ಶ್ರೀಲಂಕಾ ವಿರುದ್ಧದ ಮೊದಲ ಟಿ20 ಪಂದ್ಯವನ್ನು 2 ರನ್‌ಗಳಿಂದ ಗೆದ್ದಿರುವ ಟೀಂ ಇಂಡಿಯಾ (India Vs Sri Lanka) ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಭಾರತ ನೀಡಿದ 162 ರನ್ಗಳ ಟಾರ್ಗೆಟ್ ಬೆನ್ನಟ್ಟಿದ ಲಂಕಾ ಪಡೆ 160 ರನ್‌ಗಳಿಗೆ ಆಲೌಟ್ ಆಗುವುದರೊಂದಿಗೆ 2 ರನ್ಗಳ ಸೋಲು ಕಂಡಿತು. ಟೀಂ ಇಂಡಿಯಾದ ಈ ಗೆಲುವಿನ ಶ್ರೇಯಾ ತಂಡದ ಯುವ ವೇಗಿಗಳಿಗೆ ಸಲ್ಲಬೇಕಾಗುತ್ತದೆ. ಏಕೆಂದರೆ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಪರ ದೀಪಕ್ ಹೂಡಾ ಮತ್ತು ಅಕ್ಷರ್ ಪಟೇಲ್ ಅವರನ್ನು ಹೊರತುಪಡಿಸಿದರೆ ಮತ್ತ್ಯಾರು ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ. ಆದರೆ ಬೌಲಿಂಗ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಯುವ ವೇಗಿಗಳು ಶ್ರೀಲಂಕಾ ಬ್ಯಾಟ್ಸ್‌ಮನ್‌ಗಳಿಗೆ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯುವ ಅವಕಾಶ ನೀಡಲಿಲ್ಲ. ಇದರೊಂದಿಗೆ ಫೀಲ್ಡಿಂಗ್ನಲ್ಲೂ ಅದ್ಭುತ ಪ್ರದರ್ಶನ ನೀಡಿದ ಯುವ ತಂಡ ಕೊನೆಗೂ ಪಂದ್ಯವನ್ನು ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಯಿತು. ಆದರೆ ಇಡೀ ಪಂದ್ಯದಲ್ಲಿ ಇಶಾನ್ ಕಿಶನ್ (Ishaan Kishan) ಹಿಡಿದ ಅದೊಂದು ಕ್ಯಾಚ್ ಮಾತ್ರ ಸಖತ್ ಹೈಲೆಟ್ ಆಗಿತ್ತು. ಲಂಕಾ ಇನ್ನಿಂಗ್ಸ್ನ 8 ನೇ ಓವರ್ನಲ್ಲಿ ಚರಿತ್ ಅಸಲಂಕಾ (Charith Asalanka) ಆಡಿದ ಚೆಂಡನ್ನು ಕಿಶನ್ ಬಹು ದೂರಿ ಓಡಿ ಚಿರತೆಯಂತೆ ಎಗರಿ ಅದ್ಭುತ ಕ್ಯಾಚ್ ತೆಗೆದುಕೊಂಡರು. ಇದೀಗ ಕಿಶನ್ ಅವರ ಈ ಅದ್ಭುತ ಕ್ಯಾಚ್ನ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಉಮ್ರಾನ್ ಮಲಿಕ್ ಎಸೆದ ಈ ಓವರ್ನಲ್ಲಿ ಚರಿತಾ ಅಸಲಂಕಾ ಚೆಂಡನ್ನು ಗಾಳಿಯಲ್ಲಿ ಆಡಿದರು. ಚೆಂಡು ಫೈನ್ ಲೆಗ್ ಕಡೆಗೆ ಹೋಯಿತು. ಡೀಪ್ನಲ್ಲಿ ನಿಂತಿದ್ದ ಹರ್ಷಲ್ ಪಟೇಲ್ ಕ್ಯಾಚ್ ಹಿಡಿಯಲು ಮುಂದಾದರು. ಆದರೆ ಕ್ಯಾಚ್ ತೆಗೆದುಕೊಳ್ಳಲು ಓಡಿದ ಇಶಾನ್ ಕಿಶನ್, ಪಟೇಲ್ಗೆ ಕೈಸನ್ನೆಯಲ್ಲಿಯೇ ಇದು ನನ್ನ ಕ್ಯಾಚ್ ಎಂದು ಹೇಳುತ್ತಾ, ಚಿರತೆಯಂತೆ ಗಾಳಿಯಲ್ಲಿ ಎಗರಿ ಚೆಂಡನ್ನು ಹಿಡಿದರು. ಅದ್ಭುತ ಡೈವ್ ಮಾಡಿ ಕಿಶನ್ ಹಿಡಿದ ಕ್ಯಾಚ್ ನೋಡಿದ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಕೂಡ ಕೊಂಚ ಸಮಯ ನಂಬಲಾರದೆ ನಗತೊಡಗಿದರು.
— IPLT20 Fan (@FanIplt20) January 3, 2023
IND vs SL: ‘ಒಂದೆರಡು ಮ್ಯಾಚ್ ಸೋತರೂ ಪರವಾಗಿಲ್ಲ’; ಕೊನೆಯ ಓವರ್ ಬಗ್ಗೆ ಹಾರ್ದಿಕ್ ಅಚ್ಚರಿಯ ಹೇಳಿಕೆ
ಅದ್ಭುತ ಕ್ಯಾಚ್ ತೆಗೆದುಕೊಳ್ಳುವುದರೊಂದಿಗೆ ಇಶಾನ್ ಕಿಶನ್ ಅಸಲಂಕಾ ಅವರ ಇನ್ನಿಂಗ್ಸ್ ಅನ್ನು 12 ರನ್‌ಗಳಿಗೆ ಅಂತ್ಯಗೊಳಿಸಿದರು. ಇಶಾನ್ ಕಿಶನ್ ಅವರ ಈ ಅದ್ಭುತ ಕ್ಯಾಚ್ ಅನ್ನು ಎಲ್ಲರೂ ಹೊಗಳುತ್ತಿದ್ದಾರೆ. ಭಾರತದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಕೂಡ ಕಿಶನ್ ಅವರನ್ನು ಹೊಗಳಿದ್ದು, ಇತ್ತೀಚಿನ ದಿನಗಳಲ್ಲಿ ವಿಕೆಟ್ ಕೀಪರ್ ಹಿಡಿದ ಅತ್ಯುತ್ತಮ ಕ್ಯಾಚ್ ಎಂದು ಟ್ವೀಟ್ ಮಾಡಿದ್ದಾರೆ.
One of the best catch you will see in recent time by a wicket keeper. Top stuff by Ishan Kishan.
— Irfan Pathan (@IrfanPathan) January 3, 2023
ಇಶಾನ್ ವಿಕೆಟ್ ಹಿಂದೆ ಅದ್ಭುತಗಳನ್ನು ಮಾಡಿದ್ದು ಮಾತ್ರವಲ್ಲದೆ, ಬ್ಯಾಟ್‌ನಿಂದ ರನ್ ಮಳೆಯನ್ನೂ ಸುರಿಸಿದ್ದರು. ದೀಪಕ್ ಹೂಡಾ ನಂತರ ಇಶಾನ್ ಕಿಶನ್ ಶ್ರೀಲಂಕಾ ವಿರುದ್ಧದ ಈ ಪಂದ್ಯದಲ್ಲಿ ಗರಿಷ್ಠ 37 ರನ್ ಗಳಿಸಿದರು. ತಮ್ಮ ಇನ್ನಿಂಗ್ಸ್ನಲ್ಲಿ 29 ಎಸೆತಗಳನ್ನು ಎದುರಿಸಿದ ಕಿಶನ್ 3 ಬೌಂಡರಿ ಹಾಗೂ 2 ಸಿಕ್ಸರ್ ಕೂಡ ಸಿಡಿಸಿದರು. ಈ ಪಂದ್ಯದಲ್ಲಿ ಹೂಡಾ ಅಜೇಯ 41 ರನ್ ಗಳಿಸಿದರೆ, ಅಕ್ಷರ್ ಪಟೇಲ್ ಕೂಡ 31 ರನ್ಗಳ ಅಜೇಯ ಇನ್ನಿಂಗ್ಸ್ ಆಡಿದರು. ಈ ಮೂವರ ಹೊರತಾಗಿ ನಾಯಕ ಹಾರ್ದಿಕ್ ಪಾಂಡ್ಯ 29 ರನ್ ಗಳಿಸಿದರು. ಇವರನ್ನು ಬಿಟ್ಟರೆ ಭಾರತದ ಯಾವ ಬ್ಯಾಟ್ಸ್‌ಮನ್‌ಗಳು ಒಂದೊಳ್ಳೆ ಇನ್ನಿಂಗ್ಸ್ ಆಡಲಿಲ್ಲ. ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್ಗೆ ಎರಡಂಕಿ ದಾಟಲು ಸಾಧ್ಯವಾಗಲಿಲ್ಲ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:57 am, Wed, 4 January 23