IPL 2021:​ ಚಾಂಪಿಯನ್ ಪಟ್ಟಕೇರಿದ ಸಿಎಸ್​ಕೆಗೆ ಸಿಕ್ಕ ಬಹುಮಾನದ ಮೊತ್ತ ಎಷ್ಟು ಗೊತ್ತಾ? ಆರ್​ಸಿಬಿಗೆ ಸಿಕ್ಕಿದ್ದೆಷ್ಟು?

IPL 2021:​ ಈ ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್​ಗೆ 20 ಕೋಟಿ ರೂ., ಮತ್ತು ಸೋತ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ 12.50 ಕೋಟಿ ರೂ. ಮೊದಲ ಎಲಿಮಿನೇಟರ್‌ನಲ್ಲಿ ಸೋತ ಆರ್‌ಸಿಬಿಗೆ ಮತ್ತು ಎರಡನೇ ಕ್ವಾಲಿಫೈಯರ್‌ನಲ್ಲಿ ಸೋತ ಡಿಸಿಗೆ 4.375 ಕೋಟಿ ನೀಡಲಾಗುತ್ತದೆ.

IPL 2021:​ ಚಾಂಪಿಯನ್ ಪಟ್ಟಕೇರಿದ ಸಿಎಸ್​ಕೆಗೆ ಸಿಕ್ಕ ಬಹುಮಾನದ ಮೊತ್ತ ಎಷ್ಟು ಗೊತ್ತಾ? ಆರ್​ಸಿಬಿಗೆ ಸಿಕ್ಕಿದ್ದೆಷ್ಟು?
ಚಾಂಪಿಯನ್ ಸಿಎಸ್​ಕೆ
Follow us
TV9 Web
| Updated By: Vinay Bhat

Updated on:Oct 16, 2021 | 11:55 AM

ಐಪಿಎಲ್ 2021 ವಿಶ್ವದ ಅತಿದೊಡ್ಡ ಟಿ 20 ಲೀಗ್ ಆಗಿದೆ. ಆಟಗಾರರ ಪ್ರತಿಭೆಯಾಗಲಿ ಅಥವಾ ಬ್ರಾಂಡ್ ಮೌಲ್ಯವಾಗಲಿ, ಯಾವುದೇ ಕ್ರಿಕೆಟ್ ಲೀಗ್ ಐಪಿಎಲ್​ಗೆ ಸರಿಸಾಟಿಯಾಗುವುದಿಲ್ಲ. ಪ್ರತಿ ವರ್ಷ ನಡೆಯುವ ಈ ಲೀಗ್‌ನಲ್ಲಿ, ಪ್ರಶಸ್ತಿ ಗೆಲ್ಲಲು ತಂಡಗಳು ಶತಾಯಗತಾಯ ಪ್ರಯತ್ನ ಮಾಡುತ್ತವೆ. ಹರಾಜಿನಲ್ಲಿ, ತಂಡಗಳು ಆಟಗಾರರಿಗೆ ಸಾಕಷ್ಟು ಹಣವನ್ನು ಖರ್ಚು ಮಾಡುತ್ತವೆ, ನಂತರ ಈ ಆಟಗಾರರು ಮೈದಾನದಲ್ಲಿ ತಂಡಕ್ಕಾಗಿ ರಕ್ತ ಮತ್ತು ಬೆವರು ಸುರಿಸುತ್ತಾರೆ. ಆದಾಗ್ಯೂ, ತಂಡವು ಚಾಂಪಿಯನ್ ಆದಾಗ ತಂಡಗಳು ಏನನ್ನು ಪಡೆಯುತ್ತವೆ ಎಂಬುದರ ಬಗ್ಗೆ ಹಲವರಿಗೆ ತಿಳಿದಿಲ್ಲ.

2018 ವರ್ಷದಿಂದ, ತಂಡಗಳಿಗೆ ನೀಡಲಾದ ಮೊತ್ತವು ನಿರಂತರವಾಗಿ ಹೆಚ್ಚುತ್ತಲೇ ಇತ್ತು. 2019 ರಲ್ಲಿ, ಐಪಿಎಲ್ ಗೆದ್ದ ತಂಡಕ್ಕೆ 20 ಕೋಟಿ ನೀಡಲಾಗಿದೆ. ಅದೇ ಸಮಯದಲ್ಲಿ, ರನ್ನರ್ ಅಪ್ ತಂಡಕ್ಕೆ ರೂ 13 ಕೋಟಿ ಬಹುಮಾನವನ್ನು ನೀಡಲಾಯಿತು. ಪ್ಲೇಆಫ್ ತಲುಪುವ ಉಳಿದ ಎರಡು ತಂಡಗಳಿಗೆ ತಲಾ 9 ಕೋಟಿ ರೂ. ನೀಡಲಾಗಿದೆ. ಆದಾಗ್ಯೂ, ಕೊರೊನಾ ಆಗಮನದ ನಂತರ ಈ ಪರಿಸ್ಥಿತಿಯು ಬದಲಾಯಿತು.

ಕೊರೊನಾ ನಂತರ ಬಹುಮಾನದ ಹಣವನ್ನು ಕಡಿತಗೊಳಿಸಲಾಗಿದೆ ಕಳೆದ ವರ್ಷ ಮಾರ್ಚ್‌ನಲ್ಲಿ ಕೊರೊನಾ ವೈರಸ್​ನಿಂದಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಐಪಿಎಲ್ 2020 ರ ವಿಜೇತ ಮತ್ತು ರನ್ನರ್ ಅಪ್ ತಂಡದ ಬಹುಮಾನದ ಮೊತ್ತವನ್ನು 50 ಪ್ರತಿಶತದಷ್ಟು ಕಡಿತಗೊಳಿಸುವುದಾಗಿ ಘೋಷಿಸಿತು. ಇದರ ನಂತರ, ವಿಜೇತ ಮುಂಬೈ ಇಂಡಿಯನ್ಸ್‌ಗೆ 10 ಕೋಟಿ ರೂ., ರನ್ನರ್ ಅಪ್ ಡೆಲ್ಲಿ ಕ್ಯಾಪಿಟಲ್ಸ್‌ಗೆ 6.25 ಕೋಡ್ ನೀಡಲಾಗಿದೆ. ಪ್ಲೇಆಫ್‌ನಲ್ಲಿ ಆಡುವ ತಂಡಗಳಿಗೆ 4.375 ಕೋಟಿಗಳನ್ನು ಸಹ ನೀಡಲಾಗಿದೆ.

ಈ ಋತುವಿನಲ್ಲಿ ಸಿಗುವ ಬಹುಮಾನದ ಮೊತ್ತ ಈ ಋತುವಿನಲ್ಲಿಯೂ ಅದೇ ನಿಯಮವನ್ನು ಜಾರಿಗೊಳಿಸಲಾಗಿದೆ. ಕಳೆದ ಬಾರಿಯಂತೆ ಈ ಬಾರಿಯೂ ಬಹುಮಾನದ ಮೊತ್ತದಲ್ಲಿ ಕಡಿತವನ್ನು ಮುಂದುವರಿಸಲಾಗುವುದು ಎಂದು ಬಿಸಿಸಿಐ ಈಗಾಗಲೇ ತಿಳಿಸಿತ್ತು. ಈ ಋತುವಿನಲ್ಲಿಯೂ ಕೊರೊನಾದ ಪರಿಣಾಮ ಕಂಡುಬಂದಿದೆ. ಈ ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್​ಗೆ 20 ಕೋಟಿ ರೂ., ಮತ್ತು ಸೋತ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ 12.50 ಕೋಟಿ ರೂ. ಮೊದಲ ಎಲಿಮಿನೇಟರ್‌ನಲ್ಲಿ ಸೋತ ಆರ್‌ಸಿಬಿಗೆ ಮತ್ತು ಎರಡನೇ ಕ್ವಾಲಿಫೈಯರ್‌ನಲ್ಲಿ ಸೋತ ಡಿಸಿಗೆ 4.375 ಕೋಟಿ ನೀಡಲಾಗುತ್ತದೆ.

ಇತರ ಪ್ರಶಸ್ತಿಗಳ ಬಹುಮಾನದ ಹಣ ಆರೆಂಜ್ ಕ್ಯಾಪ್ ಹೋಲ್ಡರ್ (ಲೀಗ್‌ನಲ್ಲಿ ಅತ್ಯಧಿಕ ರನ್) – 10 ಲಕ್ಷ ರೂ

ಪರ್ಪಲ್ ಕ್ಯಾಪ್ ಹೋಲ್ಡರ್ (ಲೀಗ್‌ನಲ್ಲಿ ಅತಿ ಹೆಚ್ಚು ವಿಕೆಟ್) – 10 ಲಕ್ಷ ರೂ

ಅತ್ಯಂತ ಮೌಲ್ಯಯುತ ಆಟಗಾರ – 10 ಲಕ್ಷ ರೂ

ಋತುವಿನ ಉದಯೋನ್ಮುಖ ಆಟಗಾರ – 10 ಲಕ್ಷ

ಹೆಚ್ಚಿನ ಸಿಕ್ಸರ್‌ಗಳು (ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರರು) – 10 ಲಕ್ಷ

ಗೇಮ್ ಚೇಂಜರ್ – 10 ಲಕ್ಷ ರೂ

Published On - 6:46 am, Sat, 16 October 21

ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ