India vs South Africa, 3rd Test: ಕಿಂಗ್ ಕೊಹ್ಲಿ ಕಂಬ್ಯಾಕ್, ಸಿರಾಜ್ ಔಟ್: ಯಾರಿಗೆ ಸಿಗಲಿದೆ ಚಾನ್ಸ್​?

| Updated By: ಝಾಹಿರ್ ಯೂಸುಫ್

Updated on: Jan 10, 2022 | 10:19 PM

Team India: ಭಾರತ-ದಕ್ಷಿಣ ಆಫ್ರಿಕಾ ನಡುವಣ 3ನೇ ಟೆಸ್ಟ್ ಪಂದ್ಯವು ಮಂಗಳವಾರದಿಂದ ಕೇಪ್​ ಟೌನ್​ನಲ್ಲಿ ಶುರುವಾಗಲಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆದ್ದರೆ ದಕ್ಷಿಣ ಆಫ್ರಿಕಾದಲ್ಲಿ ಐತಿಹಾಸಿಕ ಟೆಸ್ಟ್ ಸರಣಿ ಗೆದ್ದ ಮೊದಲ ನಾಯಕ ಎಂಬ ಹೆಗ್ಗಳಿಕೆ ವಿರಾಟ್ ಕೊಹ್ಲಿ ಪಾಲಾಗಲಿದೆ.

India vs South Africa, 3rd Test: ಕಿಂಗ್ ಕೊಹ್ಲಿ ಕಂಬ್ಯಾಕ್, ಸಿರಾಜ್ ಔಟ್: ಯಾರಿಗೆ ಸಿಗಲಿದೆ ಚಾನ್ಸ್​?
India vs South Africa, 3rd Test
Follow us on

ಭಾರತ-ದಕ್ಷಿಣ ಆಫ್ರಿಕಾ (India vs South Africa, 3rd Test) ನಡುವಣ 3ನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ (Team India) ನಾಯಕ ವಿರಾಟ್ ಕೊಹ್ಲಿ (Virat Kohli) ಕಣಕ್ಕಿಳಿಯಲಿದ್ದಾರೆ. ಬೆನ್ನು ನೋವಿನ ಕಾರಣ ಎರಡನೇ ಪಂದ್ಯದಿಂದ ಹೊರಗುಳಿದಿದ್ದ ಕೊಹ್ಲಿ 3ನೇ ಪಂದ್ಯವನ್ನು ಆಡಲಿದ್ದಾರೆ. ಇತ್ತ ವಿರಾಟ್ ಕೊಹ್ಲಿ ಕಂಬ್ಯಾಕ್ ಮಾಡುತ್ತಿದ್ದರೆ, ಅತ್ತ ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ (Mohammed Siraj) ಗಾಯದ ಕಾರಣ ಹೊರಬಿದ್ದಿದ್ದಾರೆ. ಹೀಗಾಗಿ ಕೊನೆಯ ಪಂದ್ಯದಲ್ಲಿ ಯಾರಿಗೆ ಚಾನ್ಸ್ ಸಿಗಲಿದೆ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.

ವಿರಾಟ್ ತಂಡಕ್ಕೆ ಮರಳುತ್ತಿರುವುದರಿಂದ ಒರ್ವ ಬ್ಯಾಟರ್ ಹೊರಗುಳಿಯಬೇಕಾಗುತ್ತದೆ. ಅದರಂತೆ ಕೊಹ್ಲಿ ಸ್ಥಾನದಲ್ಲಿ 2ನೇ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿದ ಹನುಮ ವಿಹಾರಿ ಹೊರಗುಳಿಯಬಹುದು. ಆದರೆ 2ನೇ ಟೆಸ್ಟ್ ಪಂದ್ಯದಲ್ಲಿ ಸಿಕ್ಕ ಅವಕಾಶದಲ್ಲಿ ಹನುಮ ವಿಹಾರಿ ಅಜೇಯ 40 ರನ್​ ಬಾರಿಸುವ ಮೂಲಕ ಗಮನ ಸೆಳೆದಿದ್ದರು ಎಂಬುದು ಇಲ್ಲಿ ವಿಶೇಷ. ಮತ್ತೊಂದೆಡೆ ಕಳಪೆ ಫಾರ್ಮ್​ನಲ್ಲಿದ್ದ ಅಜಿಂಕ್ಯ ರಹಾನೆ ಹಾಗೂ ಚೇತೇಶ್ವರ ಪೂಜಾರ 2ನೇ ಟೆಸ್ಟ್​ನಲ್ಲಿ ಅರ್ಧಶತಕ ಬಾರಿಸಿದ್ದರು. ಹೀಗಾಗಿ ಇವರನ್ನೂ ಕೂಡ ಕೈಬಿಡಲು ಸಾಧ್ಯವಿಲ್ಲ. ಹೀಗಾಗಿ ಕೊಹ್ಲಿಗಾಗಿ ಹನುಮ ವಿಹಾರಿ ಸ್ಥಾನ ಕಳೆದುಕೊಳ್ಳಬಹುದು.

ಮತ್ತೊಂದೆಡೆ ವೇಗಿ ಮೊಹಮ್ಮದ್ ಸಿರಾಜ್ ಗಾಯಗೊಂಡಿದ್ದು, ಸ್ವತಃ ವಿರಾಟ್ ಕೊಹ್ಲಿಯೇ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಕೇಪ್ ಟೌನ್ ಟೆಸ್ಟ್ ನಲ್ಲಿ ಸಿರಾಜ್​ಗೆ ಆಡಲು ಸಾಧ್ಯವಾಗುವುದಿಲ್ಲ. ಜೋಹಾನ್ಸ್‌ಬರ್ಗ್ ಟೆಸ್ಟ್‌ನಲ್ಲಿ ಅವರು ‘ಮಂಡಿರಜ್ಜು’ ಒತ್ತಡಕ್ಕೆ ಒಳಗಾಗಿದ್ದರು. ಹೀಗಾಗಿ ಅವರು ಸಂಪೂರ್ಣ ಫಿಟ್​ ಆಗಿಲ್ಲ. ಈ ಹಿನ್ನೆಲೆಯಲ್ಲಿ ಸಿರಾಜ್ 3ನೇ ಪಂದ್ಯಕ್ಕೆ ಅಲಹ್ಯರಾಗಲಿದ್ದಾರೆ ಎಂದು ಕೊಹ್ಲಿ ತಿಳಿಸಿದ್ದಾರೆ.

ಹೀಗಾಗಿ ಕೇಪ್ ಟೌನ್ ಟೆಸ್ಟ್‌ನಲ್ಲಿ ಮೊಹಮ್ಮದ್ ಸಿರಾಜ್ ಬದಲಿಗೆ ಇಶಾಂತ್ ಶರ್ಮಾ ಟೀಮ್ ಇಂಡಿಯಾದಲ್ಲಿ ಅವಕಾಶ ಪಡೆಯಬಹುದು. ಏಕೆಂದರೆ ಅನುಭವಿ ವೇಗಿ ಎನಿಸಿಕೊಂಡಿರುವ ಇಶಾಂತ್ ಶರ್ಮಾ ಈ ಹಿಂದೆ ದಕ್ಷಿಣ ಆಫ್ರಿಕಾ ವಿರುದ್ದ ಆಡಿದ್ದರು. ಇದಾಗ್ಯೂ ಟೀಮ್ ಇಂಡಿಯಾ ಮುಂದೆ ಉಮೇಶ್ ಯಾದವ್ ಅವರ ಆಯ್ಕೆ ಕೂಡ ಇದ್ದು, ಹೀಗಾಗಿ ಸಿರಾಜ್ ಬದಲಿ ಆಟಗಾರನಾಗಿ ಇಶಾಂತ್ ಅಥವಾ ಉಮೇಶ್ ಯಾದವ್ ಆಡುವುದು ಖಚಿತ ಎನ್ನಬಹುದು.

ಭಾರತ-ದಕ್ಷಿಣ ಆಫ್ರಿಕಾ ನಡುವಣ 3ನೇ ಟೆಸ್ಟ್ ಪಂದ್ಯವು ಮಂಗಳವಾರದಿಂದ ಕೇಪ್​ ಟೌನ್​ನಲ್ಲಿ ಶುರುವಾಗಲಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆದ್ದರೆ ದಕ್ಷಿಣ ಆಫ್ರಿಕಾದಲ್ಲಿ ಐತಿಹಾಸಿಕ ಟೆಸ್ಟ್ ಸರಣಿ ಗೆದ್ದ ಮೊದಲ ನಾಯಕ ಎಂಬ ಹೆಗ್ಗಳಿಕೆ ವಿರಾಟ್ ಕೊಹ್ಲಿ ಪಾಲಾಗಲಿದೆ. ಹೀಗಾಗಿ ಅಂತಿಮ ಪಂದ್ಯವು ಕೊಹ್ಲಿಗೂ ಹಾಗೂ ಟೀಮ್ ಇಂಡಿಯಾ ಪಾಲಿಗೂ ಮಹತ್ವದ ಪಂದ್ಯ ಎನಿಸಿಕೊಂಡಿದೆ.

ಭಾರತ ತಂಡ ಹೀಗಿದೆ:
ಕೆಎಲ್ ರಾಹುಲ್ , ಮಯಾಂಕ್ ಅಗರ್ವಾಲ್ , ಚೇತೇಶ್ವರ್ ಪೂಜಾರ , ಅಜಿಂಕ್ಯ ರಹಾನೆ , ವಿರಾಟ್ ಕೊಹ್ಲಿ (ನಾಯಕ) , ರಿಷಬ್ ಪಂತ್ (ವಿಕೆಟ್ ಕೀಪರ್ ) , ರವಿಚಂದ್ರನ್ ಅಶ್ವಿನ್ , ಶಾರ್ದೂಲ್ ಠಾಕೂರ್ , ಮೊಹಮ್ಮದ್ ಶಮಿ , ಜಸ್ಪ್ರೀತ್ ಬುಮ್ರಾ , ಉಮೇಶ್ ಯಾದವ್ , ವೃದ್ಧಿಮಾನ್ ಸಹಾ , ಜಯಂತ್ ಯಾದವ್ , ಶ್ರೇಯಸ್ ಅಯ್ಯರ್ , ಹನುಮ ವಿಹಾರಿ , ಪ್ರಿಯಾಂಕ್ ಪಾಂಚಾಲ್ , ಇಶಾಂತ್ ಶರ್ಮಾ, ಮೊಹಮ್ಮದ್ ಸಿರಾಜ್.

ಇದನ್ನೂ ಓದಿ: IPL 2022: ಮತ್ತೆ RCB ಪರ ಆಡಬೇಕೆಂದ ಸ್ಟಾರ್ ಬೌಲರ್

ಇದನ್ನೂ ಓದಿ:  Sachin Tendulkar: ಆಲ್‌ ಟೈಮ್ ಬೆಸ್ಟ್‌ 11 ಹೆಸರಿಸಿದ ಸಚಿನ್: ಪ್ರಮುಖ ಆಟಗಾರರಿಗಿಲ್ಲ ಸ್ಥಾನ

ಇದನ್ನೂ ಓದಿ: Steve Smith: 11 ಶತಕ, 11 ಅರ್ಧಶತಕ: ವಿಶೇಷ ದಾಖಲೆ ಬರೆದ ಸ್ಟೀವ್ ಸ್ಮಿತ್

ಇದನ್ನೂ ಓದಿ: IPL 2022: ಅಹಮದಾಬಾದ್ ತಂಡಕ್ಕೆ ಟೀಮ್ ಇಂಡಿಯಾ ಮಾಜಿ ಆಟಗಾರ ಕೋಚ್..!

(India vs South Africa, 3rd Test: Ishant likely to replace injured Siraj)