Rahul Dravid: ಮೊದಲ ಎಸೆತದಲ್ಲೇ ವಿಕೆಟ್ ಉರುಳಿಸಿದ ಲಂಕಾ ವೇಗಿಯ ಬೌಲಿಂಗ್ಗೆ ದ್ರಾವಿಡ್ ಫಿದಾ
India vs Sri Lanka T20: ಶ್ರೀಲಂಕಾ ಪರ 26 ಟಿ20 ಪಂದ್ಯಗಳನ್ನು ಆಡಿರುವ ದುಷ್ಮಂತ್ ಚಮೀರಾ 28 ವಿಕೆಟ್ ಕಬಳಿಸಿದ್ದಾರೆ. ಹಾಗೆಯೇ 34 ಏಕದಿನ ಪಂದ್ಯಗಳಿಂದ 35 ವಿಕೆಟ್ ಪಡೆದಿದ್ದಾರೆ. ಇನ್ನು ಶ್ರೀಲಂಕಾ ಪರ 11 ಟೆಸ್ಟ್ ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಚಮೀರಾ ಒಟ್ಟು 32 ವಿಕೆಟ್ ಉರುಳಿಸಿದ್ದಾರೆ.
ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯವನ್ನು ಭಾರತ ತಂಡ 38 ರನ್ಗಳಿಂದ ಗೆದ್ದುಕೊಂಡಿದೆ. ಈ ಪಂದ್ಯದ ಮೂಲಕ ಪದಾರ್ಪಣೆ ಮಾಡಿದ್ದ ಟೀಮ್ ಇಂಡಿಯಾ ಆರಂಭಿಕ ಆಟಗಾರ ಪೃಥ್ವಿ ಶಾ ನಿರಾಸೆ ಮೂಡಿಸಿದರು. ಪಂದ್ಯದ ಮೊದಲ ಎಸೆತದಲ್ಲೇ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿ ಪೃಥ್ವಿ ಶೂನ್ಯದೊಂದಿಗೆ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಕೆರಿಯರ್ ಆರಂಭಿಸಿದರು. ಇತ್ತ ಮೊದಲ ಎಸೆತದಲ್ಲೇ ವಿಕೆಟ್ ಪಡೆಯುವ ಮೂಲಕ ಶ್ರೀಲಂಕಾದ ಯುವ ವೇಗಿ ದುಷ್ಮಂತ್ ಚಮೀರಾ ಎಲ್ಲರ ಗಮನ ಸೆಳೆದರು.
ಪೃಥ್ವಿ ಶಾ ಅವರ ಫುಟ್ವರ್ಕ್ ನೂನ್ಯತೆಯನ್ನು ಗುರುತಿಸಿದ್ದ ಚಮಿರಾ ವಿಕೆಟ್ ಟು ವಿಕೆಟ್ ಸ್ವಿಂಗ್ ಬೌಲಿಂಗ್ ಮೂಲಕ ಮೊದಲ ಎಸೆತದಲ್ಲೇ ವಿಕೆಟ್ ಪಡೆದರು. ಅಷ್ಟೇ ಅಲ್ಲದೆ ಈ ಪಂದ್ಯದಲ್ಲಿ 4 ಓವರ್ ಬೌಲಿಂಗ್ ಮಾಡಿದ್ದ ಚಮೀರಾ ಕೇವಲ 24 ರನ್ ನೀಡಿ 2 ಪ್ರಮುಖ ವಿಕೆಟ್ ಉರುಳಿಸಿದ್ದರು. ಯುವ ವೇಗಿಯ ಈ ಪ್ರದರ್ಶನವನ್ನು ಹಾಡಿಹೊಗಳಿರುವ ಶ್ರೀಲಂಕಾ ಕೋಚ್ ಮಿಕ್ಕಿ ಅರ್ಥರ್, ಚಮೀರಾ ಅದ್ಭುತವಾಗಿ ಬೌಲಿಂಗ್ ಮಾಡುತ್ತಿದ್ದಾರೆ. ಪಂದ್ಯದಿಂದ ಪಂದ್ಯಕ್ಕೆ ಅವರು ಬೌಲಿಂಗ್ನಲ್ಲಿ ಸುಧಾರಣೆ ಕಂಡುಕೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಲಂಕಾದ ಪ್ರಮುಖ ಬೌಲರ್ ಆಗಿ ಗುರುತಿಸಿಕೊಳ್ಳಲಿದ್ದಾರೆ ಎಂದಿದ್ದಾರೆ.
ಇದೇ ವೇಳೆ ಚಮೀರಾ ಬೌಲಿಂಗ್ ಬಗ್ಗೆ ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಕೂಡ ಪ್ರಶಂಸೆ ವ್ಯಕ್ತಪಡಿಸಿರುವ ವಿಚಾರವನ್ನು ಮಿಕ್ಕಿ ಅರ್ಥರ್ ಬಹಿರಂಗಪಡಿಸಿದರು. ದುಷ್ಮಂತ್ ಚಮಿರಾ ಅವರ ನಿಖರ ಬೌಲಿಂಗ್ ದಾಳಿ ನೋಡಿ ರಾಹುಲ್ ದ್ರಾವಿಡ್ ಅವರು ಕೂಡ ತುಂಬಾ ಪ್ರಭಾವಿತರಾಗಿದ್ದಾರೆ. ಪಂದ್ಯದಿಂದ ಪಂದ್ಯಕ್ಕೆ ಆತ ತೋರಿಸುತ್ತಿರುವ ಬೌಲಿಂಗ್ ಕೌಶಲ್ಯತೆ ಬಗ್ಗೆ ಟೀಮ್ ಇಂಡಿಯಾ ಕೋಚ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಅರ್ಥರ್ ತಿಳಿಸಿದರು.
ಶ್ರೀಲಂಕಾ ಪರ 26 ಟಿ20 ಪಂದ್ಯಗಳನ್ನು ಆಡಿರುವ ದುಷ್ಮಂತ್ ಚಮೀರಾ 28 ವಿಕೆಟ್ ಕಬಳಿಸಿದ್ದಾರೆ. ಹಾಗೆಯೇ 34 ಏಕದಿನ ಪಂದ್ಯಗಳಿಂದ 35 ವಿಕೆಟ್ ಪಡೆದಿದ್ದಾರೆ. ಇನ್ನು ಶ್ರೀಲಂಕಾ ಪರ 11 ಟೆಸ್ಟ್ ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಚಮೀರಾ ಒಟ್ಟು 32 ವಿಕೆಟ್ ಉರುಳಿಸಿದ್ದಾರೆ.
ಇದನ್ನೂ ಓದಿ: Team India: ಟೀಮ್ ಇಂಡಿಯಾಗೆ ಮತ್ತಿಬ್ಬರು ಆಟಗಾರರ ಆಯ್ಕೆ
ಇದನ್ನೂ ಓದಿ: ಸೂರ್ಯಕುಮಾರ್ ಔಟ್ ಆಗುತ್ತಿದ್ದಂತೆ ಅಸಮಾಧಾನ ಹೊರಹಾಕಿದ ರಾಹುಲ್ ದ್ರಾವಿಡ್
(Rahul Dravid has been really impressed with Sri Lanka Bowler Dushmantha Chameera)