AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs NZ: ಬೆಂಗಳೂರಿನಂತೆ ಪುಣೆಯಲ್ಲೂ ಪಂದ್ಯಕ್ಕೆ ಮಳೆ ಅಡ್ಡಿ? MCA ಪಿಚ್ ಯಾರಿಗೆ ಹೆಚ್ಚು ಸಹಕಾರಿ?

IND vs NZ: ಕಳೆದ ಕೆಲವು ದಿನಗಳಿಂದ ಪುಣೆಯಲ್ಲಿ ಮಳೆಯಾಗುತ್ತಿದೆ. ಮಂಗಳವಾರದಂದು ಅಂದರೆ ಅಕ್ಟೋಬರ್ 22 ರಂದು, ದಿನವಿಡೀ ಮಳೆಯಾಗಿರಲಿಲ್ಲ. ಹೀಗಾಗಿ ಎರಡೂ ತಂಡಗಳು ಅಭ್ಯಾಸ ನಡೆಸಿದವು ಆದರೆ ರಾತ್ರಿಯಲ್ಲಿ ಭಾರೀ ಮಳೆಯಾಯಿತು. ಬುಧವಾರವೂ ಮಳೆಯಾಗುವ ನಿರೀಕ್ಷೆಯಿತ್ತು.

IND vs NZ: ಬೆಂಗಳೂರಿನಂತೆ ಪುಣೆಯಲ್ಲೂ ಪಂದ್ಯಕ್ಕೆ ಮಳೆ ಅಡ್ಡಿ? MCA ಪಿಚ್ ಯಾರಿಗೆ ಹೆಚ್ಚು ಸಹಕಾರಿ?
ಪುಣೆ ಟೆಸ್ಟ್
ಪೃಥ್ವಿಶಂಕರ
|

Updated on: Oct 23, 2024 | 9:52 PM

Share

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯವು ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ​​ಸ್ಟೇಡಿಯಂನಲ್ಲಿ ಗುರುವಾರ (ಅಕ್ಟೋಬರ್ 24) ದಿಂದ ಆರಂಭವಾಗಲಿದೆ. ಭಾರತ ತಂಡ 3 ಪಂದ್ಯಗಳ ಸರಣಿಯಲ್ಲಿ 0-1 ಅಂತರದಲ್ಲಿ ಹಿನ್ನಡೆಯಲ್ಲಿದೆ. ಹೀಗಾಗಿ ತಂಡಕ್ಕೆ ಸರಣಿ ಸೋಲುವ ಭೀತಿ ಎದುರಾಗಿದೆ. ಆತಿಥೇಯ ಭಾರತ ಈ ಸರಣಿಯನ್ನು ಜೀವಂತವಾಗಿರಸಬೇಕೆಂದರೆ, ಪುಣೆ ಟೆಸ್ಟ್ ಪಂದ್ಯವನ್ನು ಯಾವುದೇ ಬೆಲೆ ತೆತ್ತಾದರೂ ಗೆಲ್ಲಲೇಬೇಕಾಗಿದೆ. ಆದರೆ ಈ ನಡುವೆ ಪುಣೆ ಟೆಸ್ಟ್ ಕೂಡ ಬೆಂಗಳೂರು ಟೆಸ್ಟ್​ನಿಂದ ಮಳೆ ಪೀಡಿತಾವಾಗಿರುತ್ತಾ ಎಂಬುದು ಅಭಿಮಾನಿಗಳಲ್ಲಿ ಮೂಡಿರುವ ಆತಂಕವಾಗಿದೆ. ಹೀಗಾಗಿ ಪುಣೆಯ ಹವಾಮಾನ ವರದಿ ಏನಿರಲಿದೆ ಎಂಬುದರ ವಿವರವನ್ನು ನಾವು ನಿಮಗೆ ಹೇಳಲಿದ್ದೇವೆ.

ಪುಣೆ ಹವಾಮಾನ ವರದಿ

ವಾಸ್ತವವಾಗಿ ಕಳೆದ ಕೆಲವು ದಿನಗಳಿಂದ ಪುಣೆಯಲ್ಲಿ ಮಳೆಯಾಗುತ್ತಿದೆ. ಮಂಗಳವಾರದಂದು ಅಂದರೆ ಅಕ್ಟೋಬರ್ 22 ರಂದು, ದಿನವಿಡೀ ಮಳೆಯಾಗಿರಲಿಲ್ಲ. ಹೀಗಾಗಿ ಎರಡೂ ತಂಡಗಳು ಅಭ್ಯಾಸ ನಡೆಸಿದವು ಆದರೆ ರಾತ್ರಿಯಲ್ಲಿ ಭಾರೀ ಮಳೆಯಾಯಿತು. ಬುಧವಾರವೂ ಮಳೆಯಾಗುವ ನಿರೀಕ್ಷೆಯಿತ್ತು. ಆದರೆ ಅದೃಷ್ಟವಶಾತ್ ಆಟಗಾರರ ಅಭ್ಯಾಸಕ್ಕೆ ಮಳೆ ಅಡ್ಡಿಪಡಿಸಲಿಲ್ಲ. ಹೀಗಾಗಿ ಗುರುವಾರವೂ ಇದೇ ಪರಿಸ್ಥಿತಿ ಮುಂದುವರಿಯುವ ನಿರೀಕ್ಷೆ ಇರುವುದು ಸಮಾಧಾನದ ಸಂಗತಿ.

ಅಕ್ಯುವೆದರ್ ಅಂದಾಜಿನ ಪ್ರಕಾರ, ಅಕ್ಟೋಬರ್ 24 ಗುರುವಾರ ಪುಣೆಯಲ್ಲಿ ಮಳೆಯಾಗುವ ಸಾಧ್ಯತೆಯಿಲ್ಲ. ಆದರೆ, ಬೆಳಗ್ಗಿನಿಂದಲೇ ಮೋಡ ಕವಿದ ವಾತಾವರಣವಿದ್ದು, ಬಿಸಿಲು ಕೂಡ ಹೆಚ್ಚಿರಲಿದೆ. ಪಂದ್ಯದ ಎರಡನೇ ದಿನವಾದ ಶುಕ್ರವಾರ ಅಂದರೆ ಅಕ್ಟೋಬರ್ 25ರಂದು ಮಳೆ ಬೀಳುವ ಸಾಧ್ಯತೆಗಳಿಲ್ಲ. ಇದರಿಂದಾಗಿ ಪಂದ್ಯವು ಯಾವುದೇ ತೊಂದರೆಯಿಲ್ಲದೆ ನಿಗದಿತ ಸಮಯಕ್ಕೆ ಪ್ರಾರಂಭವಾಗುವುದು ಮತ್ತು ಮುಂದೆ ಮುಂದುವರಿಯುವುದು ಸ್ಪಷ್ಟವಾಗಿದೆ.

ಪುಣೆ ಪಿಚ್ ವರದಿ

ಇನ್ನು ಪುಣೆಯ ಪಿಚ್​ ಬಗ್ಗೆ ಹೇಳುವುದಾದರೆ.. ಈ ಪಿಚ್​ನಲ್ಲಿ ಸ್ಪಿನ್ನರ್‌ಗಳಿಗೆ ಸಹಾಯ ಸಿಗಬಹುದು. ಟೆಸ್ಟ್ ಪಂದ್ಯಕ್ಕೆ ಎರಡು ದಿನ ಮೊದಲು ಪಿಚ್‌ನಿಂದ ಹುಲ್ಲು ತೆಗೆಯಲಾಗಿತ್ತು. ಹೀಗಾಗಿ ಪಿಚ್ ಒಣಗಿದ್ದು, ಕಪ್ಪು ಮಣ್ಣಿನ ಪಿಚ್‌ನಿಂದಾಗಿ ಇಲ್ಲಿ ಹೆಚ್ಚು ಬೌನ್ಸ್ ಸಿಗುವುದಿಲ್ಲ. ಪುಣೆಯಲ್ಲಿ ಇದುವರೆಗೆ ಕೇವಲ 2 ಟೆಸ್ಟ್ ಪಂದ್ಯಗಳು ನಡೆದಿದ್ದು, ಮೊದಲು ಬ್ಯಾಟ್ ಮಾಡಿದ ತಂಡ ಗೆಲುವು ಸಾಧಿಸಿದೆ. ಹೀಗಾಗಿ ಇಲ್ಲಿ ಟಾಸ್ ಪ್ರಮುಖ ಪಾತ್ರವಹಿಸುತ್ತದೆ. ಆಡಿರುವ ಎರಡು ಪಂದ್ಯಗಳಲ್ಲಿ ಭಾರತ ತಂಡ 1 ಪಂದ್ಯ ಸೋತಿದ್ದು, 1ರಲ್ಲಿ ಗೆದ್ದಿದೆ.

ಉಭಯ ತಂಡಗಳು

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ರಿಷಭ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಸರ್ಫರಾಜ್ ಖಾನ್, ಧ್ರುವ್ ಜುರೆಲ್, ಅಕ್ಸರ್ ಪಟೇಲ್, ರವಿಚಂದ್ರನ್ ಅಶ್ವಿನ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ವಾಷಿಂಗ್ಟನ್ ಸುಂದರ್.

ನ್ಯೂಜಿಲೆಂಡ್ ತಂಡ: ಡೆವೊನ್ ಕಾನ್ವೇ, ಟಾಮ್ ಲೇಥಮ್ (ನಾಯಕ), ವಿಲ್ ಯಂಗ್, ಕೇನ್ ವಿಲಿಯಮ್ಸನ್, ಮೈಕಲ್ ಬ್ರೇಸ್‌ವೆಲ್, ಡೇರಿಲ್ ಮಿಚೆಲ್, ರಚಿನ್ ರವೀಂದ್ರ, ಗ್ಲೆನ್ ಫಿಲಿಪ್ಸ್, ಟಾಮ್ ಬ್ಲುಂಡೆಲ್ (ವಿಕೆಟ್ ಕೀಪರ್), ಮಾರ್ಕ್ ಚಾಪ್‌ಮನ್, ಮಿಚೆಲ್ ಸ್ಯಾಂಟ್ನರ್, ಟಿಮ್ ಸೌಥಿ, ಮ್ಯಾಟ್ ಹೆನ್ರಿ , ಜಾಕೋಬ್ ಡಫಿ, ಅಜಾಜ್ ಪಟೇಲ್, ವಿಲಿಯಂ ಓ’ರೂರ್ಕ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸಚಿವರಿಂದ ಗಣರಾಜ್ಯೋತ್ಸವದ ಧ್ವಜಾರೋಹಣದ ವೇಳೆ ಬಿದ್ದ ಧ್ವಜಸ್ತಂಭ!
ಸಚಿವರಿಂದ ಗಣರಾಜ್ಯೋತ್ಸವದ ಧ್ವಜಾರೋಹಣದ ವೇಳೆ ಬಿದ್ದ ಧ್ವಜಸ್ತಂಭ!
ಆಟೋದಿಂದ ಹಾರಿದ 4 ಗೆಳತಿಯರು; ಒಬ್ಬಳ ದುರಂತ ಸಾವಿಗೆ ಕಾರಣ ಯಾರು?
ಆಟೋದಿಂದ ಹಾರಿದ 4 ಗೆಳತಿಯರು; ಒಬ್ಬಳ ದುರಂತ ಸಾವಿಗೆ ಕಾರಣ ಯಾರು?
ಸುದೀಪ್ ಸರ್ ಈ ಕೂಲಿಂಗ್ ಗ್ಲಾಸ್ ಗಿಫ್ಟ್ ಕೇಳಿದ್ರು, ಕೊಡಲ್ಲ ಅಂದೆ: ಸತೀಶ್
ಸುದೀಪ್ ಸರ್ ಈ ಕೂಲಿಂಗ್ ಗ್ಲಾಸ್ ಗಿಫ್ಟ್ ಕೇಳಿದ್ರು, ಕೊಡಲ್ಲ ಅಂದೆ: ಸತೀಶ್
ಬಿಗ್ ಬಾಸ್ ಬಳಿಕ ಸಿನಿಮಾ ಅವಕಾಶ ಪಡೆದ ಮಲ್ಲಮ್ಮ; ಬದಲಾಯ್ತು ಲೈಫ್
ಬಿಗ್ ಬಾಸ್ ಬಳಿಕ ಸಿನಿಮಾ ಅವಕಾಶ ಪಡೆದ ಮಲ್ಲಮ್ಮ; ಬದಲಾಯ್ತು ಲೈಫ್
ಗಣರಾಜ್ಯೋತ್ಸವ ಪರೇಡ್​​ನಲ್ಲಿ ಗಮನ ಸೆಳೆದ ಆಪರೇಷನ್ ಸಿಂಧೂರ್‌ ವಿಜಯೋತ್ಸವ
ಗಣರಾಜ್ಯೋತ್ಸವ ಪರೇಡ್​​ನಲ್ಲಿ ಗಮನ ಸೆಳೆದ ಆಪರೇಷನ್ ಸಿಂಧೂರ್‌ ವಿಜಯೋತ್ಸವ
ವೋಟ್ ಹಾಕಿದ ಪೊಲೀಸರಿಗೂ ಧನ್ಯವಾದ ಹೇಳಿದೆ ಬಿಗ್ ಬಾಸ್ ವಿನ್ನರ್ ಗಿಲ್ಲಿ ನಟ
ವೋಟ್ ಹಾಕಿದ ಪೊಲೀಸರಿಗೂ ಧನ್ಯವಾದ ಹೇಳಿದೆ ಬಿಗ್ ಬಾಸ್ ವಿನ್ನರ್ ಗಿಲ್ಲಿ ನಟ
ಅಟ್ಟಾರಿ-ವಾಘಾ ಗಡಿಯಲ್ಲಿ 'ಬೀಟಿಂಗ್ ರಿಟ್ರೀಟ್'
ಅಟ್ಟಾರಿ-ವಾಘಾ ಗಡಿಯಲ್ಲಿ 'ಬೀಟಿಂಗ್ ರಿಟ್ರೀಟ್'
ಟ್ರಾಫಿಕ್ ಜಾಮ್, ಹಿಮಪಾತದಿಂದ 24 ಗಂಟೆ ಕಾರಲ್ಲೇ ಕುಳಿತ ಮನಾಲಿ ಪ್ರವಾಸಿಗರು!
ಟ್ರಾಫಿಕ್ ಜಾಮ್, ಹಿಮಪಾತದಿಂದ 24 ಗಂಟೆ ಕಾರಲ್ಲೇ ಕುಳಿತ ಮನಾಲಿ ಪ್ರವಾಸಿಗರು!
ಗಿಲ್ಲಿ ಮೇಲಿನ ಅಭಿಮಾನದಿಂದ ವೇದಿಕೆಗೆ ನುಗ್ಗಿದ ಫ್ಯಾನ್ಸ್; ವಿಡಿಯೋ ನೋಡಿ
ಗಿಲ್ಲಿ ಮೇಲಿನ ಅಭಿಮಾನದಿಂದ ವೇದಿಕೆಗೆ ನುಗ್ಗಿದ ಫ್ಯಾನ್ಸ್; ವಿಡಿಯೋ ನೋಡಿ
ಪತಿಯ ಹಣದಾಹಕ್ಕೆ ಪತ್ನಿ ಕಳೆದುಕೊಂಡಳಾ ಜೀವ?: ಯುವತಿ ಕುಟುಂಬಸ್ಥರಿಂದ ಆರೋಪ
ಪತಿಯ ಹಣದಾಹಕ್ಕೆ ಪತ್ನಿ ಕಳೆದುಕೊಂಡಳಾ ಜೀವ?: ಯುವತಿ ಕುಟುಂಬಸ್ಥರಿಂದ ಆರೋಪ