AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಮೃತಿ ಅಥವಾ ಹರ್ಮನ್‌ಪ್ರೀತ್ ಕೌರ್; ಮಿಥಾಲಿ ಬದಲಿಗೆ ಭಾರತ ವನಿತಾ ತಂಡದ ಹೊಸ ನಾಯಕಿ ಯಾರಾಗಬಹುದು?

ಹರ್ಮನ್ ಮ್ಯಾಚ್ ವಿನ್ನರ್ ಮತ್ತು ಸ್ಟಾರ್ ಆಟಗಾರ್ತಿ. ಆದರೆ ಹರ್ಮನ್ ನಾಯಕಿಯಾದರೆ ಜವಾಬ್ದಾರಿ ಹೆಚ್ಚಾಗುತ್ತದೆ ಮತ್ತು ಸ್ಥಿರವಾಗಿ ಪ್ರದರ್ಶನ ನೀಡಬೇಕು. ಇದರಿಂದ ನಾಯಕತ್ವದ ಹೆಚ್ಚುವರಿ ಜವಾಬ್ದಾರಿ ಹರ್ಮನ್ ಮೇಲೆ ಹೊರೆಯಾಗಬಹುದು.

ಸ್ಮೃತಿ ಅಥವಾ ಹರ್ಮನ್‌ಪ್ರೀತ್ ಕೌರ್; ಮಿಥಾಲಿ ಬದಲಿಗೆ ಭಾರತ ವನಿತಾ ತಂಡದ ಹೊಸ ನಾಯಕಿ ಯಾರಾಗಬಹುದು?
ಸ್ಮೃತಿ ಮಂಧಾನ ಮತ್ತು ಹರ್ಮನ್‌ಪ್ರೀತ್ ಕೌರ್
TV9 Web
| Updated By: ಪೃಥ್ವಿಶಂಕರ|

Updated on: Mar 28, 2022 | 3:43 PM

Share

2022ರ ಮಹಿಳಾ ವಿಶ್ವಕಪ್‌ (Women’s World Cup 2022)ನಿಂದ ಭಾರತ ಕ್ರಿಕೆಟ್ ತಂಡ ಹೊರಬಿದ್ದಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಸೋತ ಟೀಮ್ ಇಂಡಿಯಾ ಸೆಮಿಫೈನಲ್‌ನಲ್ಲಿ ಸ್ಥಾನ ಕಳೆದುಕೊಂಡು ಐದನೇ ಸ್ಥಾನ ಗಳಿಸಿತು. ಈ ಫಲಿತಾಂಶದಿಂದ ಭಾರತೀಯ ಕ್ರಿಕೆಟ್‌ನಲ್ಲಿ ಬದಲಾವಣೆಯ ಮಾತುಗಳು ಕೇಳಿಬರುತ್ತಿವೆ. ಮಿಥಾಲಿ ರಾಜ್ (Mithali Raj) ಬದಲಿಗೆ ಟೀಂ ಇಂಡಿಯಾದ ಹೊಸ ನಾಯಕಿಯ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಮಿಥಾಲಿ 2022ರ ವಿಶ್ವಕಪ್‌ವರೆಗೆ ನಾಯಕತ್ವದ ಜವಬ್ದಾರಿ ಹೊರುವುದಾಗಿ ಮಾತನಾಡಿದ್ದರು. ಆದ್ದರಿಂದ ಅವರನ್ನು ಈಗ ಬದಲಾಯಿಸಬಹುದು. ಮಿಥಾಲಿಗೆ ಈಗ 39 ವರ್ಷ ವಯಸ್ಸಿನವರಾಗಿದ್ದಾರೆ ಅವರು ತನ್ನ ವೃತ್ತಿಜೀವನವು ಇಷ್ಟರಲ್ಲೇ ಕೊನೆಗೊಳಿಸಬಹುದು. ಹೀಗಾಗಿ ಅವರ ನಂತರ ಟೀಂ ಇಂಡಿಯಾದ ನಾಯಕಿ ಯಾರಾಗಬಹುದು ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಚರ್ಚೆಗೆ ಅನುಗುಣವಾಗಿ ಟಿ20 ಮಾದರಿಯ ನಾಯಕಿ ಹರ್ಮನ್‌ಪ್ರೀತ್ ಕೌರ್ ಮತ್ತು ಸ್ಮೃತಿ ಮಂಧಾನ (Harmanpreet Kaur and Smriti Mandhana) ಹೊಸ ನಾಯಕಿ ರೇಸ್‌ನಲ್ಲಿ ಮುಂದಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

ಮಿಥಾಲಿ ರಾಜ್ ಇನ್ನೂ ನಿವೃತ್ತಿ ಘೋಷಿಸಿಲ್ಲ. ಅವರ ಜೊತೆಗೆ ಜೂಲನ್ ಗೋಸ್ವಾಮಿ ಕೂಡ ನಿವೃತ್ತಿಯ ಹೊಸ್ತಿಲಿನಲ್ಲಿದ್ದಾರೆ.ಇಂತಹ ಪರಿಸ್ಥಿತಿಯಲ್ಲಿ ಅವರು ಹೆಚ್ಚು ಕ್ರಿಕೆಟ್ ಆಡುವುದು ಅನುಮಾನವಾಗಿದೆ. ಹೀಗಾಗಿ ಭಾರತ ಮಹಿಳಾ ಕ್ರಿಕೆಟ್ ತಂಡ ಇಬ್ಬರು ದಿಗ್ಗಜರ ಸ್ಥಾನವನ್ನು ತುಂಬಬೇಕಿದೆ. ಭಾರತವು ವೇಗದ ಬೌಲಿಂಗ್‌ನಲ್ಲಿ ಅನೇಕ ಹೊಸ ಮುಖಗಳನ್ನು ಪಡೆದುಕೊಂಡಿದೆ ಅದು ಸಾಕಷ್ಟು ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಅದೇ ಸಮಯದಲ್ಲಿ, ಮಿಥಾಲಿ ಎರಡು ಪಾತ್ರಗಳನ್ನು ನಿರ್ವಹಿಸುತ್ತಿದ್ದು, ನಾಯಕಿ ಜತೆಗೆ ಮಧ್ಯಮ ಕ್ರಮಾಂಕದ ಜೀವಾಳವಾಗಿದ್ದಾರೆ. ನಾಯಕಿಯಾಗಿ, ಹರ್ಮನ್‌ಪ್ರೀತ್ ಕೌರ್ ಅಥವಾ ಸ್ಮೃತಿ ಮಂಧಾನ ಅವರ ಬದಲಿಯಾಗಿ ನಾಯಕತ್ವವಹಿಸಿಕೊಳ್ಳಬಹುದು. ಆದರೆ ಅವರ ಸ್ಥಾನವನ್ನು ಬ್ಯಾಟಿಂಗ್‌ನಲ್ಲಿ ಯಾರು ತುಂಬುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಹರ್ಮನ್‌ಪ್ರೀತ್-ಸ್ಮೃತಿ ಸ್ಪರ್ಧೆಯಲ್ಲಿ ಭಾರತ ತಂಡದ ಮಾಜಿ ನಾಯಕಿ ಡಯಾನಾ ಎಡುಲ್ಜಿ ಮಾತನಾಡಿ, ‘ಮಿಥಾಲಿ ಮತ್ತು ಜೂಲನ್ ಭಾರತಕ್ಕಾಗಿ ಆಡುವ ಅತ್ಯುತ್ತಮ ಆಟಗಾರರಲ್ಲಿ ಒಬ್ಬರು. ಆದರೆ ಅವರು ನಿವೃತ್ತಿ ಘೋಷಿಸದಿದ್ದರೆ, ಬಿಸಿಸಿಐ ಅವರ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ನಾವು ಭವಿಷ್ಯಕ್ಕಾಗಿ ತಯಾರಿ ಮಾಡಬೇಕು. ಹರ್ಮನ್‌ಪ್ರೀತ್ ಕೌರ್ ಅಥವಾ ಸ್ಮೃತಿ ಮಂಧಾನ ನಾಯಕತ್ವ ಪಡೆಯಬಹುದು ಎಂದಿದ್ದಾರೆ.

ಮಂಧಾನ ಆಯ್ಕೆ? ಸ್ಮೃತಿ ಮಂಧಾನ ಜವಾಬ್ದಾರಿಯುತವಾಗಿ ನಿರಂತರವಾಗಿ ರನ್ ಗಳಿಸುತ್ತಾರೆ ಎನ್ನುತ್ತಾರೆ ಮಾಜಿ ನಾಯಕಿ ಶಾಂತಾ ರಂಗಸ್ವಾಮಿ. ಇಂತಹ ಪರಿಸ್ಥಿತಿಯಲ್ಲಿ ಮಿಥಾಲಿ ರಾಜ್ ಬದಲಿಗೆ ಅವರು ನಾಯಕಿಯಾಗಬಹುದು. ಸ್ಮೃತಿ ಅವರನ್ನು ಮುಂದಿನ ನಾಯಕಿಯಾಗಿ ನೋಡುತ್ತಿದ್ದೇನೆ ಎಂದು ಶಾಂತಾ ಪಿಟಿಐಗೆ ತಿಳಿಸಿದ್ದಾರೆ. ಜೊತೆಗೆ ಮಿಥಾಲಿ ಬಯಸಿದಲ್ಲಿ ಅವರು ಇನ್ನೂ ಹೆಚ್ಚಿನ ಕ್ರಿಕೆಟ್ ಆಡಬಹುದು ಎಂದು ಹೇಳಿದರು. ಹರ್ಮನ್ ಮ್ಯಾಚ್ ವಿನ್ನರ್ ಮತ್ತು ಸ್ಟಾರ್ ಆಟಗಾರ್ತಿ. ಆದರೆ ಹರ್ಮನ್ ನಾಯಕಿಯಾದರೆ ಜವಾಬ್ದಾರಿ ಹೆಚ್ಚಾಗುತ್ತದೆ ಮತ್ತು ಸ್ಥಿರವಾಗಿ ಪ್ರದರ್ಶನ ನೀಡಬೇಕು. ಇದರಿಂದ ನಾಯಕತ್ವದ ಹೆಚ್ಚುವರಿ ಜವಾಬ್ದಾರಿ ಹರ್ಮನ್ ಮೇಲೆ ಹೊರೆಯಾಗಬಹುದು.ಆದರೆ ಸ್ಮೃತಿ ಅದನ್ನು ಚೆನ್ನಾಗಿ ನಿಭಾಯಿಸಬಲ್ಲರು. ಅವರ ಪ್ರದರ್ಶನ ನಾಯಕತ್ವಕ್ಕೆ ಪೂರಕವಾಗಿದೆ ಎಂದಿದ್ದಾರೆ.

ಇದನ್ನೂ ಓದಿ:Most Catches in IPL: ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಕ್ಯಾಚ್ ಹಿಡಿದ ಟಾಪ್ 5 ಆಟಗಾರರಿವರು..!