಲ್‌ನಲ್ಲೂ ಆಡುತ್ತಿದ್ದಾರೆ. ಈಗ ಅವರು ಹೊಸ ಜವಾಬ್ದಾರಿಗೆ ಸಿದ್ಧರಾಗಿದ್ದಾರೆ. ಜಸ್ಪ್ರೀತ್ ಬುಮ್ರಾ ಅವರು 2018 ರಲ್ಲಿ ಭಾರತೀಯ ತಂಡಕ್ಕೆ ತಮ್ಮ ಟೆಸ್ಟ್ ಪಾದಾರ್ಪಣೆ ಮಾಡಿದರು. ಈಗ ಟೀಮ್ ಇಂಡಿಯಾ ಪರ ಬುಮ್ರಾ 29 ಟೆಸ್ಟ್‌ಗಳನ್ನು ಆಡಿದ್ದಾರೆ, ಇದರಲ್ಲಿ ಅವರು 21.73 ಸರಾಸರಿಯಲ್ಲಿ 123 ವಿಕೆಟ್‌ಗಳನ್ನು ಪಡೆದಿದ್ದಾರೆ.
Published On - 8:08 pm, Thu, 30 June 22
