AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಿ20 ವಿಶ್ವಕಪ್‌ನಲ್ಲಿ ಭಾರತಕ್ಕೆ ಮಾಡು ಇಲ್ಲವೇ ಮಡಿ ಪಂದ್ಯ; ಎದುರಾಳಿ ಯಾರು?

ICC Women's T20 World Cup 2026: 2026ರ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೋತ ನಂತರ, ಭಾರತ ಮಹಿಳಾ ತಂಡ ಸೆಮಿಫೈನಲ್ ತಲುಪಲು ಬಾಂಗ್ಲಾದೇಶ ವಿರುದ್ಧ ಮಾಡು ಇಲ್ಲವೇ ಮಡಿ ಪಂದ್ಯ ಆಡಲಿದೆ. ಈ ಲೇಖನವು ಜೂನ್ 25ರಂದು ಮ್ಯಾಂಚೆಸ್ಟರ್‌ನಲ್ಲಿ ನಡೆಯುವ ಈ ನಿರ್ಣಾಯಕ ಪಂದ್ಯದ ದಿನಾಂಕ, ಸ್ಥಳ, ಸಮಯ, ನೇರ ಪ್ರಸಾರ ಮಾಹಿತಿ ಹಾಗೂ ತಂಡಗಳ ಮುಖಾಮುಖಿ ದಾಖಲೆಗಳನ್ನು ನೀಡುತ್ತದೆ.

ಟಿ20 ವಿಶ್ವಕಪ್‌ನಲ್ಲಿ ಭಾರತಕ್ಕೆ ಮಾಡು ಇಲ್ಲವೇ ಮಡಿ ಪಂದ್ಯ; ಎದುರಾಳಿ ಯಾರು?
India Vs Bangladesh
ಪೃಥ್ವಿಶಂಕರ
|

Updated on:Jun 24, 2026 | 8:06 PM

Share

ಮುಖ್ಯಾಂಶಗಳು

  • ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಟೀಂ ಇಂಡಿಯಾ ಬಾಂಗ್ಲಾದೇಶ ತಂಡವನ್ನು ಎದುರಿಸಲಿದೆ.
  • ಸೆಮಿಫೈನಲ್‌ ರೇಸ್​ನಲ್ಲಿ ಟೀಂ ಇಂಡಿಯಾ ಜೀವಂತವಾಗಿರಬೇಕೆಂದರೆ ಉಳಿದಿರುವ ಲೀಗ್ ಪಂದ್ಯಗಳನ್ನು ಗೆಲ್ಲಲೇಬೇಕಿದೆ.
  • ಭಾರತ ತಂಡ ಪಾಯಿಂಟ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.

2026 ರ ಐಸಿಸಿ ಮಹಿಳಾ ಟಿ20 ವಿಶ್ವಕಪ್‌ನಲ್ಲಿ (Women’s T20 World Cup 2026) ಸತತ ಎರಡು ಪಂದ್ಯಗಳನ್ನು ಗೆದ್ದು ಸೆಮಿಫೈನಲ್‌ ಸುತ್ತಿಗೆ ಹತ್ತಿರವಾಗಿದ್ದ ಭಾರತ ಮಹಿಳಾ ತಂಡ, ದಕ್ಷಿಣ ಆಫ್ರಿಕಾ ವಿರುದ್ಧದ ಸೋಲಿನಿಂದಾಗಿ ಸೆಮಿಫೈನಲ್‌ಗೆ ಅರ್ಹತೆ ಪಡೆಯಲು ಹರಸಾಹಸ ಪಡಬೇಕಾದ ಸ್ಥಿತಿಗೆ ಬಂದು ನಿಂತಿದೆ. ಪ್ರಸ್ತುತ, ಭಾರತ ತಂಡವು ಮೂರು ಪಂದ್ಯಗಳಿಂದ 2 ಗೆಲುವುಗಳೊಂದಿಗೆ ಗ್ರೂಪ್ ಎ ನಲ್ಲಿ 4 ಅಂಕಗಳೊಂದಿಗೆ ಪಾಯಿಂಟ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಕಾಯ್ದುಕೊಂಡಿದೆ. ತಂಡದ ನೆಟ್ ರನ್ ರೇಟ್ 2.511 ಆಗಿದೆ. ಹೀಗಾಗಿ ಸೆಮಿಫೈನಲ್‌ ರೇಸ್​ನಲ್ಲಿ ಟೀಂ ಇಂಡಿಯಾ ಜೀವಂತವಾಗಿರಬೇಕೆಂದರೆ ಉಳಿದಿರುವ ಲೀಗ್ ಪಂದ್ಯಗಳನ್ನು ಗೆಲ್ಲಲೇಬೇಕಿದೆ. ಇದರಲ್ಲಿ ಒಂದು ಸೋಲು ತಂಡವನ್ನು ಟೂರ್ನಿಯಿಂದ ಹೊರಹಾಕಲಿದೆ. ಹೀಗಾಗಿ ಈ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಟೀಂ ಇಂಡಿಯಾ ಬಾಂಗ್ಲಾದೇಶ ತಂಡವನ್ನು ಎದುರಿಸಲು ಸಜ್ಜಾಗಿದೆ. ಹಾಗಿದ್ದರೆ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯ ಯಾವಾಗ ಮತ್ತು ಎಲ್ಲಿ ನಡೆಯಲಿದೆ? ಎರಡೂ ತಂಡಗಳ ದಾಖಲೆ ಏನು? ಎಂಬುದರ ವಿವರ ಇಲ್ಲಿದೆ.

ಮುಖಾಮುಖಿ ದಾಖಲೆ ಹೇಗಿದೆ?

ಭಾರತ ಮತ್ತು ಬಾಂಗ್ಲಾದೇಶ ತಂಡಗಳು ಇದುವರೆಗೆ 23 ಪಂದ್ಯಗಳನ್ನು ಆಡಿವೆ. ಇದರಲ್ಲಿ ಭಾರತ ತಂಡ 20 ಪಂದ್ಯಗಳನ್ನು ಗೆದ್ದಿದ್ದರೆ, ಬಾಂಗ್ಲಾದೇಶ ಕೇವಲ 3 ಪಂದ್ಯಗಳನ್ನು ಮಾತ್ರ ಗೆದ್ದಿದೆ. ಇದರರ್ಥ ಬಾಂಗ್ಲಾದೇಶ ವಿರುದ್ಧ ಭಾರತ ಮಹಿಳಾ ತಂಡ ಮೇಲುಗೈ ಸಾಧಿಸಿರುವುದನ್ನು ಕಾಣಬಹುದಾಗಿದೆ.

ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಮಹಿಳಾ ಟಿ20 ವಿಶ್ವಕಪ್ ಪಂದ್ಯ ಯಾವಾಗ ನಡೆಯಲಿದೆ?

ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಮಹಿಳಾ ಟಿ20 ವಿಶ್ವಕಪ್ ಪಂದ್ಯ ಜೂನ್ 25 ರಂದು ನಡೆಯಲಿದೆ.

ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಮಹಿಳಾ ಟಿ20 ವಿಶ್ವಕಪ್ ಪಂದ್ಯ ಎಲ್ಲಿ ನಡೆಯಲಿದೆ?

ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಮಹಿಳಾ ಟಿ20 ವಿಶ್ವಕಪ್ ಪಂದ್ಯ ಓಲ್ಡ್ ಟ್ರಾಫರ್ಡ್, ಮ್ಯಾಂಚೆಸ್ಟರ್​ನಲ್ಲಿ ನಡೆಯಲಿದೆ.

ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಮಹಿಳಾ ಟಿ20 ವಿಶ್ವಕಪ್ ಪಂದ್ಯ ಎಷ್ಟು ಗಂಟೆಗೆ ಆರಂಭವಾಗಲಿದೆ?

ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಮಹಿಳಾ ಟಿ20 ವಿಶ್ವಕಪ್ ಪಂದ್ಯ ಸಂಜೆ 7 ಗಂಟೆಗೆ ಆರಂಭವಾಗಲಿದೆ.

ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಮಹಿಳಾ ಟಿ20 ವಿಶ್ವಕಪ್ ಪಂದ್ಯವನ್ನು ಎಲ್ಲಿ ವೀಕ್ಷಿಸಬಹುದು?

ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಮಹಿಳಾ ಟಿ20 ವಿಶ್ವಕಪ್ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್​ನ ವಿವಿಧ ಚಾನೆಲ್‌ಗಳಲ್ಲಿ ನೇರ ಪ್ರಸಾರವಾಗುತ್ತದೆ.

ವರ್ಷದ ಹಿಂದೆಯೇ ತನ್ನ ಗುರಿ ಬಗ್ಗೆ ಹೇಳಿದ್ದ ಶ್ರೇಯಾಂಕ ಟಿ20 ವಿಶ್ವಕಪ್​ನಿಂದ ಹೊರಬಿದ್ದಿದ್ದು ದುರಾದೃಷ್ಟಕರ

ಉಭಯ ತಂಡಗಳು

ಭಾರತ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್, ಭಾರತಿ ಫುಲ್ಮಾಲಿ, ದೀಪ್ತಿ ಶರ್ಮಾ, ರಿಚಾ ಘೋಷ್, ಶ್ರೀ ಚರಣಿ, ಯಾಸ್ತಿಕಾ ಭಾಟಿಯಾ, ನಂದನಿ ಶರ್ಮಾ, ಅರುಂಧತಿ ರೆಡ್ಡಿ, ರೇಣುಕಾ ಸಿಂಗ್, ಕ್ರಾಂತಿ ಗೌಡ್, ಪ್ರೇಮಾ ರಾವತ್, ರಾಧಾ ಯಾದವ್.

ಬಾಂಗ್ಲಾದೇಶ ತಂಡ: ನಿಗರ್ ಸುಲ್ತಾನಾ ಜೋಟಿ (ನಾಯಕಿ), ನಹಿದಾ ಅಕ್ಟರ್, ಶರ್ಮಿನ್ ಅಕ್ಟರ್ ಸುಪ್ತಾ, ಸೋಭಾನಾ ಮೊಸ್ತರಿ, ಶೋರ್ನಾ ಅಕ್ಟರ್, ರಿತು ಮೋನಿ, ರಬೇಯಾ ಖಾನ್, ಫಾಹಿಮಾ ಖಾತುನ್, ಫರಿಹಾ ಇಸ್ಲಾಂ ತ್ರಿಸ್ನಾ, ಮಾರುಫಾ ಅಕ್ಟರ್, ಶಾಂಜಿದಾ ಅಖ್ತರ್ ಮಘ್ಲಾ, ಸುಲ್ತಾನಾ ಖಾತುನ್, ದಿಲರಾ ಅಕ್ಟರ್, ಜುಐರಿಯಾ ಫರ್ದೌಸ್, ತಾಜ್ ನೆಹರ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:04 pm, Wed, 24 June 26

Follow Us