ಟೀಮ್ ಇಂಡಿಯಾದಲ್ಲಿ ನೋ ಚಾನ್ಸ್​: ಭಾರತ ಕ್ರಿಕೆಟ್​ಗೆ ವಿದಾಯ ಹೇಳಿದ ಮಾಜಿ ಕ್ರಿಕೆಟಿಗನ ಮಗ

Manan Sharma: 2010 ರ ಅಂಡರ್ 19 ವಿಶ್ವಕಪ್‌ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಈ ವೇಳೆ ತಂಡದಲ್ಲಿದ್ದ ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್ ಇದೀಗ ಟೀಮ್ ಇಂಡಿಯಾ ಭಾಗವಾಗಿದ್ದಾರೆ.

ಟೀಮ್ ಇಂಡಿಯಾದಲ್ಲಿ ನೋ ಚಾನ್ಸ್​: ಭಾರತ ಕ್ರಿಕೆಟ್​ಗೆ ವಿದಾಯ ಹೇಳಿದ ಮಾಜಿ ಕ್ರಿಕೆಟಿಗನ ಮಗ
Manan Sharma
Follow us
TV9 Web
| Updated By: ಝಾಹಿರ್ ಯೂಸುಫ್

Updated on: Aug 19, 2021 | 4:54 PM

ಭಾರತೀಯ ಕ್ರಿಕೆಟ್ ಆಟಗಾರರ ನಿವೃತ್ತಿ ಪ್ರಕ್ರಿಯೆ ಮುಂದುವರೆದಿದೆ. ಭಾರತ ತಂಡವನ್ನು ಅಂಡರ್​-19 ವಿಭಾಗದಲ್ಲಿ ಪ್ರತಿನಿಧಿಸಿದ್ದ ಸ್ಮಿತ್ ಪಟೇಲ್ ಈ ಹಿಂದೆ ನಿವೃತ್ತಿ ಘೋಷಿಸಿ ಕೆರಿಬಿಯನ್ ಪ್ರೀಮಿಯರ್​ ಲೀಗ್​ನತ್ತ (CPL 2021) ಮುಖ ಮಾಡಿದ್ದರು. ಕೆಲ ದಿನಗಳ ಹಿಂದೆಷ್ಟೇ ಅಂಡರ್​-19 ವಿಶ್ವಕಪ್ ಗೆದ್ದ ಟೀಮ್ ಇಂಡಿಯಾ ನಾಯಕ ಉನ್ಮುಕ್ತ್ ಚಂದ್ (Unmukth Chand) ಕೂಡ ನಿವೃತ್ತಿ ಘೋಷಿಸಿ ಅಮೆರಿಕನ್ ಲೀಗ್​ನಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಈ ಪಟ್ಟಿಗೆ ಹೊಸ ಸೇರ್ಪಡೆ ಮನನ್ ಶರ್ಮಾ (Manan Sharma). 2010 ರಲ್ಲಿ ಟೀಮ್ ಇಂಡಿಯಾ (Team india) ಅಂಡರ್-19 ತಂಡವನ್ನು ಪ್ರತಿನಿಧಿಸಿದ್ದ ಮನನ್ ಶರ್ಮಾ ಭಾರತೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ. ಅಲ್ಲದೆ ಮುಂಬರುವ ದಿನಗಳಲ್ಲಿ ಅಮೆರಿಕ ಪರ ಕಣಕ್ಕಿಳಿಯುವ ವಿಶ್ವಾಸದಲ್ಲಿದ್ದಾರೆ.

ದೇಶೀಯ ಕ್ರಿಕೆಟ್​ನಲ್ಲಿ ದೆಹಲಿ ಪರ ಆಡುತ್ತಿದ್ದ 30 ವರ್ಷದ ಮನನ್ ಶರ್ಮಾ ಈ ಹಿಂದೆ ಶಿಖರ್ ಧವನ್, ಗೌತಮ್ ಗಂಭೀರ್, ಇಶಾಂತ್ ಶರ್ಮಾ ಮತ್ತು ರಿಷಬ್ ಪಂತ್ ಅವರಂತಹ ತಾರೆಯರು ಒಳಗೊಂಡ ತಂಡದ ಖಾಯಂ ಸದಸ್ಯರಾಗಿದ್ದರು. ಅಲ್ಲದೆ 2010 ರ ಅಂಡರ್ 19 ವಿಶ್ವಕಪ್‌ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಈ ವೇಳೆ ತಂಡದಲ್ಲಿದ್ದ ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್ ಇದೀಗ ಟೀಮ್ ಇಂಡಿಯಾ ಭಾಗವಾಗಿದ್ದಾರೆ. ಆದರೆ ಸತತ ಪ್ರಯತ್ನದ ಹೊರತಾಗಿಯೂ ಮನನ್ ಶರ್ಮಾಗೆ ಭಾರತ ತಂಡದಲ್ಲಿ ಸ್ಥಾನ ಲಭಿಸಿರಲಿಲ್ಲ.

ಅತ್ತ 2016ರ ಐಪಿಎಲ್​ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ಕಾಣಿಸಿಕೊಂಡರೂ ಆಡುವ ಅವಕಾಶ ದೊರೆತಿರಲಿಲ್ಲ. ಇದೀಗ ಅವಕಾಶವನ್ನು ಅರಸಿ ಅಮೆರಿಕ ಕ್ರಿಕೆಟ್​ನತ್ತ ಮುಖ ಮಾಡಲು ಮನನ್ ಶರ್ಮಾ ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ಅದರ ಮೊದಲ ಹೆಜ್ಜೆ ಎಂಬಂತೆ ಭಾರತೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ದಾರೆ.

ಮಾಜಿ ಕ್ರಿಕೆಟಿಗನ ಮಗ: ಮನನ್ ಶರ್ಮಾ ಅವರು ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ಅಜಯ್ ಶರ್ಮಾ ಅವರ ಮಗ ಎಂಬುದು ಅನೇಕರಿಗೆ ಗೊತ್ತಿಲ್ಲ. ಅಜಯ್ ಶರ್ಮಾ 1988 ರಿಂದ 1993 ರವರೆಗೆ ಟೀಮ್ ಇಂಡಿಯಾ ಪರ 31 ಏಕದಿನ ಹಾಗೂ 1 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ತಂದೆಯ ಹಾದಿಯಲ್ಲೇ ಬೆಳೆದು ಬಂದ ಮನನ್ ಶರ್ಮಾ ಅವರು ಅಂಡರ್-19 ತಂಡದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಆದರೆ ಆ ಬಳಿಕ ಹಿರಿಯ ತಂಡವನ್ನು ಸೇರಿಕೊಳ್ಳುವಂತಹ ಪ್ರದರ್ಶನ ನೀಡುವಲ್ಲಿ ಎಡವಿದ್ದರು.

ದೇಶೀಯ ಕ್ರಿಕೆಟ್​ನ ಆಲ್​ರೌಂಡರ್​ ಆಗಿ ಗುರುತಿಸಿಕೊಂಡಿದ್ದ ಮನನ್ ಎಡಗೈ ಸ್ಪಿನ್ ಬೌಲರ್ ಮತ್ತು ಬ್ಯಾಟ್ಸ್‌ಮನ್. 35 ಪ್ರಥಮ ದರ್ಜೆ ಪಂದ್ಯಗಳಲ್ಲಿ ಒಂದು ಶತಕ ಮತ್ತು ಎಂಟು ಅರ್ಧ ಶತಕಗಳೊಂದಿಗೆ 1208 ರನ್ ಗಳಿಸಿದ್ದಾರೆ. ಅಲ್ಲದೆ 113 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಇನ್ನು 59 ಲಿಸ್ಟ್ ಎ ಪಂದ್ಯಗಳಲ್ಲಿ 560 ರನ್ ಮತ್ತು 78 ವಿಕೆಟ್ ಪಡೆದಿದ್ದಾರೆ. ಹಾಗೆಯೇ 26 ಟಿ20 ಪಂದ್ಯಗಳನ್ನು ಆಡಿರುವ ಮನನ್ 131 ರನ್ ಮತ್ತು 32 ವಿಕೆಟ್ ಕಬಳಿಸಿದ್ದಾರೆ. 2019 ರ ಅಕ್ಟೋಬರ್‌ನಲ್ಲಿ ಕೊನೆಯ ಬಾರಿ ದೆಹಲಿ ಪರ ಆಡಿದ್ದ ಮನನ್​ಗೆ ಆ ಬಳಿಕ ಅವಕಾಶ ದೊರೆತಿರಲಿಲ್ಲ. ಹೀಗಾಗಿ ಭಾರತೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿ ವಿದೇಶಿ ಲೀಗ್ ಹಾಗೂ ಬೇರೊಂದು ದೇಶದ ಪರ ಆಡುವ ಇರಾದೆಯಲ್ಲಿದ್ದಾರೆ.

ಇದನ್ನೂ ಓದಿ: ICC Test Rankings: ಟೆಸ್ಟ್ ಬೌಲಿಂಗ್​ ರ‍್ಯಾಂಕಿಂಗ್: ಒಂದೇ ಪಂದ್ಯದಿಂದ 18 ಸ್ಥಾನ ಮೇಲೇರಿದ ಸಿರಾಜ್

ಇದನ್ನೂ ಓದಿ: Virat Kohli: ವಿರಾಟ್ ಕೊಹ್ಲಿದು ಹರಕಲು ಬಾಯಿ ಎಂದ ಮಾಜಿ ಕ್ರಿಕೆಟಿಗ

ಇದನ್ನೂ ಓದಿ: T20 World Cup 2021: 7 ಮಂದಿ ಔಟ್: ಟಿ20 ವಿಶ್ವಕಪ್​ಗೆ ಬಲಿಷ್ಠ ಆಸ್ಟ್ರೇಲಿಯಾ ತಂಡ ಪ್ರಕಟ

ಇದನ್ನೂ ಓದಿ: T20 World Cup: ಕೊಹ್ಲಿ ಹುಟ್ಟುಹಬ್ಬದಂದು ಟಿ20 ವಿಶ್ವಕಪ್‌ನಲ್ಲಿ ಭಾರತದ ಎದುರಾಳಿ ಯಾರು?

(Indian U19 Cricketer Manan Sharma Announces Retirement)