India vs New Zealand: ಭಾರತ-ನ್ಯೂಜಿಲೆಂಡ್ ಟಿ20 ಸರಣಿ ವೇಳಾಪಟ್ಟಿ, ತಂಡಗಳು ಹೀಗಿವೆ
India vs New Zealand T20 Series Schedule: ಜನವರಿ 27 ರಿಂದ ಶುರುವಾಗಲಿರುವ ಈ ಸರಣಿಯಲ್ಲೂ ಟೀಮ್ ಇಂಡಿಯಾ ಮೂರು ಪಂದ್ಯಗಳನ್ನು ಆಡಲಿದೆ. ವಿಶೇಷ ಎಂದರೆ ಏಕದಿನ ಸರಣಿಗಳಲ್ಲಿ ಕಾಣಿಸಿಕೊಂಡ ನಾಯಕ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಟಿ20 ಸರಣಿಗೆ ಆಯ್ಕೆಯಾಗಿಲ್ಲ.
India vs New Zealand T20 Schedule: ಭಾರತ-ನ್ಯೂಜಿಲೆಂಡ್ ನಡುವಣ ಏಕದಿನ ಸರಣಿ ಮುಕ್ತಾಯಗೊಂಡಿದೆ. ಮೂರು ಪಂದ್ಯಗಳ ಈ ಸರಣಿಯನ್ನು ಟೀಮ್ ಇಂಡಿಯಾ (Team India) ಕ್ಲೀನ್ ಸ್ವೀಪ್ ಮಾಡಿಕೊಂಡಿದ್ದು, ಈ ಮೂಲಕ ಏಕದಿನ ತಂಡಗಳ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಸದ್ಯ ಏಕದಿನ ಸರಣಿಯ ಗೆಲುವಿನ ಹುಮ್ಮಸ್ಸಿನಲ್ಲಿರುವ ಭಾರತ ತಂಡವು ಟಿ20 ಸರಣಿಗಾಗಿ ಸಜ್ಜಾಗುತ್ತಿದೆ. ಜನವರಿ 27 ರಿಂದ ಶುರುವಾಗಲಿರುವ ಈ ಸರಣಿಯಲ್ಲೂ ಟೀಮ್ ಇಂಡಿಯಾ ಮೂರು ಪಂದ್ಯಗಳನ್ನು ಆಡಲಿದೆ. ವಿಶೇಷ ಎಂದರೆ ಏಕದಿನ ಸರಣಿಗಳಲ್ಲಿ ಕಾಣಿಸಿಕೊಂಡ ನಾಯಕ ರೋಹಿತ್ ಶರ್ಮಾ (Rohit Sharma) ಹಾಗೂ ವಿರಾಟ್ ಕೊಹ್ಲಿ (Virat Kohli) ಟಿ20 ಸರಣಿಗೆ ಆಯ್ಕೆಯಾಗಿಲ್ಲ. ಅಂದರೆ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಗೆ ಆಯ್ಕೆ ಮಾಡಲಾದ ಟೀಮ್ ಇಂಡಿಯಾದಲ್ಲಿ ಹಿಟ್ಮ್ಯಾನ್ ಹಾಗೂ ಕಿಂಗ್ ಕೊಹ್ಲಿಗೆ ಸ್ಥಾನ ಕಲ್ಪಿಸಿಲ್ಲ.
ಇನ್ನು ಅಕ್ಷರ್ ಪಟೇಲ್ ಹಾಗೂ ಕೆಎಲ್ ರಾಹುಲ್ ವೈಯುಕ್ತಿಕ ಕಾರಣಗಳಿಗಾಗಿ ತಂಡದಿಂದ ಹೊರಗುಳಿದಿದ್ದಾರೆ. ಹೀಗಾಗಿ ಟಿ20 ಬಳಗದಲ್ಲಿ ಜಿತೇಶ್ ಶರ್ಮಾ ಹಾಗೂ ಪೃಥ್ವಿ ಶಾ ಗೆ ಅವಕಾಶ ಲಭಿಸಿದೆ. ಹಿಟ್ಮ್ಯಾನ್ ಅನುಪಸ್ಥಿತಿಯ ನಡುವೆ ಟಿ20 ತಂಡವನ್ನು ಹಾರ್ದಿಕ್ ಪಾಂಡ್ಯ ಮುನ್ನಡೆಸಲಿದ್ದು, ಉಪನಾಯಕನಾಗಿ ಸೂರ್ಯಕುಮಾರ್ ಯಾದವ್ ಕಾಣಿಸಿಕೊಳ್ಳಲಿದ್ದಾರೆ. ಅದರಂತೆ ಭಾರತ-ನ್ಯೂಜಿಲೆಂಡ್ ನಡುವಣ ಸರಣಿಯ ಸಂಪೂರ್ಣ ವೇಳಾಪಟ್ಟಿ ಈ ಕೆಳಗಿನಂತಿದೆ.
ಭಾರತ-ನ್ಯೂಜಿಲೆಂಡ್ ಟಿ20 ಸರಣಿ ವೇಳಾಪಟ್ಟಿ:
- 1ನೇ ಟಿ20 ಪಂದ್ಯ (ರಾಂಚಿ) – ಜನವರಿ 27
- 2ನೇ ಟಿ20 ಪಂದ್ಯ (ಲಕ್ನೋ) – ಜನವರಿ 29
- 3ನೇ ಟಿ20 ಪಂದ್ಯ (ಅಹಮದಾಬಾದ್) – ಫೆಬ್ರವರಿ 1
ಟೀಮ್ ಇಂಡಿಯಾ ಟಿ20 ತಂಡ:
ಹಾರ್ದಿಕ್ ಪಾಂಡ್ಯ (ನಾಯಕ), ಶುಭಮನ್ ಗಿಲ್, ಇಶಾನ್ ಕಿಶನ್, ಪೃಥ್ವಿ ಶಾ, ಸೂರ್ಯಕುಮಾರ್ ಯಾದವ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ರುತುರಾಜ್ ಗಾಯಕ್ವಾಡ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಾಹಲ್, ಕುಲದೀಪ್ ಯಾದವ್, ಅರ್ಷದೀಪ್ ಸಿಂಗ್, ಶಿವಂ ಮಾವಿ, ಉಮ್ರಾನ್ ಮಲಿಕ್, ಮುಖೇಶ್ ಕುಮಾರ್.
ನ್ಯೂಜಿಲೆಂಡ್ ಟಿ20 ತಂಡ:
ಮಿಚೆಲ್ ಸ್ಯಾಂಟ್ನರ್ (ನಾಯಕ), ಫಿನ್ ಅಲೆನ್, ಮೈಕೆಲ್ ಬ್ರೇಸ್ವೆಲ್, ಮಾರ್ಕ್ ಚಾಪ್ಮನ್, ಡೆವೊನ್ ಕಾನ್ವೇ, ಡೇನ್ ಕ್ಲೀವರ್, ಜಾಕೋಬ್ ಡಫಿ, ಲಾಕಿ ಫರ್ಗುಸನ್, ಬೆಂಜಮಿನ್ ಲಿಸ್ಟರ್, ಡೇರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ಮೈಕೆಲ್ ರಿಪ್ಪನ್, ಹೆನ್ರಿ ಶಿಪ್ಲಿ, ಇಶ್ ಸೋಧಿ, ಬ್ಲೇರ್ ಟಿಕ್ನರ್.
Published On - 7:23 pm, Wed, 25 January 23