AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs IRE: ಭಾರತ- ಐರ್ಲೆಂಡ್ ನಡುವೆ ಟಿ20 ಸರಣಿ; ವೇಳಾಪಟ್ಟಿ ಪ್ರಕಟ

India Cricket Schedule Post-IPL 2026: ಬಿಸಿಸಿಐ 2026ರ ಐಪಿಎಲ್ ನಂತರದ ಟೀಂ ಇಂಡಿಯಾ ವೇಳಾಪಟ್ಟಿ ಪ್ರಕಟಿಸಿದೆ. ಅಫ್ಘಾನಿಸ್ತಾನ, ಐರ್ಲೆಂಡ್ (ಜೂನ್ 26, 28, ಬೆಲ್‌ಫಾಸ್ಟ್), ಇಂಗ್ಲೆಂಡ್ ಸರಣಿಗಳು ನಿಗದಿಯಾಗಿವೆ. ರೋಹಿತ್, ವಿರಾಟ್ ಐರ್ಲೆಂಡ್ ಟಿ20 ಸರಣಿಯಲ್ಲಿ ಇರುವುದಿಲ್ಲ, ಯುವ ಆಟಗಾರರಿಗೆ ಅವಕಾಶ ಸಿಗಲಿದೆ. ಐಪಿಎಲ್ ಪ್ರದರ್ಶನ ಆಧಾರದ ಮೇಲೆ ಆಯ್ಕೆ ನಡೆಯಲಿದ್ದು, ಹಾರ್ದಿಕ್ ಅಥವಾ ಸೂರ್ಯಕುಮಾರ್ ತಂಡವನ್ನು ಮುನ್ನಡೆಸುವ ಸಾಧ್ಯತೆಯಿದೆ.

IND vs IRE: ಭಾರತ- ಐರ್ಲೆಂಡ್ ನಡುವೆ ಟಿ20 ಸರಣಿ; ವೇಳಾಪಟ್ಟಿ ಪ್ರಕಟ
Ind Vs Ire
ಪೃಥ್ವಿಶಂಕರ
|

Updated on:Mar 22, 2026 | 5:44 PM

Share

2026 ರ ಐಪಿಎಲ್ (IPL 2026) ಪ್ರಾರಂಭವಾಗುವ ಮೊದಲೇ ಬಿಸಿಸಿಐ (BCCI), ಟೀಂ ಇಂಡಿಯಾದ ಮುಂದಿನ ವೇಳಾಪಟ್ಟಿಯ ಬಗ್ಗೆ ಮಹತ್ವದ ಮಾಹಿತಿ ನೀಡಿದೆ. ಎರಡು ತಿಂಗಳ ಕಾಲ ಐಪಿಎಲ್​ನಲ್ಲಿ ಬ್ಯುಸಿಯಾಗಲಿರುವ ಟೀಂ ಇಂಡಿಯಾ ಆ ಬಳಿಕ ಒಂದರ ಹಿಂದೆ ಒಂದರಂತೆ ಸರಣಿಗಳನ್ನು ಆಡಲಿದೆ. ಮೊದಲಿಗೆ ಅಫ್ಘಾನಿಸ್ತಾನವನ್ನು ಎದುರಿಸಲಿರುವ ಭಾರತ ತಂಡ ಆ ಬಳಿಕ ವಿದೇಶಿ ಪ್ರವಾಸ ಮಾಡಲಿದೆ. ಆ ವಿದೇಶಿ ಪ್ರವಾಸಗಳಲ್ಲಿ ಮೊದಲನೆಯದ್ದಾಗಿ ಐರ್ಲೆಂಡ್ (India vs Ireland) ದೇಶಕ್ಕೆ ಕಾಲಿಡಲಿದೆ. ಉಭಯ ತಂಡಗಳ ನಡುವೆ ಎರಡು ಪಂದ್ಯಗಳ ಟಿ20 ಸರಣಿ ನಡೆಯಲಿದೆ. ಇದೀಗ ಬಿಸಿಸಿಐ, ಆ ಎರಡು ಪಂದ್ಯಗಳು ಎಲ್ಲಿ? ಯಾವಾಗ ನಡೆಯಲಿವೆ ಎಂಬುದರ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.

ಭಾರತ ತಂಡವು ಸುಮಾರು ಮೂರು ವರ್ಷಗಳ ನಂತರ ಮತ್ತೆ ಐರಿಶ್ ನೆಲದಲ್ಲಿ ಟಿ20 ಸರಣಿಯನ್ನಾಡಲಿದೆ. ಟೀಂ ಇಂಡಿಯಾ ಈ ಹಿಂದೆ 2018, 2022 ಮತ್ತು 2023 ರಲ್ಲಿ ಐರ್ಲೆಂಡ್ ಪ್ರವಾಸ ಮಾಡಿತ್ತು. ಈ ಬಾರಿ, ಎರಡು ಪಂದ್ಯಗಳ ಟಿ20 ಸರಣಿಗಾಗಿ ಐರ್ಲೆಂಡ್​ಗೆ ಹೋಗಲಿದೆ. ಮೊದಲ ಟಿ20 ಪಂದ್ಯ ಜೂನ್ 26 ರಂದು ನಡೆದರೆ, ಎರಡನೇ ಟಿ20 ಪಂದ್ಯ ಜೂನ್ 28 ರಂದು ನಡೆಯಲಿದೆ. ಈ ಎರಡೂ ಪಂದ್ಯಗಳು ಬೆಲ್‌ಫಾಸ್ಟ್‌ನಲ್ಲಿ ನಡೆಯಲಿವೆ. ಐಪಿಎಲ್‌ನಲ್ಲಿ ಮಿಂಚುವ ಆಟಗಾರರು ಈ ಪ್ರವಾಸಕ್ಕೆ ತಂಡದಲ್ಲಿ ಆಯ್ಕೆಯಾಗುವ ಸಾಧ್ಯತೆಗಳಿವೆ.

ರೋಹಿತ್, ವಿರಾಟ್ ಆಡ್ತಾರಾ?

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಈಗಾಗಲೇ ಟಿ20 ಸ್ವರೂಪದಿಂದ ನಿವೃತ್ತಿ ಘೋಷಿಸಿರುವುದರಿಂದ ಅವರು ಐರ್ಲೆಂಡ್ ಸರಣಿಯಲ್ಲಿ ಕಾಣಿಸಿಕೊಳ್ಳುವುದಿಲ್ಲ. ಆದಾಗ್ಯೂ, ರೋಹಿತ್ ಮತ್ತು ವಿರಾಟ್ ಐರ್ಲೆಂಡ್ ಪ್ರವಾಸದ ಮೊದಲು ಅಫ್ಘಾನಿಸ್ತಾನ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯಲ್ಲಿ (ಜೂನ್ 6 – ಜೂನ್ 20) ಮತ್ತು ಐರ್ಲೆಂಡ್ ಪ್ರವಾಸದ ನಂತರ ಇಂಗ್ಲೆಂಡ್ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯಲ್ಲಿ (ಜುಲೈ 1 – ಜುಲೈ 19) ಆಡುವ ಸಾಧ್ಯತೆಯಿದೆ. ಇದರರ್ಥ ಒಟ್ಟಾರೆಯಾಗಿ, ಈ ಇಬ್ಬರು ಸ್ಟಾರ್ ಆಟಗಾರರು ಐಪಿಎಲ್ ನಂತರ 6 ಏಕದಿನ ಪಂದ್ಯಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಅಫ್ಘನ್, ಇಂಗ್ಲೆಂಡ್ ಸರಣಿಯ ವಿವರಗಳು

ಐಪಿಎಲ್ ಮುಗಿದ ಕೂಡಲೇ, ಟೀಂ ಇಂಡಿಯಾ ಜೂನ್ 6 ರಿಂದ ಜೂನ್ 20 ರವರೆಗೆ ಅಫ್ಘಾನಿಸ್ತಾನವನ್ನು ಎದುರಿಸಲಿದೆ. ಇದರಲ್ಲಿ ಒಂದು ಟೆಸ್ಟ್ ಪಂದ್ಯ ಮತ್ತು ಮೂರು ಏಕದಿನ ಪಂದ್ಯಗಳು ಸೇರಿವೆ. ಅದಾದ ತಕ್ಷಣ, ಐರ್ಲೆಂಡ್ ವಿರುದ್ಧ ಎರಡು ಟಿ20 ಪಂದ್ಯಗಳನ್ನು ಮುಗಿಸಿದ ನಂತರ ಭಾರತ ತಂಡ ಇಂಗ್ಲೆಂಡ್‌ಗೆ ತೆರಳಲಿದೆ. ಇಂಗ್ಲೆಂಡ್ ಪ್ರವಾಸದಲ್ಲಿ ಐದು ಟಿ20 ಮತ್ತು ಮೂರು ಏಕದಿನ ಪಂದ್ಯಗಳು ನಡೆಯಲಿವೆ.

ಯುವ ಆಟಗಾರರಿಗೆ ಸುವರ್ಣ ಅವಕಾಶ

ಐರ್ಲೆಂಡ್ ಸರಣಿಯಲ್ಲಿ ಹಾರ್ದಿಕ್ ಪಾಂಡ್ಯ ಅಥವಾ ಸೂರ್ಯಕುಮಾರ್ ಯಾದವ್ ಯುವ ತಂಡವನ್ನು ಮುನ್ನಡೆಸುವ ಸಾಧ್ಯತೆಯಿದೆ. ಐಪಿಎಲ್ 2026 ರಲ್ಲಿ ಅದ್ಭುತ ಪ್ರದರ್ಶನ ನೀಡುವವರಿಗೆ ಐರ್ಲೆಂಡ್ ಪ್ರವಾಸಕ್ಕೆ ಕರೆ ಬರುವ ಸಾಧ್ಯತೆಯಿದೆ. ರೋಹಿತ್ ಮತ್ತು ವಿರಾಟ್ ಅವರಂತಹ ಹಿರಿಯ ಆಟಗಾರರು ಇಲ್ಲದಿದ್ದರೂ, ಭಾರತ ಹೊಂದಿರುವ ಬಲವಾದ ಬೆಂಚ್ ಬಲದೊಂದಿಗೆ ಐರ್ಲೆಂಡ ತಂಡವನ್ನು ಸದೆಬಡಿಯಲು ಟೀಂ ಇಂಡಿಯಾ ಹೊರಡಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:43 pm, Sun, 22 March 26

Follow Us