ಅರ್ಧಕ್ಕೆ ನಿಂತಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ (IPL 2021) 14ನೇ ಆವೃತ್ತಿಗೆ ಮತ್ತೆ ಚಾಲನೆ ಸಿಗುತ್ತಿದ್ದು, ಸೆಪ್ಟೆಂಬರ್ 19 ರಿಂದ ಆರಂಭವಾಗಲಿದೆ. ಅಕ್ಟೋಬರ್ 13ರ ವರೆಗೆ ಒಟ್ಟು 31 ಪಂದ್ಯಗಳು ಯುನೈಟೆಡ್ ಅರಬ್ ಎಮಿರೇಟ್ಸ್ (UAE)ನಲ್ಲಿ ನಡೆಯಲಿವೆ. ಮುಂಬೈ ಇಂಡಿಯನ್ಸ್ (Mumbai Indians) ತಂಡವು ತನ್ನ ಸಾಂಪ್ರದಾಯಿಕ ಎದುರಾಳಿ ಚೆನ್ನೈ ಸೂಪರ್ ಕಿಂಗ್ಸ್ ಎದುರು ಸೆಪ್ಟೆಂಬರ್ 19ರಂದು ಮೊದಲ ಪಂದ್ಯವನ್ನು ಆಡಲಿದೆ. ಈಗಾಗಲೇ ಹಾಲಿ ಚಾಂಪಿಯನ್ಸ್ ಮುಂಬೈ ತಂಡ ಯುಎಇಗೆ ತಲುಪಿದ್ದು, ಅಭ್ಯಾಸ ಶುರುಮಾಡಿದೆ.
ಮುಂಬೈ ಇಂಡಿಯನ್ಸ್ ತಂಡ ದುಬೈ ತಲುಪಿದ ನಂತರ 7 ದಿನಗಳ ಕಾಲ ವ್ಯವಸ್ಥಿತ ಕ್ವಾರಂಟೈನ್ ನಿಯಮವನ್ನು ಅನುಸರಿಸಿದ್ದು ನಂತರ ಪ್ರ್ಯಾಕ್ಟೀಸ್ಗೆ ಇಳಿದಿದೆ. ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ಕ್ರುನಾಲ್ ಪಾಂಡ್ಯ ಸೇರಿದಂತೆ ಇತರೆ ಆಟಗಾರರ ಜೊತೆಗೂಡಿ ಈ ಆಟಗಾರರು ಅಭ್ಯಾಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು.
ದುಬೈನಲ್ಲಿ ಮುಂಬೈ ತಂಡದ ಆಟಗಾರರು ಇಸ್ಲ್ಯಾಂಡ್ನ ಪ್ರಸಿದ್ಧ ಸ್ಯಾಂಟ್ ರೆಜಿಸ್ ಸಾದಿಯತ್ ರೆಸಾರ್ಟ್ನಲ್ಲಿ ಉಳಿದುಕೊಳ್ಳುತ್ತಿದ್ದಾರೆ. ದುಬೈನಲ್ಲಿರುವ ದುಬಾರಿ ಹೋಟೆಲ್ಗಳ ಪಟ್ಟಿಯಲ್ಲಿ ಇದುಕೂಡ ಒಂದಾಗಿದ್ದು ಸಾಕಷ್ಟು ವಿಶೇಷತೆಗಳಿಂದ ಕೂಡಿದೆ. ಅಬುದಾಬಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೇವಲ 20 ನಿಮಿಷಗಳಲ್ಲಿ ಸ್ಯಾಂಟ್ ರೆಜಿಸ್ ಸಾದಿಯತ್ ರೆಸಾರ್ಟ್ ಇದೆ.
ಸದ್ಯ ಮುಂಬೈ ಇಂಡಿಯನ್ಸ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಅಭಿಮಾನಿಗಳಿಗೆ ತಮ್ಮ ಆಟಗಾರರು ತಂಗಿರುವ ಹೋಟೆಲ್ ಅನ್ನು ಪರಿಚಯಿಸಿದೆ. ಆಟಗಾರರು ಫ್ರೀ ಟೈಮ್ನಲ್ಲಿ ಏನೆಲ್ಲ ಮಾಡುತ್ತಾರೆ, ಗೇಮ್ಸ್ ಆಡುವ ಸ್ಥಳ, ಲಿವಿಂಗ್ ರೂಮ್ ಹೀಗೆ ಎಲ್ಲ ಜಾಗವನ್ನು ವಿಡಿಯೋ ಮೂಲಕ ಹಂಚಿಕೊಂಡಿದೆ.
#OneFamily memories, ??? ???????… ?
Welcome to our ? team room, Paltan ?#MumbaiIndians #KhelTakaTak #IPL2021 @MXTakaTak MI TV pic.twitter.com/VVfGNSDQK1
— Mumbai Indians (@mipaltan) August 22, 2021
ಸ್ಯಾಂಟ್ ರೆಜಿಸ್ ಸಾದಿಯತ್ ರೆಸಾರ್ಟ್ನಲ್ಲಿ ಒಟ್ಟು 8 ಮಹಡಿಗಳ ಈ ಹೋಟೆಲ್ನಲ್ಲಿ 312 ಕೊಠಡಿಗಳಿವೆ. 64 ಸ್ಯೂಟ್ಸ್ ಮತ್ತು 14 ಮೀಟಿಂಗ್ ರೂಮ್ಗಳಿವೆಯಂತೆ. ಅಚ್ಚರಿ ಎಂದರೆ ಈ ಹೋಟೆಲ್ನ ಒಂದು ದಿನದ ಬಾಡಿಗೆ ಭಾರತ ಪ್ರಕಾರ ಬರೋಬ್ಬರಿ 25,000 ರೂ. ಮುಂಬೈ ಇಂಡಿಯನ್ಸ್ ಆಟಗಾರರಿರುವ ಸ್ಯಾಂಟ್ ರೆಜಿಸ್ ಸಾದಿಯತ್ ರೆಸಾರ್ಟ್ನಲ್ಲಿ ಸ್ಪಾ, ದೊಡ್ಡದಾದ ಇಂಡೋರ್ ಲ್ಯಾಪ್ ಪೂಲ್, ಅಥ್ಲೆಟಿಕ್ ಕ್ಲಬ್, ಔಟ್ಡೋರ್ ಪೂಲ್, ಪ್ರೈವೇಟ್ ಬೀಚ್ ಸೇರಿದಂತೆ ನಾನಾ ಸೌಲಭ್ಯವಿದೆ.
IPL 2021: ದುಬೈನಲ್ಲಿ ಉತ್ತಪ್ಪ, ರೈನಾ ಮಕ್ಕಳ ಜೊತೆ ಝೀವಾ ಧೋನಿ ಫುಲ್ ಚಿಲ್
IPL 2021: ಫೈನಲ್ ಆಯ್ತು ಆರ್ಸಿಬಿ ತಂಡ: ಎರಡನೇ ಚರಣಕ್ಕೆ ಕೊಹ್ಲಿ ಸೈನ್ಯ ಹೀಗಿದೆ ನೋಡಿ
(IPL 2021 Rohit Sharma lead Mumbai Indians team give fans a tour of the team room in Abu Dhabi)