IND vs ENG: ಗಾಯದಿಂದ ಚೇತರಿಸಿಕೊಂಡ ರಹಾನೆ, ಅಭ್ಯಾಸದಲ್ಲಿ ನಿರತ; ಮೊದಲ ಟೆಸ್ಟ್​ ಆಡುವುದು ಅನುಮಾನ

| Updated By: ಪೃಥ್ವಿಶಂಕರ

Updated on: Jul 27, 2021 | 9:31 PM

IND vs ENG: ರಹಾನೆ ಪ್ರಸ್ತುತ ಅಭ್ಯಾಸ ಮಾಡುತ್ತಿದ್ದರೂ, ಅವರ ಕಾಲಿನ ಗಾಯವು ಸಂಪೂರ್ಣವಾಗಿ ಗುಣಮುಖವಾಗಿಲ್ಲ. ಆದ್ದರಿಂದ, ಆಗಸ್ಟ್ 4 ರಂದು ನಡೆಯುವ ಮೊದಲ ಟೆಸ್ಟ್‌ನಲ್ಲಿ ಆಡಲು ಸಾಧ್ಯವಾಗದಿದ್ದರೆ, ಪರ್ಯಾಯ ಬ್ಯಾಟ್ಸ್‌ಮನ್ ಆಡಬೇಕಾಗುತ್ತದೆ.

IND vs ENG: ಗಾಯದಿಂದ ಚೇತರಿಸಿಕೊಂಡ ರಹಾನೆ, ಅಭ್ಯಾಸದಲ್ಲಿ ನಿರತ; ಮೊದಲ ಟೆಸ್ಟ್​ ಆಡುವುದು ಅನುಮಾನ
ಅಭ್ಯಾಸದಲ್ಲಿ ಕೊಹ್ಲಿ, ರಹಾನೆ
Follow us on

ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯು ಆಗಸ್ಟ್ 4 ರಿಂದ ಪ್ರಾರಂಭವಾಗುತ್ತದೆ. ಇದು ಮುಂಬರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ (ಐಸಿಸಿ ಡಬ್ಲ್ಯೂಟಿಸಿ 23) ಮೊದಲ ಪಂದ್ಯವಾದ್ದರಿಂದ, ಭಾರತ ಉತ್ತಮ ಪ್ರದರ್ಶನ ನೀಡುವುದು ಬಹಳ ಮುಖ್ಯ. ಆದರೆ ಟೀಂ ಇಂಡಿಯಾ ಆಟಗಾರರ ಇಂಜುರಿ ಸಮಸ್ಯೆ ಮುಂದುವರಿದಿರುವುದರಿಂದ ತಂಡದ ನಿರ್ವಹಣೆ ಆತಂಕದಲ್ಲಿದೆ. ಆದರೆ ಅದೇ ಸಮಯದಲ್ಲಿ, ಭಾರತೀಯ ಟೆಸ್ಟ್ ತಂಡದ ನಾಯಕ ಮತ್ತು ಉಪನಾಯಕ ಅಜಿಂಕ್ಯ ರಹಾನೆ ಫಿಟ್ ಆಗಿದ್ದು, ತರಬೇತಿಗಾಗಿ ಮೈದಾನಕ್ಕೆ ಮರಳಿದ್ದಾರೆ.

ಅಜಿಂಕ್ಯ ರಹಾನೆ ಅವರ ಎಡಗಾಲಿಗೆ (ಮಂಡಿರಜ್ಜು) ಗಾಯವಾಗಿತ್ತು. ಇದರಿಂದ ಕೌಂಟಿ ಇಲೆವೆನ್ ವಿರುದ್ಧದ ಅಭ್ಯಾಸ ಪಂದ್ಯಕ್ಕಾಗಿ ಅವರು ಭಾರತೀಯ ತಂಡದಿಂದ ಹೊರಗುಳಿದಿದ್ದರು. ಅವರ ಕಾಲಿನ ನೋವನ್ನು ಕಡಿಮೆ ಮಾಡಲು ವೈದ್ಯಕೀಯ ತಂಡ ಶ್ರಮಿಸುತ್ತಿದ್ದು ಅವರಿಗೆ ಸೂಕ್ತ ಚಿಕಿತ್ಸೆ ನೀಡಲಾಯಿತು. ಅದರ ನಂತರ, ಅವರು ಚೇತರಿಸಿಕೊಂಡಿದ್ದು ಅಭ್ಯಾಸಕ್ಕಾಗಿ ಮೈದಾನಕ್ಕೆ ಮರಳಿದ್ದಾರೆ.

ಕೆ.ಎಲ್.ರಾಹುಲ್‌ಗೆ ಅವಕಾಶ
ರಹಾನೆ ಪ್ರಸ್ತುತ ಅಭ್ಯಾಸ ಮಾಡುತ್ತಿದ್ದರೂ, ಅವರ ಕಾಲಿನ ಗಾಯವು ಸಂಪೂರ್ಣವಾಗಿ ಗುಣಮುಖವಾಗಿಲ್ಲ. ಆದ್ದರಿಂದ, ಆಗಸ್ಟ್ 4 ರಂದು ನಡೆಯುವ ಮೊದಲ ಟೆಸ್ಟ್‌ನಲ್ಲಿ ಆಡಲು ಸಾಧ್ಯವಾಗದಿದ್ದರೆ, ಪರ್ಯಾಯ ಬ್ಯಾಟ್ಸ್‌ಮನ್ ಆಡಬೇಕಾಗುತ್ತದೆ. ಏತನ್ಮಧ್ಯೆ, ಕೌಂಟಿ ಇಲೆವೆನ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಅಜೇಯ ಶತಕ ಗಳಿಸಿದ ಕೆ.ಎಲ್.ರಾಹುಲ್ ಅವರಿಗೆ ಅವಕಾಶ ಸಿಗಬಹುದು. ಅವರನ್ನು ಮಧ್ಯಮ ಕ್ರಮಾಂಕದಲ್ಲಿ ಆಡಿಸಬಹುದು. ಬೌಲಿಂಗ್‌ನಲ್ಲಿಯೂ ಮೊಹಮ್ಮದ್ ಸಿರಾಜ್ ಅವರನ್ನು ಮೊದಲ ಟೆಸ್ಟ್‌ನಲ್ಲಿ ಆಡಿಸಬಹುದು. ಪೃಥ್ವಿ ಶಾ ಮತ್ತು ಸೂರ್ಯಕುಮಾರ್ ಯಾದವ್ ಅವರನ್ನು ಶ್ರೀಲಂಕಾ ಪ್ರವಾಸದ ನಂತರ ಇಂಗ್ಲೆಂಡ್‌ಗೆ ಕರೆಸಿಕೊಳ್ಳಲಾಗಿದೆ.

24 ಆಟಗಾರರಲ್ಲಿ 3 ಆಟಗಾರರಿಗೆ ಇಂಜುರಿ
ಭಾರತ ಮತ್ತು ಇಂಗ್ಲೆಂಡ್ ನಡುವಿನ ಸರಣಿಯ ಆರಂಭಕ್ಕೂ ಮುನ್ನ ಮೂರು ಯುವ ಭಾರತೀಯ ಆಟಗಾರರನ್ನು ಪ್ರವಾಸದಿಂದ ಹೊರಗಿಡಲಾಗಿದೆ. ವಾಷಿಂಗ್ಟನ್ ಸುಂದರ್ ಅವರೊಂದಿಗೆ ಅವೇಶ್ ಖಾನ್ ಹಾಗೂ ಶುಭ್​ಮನ್ ಗಿಲ್ ಸೇರಿದ್ದಾರೆ. ಡಬ್ಲ್ಯೂಟಿಸಿ ಫೈನಲ್ ಪಂದ್ಯದಲ್ಲಿ ಶುಭ್​ಮನ್ ಗಾಯಗೊಂಡಿದ್ದರು. ಆದ್ದರಿಂದ ಪಂದ್ಯದ ನಂತರ, ಶುಭ್​ಮನ್ ಪ್ರವಾಸದಿಂದ ಹಿಂದೆ ಸರಿದು ಮನೆಗೆ ಮರಳಿದರು.

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ವೇಳಾಪಟ್ಟಿ
ಮೊದಲ ಟೆಸ್ಟ್, ಆಗಸ್ಟ್ 4 ರಿಂದ 8

ಎರಡನೇ ಟೆಸ್ಟ್, ಆಗಸ್ಟ್ 12 ರಿಂದ 16

ಮೂರನೇ ಟೆಸ್ಟ್, ಆಗಸ್ಟ್ 25 ರಿಂದ 29

ನಾಲ್ಕನೇ ಟೆಸ್ಟ್, ಸೆಪ್ಟೆಂಬರ್ 2 ರಿಂದ 6

ಐದನೇ ಟೆಸ್ಟ್, ಸೆಪ್ಟೆಂಬರ್ 10 ರಿಂದ 14.

ಟೀಮ್ ಇಂಡಿಯಾ
ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ (ಉಪನಾಯಕ), ರೋಹಿತ್ ಶರ್ಮಾ, ಶುಬ್ಮನ್ ಗಿಲ್, ಮಾಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ, ಹನುಮಾ ವಿಹಾರಿ, ರಿಷಭ್ ಪಂತ್, ಆರ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಜಸ್ಪ್ರೀತ್ ಬುಮ್ರಾ ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಶಾರ್ದುಲ್ ಠಾಕೂರ್ ಮತ್ತು ಉಮೇಶ್ ಯಾದವ್. ಕೆ.ಎಲ್.ರಾಹುಲ್ ಮತ್ತು ವೃದ್ಧಿಮಾನ್ ಸಹಾ