IPL 2021: ಮುಂಬೈ ಇಂಡಿಯನ್ಸ್ ಅಭಿಮಾನಿಗಳಿಗೆ ಸಿಹಿ ಸುದ್ದಿ: ಸ್ಟಾರ್ ಆಟಗಾರ ಮೊದಲ ಪಂದ್ಯಕ್ಕೆ ಲಭ್ಯ
IPL 2021 ಮೊದಲಾರ್ಧದಲ್ಲಿ ಸಿಎಸ್ಕೆ ತಂಡವನ್ನು ಸೋಲಿನ ರುಚಿ ತೋರಿಸಿದ್ದೇ ಪೊಲಾರ್ಡ್. ಏಕೆಂದರೆ ಏಕಾಂಗಿಯಾಗಿ ಹೋರಾಡಿದ್ದ ಪೊಲಾರ್ಡ್ ಕೇವಲ 34 ಎಸೆತಗಳಲ್ಲಿ 87 ರನ್ ಬಾರಿಸುವ ಮೂಲಕ ಸಿಎಸ್ಕೆ ನೀಡಿದ್ದ 219 ರನ್ಗಳನ್ನು ಚೇಸ್ ಮಾಡಿದ್ದರು. ಇದೀಗ ದ್ವಿತೀಯಾ ಪಂದ್ಯಕ್ಕೂ ಪೊಲಾರ್ಡ್ ಲಭ್ಯರಿರುವುದು ಮುಂಬೈ ಬಲವನ್ನು ಹೆಚ್ಚಿಸಿದೆ.
ಐಪಿಎಲ್ (IPL 2021) ದ್ವಿತಿಯಾರ್ಧ ಭಾನುವಾರದಿಂದ ಶುರುವಾಗಲಿದೆ. ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ (MI) ಹಾಗೂ ಸಿಎಸ್ಕೆ (CSK) ಮುಖಾಮುಖಿಯಾಗಲಿದೆ. ಉಭಯ ತಂಡಗಳು ಬಲಿಷ್ಠ ಪಡೆಯನ್ನು ಒಳಗೊಂಡಿದ್ದರೂ ಮೊದಲ ಪಂದ್ಯಕ್ಕೆ ಕೆಲ ಆಟಗಾರರು ಅಲಭ್ಯರಾಗಲಿದ್ದಾರೆ ಎನ್ನಲಾಗಿತ್ತು. ಅದರಂತೆ ಇಂಗ್ಲೆಂಡ್ನಿಂದ ಆಗಮಿಸಿರುವ ಸಿಎಸ್ಕೆ ಆಲ್ರೌಂಡರ್ ಸ್ಯಾಮ್ ಕರನ್ ಕ್ವಾರಂಟೈನ್ನಲ್ಲಿದ್ದು, ಹೀಗಾಗಿ ಮೊದಲ ಪಂದ್ಯದಲ್ಲಿ ಕಣಕ್ಕಿಳಿಯಲಾಗುವುದಿಲ್ಲ. ಇದರ ಬೆನ್ನಲ್ಲೇ ಸಿಪಿಎಲ್ ಮುಗಿದರೂ ಕೀರನ್ ಪೊಲಾರ್ಡ್ ಆಗಮಿಸಿದಿದ್ದ ಕಾರಣ ಅವರು ಕೂಡ ಮೊದಲ ಪಂದ್ಯಕ್ಕೆ ಅಲಭ್ಯ ಎನ್ನಲಾಗಿತ್ತು. ಆದರೀಗ ಮೊದಲ ಪಂದ್ಯಕ್ಕೆ ಕೇವಲ 2 ದಿನಗಳಿರುವಾಗ ಪೊಲಾರ್ಡ್ ದುಬೈಗೆ ಬಂದಿಳಿದಿದ್ದಾರೆ.
ಅಂದರೆ ಯುಎಇ ಕ್ವಾರಂಟೈನ್ ನಿಯಮದಲ್ಲಿ ಬಯೋ ಬಬಲ್ ಟು ಬಯೋ ಬಬಲ್ ಅವಕಾಶವಿದೆ. ಅದರಂತೆ ಸಿಪಿಎಲ್ ಮುಗಿಸಿ ಬಂದಿರುವ ಆಟಗಾರರು ಕೇವಲ 2 ದಿನ ಕ್ವಾರಂಟೈನ್ ಇದ್ದರೆ ಸಾಕು. ಇತ್ತ ಸೆಪ್ಟೆಂಬರ್ 17ಕ್ಕೆ ಆಗಮಿಸಿರುವ ಕೀರನ್ ಪೊಲಾರ್ಡ್ ಸೆಪ್ಟೆಂಬರ್ 19 ರ ವೇಳೆಗೆ ಕ್ವಾರಂಟೈನ್ನಿಂದ ಹೊರಬರಲಿದ್ದಾರೆ. ಹಾಗಾಗಿ ಭಾನುವಾರ ನಡೆಯಲಿರುವ ಸಿಎಸ್ಕೆ ವಿರುದ್ದದ ಪಂದ್ಯಕ್ಕೆ ಲಭ್ಯರಿರಲಿದ್ದಾರೆ.
ಇನ್ನು ಮೊದಲಾರ್ಧದಲ್ಲಿ ಸಿಎಸ್ಕೆ ತಂಡವನ್ನು ಸೋಲಿನ ರುಚಿ ತೋರಿಸಿದ್ದೇ ಪೊಲಾರ್ಡ್. ಏಕೆಂದರೆ ಏಕಾಂಗಿಯಾಗಿ ಹೋರಾಡಿದ್ದ ಪೊಲಾರ್ಡ್ ಕೇವಲ 34 ಎಸೆತಗಳಲ್ಲಿ 87 ರನ್ ಬಾರಿಸುವ ಮೂಲಕ ಸಿಎಸ್ಕೆ ನೀಡಿದ್ದ 219 ರನ್ಗಳನ್ನು ಚೇಸ್ ಮಾಡಿದ್ದರು. ಇದೀಗ ದ್ವಿತೀಯಾ ಪಂದ್ಯಕ್ಕೂ ಪೊಲಾರ್ಡ್ ಲಭ್ಯರಿರುವುದು ಮುಂಬೈ ಬಲವನ್ನು ಹೆಚ್ಚಿಸಿದೆ.
ಮುಂಬೈ ಇಂಡಿಯನ್ಸ್ ತಂಡ : ರೋಹಿತ್ ಶರ್ಮಾ (ನಾಯಕ), ಆಡಮ್ ಮಿಲ್ನೆ, ಆದಿತ್ಯ ತಾರೆ, ಅನ್ಮೋಲ್ಪ್ರೀತ್ ಸಿಂಗ್, ಅನುಕುಲ್ ರಾಯ್, ಅರ್ಜುನ್ ತೆಂಡೂಲ್ಕರ್, ಕ್ರಿಸ್ ಲಿನ್, ಧವಳ್ ಕುಲಕರ್ಣಿ, ಹಾರ್ದಿಕ್ ಪಾಂಡ್ಯ, ಇಶಾನ್ ಕಿಶನ್, ಜೇಮ್ಸ್ ನೀಶಮ್, ಜಸ್ಪ್ರೀತ್ ಬುಮ್ರಾ, ಜಯಂತ್ ಯಾದವ್, ಕೀರನ್ ಪೊಲಾರ್ಡ್, ಕೃನಾಲ್ ಪಾಂಡ್ಯ, ಮಾರ್ಕೊ ಜಾನ್ಸೆನ್, ಮೊಹ್ಸಿನ್ ಖಾನ್, ನಾಥನ್ ಕೌಲ್ಟರ್-ನೈಲ್, ಪಿಯೂಷ್ ಚಾವ್ಲಾ, ಕ್ವಿಂಟನ್ ಡಿ ಕಾಕ್, ರಾಹುಲ್ ಚಹರ್, ಸೌರಭ್ ತಿವಾರಿ, ಸೂರ್ಯಕುಮಾರ್ ಯಾದವ್, ಟ್ರೆಂಟ್ ಬೌಲ್ಟ್, ಯುಧ್ವೀರ್ ಸಿಂಗ್.
ಇದನ್ನೂ ಓದಿ: IPL 2021: ಪ್ಲೇ ಆಫ್ ಪ್ರವೇಶಿಸಲು ದ್ವಿತಿಯಾರ್ಧದಲ್ಲಿ ಪ್ರತಿ ತಂಡಗಳು ಎಷ್ಟು ಪಂದ್ಯ ಗೆಲ್ಲಬೇಕು?
ಇದನ್ನೂ ಓದಿ: IPL 2021: ಐಪಿಎಲ್ನಲ್ಲಿ ಪಾಕ್ ಆಟಗಾರರಿಗೆ ಸಿಕ್ಕ ಭಾಗ್ಯ ಕೊಹ್ಲಿ, ಗೇಲ್, ಎಬಿಡಿಗೆ ಇನ್ನೂ ಸಿಕ್ಕಿಲ್ಲ
ಇದನ್ನೂ ಓದಿ: Crime News: ಅಕ್ಕನಿಗೆ ಯುವಕನೊಂದಿಗೆ ಸಂಬಂಧ: ಕಥೆ ಮುಗಿಸಿ ನಗುತ್ತಾ ನಿಂತಿದ್ದ ತಮ್ಮ..!
ಇದನ್ನೂ ಓದಿ: IPL 2021: ಐಪಿಎಲ್ ದ್ವಿತಿಯಾರ್ಧದಲ್ಲಿ ಸೃಷ್ಟಿಯಾಗಲಿದೆ ಹೊಸ ದಾಖಲೆ
Published On - 2:19 pm, Sat, 18 September 21