AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs SA: ಕೊಹ್ಲಿ, ರುತುರಾಜ್ ಶತಕ ವ್ಯರ್ಥ; 2ನೇ ಏಕದಿನ ಗೆದ್ದ ದಕ್ಷಿಣ ಆಫ್ರಿಕಾ

India vs South Africa ODI: ರಾಯ್‌ಪುರದಲ್ಲಿ ನಡೆದ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ 2ನೇ ಏಕದಿನದಲ್ಲಿ ಭಾರತ ತಂಡ ಸೋಲನ್ನಪ್ಪಿದೆ. ಕೊಹ್ಲಿ, ಗಾಯಕ್ವಾಡ್ ಶತಕಗಳ ನೆರವಿನಿಂದ 358 ರನ್ ಗಳಿಸಿದ್ದರೂ, ಅನನುಭವಿ ಬೌಲಿಂಗ್ ಹಾಗೂ ಇಬ್ಬನಿ ಪರಿಣಾಮ ರನ್ ಡಿಫೆಂಡ್ ಮಾಡಲು ವಿಫಲವಾಯಿತು. ದಕ್ಷಿಣ ಆಫ್ರಿಕಾ ಕೊನೆಯ ಓವರ್‌ನಲ್ಲಿ ಗುರಿ ಬೆನ್ನಟ್ಟಿ ಜಯ ಸಾಧಿಸಿತು, ಸರಣಿ ಸಮಬಲಗೊಳಿಸಿತು.

IND vs SA: ಕೊಹ್ಲಿ, ರುತುರಾಜ್ ಶತಕ ವ್ಯರ್ಥ; 2ನೇ ಏಕದಿನ ಗೆದ್ದ ದಕ್ಷಿಣ ಆಫ್ರಿಕಾ
Ind Vs Sa
ಪೃಥ್ವಿಶಂಕರ
|

Updated on:Dec 03, 2025 | 10:30 PM

Share

ರಾಂಚಿಯಲ್ಲಿ ನಡೆದಿದ್ದ ಮೊದಲ ಏಕದಿನ ಪಂದ್ಯವನ್ನು ಕೊನೆಯ ಓವರ್​ನಲ್ಲಿ ಗೆದ್ದಿಕೊಂಡಿದ್ದ ಟೀಂ ಇಂಡಿಯಾ (Team India), ಇದೀಗ ರಾಯ್‌ಪುರದಲ್ಲಿ ನಡೆದ ಎರಡನೇ ಏಕದಿನ ಪಂದ್ಯವನ್ನು ಕೊನೆಯ ಓವರ್​ನಲ್ಲಿ ಸೋತಿದೆ. ಟೀಂ ಇಂಡಿಯಾ ಬ್ಯಾಟರ್​ಗಳು ಕಲೆಹಾಕಿದ್ದ 358 ರನ್​ಗಳನ್ನು ತಂಡದ ಅನಾನುಭವಿ ಬೌಲಿಂಗ್ ವಿಭಾಗ ರಕ್ಷಿಸಲು ವಿಫಲವಾಯಿತು. ಇದರ ಜೊತೆಗೆ ಆಫ್ರಿಕಾ ಗೆಲುವಿನಲ್ಲಿ ಇಬ್ಬನಿಯೂ ಪ್ರಮುಖ ಪಾತ್ರವಹಿಸಿತು. ಪಂದ್ಯದಲ್ಲಿ ಟಾಸ್ ಸೋತು ಮತ್ತೊಮ್ಮೆ ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 5 ವಿಕೆಟ್ ನಷ್ಟಕ್ಕೆ 358 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡ ಕೊನೆಯ ಓವರ್​ನಲ್ಲಿ ಗೆಲುವಿನ ದಡ ಮುಟ್ಟಿತು. ಭಾರತದ ಪರ ವಿರಾಟ್ ಕೊಹ್ಲಿ (Virat Kohli) ಹಾಗೂ ರುತುರಾಜ್ ಗಾಯಕ್ವಾಡ್ ಶತಕ ಬಾರಿಸಿದರೆ, ಆಫ್ರಿಕಾ ಪರ ಐಡೆನ್ ಮಾರ್ಕ್ರಾಮ್ ಶತಕ ಬಾರಿಸಿದರು.

ಕೊಹ್ಲಿ- ರುತುರಾಜ್ ಶತಕ

ರಾಯ್‌ಪುರದಲ್ಲಿಯೂ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಮತ್ತೊಮ್ಮೆ ದೊಡ್ಡ ಸ್ಕೋರ್ ಗಳಿಸಿತು. ಸತತ ಎರಡನೇ ಪಂದ್ಯದಲ್ಲಿ ಸ್ಮರಣೀಯ ಇನ್ನಿಂಗ್ಸ್ ಆಡಿದ ಕೊಹ್ಲಿ ತಮ್ಮ 53 ನೇ ಏಕದಿನ ಶತಕವನ್ನು ದಾಖಲಿಸಿದರು. ಇತ್ತ ರುತುರಾಜ್ ಗಾಯಕ್ವಾಡ್ ಕೂಡ ಕೇವಲ 77 ಎಸೆತಗಳಲ್ಲಿ ತಮ್ಮ ಮೊದಲ ಏಕದಿನ ಶತಕವನ್ನು ಬಾರಿಸಿದರು. ಇಬ್ಬರೂ ಮೂರನೇ ವಿಕೆಟ್‌ಗೆ 195 ರನ್‌ಗಳ ಅದ್ಭುತ ಪಾಲುದಾರಿಕೆಯನ್ನು ಹಂಚಿಕೊಂಡರು. ನಾಯಕ ಕೆಎಲ್ ರಾಹುಲ್ ಕೂಡ ಅಂತಿಮ ಓವರ್‌ಗಳಲ್ಲಿ ಕೇವಲ 43 ಎಸೆತಗಳಲ್ಲಿ 66 ರನ್‌ಗಳ ಇನ್ನಿಂಗ್ಸ್ ಆಡಿದರು.

ರಾಹುಲ್ ಅರ್ಧಶತಕ

ಒಂದು ಹಂಗತದಲ್ಲಿ ಟೀಂ ಇಂಡಿಯಾ 400 ರನ್‌ಗಳ ಹತ್ತಿರ ತಲುಪಬಹುದಾಗಿದ್ದರೂ, ರವೀಂದ್ರ ಜಡೇಜಾ ಮತ್ತು ಯಶಸ್ವಿ ಜೈಸ್ವಾಲ್ ಅವರ ನಿಧಾನಗತಿಯ ಇನ್ನಿಂಗ್ಸ್ ಅದಕ್ಕೆ ತಡೆಯೊಡ್ಡಿತು. ನಿರ್ದಿಷ್ಟವಾಗಿ ಹೇಳುವುದಾದರೆ, ಕೊನೆಯ 10 ಓವರ್‌ಗಳಲ್ಲಿ ಭಾರತ ಕೇವಲ 74 ರನ್‌ಗಳನ್ನು ಗಳಿಸಿತು. ಇದು ತಂಡವನ್ನು ಕೇವಲ 358 ರನ್​ಗಳಿಗೆ ನಿಲ್ಲಿಸಿತು.

ಮಾರ್ಕ್ರಾಮ್ ಶತಕ

ಈ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಕೂಡ ಕಳಪೆ ಆರಂಭ ಪಡೆಯಿತು. ಆದರೆ ಎರಡನೇ ವಿಕೆಟ್​ಗೆ ನಾಯಕ ಬವುಮಾ ಮತ್ತು ಮಾರ್ಕ್ರಾಮ್ ಶತಕದ ಜೊತೆಯಾಟ ಆಡಿದರು. ಬವುಮಾ 46 ರನ್ ಬಾರಿಸಿ ಔಟಾದರೆ, ಮಾರ್ಕ್ರಾಮ್ ಶತಕ ಸಿಡಿಸಿ ಮಿಂಚಿದರು. ವಾಸ್ತವವಾಗಿ ಮಾರ್ಕ್ರಾಮ್ ಅರ್ಧಶತಕ ಬಾರಿಸಿದ ಬೆನ್ನಲ್ಲೇ ಕ್ಯಾಚ್ ನೀಡಿದ್ದರು. ಆದರೆ ಜೈಸ್ವಾಲ್ ಸುಲಭ ಕ್ಯಾಚ್ ಕೈಚೆಲಿದರು. ಇದರ ಲಾಭ ಪಡೆದ ಮಾರ್ಕ್ರಾಮ್ 98 ಎಸೆತಗಳಲ್ಲಿ 10 ಬೌಂಡರಿ ಮತ್ತು 4 ಸಿಕ್ಸರ್‌ಗಳೊಂದಿಗೆ 110 ರನ್ ಗಳಿಸಿ ಔಟಾದರು.

IND vs SA: ಕ್ಯಾಚ್ ಬಿಟ್ಟ ಜೈಸ್ವಾಲ್​ಗೆ ಶತಕದ ಉಡುಗೊರೆ ನೀಡಿದ ಮಾರ್ಕ್ರಾಮ್

ಬ್ರೆಟ್ಜ್ಕಿ, ಬ್ರೆವಿಸ್ ಜೊತೆಯಾಟ

‌ಮಾರ್ಕ್ರಾಮ್ ಅವರ ವಿಕೆಟ್ ಭಾರತಕ್ಕೆ ಪುನರಾಗಮನದ ಭರವಸೆಯನ್ನು ನೀಡಿತು. ಆದರೆ ಮ್ಯಾಥ್ಯೂ ಬ್ರೆಟ್ಜ್ಕಿ ಮತ್ತು ಡೆವಾಲ್ಡ್ ಬ್ರೆವಿಸ್ ದಕ್ಷಿಣ ಆಫ್ರಿಕಾದ ಇನ್ನಿಂಗ್ಸ್ ನಿಭಾಯಿಸಿ ತಂಡವನ್ನು ಗೆಲುವಿನ ಸನಿಹಕ್ಕೆ ತಂದರು. ಬ್ರೆವಿಸ್ ಕೇವಲ 34 ಎಸೆತಗಳಲ್ಲಿ 54 ರನ್ ಗಳಿಸಿದರೆ, ಬ್ರೆಟ್ಜ್ಕಿ ಅರ್ಧಶತಕದ ಇನ್ನಿಂಗ್ಸ್ ಆಡಿದರು. ಅಂತಿಮ ಓವರ್‌ಗಳಲ್ಲಿ ಟೀಂ ಇಂಡಿಯಾ ಕೆಲವು ವಿಕೆಟ್‌ಗಳನ್ನು ಪಡೆಯಿತ್ತಾದರೂ ಹಿಂದಿನ ಪಂದ್ಯದಂತೆ  ಈ ಪಂದ್ಯದಲ್ಲೂ ಕಾರ್ಬಿನ್ ಬಾಷ್ ಕೊನೆಯಲ್ಲಿ ಬಂದು ವೇಗವಾಗಿ ರನ್ ಗಳಿಸಿ ತಂಡವನ್ನು 49.2 ಓವರ್‌ಗಳಲ್ಲಿ ಗೆಲುವಿನತ್ತ ಕೊಂಡೊಯ್ದರು. ಇದು ಭಾರತದಲ್ಲಿ ದಕ್ಷಿಣ ಆಫ್ರಿಕಾದ ಅತ್ಯಧಿಕ ರನ್ ಚೇಸ್ ಆಗಿದೆ. ಇದರೊಂದಿಗೆ, ಸರಣಿ 1-1 ರಲ್ಲಿ ಸಮಬಲಗೊಂಡಿದ್ದು, ಡಿಸೆಂಬರ್ 6 ರಂದು ವಿಶಾಖಪಟ್ಟಣದಲ್ಲಿ ನಡೆಯಲಿರುವ ಅಂತಿಮ ಏಕದಿನ ಪಂದ್ಯ ಸರಣಿ ನಿರ್ಧಾರಕವಾಗಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:16 pm, Wed, 3 December 25

ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ