IPL 2021: ಭಾನುವಾರದಿಂದ ಐಪಿಎಲ್ ಹಬ್ಬ: ಯಾವುದರಲ್ಲಿ ನೇರಪ್ರಸಾರ?, ಆನ್ಲೈನ್ನಲ್ಲಿ ವೀಕ್ಷಣೆ ಹೇಗೆ?, ಇಲ್ಲಿದೆ ಮಾಹಿತಿ
ಐಪಿಎಲ್ 2021 ಟೂರ್ನಿ ನೇರಪ್ರಸಾರ ಯಾವುದರಲ್ಲಿ, ಆನ್ಲೈನ್ ಮೂಲಕ ಲೈವ್ ವೀಕ್ಷಿಸುವುದು ಹೇಗೆ ಎಂಬ ಕುರಿತ ಮಾಹಿತಿ ಇಲ್ಲಿದೆ ನೋಡಿ…
ಕೊರೊನಾ ವೈರಸ್ (Corona virus) ಕಾರಣದಿಂದ ಭಾರತದಲ್ಲಿ ಅರ್ಧಕ್ಕೆ ನಿಂತಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ 14ನೇ ಆವೃತ್ತಿಗೆ (IPL 2021) ಭಾನುವಾರದಿಂದ ಯುಎಇನಲ್ಲಿ ಮತ್ತೆ ಚಾಲನೆ ಸಿಗಲಿದೆ. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ (MI vs CSK) ಕಾದಾಟ ನಡೆಸಲಿದ್ದು, ಅಭಿಮಾನಿಗಳು ಕಾದುಕುಳಿತಿದ್ದಾರೆ. ಟೂರ್ನಿಯಲ್ಲಿ ಫೈನಲ್ ಸೇರಿ ನಿಗದಿಯಾಗಿದ್ದ 60 ಪಂದ್ಯಗಳ ಪೈಕಿ 29 ಪಂದ್ಯಗಳು ಪೂರ್ಣಗೊಂಡಿದ್ದು, ಬಾಕಿ ಇರುವ 31 ಪಂದ್ಯಗಳಿಗೆ ಯುಎಇ (UAE) ಆತಿಥ್ಯ ವಹಿಸಲಿದೆ. 2020ರ ಆವೃತ್ತಿಯನ್ನು ಯಶಸ್ವಿಯಾಗಿ ಆಯೋಜಿಸಿದ್ದ ದುಬೈ, ಅಬು ಧಾಬಿ ಹಾಗೂ ಶಾರ್ಜಾದಲ್ಲೇ ಈ ಸಲದ ಪಂದ್ಯಗಳು ನಡೆಯಲಿವೆ. ಹಾಗಾದ್ರೆ ಐಪಿಎಲ್ 2021 ಟೂರ್ನಿ ನೇರಪ್ರಸಾರ ಯಾವುದರಲ್ಲಿ, ಆನ್ಲೈನ್ ಮೂಲಕ ಲೈವ್ ವೀಕ್ಷಿಸುವುದು ಹೇಗೆ ಎಂಬ ಕುರಿತ ಮಾಹಿತಿ ಇಲ್ಲಿದೆ ನೋಡಿ…
ಯಾವ ಚಾನೆಲ್ನಲ್ಲಿ ನೇರಪ್ರಸಾರ:
ಬಾಕಿ ಉಳಿದಿರುವ ಐಪಿಎಲ್ 2021 ರ ಎಲ್ಲಾ ಪಂದ್ಯಗಳು ಸ್ಟಾರ್ ಸ್ಫೋರ್ಟ್ಸ್ 1, ಸ್ಟಾರ್ ಸ್ಫೋರ್ಟ್ಸ್ 1 ಹೆಚ್ಡಿ, ಸ್ಟಾರ್ ಸ್ಫೋರ್ಟ್ಸ್ 3 ಮತ್ತು ಸ್ಟಾರ್ ಸ್ಫೋರ್ಟ್ಸ್3 ಹೆಚ್ಡಿಯಲ್ಲಿ ಪ್ರಸಾರ ಕಾಣಲಿದೆ.
ಆನ್ಲಯನ್ನಲ್ಲಿ ಡಿಸ್ನಿ ಪ್ಲಸ್ ಹಾಟ್ಸ್ಟಾರ್ ಮತ್ತು ಜಿಯೋ ಟಿವಿಯನ್ನು ಲೈವ್ ವೀಕ್ಷಿಸಬಹುದು.
ಇತರೆ ಭಾಷೆಗಳಲ್ಲೂ ವೀಕ್ಷಿಸಬಹುದು:
ಕನ್ನಡಿಗರು ಐಪಿಎಲ್ 2021 ಅನ್ನು ಕನ್ನಡದಲ್ಲೂ ವೀಕ್ಷಿಸಬಹುದಾಗಿದೆ. ಸ್ಟಾರ್ ಸ್ಫೋರ್ಟ್ಸ್ ಕನ್ನಡದಲ್ಲಿ ಕನ್ನಡ ಕಾಮೆಂಟರಿ ಇರಲಿದೆ. ಅಂತೆಯೆ ಸ್ಟಾರ್ ಸ್ಫೋರ್ಟ್ಸ್ 1 ಹಿಂದಿ, ಸ್ಟಾರ್ ಸ್ಫೋರ್ಟ್ಸ್ ತಮಿಳ್, ಸ್ಟಾರ್ ಸ್ಫೋರ್ಟ್ಸ್ ತೆಲುಗು ಮತ್ತು ಸ್ಟಾರ್ ಸ್ಫೋರ್ಟ್ಸ್ ಬಾಂಗ್ಲಾದಲ್ಲೂ ನೇರಪ್ರಸಾರವಾಗಿದೆ.
CAN. NOT. WAIT! ⌛ ?
Just one sleep away from #VIVOIPL‘s return! ? ? pic.twitter.com/1KzsgHtyJY
— IndianPremierLeague (@IPL) September 18, 2021
ಇನ್ನೂ ಎರಡು ವರ್ಷಗಳ ಬಳಿಕ ಜನಸಾಮಾನ್ಯರು ಸ್ಟೇಡಿಯಂನಲ್ಲಿ ಕೂತು ಐಪಿಎಲ್ ಪಂದ್ಯಗಳನ್ನ ವೀಕ್ಷಿಸುವ ಅವಕಾಶ ಸಿಗುತ್ತಿದೆ. ಭಾರತದಲ್ಲಿ ನಡೆದ ಪಂದ್ಯಗಳಲ್ಲಿ ಪ್ರೇಕ್ಷಕರಿಗೆ ಸ್ಟೇಡಿಯಂ ಪ್ರವೇಶ ಇರಲಿಲ್ಲ. ಕಳೆದ ವರ್ಷದ ಐಪಿಎಲ್ ಟೂರ್ನಿಯೂ ಕೋವಿಡ್ ಕಾರಣಕ್ಕೆ ಯುಎಇಯಲ್ಲಿ ನಡೆದಿತ್ತು. ಆಗ ಪ್ರೇಕ್ಷಕರಿಲ್ಲದೇ ಪಂದ್ಯಗಳು ನಡೆದಿದ್ದವು. ಕಳೆದ ವರ್ಷ ಕೋವಿಡ್ ಮೊದಲು ಕಾಣಿಸಿಕೊಂಡಂದಿನಿಂದ ವಿಶ್ವದೆಲ್ಲೆಡೆ ಬಹುತೇಕ ಕ್ರಿಕೆಟ್ ಪಂದ್ಯಗಳು ಪ್ರೇಕ್ಷಕರ ಉಪಸ್ಥಿತಿಯಲ್ಲಿ ನಡೆದಿಲ್ಲ. ಟಿವಿಯಲ್ಲಿ ಪ್ರೇಕ್ಷಕರ ಧ್ವನಿಯನ್ನ ಕೃತಕವಾಗಿ ಸೃಷ್ಟಿಸಿ ಪಂದ್ಯಗಳ ಪ್ರಸಾರ ಮಾಡಲಾಗುತ್ತಿತ್ತು.
ಈಗ ದುಬೈ, ಅಬುಧಾಬಿ ಮತ್ತು ಶಾರ್ಜಾದಲ್ಲಿ ನಡೆಯುವ ಐಪಿಎಲ್ ಪಂದ್ಯಗಳಿಗೆ ಪ್ರೇಕ್ಷಕರಿಗೆ ಅವಕಾಶ ಮಾಡಿಕೊಡಲು ನಿರ್ಧರಿಸಲಾಗಿದೆ. ಆದರೆ, ಅರ್ಧ ಸ್ಟೇಡಿಯಂ ಮಾತ್ರ ಭರ್ತಿ ಮಾಡಬಹುದು. ದೈಹಿಕ ಅಂತರ, ಮಾಸ್ಕ್, ಸ್ಯಾನಿಟೈಸರ್ ಇತ್ಯಾದಿ ಕ್ರಮಗಳನ್ನ ಜಾರಿಗೆ ತರಲಾಗುತ್ತಿದೆ. ಹಾಗೂ ಯುಎಇ ದೇಶದ ಕೊವಿಡ್ ನಿಯಮಗಳ ಪಾಲನೆಯಾಗುವಂತೆ ಎಚ್ಚರ ವಹಿಸಲಾಗುತ್ತಿದೆ. 20 ಸಾವಿರ ಪ್ರೇಕ್ಷಕರ ಸಾಮರ್ಥ್ಯ ಇರುವ ಸ್ಟೇಡಿಯಂನಲ್ಲಿ 10 ಸಾವಿರ ಪ್ರೇಕ್ಷಕರಿಗೆ ಮಾತ್ರ ಬರಲು ಅನುವು ಮಾಡಿಕೊಡಲಾಗುತ್ತಿದೆ.
Ravi Shastri: ಟಿ-20 ವಿಶ್ವಕಪ್ ಬಳಿಕ ಕೋಚ್ ಹುದ್ದೆಗೆ ರಾಜೀನಾಮೆ: ಸುಳಿವು ನೀಡಿದ ರವಿಶಾಸ್ತ್ರಿ
IPL 2021: ಆರ್ಸಿಬಿ ಪ್ಲೇ ಆಫ್ಗೇರಲು ಇನ್ನೆಷ್ಟು ಪಂದ್ಯ ಗೆಲ್ಲಬೇಕು?: ಇಲ್ಲಿದೆ ನೋಡಿ ಲೆಕ್ಕಾಚಾರ
(IPL 2021 When and Where to Watch IPL on TV Online and Live Streaming Details for India)