IND vs SL: ಸ್ಟಂಪ್ ಹಿಂದೆ ಒಂದುಕ್ಷಣ ಎಂಎಸ್ ಧೋನಿಯನ್ನು ನೆನೆಯುವಂತೆ ಮಾಡಿದ ಇಶಾನ್ ಕಿಶನ್-ವಿಡಿಯೋ

Ishan Kishan: ಥೇಟ್ ಧೋನಿ ರೀತಿಯಲ್ಲೇ ಅತಿ ವೇಗವಾಗಿ ಸ್ಟಂಪ್​ ಔಟ್ ಮಾಡಿದ ಕಿಶನ್ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

IND vs SL: ಸ್ಟಂಪ್ ಹಿಂದೆ ಒಂದುಕ್ಷಣ ಎಂಎಸ್ ಧೋನಿಯನ್ನು ನೆನೆಯುವಂತೆ ಮಾಡಿದ ಇಶಾನ್ ಕಿಶನ್-ವಿಡಿಯೋ
Ishan Kishan Stumping
TV9kannada Web Team

| Edited By: Vinay Bhat

Jul 26, 2021 | 10:16 AM

ಶ್ರೀಲಂಕಾ (Sri lanka) ವಿರುದ್ಧದ ಏಕದಿನ ಸರಣಿಯನ್ನು ವಶಪಡಿಸಿಕೊಂಡ ನಂತರ ಟೀಮ್ ಇಂಡಿಯಾ (Team India) ಟಿ-20 ಸರಣಿ ಮೇಲೆ ಕಣ್ಣಿಟ್ಟಿದೆ. ಈಗಾಗಲೇ ಭಾನುವಾರ ನಡೆದ ಮೊದಲ ಟಿ-20 ಪಂದ್ಯದಲ್ಲಿ ಭರ್ಜರಿ ಗೆಲುವು ಕಾಣುವ ಮೂಲಕ 1-0 ಮುನ್ನಡೆ ಕೂಡ ಸಾಧಿಸಿದೆ. ಯುವ ಪಡೆಗಳಿಂದಲೇ ಕೂಡಿರುವ ಧವನ್ ಪಡೆ ನಿರೀಕ್ಷೆಗೂ ಮೀರಿದ ಪ್ರದರ್ಶನ ತೋರುತ್ತದೆ. ಅದರಲ್ಲೂ ಯಂಗ್ ಇಂಡಿಯಾದ ಇಶಾನ್ ಕಿಶನ್ (Ishan Kishan) ಕೇವಲ ಬ್ಯಾಟಿಂಗ್​ನಲ್ಲಿ ಮಾತ್ರವಲ್ಲದೆ ವಿಕೆಟ್ ಕೀಪಿಂಗ್​ನಲ್ಲೂ ಮಿಂಚುತ್ತಿದ್ದಾರೆ.

ನಿನ್ನೆಯ ಮೊದಲ ಟಿ-20 ಪಂದ್ಯದಲ್ಲಿ ಇಶಾನ್ ಕಿಶನ್ ವಿಕೆಟ್ ಹಿಂಬದಿಯಲ್ಲಿ ತುಂಬಾ ಚುರುಕಾಗಿ ಕಾಣಿಸಿಕೊಂಡರು. ಅದರಲ್ಲೂ ಅವರು ಮಾಡಿದ ಸ್ಟಂಪ್ ಔಟ್ ಒಂದು ಕ್ಷಣ ಮಹೇಂದ್ರ ಸಿಂಗ್ ಧೋನಿಯನ್ನು ನೆನಪಿಸುವಂತಿತ್ತು.

ಕೊನೆಯ ಮೂರು ಓವರ್​ನಲ್ಲಿ ಶ್ರೀಲಂಕಾಕ್ಕೆ ಗೆಲ್ಲಲು 42 ರನ್​ಗಳ ಅವಶ್ಯಕತೆ ಇತ್ತು. 18ನೇ ಓವರ್ ಬೌಲಿಂಗ್ ಮಾಡಿದ ವರುಣ್ ಚಕ್ರವರ್ತಿ ತಮ್ಮ ಕ್ಯಾರಮ್ ಬಾಲ್ ಮೂಲಕ ಮೋಡಿ ಮಾಡಿದರು. ಈ ಎಸೆತವನ್ನು ಲಂಕಾ ನಾಯಕ ದಸುನ್ ಶನಕಾ ಕೊಂಚ ಮುಂದೆಬಂದು ಪುಶ್ ಮಾಡಲು ವಿಫಲರಾದರು. ಇದೇ ಸಂದರ್ಭ ಕೀಪರ್ ಕಿಶನ್ ಕೈ ಸೇರಿದ ಬಾಲ್ ತಕ್ಷಣವೇ ಚೆಂಡನ್ನು ವಿಕೆಟ್​ಗೆ ತಾಗಿಸಿ ಸ್ಟಂಪ್​ ಔಟ್​ಗಾಗಿ ಮನವಿ ಮಾಡಿದರು.

ಥರ್ಡ್ ಅಂಪೈರ್ ಪರೀಕ್ಷಿಸಿ ಔಟ್ ಎಂದು ತೀರ್ಮಾನ ನೀಡಿದರು. ಥೇಟ್ ಧೋನಿ ರೀತಿಯಲ್ಲೇ ಅತಿ ವೇಗವಾಗಿ ಸ್ಟಂಪ್​ ಔಟ್ ಮಾಡಿದ ಕಿಶನ್ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಟೀಮ್ ಇಂಡಿಯಾ ನಾಯಕ ಶಿಖರ್ ಧವನ್ (46), ಸಂಜು ಸ್ಯಾಮ್ಸನ್ (27) ಹಾಗೂ ಸೂರ್ಯಕುಮಾರ್ ಯಾದವ್ (50 ರನ್, 34 ಎಸೆತಗಳಲ್ಲಿ 5 ಬೌಂಡರಿ, 2 ಸಿಕ್ಸರ್) ಅವರ ಅತ್ಯುತ್ತಮ ಬ್ಯಾಟಿಂಗ್ ನೆರವಿನಿಂದ 20 ಓವರ್​ನಲ್ಲಿ 5 ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿತು.

ಸವಾಲಿನ ಗುರಿ ಬೆನ್ನಟ್ಟಿದ ಶ್ರೀಲಂಕಾ ಉತ್ತಮ ಆರಂಭ ಪಡೆದುಕೊಂಡಿತಾದರೂ ಮಧ್ಯಮ ಕ್ರಮಾಂಕದಲ್ಲಿ ದಿಢೀರ್ ಕುಸಿತ ಕಂಡಿತು. ಲಂಕಾ ಪರ ಚರಿತ್ ಅಸಲಂಕಾ 26 ಎಸೆತಗಳಲ್ಲಿ 3 ಬೌಂಡರಿ ಸಿಕ್ಸರ್ ಸಿಡಿಸಿ 44 ರನ್ ಬಾರಿಸಿದರೆ, ಆವಿಶ್ಕಾ ಫೆರ್ನಾಂಡೊ 26 ರನ್ ಗಳಿಸಿದರು. ಅಂತಿಮವಾಗಿ ಶ್ರೀಲಂಕಾ 18.3 ಓವರ್​ನಲ್ಲಿ ಕೇವಲ 126 ರನ್​ಗೆ ಸರ್ವಪತನ ಕಂಡಿತು.

IND vs SL: ಪಂದ್ಯ ಆರಂಭಕ್ಕೂ ಮುನ್ನ ಶ್ರೀಲಂಕಾದ ರಾಷ್ಟ್ರಗೀತೆ ಹಾಡಿದ ಹಾರ್ದಿಕ್ ಪಾಂಡ್ಯ: ವಿಡಿಯೋ ವೈರಲ್

Tokyo Olympics: ಮೂರನೇ ಸುತ್ತಿಗೆ ಪ್ರವೇಶಿಸಿದ ಶರತ್ ಕಮಲ್: ಭವಾನಿ ದೇವಿಗೆ ಸೋಲು

(India vs Sri lanka Ishan Kishan quick stumping reminds fans of MS Dhoni Viral Video)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada