IPL 2021 RCB Schedule: ಕಿಂಗ್ ಕೊಹ್ಲಿ ನಾಯಕತ್ವಕ್ಕೆ ಅಗ್ನಿಪರೀಕ್ಷೆ! ಆರ್‌ಸಿಬಿಯ ಉಳಿದ ಪಂದ್ಯಗಳ ಪೂರ್ಣ ವೇಳಾಪಟ್ಟಿ ಇಲ್ಲಿದೆ
ಮೇ 4 ರಂದು ಐಪಿಎಲ್ 2021 ರ ಋತುವನ್ನು ಮುಂದೂಡುವವರೆಗೆ ಬೆಂಗಳೂರು 7 ಪಂದ್ಯಗಳನ್ನು ಆಡಿದ್ದು, ಅದರಲ್ಲಿ ತಂಡವು 5 ಗೆಲುವುಗಳೊಂದಿಗೆ ಮೂರನೇ ಸ್ಥಾನದಲ್ಲಿದೆ ಮತ್ತು ಪ್ಲೇಆಫ್‌ಗೆ ಅರ್ಹತೆ ಪಡೆಯಲು ಪ್ರಬಲ ಸ್ಥಾನದಲ್ಲಿದೆ.
ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿಯು ಯಾವುದೇ ನಿರ್ದಿಷ್ಟ ಫಲಿತಾಂಶವಿಲ್ಲದೆ ಕೊನೆಗೊಂಡಿದೆ. ವಿರಾಟ್ ಕೊಹ್ಲಿ ನಾಯಕತ್ವದಲ್ಲಿ, ಐದು ಪಂದ್ಯಗಳ ಸರಣಿಯಲ್ಲಿ ಭಾರತ ತಂಡ 2-1 ಮುನ್ನಡೆ ಸಾಧಿಸಿತು ಮತ್ತು 14 ವರ್ಷಗಳ ನಂತರ ಇಂಗ್ಲೆಂಡ್‌ನಲ್ಲಿ ಸರಣಿ ಗೆಲುವಿನ ಬರವನ್ನು ಕೊನೆಗೊಳಿಸುವ ಅಂಚಿನಲ್ಲಿತ್ತು. ಆದರೆ ಕೊರೊನಾ ವೈರಸ್ನಿಂದಾಗಿ ಕೊನೆಯ ಟೆಸ್ಟ್ ಅನ್ನು ರದ್ದುಗೊಳಿಸಲಾಗಿದೆ ಮತ್ತು ಸರಣಿಯ ಫಲಿತಾಂಶವು ಸದ್ಯಕ್ಕೆ ಸ್ಪಷ್ಟವಾಗಿಲ್ಲ. ಈಗ ಎಲ್ಲರ ಕಣ್ಣುಗಳು ಐಪಿಎಲ್ 2021 ಸೀಸನ್ ಮೇಲೆ ನೆಟ್ಟಿವೆ, ಇದು ಯುಎಇಯಲ್ಲಿ ಉಳಿದ ಪಂದ್ಯಗಳನ್ನು ಪೂರ್ಣಗೊಳಿಸಲು ಸೆಪ್ಟೆಂಬರ್ 19 ರಿಂದ ಆರಂಭವಾಗುತ್ತದೆ. ಇಂಗ್ಲೆಂಡಿನಲ್ಲಿ, ಕೊಹ್ಲಿಗೆ ತನ್ನ ಗುರಿಯನ್ನು ಸಂಪೂರ್ಣವಾಗಿ ಸಾಧಿಸಲು ಸಾಧ್ಯವಾಗದಿರಬಹುದು. ಆದರೆ ಈಗ ಕೊಹ್ಲಿ ಮುಂದೆ ಇನ್ನೊಂದು ದೊಡ್ಡ ಗುರಿಯಿದೆ, ಇದು ಅವರ ನಾಯಕತ್ವದ ಕಠಿಣ ಪರೀಕ್ಷೆ ಮತ್ತು ಇದುವರೆಗೆ ಉದ್ಭವಿಸುತ್ತಿದ್ದ ದೊಡ್ಡ ಪ್ರಶ್ನೆಯಾಗಿದೆ. ಕೊಹ್ಲಿ ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವನ್ನು ಚಾಂಪಿಯನ್ ಮಾಡಲು ಶತಾಯಗತಾಯ ಪ್ರಯತ್ನಿಸಲ್ಲಿದ್ದಾರೆ.
ಆರ್‌ಸಿಬಿ 13 ಸೀಸನ್‌ಗಳು ಕಳೆದರು ತಮ್ಮ ಮೊದಲ ಐಪಿಎಲ್ ಪ್ರಶಸ್ತಿಗಾಗಿ ಕಾಯುತ್ತಿದೆ. ಜೊತೆಗೆ ದೀರ್ಘಕಾಲದವರೆಗೆ ತಂಡದ ನಾಯಕತ್ವ ವಹಿಸಿರುವ ವಿರಾಟ್ ಕೊಹ್ಲಿಯ ನಾಯಕತ್ವ ನಿರಂತರ ಪ್ರಶ್ನೆಯಲ್ಲಿದೆ. ಆದರೆ ಈ ಋತುವಿನಲ್ಲಿ, ತಂಡವು ಉತ್ತಮ ಲಯ ಮತ್ತು ಸಮತೋಲನದಲ್ಲಿ ಕಂಡುಬಂದಿದೆ ಮತ್ತು ಉತ್ತಮ ಪ್ರದರ್ಶನವನ್ನು ಮುಂದುವರಿಸಿದೆ. ಆದಾಗ್ಯೂ, ಅಲ್ಲಿಯೂ ಸಹ, ಕೊರೊನಾ ವೈರಸ್ ತಂಡದ ಅತ್ಯುತ್ತಮ ಪ್ರದರ್ಶನಕ್ಕೆ ಅಡ್ಡಿಯಾಯಿತು. ಮೇ 4 ರಂದು ಐಪಿಎಲ್ 2021 ರ ಋತುವನ್ನು ಮುಂದೂಡುವವರೆಗೆ ಬೆಂಗಳೂರು 7 ಪಂದ್ಯಗಳನ್ನು ಆಡಿದ್ದು, ಅದರಲ್ಲಿ ತಂಡವು 5 ಗೆಲುವುಗಳೊಂದಿಗೆ ಮೂರನೇ ಸ್ಥಾನದಲ್ಲಿದೆ ಮತ್ತು ಪ್ಲೇಆಫ್‌ಗೆ ಅರ್ಹತೆ ಪಡೆಯಲು ಪ್ರಬಲ ಸ್ಥಾನದಲ್ಲಿದೆ.
ಕೆಕೆಆರ್ ವಿರುದ್ಧದ ಪಂದ್ಯದಿಂದ ಆರಂಭ ಈಗ ವಿರಾಟ್ ಕೊಹ್ಲಿ ಸುಮಾರು ನಾಲ್ಕೂವರೆ ತಿಂಗಳ ನಂತರ ಮತ್ತೆ ಆರಂಭವಾಗುವ ಐಪಿಎಲ್ನಲ್ಲಿ ಅದೇ ರೀತಿಯಲ್ಲಿ ತನ್ನ ತಂಡವನ್ನು ಮುಂದಕ್ಕೆ ಕೊಂಡೊಯ್ಯಲು ಸಾಧ್ಯವೇ ಎಂದು ನೋಡಬೇಕು? ತಂಡದ ಲೀಗ್ ಹಂತದಲ್ಲಿ ಇನ್ನೂ 7 ಪಂದ್ಯಗಳು ಬಾಕಿಯಿದ್ದು, ಇದು ಸೆಪ್ಟೆಂಬರ್ 20 ರಂದು ಇಯೋನ್ ಮಾರ್ಗನ್ ಅವರ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಆರಂಭವಾಗಲಿದೆ. ಆರ್‌ಸಿಬಿ ಮೊದಲ ಪಂದ್ಯದಲ್ಲಿ ಕೆಕೆಆರ್ ಅನ್ನು 38 ರನ್ಗಳಿಂದ ಸೋಲಿಸಿತು.
ಇದು ಆರ್‌ಸಿಬಿಯ ಉಳಿದ ಪಂದ್ಯಗಳ ವೇಳಾಪಟ್ಟಿ – 20 ಸೆಪ್ಟೆಂಬರ್ (ಸೋಮವಾರ): ಬೆಂಗಳೂರು vs ಕೋಲ್ಕತಾ ನೈಟ್ ರೈಡರ್ಸ್, 7:30 PM, ಅಬುಧಾಬಿ – 24 ಸೆಪ್ಟೆಂಬರ್ (ಶುಕ್ರವಾರ): ಬೆಂಗಳೂರು vs ಚೆನ್ನೈ ಸೂಪರ್ ಕಿಂಗ್ಸ್, 7:30 PM, ಶಾರ್ಜಾ – 26 ಸೆಪ್ಟೆಂಬರ್ (ಭಾನುವಾರ): ಬೆಂಗಳೂರು vs ಮುಂಬೈ ಇಂಡಿಯನ್ಸ್, 7:30 PM, ದುಬೈ – 29 ಸೆಪ್ಟೆಂಬರ್ (ಬುಧವಾರ): ಬೆಂಗಳೂರು vs ರಾಜಸ್ಥಾನ ರಾಯಲ್ಸ್, 7:30 PM ದುಬೈ – 03 ಅಕ್ಟೋಬರ್ (ಭಾನುವಾರ): ಬೆಂಗಳೂರು vs ಪಂಜಾಬ್ ಕಿಂಗ್ಸ್, 3:30 PM ಶಾರ್ಜಾ – 06 ಅಕ್ಟೋಬರ್ (ಬುಧವಾರ): ಬೆಂಗಳೂರು vs ಸನ್ ರೈಸರ್ಸ್ ಹೈದರಾಬಾದ್, ಸಂಜೆ 7:30, ಅಬುಧಾಬಿ – 08 ಅಕ್ಟೋಬರ್ (ಶುಕ್ರವಾರ): ಬೆಂಗಳೂರು vs ದೆಹಲಿ ಕ್ಯಾಪಿಟಲ್ಸ್, ಸಂಜೆ 7:30, ದುಬೈ
ಇದನ್ನೂ ಓದಿ:IPL 2021: ಆರ್‌ಸಿಬಿ ಪ್ಲೇ ಆಫ್ಗೇರಲು ಇನ್ನೆಷ್ಟು ಪಂದ್ಯ ಗೆಲ್ಲಬೇಕು?: ಇಲ್ಲಿದೆ ನೋಡಿ ಲೆಕ್ಕಾಚಾರ