IND vs SL: ಭಾರತ – ಶ್ರೀಲಂಕಾ ಮೊದಲ ಏಕದಿನ ಪಂದ್ಯದಲ್ಲಿ ನೀವು ಗಮನಿಸಿದ್ರ ಈ 5 ಅಂಶ?

ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಶ್ರೀಲಂಕಾ ತಂಡ ಅಪರೂಪದ ಸಾಧನೆ ಮಾಡಿತು. ತಂಡದಲ್ಲಿ ಯಾವೊಬ್ಬ ಆಟಗಾರ 50+ ರನ್ ಬಾರಿಸಿಲ್ಲ, ಯಾರಿಂದಲೂ 50+ ಜೊತೆಯಾಟ ಬಂದಿಲ್ಲ. ಆದರೂ ತಂಡದ ಮೊತ್ತ 262 ವರೆಗೆ ತಲುಪಿತು.

IND vs SL: ಭಾರತ – ಶ್ರೀಲಂಕಾ ಮೊದಲ ಏಕದಿನ ಪಂದ್ಯದಲ್ಲಿ ನೀವು ಗಮನಿಸಿದ್ರ ಈ 5 ಅಂಶ?
Team India
Follow us
TV9 Web
| Updated By: Vinay Bhat

Updated on: Jul 19, 2021 | 8:18 AM

ಭಾರತ (Team India) ವಿರುದ್ಧ ತನ್ನ  ಹಳೆಯ ದಾಖಲೆಯನ್ನು ಮುಂದುವರೆಸಿರುವ ಶ್ರೀಲಂಕಾ (Sri lanka) ತಂಡ ನಿನ್ನೆ ನಡೆದ ಮೊದಲ ಏಕದಿನ ಪಂದ್ಯದಲ್ಲೇ ಸೋಲುಕಂಡಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರೂ ಲಂಕಾನ್ನರ ಲೆಕ್ಕಾಚಾರ ತಲೆಕೆಳಗಾಯಿತು. ಮೂವರು-ನಾಲ್ವರು ಹಿರಿಯ ಆಟಗಾರರನ್ನು ಬಿಟ್ಟರೆ ಬಹುತೇಕ ಯುವ ಆಟಗಾರರಿಂದಲೇ ತುಂಬಿಕೊಂಡಿರುವ ಟೀಮ್ ಇಂಡಿಯಾ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ (ODI Series) 1-0 ಮುನ್ನಡೆ ಸಾಧಿಸಿತು. ಸಾಕಷ್ಟು ಕುತೂಹಲ ಕೆರಳಿಸಿದ್ದ ಈ ಪಂದ್ಯದಲ್ಲಿ ನೀವು ಗಮನಿಸಲೇ ಬೇಕಾದ ಪ್ರಮುಖ 5 ಅಂಶಗಳಿವೆ.

1. ಧವನ್ 10,000 ರನ್: ಮೊದಲ ಏಕದಿನ ಪಂದ್ಯದಲ್ಲಿ ನಾಯಕನ ಆಟವಾಡಿದ ಶಿಖರ್ ಧವನ್ (ಅಜೇಯ 86) ವಿಶೇಷ ದಾಖಲೆ ಬರೆದರು.  ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ ಆರಂಭಿಕ ಬ್ಯಾಟ್ಸ್​ಮನ್​ ಆಗಿ ಧವನ್ ಅವರು ಹತ್ತು ಸಾವಿರ ಪೂರೈಸಿದ ಭಾರತದ ಐದನೇ ಆಟಗಾರ ಎನಿಸಿಕೊಂಡರು. ಮೊದಲ ಸ್ಥಾನದಲ್ಲಿ ಸೆಹ್ವಾಗ್ (15758), ಎರಡನೇ ಸ್ಥಾನ ಸಚಿನ್ (15335), ಮೂರನೇ ಸ್ಥಾನ ಗವಾಸ್ಕರ್ (12258), ನಾಲ್ಕನೇ ಸ್ಥಾನ ರೋಹಿತ್ (10736) ಮತ್ತು ಐದನೇ ಸ್ಥಾನದಲ್ಲಿ ಧವನ್ (10051) ಇದ್ದಾರೆ. ಇದರ ಜೊತೆಗೆ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಧವನ್ ಶ್ರೀಲಂಕಾ ತಂಡದ ವಿರುದ್ಧ 1000 ರನ್‌ಗಳನ್ನು ಬಾರಿಸಿದ ಸಾಧನೆ ಮಾಡಿದರು.

2. ಏಕದಿನ-ಟಿ-20ಯ ಪದಾರ್ಪಣೆ ಪಂದ್ಯದಲ್ಲೇ ಅರ್ಧಶತಕ: ಅಂತರರಾಷ್ಟ್ರೀಯ ಕ್ರಿಕೆಟ್​ ಅನ್ನು ಅದ್ಭುತವಾಗಿ ಆರಂಭಿಸಿರುವ ವಿಕೆಟ್ ಕೀಪರ್, ಬ್ಯಾಟ್ಸ್​ಮನ್ ಇಶಾನ್ ಕಿಶನ್ ವಿಶೇಷ ಸಾಧನೆ ಗೈದಿದ್ದಾರೆ. ಇದೇ ವರ್ಷ ತನ್ನ ಚೊಚ್ಚಲ ಅಂತರರಾಷ್ಟ್ರೀಯ ಟಿ-20 ಪಂದ್ಯವನ್ನು ಆಡಿದ್ದ ಕಿಶನ್, ಇಂಗ್ಲೆಂಡ್ ವಿರುದ್ಧ ಅರ್ಧಶತಕ ಸಿಡಿಸಿ ಮಿಂಚಿದ್ದರು. ನಿನ್ನೆ ಚೊಚ್ಚಲ ಏಕದಿನ ಕ್ರಿಕೆಟ್​ನಲ್ಲೂ ಕಣಕ್ಕಿಳಿದು ಮೊದಲ ಪಂದ್ಯದಲ್ಲೇ ಅರ್ಧಶತಕ ಬಾರಿಸಿದರು. ಈ ಮೂಲಕ ಏಕದಿನ ಮತ್ತು ಟಿ-20ಯ ಪದಾರ್ಪಣೆ ಪಂದ್ಯದಲ್ಲಿ 50+ ಸ್ಕೋರ್ ಮಾಡಿದ ಏಕೈಕ ಭಾರತೀಯ ಆಟಗಾರನಾಗಿದ್ದಾರೆ.

3. ನಾಯಕತ್ವದಲ್ಲೂ ಧವನ್ ದಾಖಲೆ: ಮೊದಲ ಬಾರಿಗೆ ನಾಯಕನಾಗಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ ಅತಿ ಹಿರಿಯ ಆಟಗಾರ ಎಂಬ ಸಾಧನೆ ಶಿಖರ್ ಧವನ್ ಮಾಡಿದ್ದಾರೆ. ಧವನ್ 35 ವರ್ಷ 225 ದಿನಗಳಲ್ಲಿ ಚೊಚ್ಚಲ ಬಾರಿಗೆ ಭಾರತದ ನಾಯಕನಾದರು. ಇದಕ್ಕೂ ಮುನ್ನ ಈ ಸಾಧನೆ ಎಮ್. ಅಮರನಾಥ್ ಅವರ ಹೆಸರಲ್ಲಿತ್ತು. ಇವರು 34 ವರ್ಷ 37 ದಿನಗಳಲ್ಲಿ ನಾಯಕನಾಗಿ ಆಯ್ಕೆಯಾಗಿದ್ದರು.

4. ಭಾರತ ವಿರುದ್ಧ ಲಂಕಾ ಅಪರೂಪದ ಸಾಧನೆ: ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಶ್ರೀಲಂಕಾ ತಂಡ ಅಪರೂಪದ ಸಾಧನೆ ಮಾಡಿತು. ತಂಡದಲ್ಲಿ ಯಾವೊಬ್ಬ ಆಟಗಾರ 50+ ರನ್ ಬಾರಿಸಿಲ್ಲ, ಯಾರಿಂದಲೂ 50+ ಜೊತೆಯಾಟ ಬಂದಿಲ್ಲ. ಆದರೂ ತಂಡದ ಮೊತ್ತ 262 ವರೆಗೆ ತಲುಪಿತು. ಈ ಹಿಂದೆ ಆಸ್ಟ್ರೇಲಿಯಾ ಈ ಸಾಧನೆ ಮಾಡಿತ್ತು. ಸದ್ಯ 20 ವರ್ಷಗಳ ಹಿಂದಿನ ದಾಖಲೆಯನ್ನು ಲಂಕಾ ಅಳಿಸಿ ಹಾಕಿದೆ.

5. ಹುಟ್ಟುಹಬ್ಬದ ದಿನ ಕಿಶನ್ ಸಾಧನೆ: ನಿನ್ನೆ ಇಶಾನ್ ಕಿಶನ್ 23ನೇ ವರ್ಷಕ್ಕೆ ಕಾಲಿಟ್ಟರು. ಇದೇ ದಿನ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್​ಗೆ ಪದಾರ್ಪನೆಯನ್ನೂ ಮಾಡಿದರು. ಕೇವಲ 42 ಎಸೆತಗಳಲ್ಲಿ 59 ರನ್ ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಈ ಮೂಲಕ ಏಕದಿನ ಕ್ರಿಕೆಟ್​ನಲ್ಲಿ ತನ್ನ ಹುಟ್ಟುಹಬ್ಬದ ದಿನ ಪದಾರ್ಪಣೆ ಮಾಡಿ ಅರ್ಧಶತಕ ಸಿಡಿಸಿದ ಮೊದಲ ಭಾರತೀಯ ಆಟಗಾರ ಎಂದ ವಿಶೇಷ ಸಾಧನೆ ಮಾಡಿದ್ದಾರೆ.

IND vs SL: ಇವರಿಬ್ಬರು ಕ್ರೀಸ್​ನಲ್ಲಿ ಇದ್ದಿದ್ದರೆ ಈ ಪಂದ್ಯ 15 ಓವರ್​ನಲ್ಲೇ ಮುಗಿಯುತ್ತಿತ್ತು ಎಂದು ಧವನ್

IND vs SL: ಬರ್ತ್​ ಡೇ ಸ್ಪೆಷಲ್! ಮೊದಲ ಬಾಲ್​ನಲ್ಲೇ ಸಿಕ್ಸರ್​.. ಲಂಕಾ ಬೌಲರ್​ಗಳಿಗೆ ಟಿ-20 ಕ್ರಿಕೆಟ್ ನೆನಪಿಸಿದ ಇಶಾನ್ ಕಿಶನ್

(India vs Sri lanka 2021 Here is the five interesting stats 1st Ind vs SL ODI match)