IND vs ENG: ಇಂಗ್ಲೆಂಡ್ನಲ್ಲಿ ಪಂತ್ಗೆ ಸಿಕ್ಕ ಹೊಸ ಗೆಳೆಯ.. ಸಂಕಷ್ಟದಲ್ಲಿ ಬೆಂಬಲವಾಗಿ ನಿಂತವರಿಗೆ ಧನ್ಯವಾದ ತಿಳಿಸಿದ ರಿಶಭ್
Rishabh Pant: ಪಂತ್ ತಮ್ಮ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ಜನರಿಗೆ ತಮ್ಮ ಹೊಸ ಸ್ನೇಹಿತನನ್ನು ಪರಿಚಯಿಸಿದ್ದಾರೆ. ಪಂತ್ ಅವರ ಹೊಸ ಸ್ನೇಹಿತ ಕುದುರೆಯಾಗಿದೆ.
ಕೊರೊನಾ ಸೋಂಕಿನಿಂದ ಗುಣಮುಖರಾದ ನಂತರ ಇಂಗ್ಲೆಂಡ್ ಪ್ರವಾಸದಲ್ಲಿ ಭಾರತ ತಂಡದೊಂದಿಗಿರುವ (Indian team on the tour of England) ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ಗೆ (Rishabh Pant) ಆಂಗ್ಲರ ನಾಡಿನಲ್ಲಿ ಹೊಸ ಸ್ನೇಹಿತ ಸಿಕ್ಕಿದ್ದಾನೆ. ಇಂಗ್ಲೆಂಡ್ ಪ್ರವಾಸದಲ್ಲಿದ್ದ ಪಂತ್, ಯುರೋ 2020 ರ ಸಮಯದಲ್ಲಿ ವೆಂಬ್ಲಿ ಕ್ರೀಡಾಂಗಣದಲ್ಲಿ ಪಂದ್ಯವನ್ನು ವೀಕ್ಷಿಸಲು ಬಂದಿದ್ದರು. ಅಲ್ಲಿ ಅವರು ಮುಖವಾಡ ಧರಿಸದೆ ಕಾಣಿಸಿಕೊಂಡಿದ್ದರು. ಕೆಲವು ದಿನಗಳ ನಂತರ ಪಂತ್ಗೆ ಕೊರೊನಾತಗುಲಿರುವುದು ಸಾಭೀತಾಗಿತ್ತು. ಮಾಸ್ಕ್ ಇಲ್ಲದೆ ರೋಮಿಂಗ್ ಮಾಡಿದ್ದಕ್ಕಾಗಿ ಜನರು ಪಂತ್ ಅವರನ್ನು ಸಾಕಷ್ಟು ಟೀಕಿಸಿದ್ದರು. ಆದರೆ, ಪಂತ್ ಈಗ ಗುಣಮುಖರಾಗಿ ತಂಡದ ಶಿಬಿರ ಸೇರಿದ್ದಾರೆ. ಆಗಸ್ಟ್ 4 ರಿಂದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ತಯಾರಿಯಲ್ಲಿ ಅವರು ನಿರತರಾಗಿದ್ದಾರೆ.
ಪಂತ್ ತಮ್ಮ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ಜನರಿಗೆ ತಮ್ಮ ಹೊಸ ಸ್ನೇಹಿತನನ್ನು ಪರಿಚಯಿಸಿದ್ದಾರೆ. ಪಂತ್ ಅವರ ಹೊಸ ಸ್ನೇಹಿತ ಕುದುರೆಯಾಗಿದೆ. ಪಂತ್ ಕುದುರೆಯೊಂದಿಗಿರುವ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಇಂಗ್ಲೆಂಡ್ನಲ್ಲಿ ಹೊಸ ಸ್ನೇಹಿತ ಸಿಕ್ಕಿದ್ದಾನೆ, ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕಾಗಿ ಎಲ್ಲರಿಗೂ ಧನ್ಯವಾದಗಳು. ನಾನು ತಂಡಕ್ಕೆ ಹಿಂತಿರುಗಿದ್ದೇನೆ ಮತ್ತು ಪಿಚ್‌ಗೆ ಮರಳುವುದನ್ನು ಕಾಯುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.
Making new friends here in England ☺️Thank you everyone for your love and support, I'm back and can't wait to return to the pitch #RP17 pic.twitter.com/UPgc2kYZeZ
— Rishabh Pant (@RishabhPant17) July 25, 2021
ಈ ತಿಂಗಳು ಪಂತ್ ಸೋಂಕಿಗೆ ಒಳಗಾಗಿದ್ದರು ತಂಡಕ್ಕೆ ಮರಳಿದ ನಂತರ ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಿದ್ದ ಪಂತ್, ಆತ್ಮೀಯ ಸ್ವಾಗತ ನೀಡಿದ ಭಾರತದ ಮುಖ್ಯ ಕೋಚ್ ರವಿಶಾಸ್ತ್ರಿ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ. ಪಂತ್ ಜುಲೈ 8 ರಂದು, ಪಂತ್ ಕೊರೊನಾ ಸೋಂಕಿಗೆ ಒಳಗಾಗಿದ್ದರು. ಅದರ ನಂತರ ಅವರು ಕ್ವಾರಂಟೈನ್ ಆಗಿದ್ದರು. 10 ದಿನಗಳ ಪ್ರತ್ಯೇಕ ಅವಧಿಯ ನಂತರ, ಅವರು ಡರ್ಹಾಮ್ನಲ್ಲಿರುವ ಟೀಮ್ ಇಂಡಿಯಾದ ಶಿಬಿರ ಸೇರಿಕೊಂಡಿದ್ದಾರೆ.
ಪೃಥ್ವಿ ಶಾ ಮತ್ತು ಸೂರ್ಯಕುಮಾರ್ ಇಂಗ್ಲೆಂಡ್‌ಗೆ ಹಾರಲಿದ್ದಾರೆ ಆಗಸ್ಟ್ 4 ರಿಂದ ಭಾರತ ತಂಡವು ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್ ಸರಣಿಯನ್ನು ಪ್ರಾರಂಭಿಸಲಿದೆ. ಆಟಗಾರರ ಗಾಯಗಳು ಭಾರತೀಯ ತಂಡದ ತೊಂದರೆಗಳನ್ನು ಹೆಚ್ಚಿಸಿವೆ. ವಾಷಿಂಗ್ಟನ್ ಸುಂದರ್, ಶುಬ್ಮನ್ ಗಿಲ್ ಮತ್ತು ಅವೇಶ್ ಖಾನ್ ಗಾಯದಿಂದಾಗಿ ಈ ಸರಣಿಯಲ್ಲಿ ಆಡಲು ಸಾಧ್ಯವಾಗುವುದಿಲ್ಲ. ಅವರ ಸ್ಥಾನದಲ್ಲಿ ಬಿಸಿಸಿಐ ಆರಂಭಿಕ ಆಟಗಾರರಾದ ಪೃಥ್ವಿ ಶಾ ಮತ್ತು ಸೂರ್ಯಕುಮಾರ್ ಯಾದವ್ ಅವರನ್ನು ಬದಲಿಯಾಗಿ ಇಂಗ್ಲೆಂಡ್‌ಗೆ ಕಳುಹಿಸುತ್ತಿದೆ. ಈ ಇಬ್ಬರೂ ಆಟಗಾರರು ಎರಡನೇ ಟೆಸ್ಟ್‌ಗೆ ಲಭ್ಯವಿರುತ್ತಾರೆ. ಪ್ರಸ್ತುತ ಇಬ್ಬರೂ ಶ್ರೀಲಂಕಾದಲ್ಲಿದ್ದಾರೆ ಟಿ 20 ಸರಣಿಯನ್ನು ಆಡುತ್ತಿದ್ದಾರೆ.