ಭಾರತ ತಂಡದ ಮುಂದಿನ ಸರಣಿಯ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ
India vs England: ಚಾಂಪಿಯನ್ಸ್ ಟ್ರೋಫಿ ಆರಂಭಕ್ಕೂ ಮುನ್ನ ಟೀಮ್ ಇಂಡಿಯಾ ಮೂರು ಪಂದ್ಯಗಳ ಏಕದಿನ ಸರಣಿ ಆಡಲಿದೆ. ಈ ಬಾರಿ ಕೂಡ ಭಾರತ ತಂಡದ ಎದುರಾಳಿ ಇಂಗ್ಲೆಂಡ್. ಆಂಗ್ಲರ ವಿರುದ್ಧ ಟಿ20 ಸರಣಿಯನ್ನು 4-1 ಅಂತರದಿಂದ ಗೆದ್ದು ಬೀಗಿರುವ ಟೀಮ್ ಇಂಡಿಯಾ ಇದೀಗ ಏಕದಿನ ಸರಣಿಗಾಗಿ ಸಜ್ಜಾಗುತ್ತಿದೆ. ಈ ಸರಣಿಯು ಫೆಬ್ರವರಿ 6 ರಿಂದ ಶುರುವಾಗಲಿದೆ.

ಭಾರತ ಮತ್ತು ಇಂಗ್ಲೆಂಡ್ ನಡುವಣ 5 ಪಂದ್ಯಗಳ ಟಿ20 ಸರಣಿ ಮುಗಿದಿದೆ. ಈ ಸರಣಿಯ ಮೊದಲೆರಡು ಮ್ಯಾಚ್ಗಳಲ್ಲಿ ಟೀಮ್ ಇಂಡಿಯಾ ಗೆದ್ದರೆ, ಮೂರನೇ ಪಂದ್ಯದಲ್ಲಿ ಇಂಗ್ಲೆಂಡ್ ಜಯ ಸಾಧಿಸಿತ್ತು. ಆದರೆ ನಾಲ್ಕನೇ ಮತ್ತು ಐದನೇ ಪಂದ್ಯಗಳಲ್ಲಿ ಭರ್ಜರಿ ಜಯ ಸಾಧಿಸಿ ಟೀಮ್ ಇಂಡಿಯಾ 4-1 ಅಂತರದಿಂದ ಸರಣಿ ಗೆದ್ದುಕೊಂಡಿದೆ.
ಇದೀಗ ಟಿ20 ಸರಣಿ ಮುಗಿಸಿರುವ ಭಾರತ ತಂಡವು ಏಕದಿನ ಸರಣಿಗಾಗಿ ಸಜ್ಜಾಗಬೇಕಿದೆ. ಏಕೆಂದರೆ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯು ಫೆಬ್ರವರಿ 6 ರಿಂದ ಶುರುವಾಗಲಿದೆ. ಈ ಸರಣಿಯಲ್ಲಿ ಒಟ್ಟು 3 ಪಂದ್ಯಗಳನ್ನಾಡಲಾಗುತ್ತದೆ.
ಮುಂಬರುವ ಚಾಂಪಿಯನ್ಸ್ ಟ್ರೋಫಿ ದೃಷ್ಟಿಯಿಂದ ಟೀಮ್ ಇಂಡಿಯಾ ಪಾಲಿಗೆ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ತುಂಬಾ ಮಹತ್ವದ್ದು. ಏಕೆಂದರೆ ಆಂಗ್ಲರ ವಿರುದ್ಧದ ಸರಣಿ ಮುಕ್ತಾಯದ ಬೆನ್ನಲ್ಲೇ ಟೀಮ್ ಇಂಡಿಯಾ ಚಾಂಪಿಯನ್ಸ್ ಟ್ರೋಫಿಗಾಗಿ ತೆರಳಲಿದೆ.
ಹೀಗಾಗಿ ಗೆಲುವಿನ ಲಯದೊಂದಿಗೆ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಪಾಲ್ಗೊಳ್ಳಲು ಭಾರತ ತಂಡ ಇಂಗ್ಲೆಂಡ್ ವಿರುದ್ಧ ಭರ್ಜರಿ ಪ್ರದರ್ಶನ ನೀಡಲೇಬೇಕು. ಈ ಸರಣಿಯ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ…
ದಿನಾಂಕ | ಪಂದ್ಯ ಮತ್ತು ಸ್ಥಳ | ಸಮಯ |
ಫೆಬ್ರವರಿ 06, ಗುರುವಾರ | ಭಾರತ vs ಇಂಗ್ಲೆಂಡ್, ಮೊದಲ ಏಕದಿನ ಪಂದ್ಯ (ನಾಗ್ಪುರ) | 01:30 PM IST |
ಫೆಬ್ರವರಿ 09, ಭಾನುವಾರ | ಭಾರತ vs ಇಂಗ್ಲೆಂಡ್, ಎರಡನೇ ಏಕದಿನ ಪಂದ್ಯ ( ಕಟಕ್) | 01:30 PM IST |
ಫೆಬ್ರವರಿ 12, ಬುಧವಾರ | ಭಾರತ vs ಇಂಗ್ಲೆಂಡ್, ಮೂರನೇ ಏಕದಿನ ಪಂದ್ಯ (ಅಹಮದಾಬಾದ್) | 01:30 PM IST |