AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫಾರ್ಮ್​ನಲ್ಲಿರದ ಕೊಹ್ಲಿ ಮಾತಿಗೆ ಸೊಪ್ಪು ಹಾಕದ ಆಟಗಾರರು! ವಿರಾಟ್ ವರ್ತನೆಯೇ ನಾಯಕತ್ವಕ್ಕೆ ಮುಳುವಾಯ್ತಾ?

ತ್ತೀಚೆಗೆ, ಕೋಚ್ ನೆಟ್‌ಗಳಲ್ಲಿ ಕೊಹ್ಲಿಗೆ ಕೆಲವು ಸಲಹೆಗಳನ್ನು ನೀಡಿದಾಗ, ಕೊಹ್ಲಿ ಅವರಿಗೆ ನನ್ನನ್ನು ಗೊಂದಲಗೊಳಿಸಬೇಡಿ ಎಂದು ಹೇಳಿದರು. ಇದು ಸಹ ಮಂಡಳಿಗೆ ಬೇಸರ ತರಿಸಿತ್ತು.

ಫಾರ್ಮ್​ನಲ್ಲಿರದ ಕೊಹ್ಲಿ ಮಾತಿಗೆ ಸೊಪ್ಪು ಹಾಕದ ಆಟಗಾರರು! ವಿರಾಟ್ ವರ್ತನೆಯೇ ನಾಯಕತ್ವಕ್ಕೆ ಮುಳುವಾಯ್ತಾ?
ಟೀಂ ಇಂಡಿಯಾ
TV9 Web
| Edited By: |

Updated on: Sep 18, 2021 | 3:15 PM

Share

ಟೀಮ್ ಇಂಡಿಯಾದಲ್ಲಿ, ವಿವಿಧ ಸ್ವರೂಪಗಳ ಬಗೆಗಿನ ವಿವಿಧ ನಾಯಕರ ಚರ್ಚೆ ಬಹಳ ಕಾಲದಿಂದ ನಡೆಯುತ್ತಿತ್ತು. ಬಿಸಿಸಿಐ ಕೂಡ ಈ ಬಗ್ಗೆ ಯೋಚಿಸುತ್ತಿತ್ತು. ಟಿ 20 ತಂಡದ ನಾಯಕತ್ವ ತ್ಯಜಿಸಲು ವಿರಾಟ್ ಕೊಹ್ಲಿ ಇತ್ತೀಚೆಗೆ ನಿರ್ಧರಿಸಿದ ನಂತರ, ಅವರಿಗೆ ಸ್ವಲ್ಪ ಸಮಾಧಾನ ಸಿಕ್ಕಿದೆ. ಇಲ್ಲದಿದ್ದರೆ ಬಿಸಿಸಿಐ ನಾಯಕತ್ವ ಬದಲಾವಣೆಗೆ ಮುಂದಾಗುತ್ತಿತ್ತು. ಇದಕ್ಕೆ ಕಾರಣ ಕಳೆದ ಎರಡು ವರ್ಷಗಳಿಂದ ಕೊಹ್ಲಿಯ ಕಳಪೆ ಫಾರ್ಮ್ ಮನಗಂಡ ಬಿಸಿಸಿಐ ನಾಯಕತ್ವವನ್ನು ಬದಲಿಸಲು ಯೋಚಿಸುತ್ತಿದೆ. ಎರಡು ವರ್ಷಗಳಿಂದ ಅವರ ಬ್ಯಾಟ್ ಶತಕ ಗಳಿಸಿಲ್ಲ. ಅದೇ ಸಮಯದಲ್ಲಿ, ಡ್ರೆಸ್ಸಿಂಗ್ ರೂಂನ ವಾತಾವರಣ ಕೂಡ ಸರಿಯಾಗಿಲ್ಲ ಮತ್ತು ಆಟಗಾರರೊಂದಿಗೆ ಕೊಹ್ಲಿಯ ಸಂಬಂಧ ಹದಗೆಡುತ್ತಿದೆ ಎಂದು ಬಿಸಿಸಿಐಗೆ ತಿಳಿದಿತ್ತು. ಈ ಮಾಹಿತಿಯನ್ನು ಆಂಗ್ಲ ಪತ್ರಿಕೆ ದಿ ಟೆಲಿಗ್ರಾಫ್ ನಲ್ಲಿ ಉಲ್ಲೇಖಿಸಿದ ಮೂಲಗಳಿಂದ ನೀಡಲಾಗಿದೆ.

ಸೌತಾಂಪ್ಟನ್‌ನಲ್ಲಿ ನಡೆದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದ ನಂತರ ಕೊಹ್ಲಿ ನೀಡಿದ ಹೇಳಿಕೆಯನ್ನು ಆದರಿಸಿ ಹಿರಿಯ ಕ್ರಿಕೆಟಿಗ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಜೊತೆ ತಂಡದ ಭದ್ರತೆಯ ಬಗ್ಗೆ ಮಾತನಾಡಿದ್ದಾರೆ ಎಂದು ಮೂಲಗಳು ಉಲ್ಲೇಖಿಸಿವೆ. ಈ ಸೋಲು ತಂಡದಲ್ಲಿ ಭಿನ್ನಾಭಿಪ್ರಾಯದ ಹೊಗೆಯನ್ನು ಹೆಚ್ಚಿಸಿತು.

ಕೊಹ್ಲಿ ನಿಯಂತ್ರಣ ಕಳೆದುಕೊಳ್ಳುತ್ತಿದ್ದಾರೆ ಮೂಲಗಳನ್ನು ಉಲ್ಲೇಖಿಸಿದ ಟೆಲಿಗ್ರಾಫ್, ಕೊಹ್ಲಿ ನಿಯಂತ್ರಣ ಕಳೆದುಕೊಳ್ಳುತ್ತಿದ್ದಾರೆ. ಮೊದಲು ಕೊಹ್ಲಿ, ಇತರರ ಆಟಗಾರರು ತನ್ನ ಮೇಲಿಟ್ಟಿದ್ದ ಗೌರವ ಕಳೆದುಕೊಂಡರು. ಜೊತೆಗೆ ಕೆಲವು ಆಟಗಾರರು ಅವರ ವರ್ತನೆಯಿಂದ ಸಂತೋಷವಾಗಿಲ್ಲ. ಜೊತೆಗೆ ಕೊಹ್ಲಿ ದೊಡ್ಡ ಇನ್ನಿಂಗ್ಸ್ ಆಡದ ಕಾರಣ ಆಟಗಾರರ ಬಳಿ ಕೊಹ್ಲಿ ಮಾತಿಗೆ ಬೆಲೆ ಇಲ್ಲದಂತ್ತಾಯಿತು. ಇತ್ತೀಚೆಗೆ, ಕೋಚ್ ನೆಟ್‌ಗಳಲ್ಲಿ ಕೊಹ್ಲಿಗೆ ಕೆಲವು ಸಲಹೆಗಳನ್ನು ನೀಡಿದಾಗ, ಕೊಹ್ಲಿ ಅವರಿಗೆ ನನ್ನನ್ನು ಗೊಂದಲಗೊಳಿಸಬೇಡಿ ಎಂದು ಹೇಳಿದರು. ಇದು ಸಹ ಮಂಡಳಿಗೆ ಬೇಜಾರು ತರಿಸಿತ್ತು.

ಬಿಸಿಸಿಐ ಮುಂದಿನ ನಡೆ ಏನು? ಬಿಸಿಸಿಐ ಕೊಹ್ಲಿ ಭುಜದ ಮೇಲಿನ ಹೊರೆ ಕಡಿಮೆ ಮಾಡಲು ಚಿಂತನೆ ನಡೆಸಿದ್ದು, ಇದರಿಂದ ಆತ ತನ್ನ ಬ್ಯಾಟಿಂಗ್ ಮೇಲೆ ಸಂಪೂರ್ಣ ಗಮನ ಕೇಂದ್ರೀಕರಿಸಬಹುದು. ಯುಎಇಯಲ್ಲಿ ಫಲಿತಾಂಶ ಏನೇ ಇರಲಿ, ಟಿ 20 ವಿಶ್ವಕಪ್ ನಂತರ ರೋಹಿತ್ ಶರ್ಮಾಗೆ ಸೀಮಿತ ಓವರ್‌ಗಳ ನಾಯಕತ್ವವನ್ನು ನೀಡುವುದು ಮೊದಲ ಹೆಜ್ಜೆಯಾಗಿದೆ. ಗಮನಿಸಬೇಕಾದ ಒಂದು ಅಂಶವೆಂದರೆ, ಕೊಹ್ಲಿ ನಾಯಕತ್ವದಿಂದ ಕೆಳಗಿಳಿಯುವ ನಿರ್ಧಾರ ಕುರಿತು ಗುರುವಾರ ಬಿಸಿಸಿಐ ಹೊರಡಿಸಿದ ಹೇಳಿಕೆಯಲ್ಲಿ ಮಂಡಳಿಯ ಅಧ್ಯಕ್ಷ ಸೌರವ್ ಗಂಗೂಲಿ ಅಥವಾ ಕಾರ್ಯದರ್ಶಿ ಶಾ ಅವರು ಏಕದಿನ ಮತ್ತು ಟೆಸ್ಟ್ ತಂಡಗಳ ನಾಯಕತ್ವದ ಬಗ್ಗೆ ಏನನ್ನೂ ಹೇಳಿಲ್ಲ. ಈ ಕಾರಣಕ್ಕಾಗಿ, ಮಂಡಳಿಯು ಮಹೇಂದ್ರ ಸಿಂಗ್ ಧೋನಿಯನ್ನು ತಂಡದಲ್ಲಿ ಮಾರ್ಗದರ್ಶಕರಾಗಿ ಕರೆತಂದಿತು. ಧೋನಿ ಡ್ರೆಸ್ಸಿಂಗ್ ರೂಂನಲ್ಲಿ ವಾತಾವರಣವನ್ನು ಶಾಂತವಾಗಿರಿಸುತ್ತಾರೆ. ಇತ್ತ ಕೊಹ್ಲಿ ತನ್ನ ಬ್ಯಾಟಿಂಗ್ ಮೇಲೆ ಗಮನ ಹರಿಸುತ್ತಾರೆ. ಇದರ ಮೂಲ ಉದ್ದೇಶವೆಂದರೆ ರೋಹಿತ್ ಅವರನ್ನು ನಾಯಕನನ್ನಾಗಿ ಮಾಡಬೇಕು, ಅವರು ಅಜಿಂಕ್ಯ ರಹಾನೆಯಂತೆ ಶಾಂತವಾಗಿರುತ್ತಾರೆ. ರಹಾನೆ ಆಸ್ಟ್ರೇಲಿಯಾದಲ್ಲಿ ತಂಡದ ನಾಯಕರಾಗಿದ್ದರು ಮತ್ತು ಸರಣಿಯನ್ನು ಗೆದ್ದಿದ್ದರು. ರೋಹಿತ್ ಉಳಿದ ಆಟಗಾರರಿಗೆ ಅಣ್ಣನಂತೆ ನಡೆದುಕೊಳ್ಳುತ್ತಾರೆ. ಅಲ್ಲದೆ ಯುವಕರು ಸಹ ರೋಹಿತ್ ಮಾತಿಗೆ ಬೆಲೆ ಕೊಡುತ್ತಾರೆ ಎಂಬುದಾಗಿದೆ.

ಕೊಹ್ಲಿ ಟಿ 20 ನಾಯಕತ್ವವನ್ನು ತೊರೆದಿದ್ದಾರೆ. ಆದರೆ ಬಿಸಿಸಿಐ ಈಗ ಗೊಂದಲ್ಲಿದೆ. ಅಂದರೆ, ಬೇರೆ ನಾಯಕನ ಮಾತು ಟಿ 20 ಗೆ ಮಾತ್ರವೇ ಅಥವಾ ರೋಹಿತ್ ಅವರನ್ನು ಸೀಮಿತ ಓವರ್‌ಗಳ ತಂಡದ ನಾಯಕನನ್ನಾಗಿ ಮಾಡಲಾಗುವುದೆ ಎಂಬುದಾಗಿದೆ. ಆದಾಗ್ಯೂ, ಬಿಸಿಸಿಐ ಸ್ಪಷ್ಟವಾದ ಮಾರ್ಗಸೂಚಿಯನ್ನು ಹೊಂದಿಲ್ಲ. ಭಾರತ ವಿಶ್ವಕಪ್ ಗೆಲ್ಲದಿದ್ದರೆ ಸೀಮಿತ ಓವರ್​ಗಳಲ್ಲಿ ನಾಯಕನನ್ನು ಬದಲಿಸುವ ಒತ್ತಡ ಹೆಚ್ಚಾಗುತ್ತದೆ. ರೋಹಿತ್ ನಾಯಕತ್ವದಲ್ಲಿ 2022 ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ 20 ವಿಶ್ವಕಪ್ ಅನ್ನು ಭಾರತ ಗೆದ್ದರೆ, ಬಿಸಿಸಿಐ 2023 ಏಕದಿನ ವಿಶ್ವಕಪ್ ಮೊದಲು ನಾಯಕನನ್ನು ಬದಲಿಸಬೇಕಾಗಬಹುದು.