Robin Uthappa: ಉತ್ತಪ್ಪ ನಿಮಗೆ ಪ್ಲೇಯಿಂಗ್ ಇಲೆವೆನ್​ನಲ್ಲಿ ಚಾನ್ಸ್ ಸಿಗಲ್ಲ ಎಂದಿದ್ದ ಧೋನಿ

Robin Uthappa-MS Dhoni: ಶೇನ್ ವ್ಯಾಟ್ಸನ್ ನಿವೃತ್ತಿ ಘೋಷಿಸಿದ ನಂತರ, CSK ಉತ್ತಪ್ಪ ಅವರನ್ನು ಬ್ಯಾಕಪ್ ಓಪನರ್ ಆಗಿ ಆಯ್ಕೆ ಮಾಡಿಕೊಂಡಿತು. ಇದಾಗ್ಯೂ ಮೊದಲಾರ್ಧದಲ್ಲಿ ರಾಬಿನ್ ಉತ್ತಪ್ಪ ಯಾವುದೇ ಪಂದ್ಯ ಆಡಿರಲಿಲ್ಲ.

Robin Uthappa: ಉತ್ತಪ್ಪ ನಿಮಗೆ ಪ್ಲೇಯಿಂಗ್ ಇಲೆವೆನ್​ನಲ್ಲಿ ಚಾನ್ಸ್ ಸಿಗಲ್ಲ ಎಂದಿದ್ದ ಧೋನಿ
Robin Uthappa-MS Dhoni
Follow us
TV9 Web
| Updated By: ಝಾಹಿರ್ ಯೂಸುಫ್

Updated on: Sep 15, 2021 | 5:21 PM

ಇಂಡಿಯನ್ ಪ್ರೀಮಿಯರ್ ಲೀಗ್ (IPL 2021) ದ್ವಿತಿಯಾರ್ಧ ಶುರುವಾಗಲು ಇನ್ನೇನು ದಿನಗಳು ಮಾತ್ರ ಉಳಿದಿವೆ. ಮೊದಲಾರ್ಧದಲ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ ಅಂಕ ಪಟ್ಟಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (DC) ತಂಡವು ಅಗ್ರಸ್ಥಾನದಲ್ಲಿದ್ದರೆ, ಚೆನ್ನೈ ಸೂಪರ್ ಕಿಂಗ್ಸ್ (CSK)​ ದ್ವಿತೀಯ ಸ್ಥಾನದಲ್ಲಿದೆ. ಇನ್ನು ಆರ್​ಸಿಬಿ (RCB) ಮೂರನೇ ಹಾಗೂ ಮುಂಬೈ ಇಂಡಿಯನ್ಸ್ (MI) ನಾಲ್ಕನೇ ಸ್ಥಾನ ಅಲಂಕರಿಸಿದೆ. ಇನ್ನು ಐಪಿಎಲ್​ 2021ರ ಹರಾಜಿಗೂ ಮುನ್ನ ಸಿಎಸ್​ಕೆ ತಂಡವು ರಾಜಸ್ಥಾನ್ ರಾಯಲ್ಸ್ (RR)​ ತಂಡದಿಂದ ರಾಬಿನ್ ಉತ್ತಪ್ಪ (Robin Uthappa) ಅವರನ್ನು ವರ್ಗಾಯಿಸಿಕೊಂಡಿತ್ತು. ತಂಡದಲ್ಲಿದ್ದ ಶೇನ್ ವ್ಯಾಟ್ಸನ್ ನಿವೃತ್ತಿ ಘೋಷಿಸಿದ ನಂತರ, CSK ಉತ್ತಪ್ಪ ಅವರನ್ನು ಬ್ಯಾಕಪ್ ಓಪನರ್ ಆಗಿ ಆಯ್ಕೆ ಮಾಡಿಕೊಂಡಿತು. ಇದಾಗ್ಯೂ ಮೊದಲಾರ್ಧದಲ್ಲಿ ರಾಬಿನ್ ಉತ್ತಪ್ಪ ಯಾವುದೇ ಪಂದ್ಯ ಆಡಿರಲಿಲ್ಲ. ಅಂದರೆ ಪ್ಲೇಯಿಂಗ್ ಇಲೆವೆನ್​ನಲ್ಲಿ ಅವಕಾಶ ಪಡೆದಿರಲಿಲ್ಲ. ಆಯ್ಕೆಯಾದ ಬೆನ್ನಲ್ಲೇ ತಂಡದ ಪ್ಲೇಯಿಂಗ್ ಇಲೆವೆನ್​ನಲ್ಲಿ ಸ್ಥಾನ ಸಿಗುವುದಿಲ್ಲ ಎಂಬ ವಿಚಾರ ಮೊದಲೇ ಉತ್ತಪ್ಪಗೆ ತಿಳಿದಿತ್ತು.

ಹೌದು, ಸಿಎಸ್​ಕೆ ತಂಡಕ್ಕೆ ಆಯ್ಕೆಯಾದ ಬೆನ್ನಲ್ಲೇ ನಾಯಕ ಮಹೇಂದ್ರ ಸಿಂಗ್ ಧೋನಿ ಉತ್ತಪ್ಪ ಅವರಿಗೆ ಕರೆ ಮಾಡಿದ್ದರು. ಈ ವೇಳೆ ನಿನ್ನ ಆಯ್ಕೆಯಲ್ಲಿ ನನ್ನ ಪಾತ್ರವಿಲ್ಲ ಎಂದು ತಿಳಿಸಿದ್ದ ಧೋನಿ, ಈ ಆಯ್ಕೆ ವಿಷಯದಲ್ಲಿ ನನಗೆ ಯಾವುದೇ ಸಂಬಂಧವಿಲ್ಲ. ಏಕೆಂದರೆ ನಾಳೆ ನಾನು ಅದಕ್ಕೆ ಯಾವುದೇ ಕ್ರೆಡಿಟ್ ಪಡೆಯಲು ಬಯಸುವುದಿಲ್ಲ ಎಂದು ತಿಳಿಸಿದ್ದರು ಎಂದು ಉತ್ತಪ್ಪ ಬಹಿರಂಗಪಡಿಸಿದ್ದಾರೆ.

ಅಷ್ಟೇ ಅಲ್ಲದೆ, ಕಳೆದ ಸೀಸನ್​ನಲ್ಲಿ ನಿಮ್ಮ ಸಾಮರ್ಥ್ಯ ಮತ್ತು ಪ್ರದರ್ಶನದ ಆಧಾರದ ಮೇಲೆ ಆಯ್ಕೆ ಮಾಡಲಾಗಿದೆ. ಇದಾಗ್ಯೂ ನೀವು ಪ್ಲೇಯಿಂಗ್ ಇಲೆವೆನ್​ನಲ್ಲಿ ಸ್ಥಾನ ಪಡೆಯುವುದಿಲ್ಲ. ಏಕೆಂದರೆ ತಂಡದಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರರಿದ್ದಾರೆ. ಅವರ ಪ್ರದರ್ಶನದ ಮೇಲೆ ನಿಮ್ಮ ಅವಕಾಶ ನಿರ್ಧಾರವಾಗಲಿದೆ ಎಂದು ಧೋನಿ ತಿಳಿಸಿದ್ದರು.

ಅದರಂತೆ ಮೊದಲಾರ್ಧದಲ್ಲಿ ಆರಂಭಿಕಾರಗಿ ಫಾಫ್ ಡು ಪ್ಲೆಸಿಸ್ ಹಾಗೂ ರುತುರಾಜ್ ಗಾಯಕ್ವಾಡ್ ಉತ್ತಮ ಪ್ರದರ್ಶನ ನೀಡಿದರು. ಇದರಿಂದ ಉತ್ತಪ್ಪಗೆ ಅವಕಾಶ ದೊರೆಯಲಿಲ್ಲ. ಇನ್ನು ಯುಎಇಯಲ್ಲಿ ನಡೆಯಲಿರುವ 2ನೇ ಹಂತದಲ್ಲಿ ಅವಕಾಶ ಸಿಗುವ ಸಾಧ್ಯತೆಯಿದೆ. ಏಕೆಂದರೆ ಫಾಫ್ ಡುಪ್ಲೆಸಿಸ್ ಫಿಟ್​ನೆಸ್ ಸಮಸ್ಯೆಯಿಂದ ಕೊಂಚ ಬಳಲುತ್ತಿದ್ದಾರೆ. ಡುಪ್ಲೆಸಿಸ್​ ಫಿಟ್​ನೆಸ್​ ಬಗ್ಗೆ ಕಾಳಜಿವಹಿಸಿ ಕೆಲ ಪಂದ್ಯಗಳಿಂದ ಹೊರಗುಳಿದರೆ ರಾಬಿನ್ ಉತ್ತಪ್ಪ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ.

ಇದನ್ನೂ ಓದಿ: IPL 2021: ಪ್ಲೇ ಆಫ್ ಪ್ರವೇಶಿಸಲು ದ್ವಿತಿಯಾರ್ಧದಲ್ಲಿ ಪ್ರತಿ ತಂಡಗಳು ಎಷ್ಟು ಪಂದ್ಯ ಗೆಲ್ಲಬೇಕು?

ಇದನ್ನೂ ಓದಿ: IPL 2021: ಐಪಿಎಲ್​ನಲ್ಲಿ ಪಾಕ್ ಆಟಗಾರರಿಗೆ ಸಿಕ್ಕ ಭಾಗ್ಯ ಕೊಹ್ಲಿ, ಗೇಲ್, ಎಬಿಡಿಗೆ ಇನ್ನೂ ಸಿಕ್ಕಿಲ್ಲ

ಇದನ್ನೂ ಓದಿ: Crime News: ಅಕ್ಕನಿಗೆ ಯುವಕನೊಂದಿಗೆ ಸಂಬಂಧ: ಕಥೆ ಮುಗಿಸಿ ನಗುತ್ತಾ ನಿಂತಿದ್ದ ತಮ್ಮ..!

ಇದನ್ನೂ ಓದಿ: Crime News: ಹುಡುಗಿ ಧ್ವನಿಯಲ್ಲೇ ಡಾಕ್ಟರ್​ ಕೈಯಿಂದ 2 ಕೋಟಿ ರೂ ಪೀಕಿದ ಚಾಲಾಕಿ..!

(IPL 2021- Robin Uthappa Reveals What MS Dhoni Said When CSK Picked Him)