IPL 2022: ಐಪಿಎಲ್ ಪ್ರಸಾರ ಹಕ್ಕುಗಳ ಖರೀದಿಗೆ ಮುಂದಾದ ಗೂಗಲ್
IPL 2022: ಐಪಿಎಲ್ ವೀಕ್ಷಕರ ದೃಷ್ಟಿಯಿಂದ ವಿಶ್ವದ ಮೂರನೇ ಅತಿ ದೊಡ್ಡ ಲೀಗ್ ಆಗಿದೆ. ಬಿಸಿಸಿಐ ಅಂಕಿಅಂಶಗಳ ಪ್ರಕಾರ, ಐಪಿಎಲ್‌ನ ಕೊನೆಯ ಸೀಸನ್ ಅನ್ನು ಸುಮಾರು 60 ಕೋಟಿ ಮಂದಿ ಪ್ರೇಕ್ಷಕರು ವೀಕ್ಷಿಸಿದ್ದರು.
IPL 2022: ಇಂಡಿಯನ್ ಪ್ರೀಮಿಯರ್ ಲೀಗ್‌ನ ಪ್ರಸಾರ ಹಕ್ಕುಗಳನ್ನು ಖರೀದಿಸಲು ಗೂಗಲ್ ಆಸಕ್ತಿ ತೋರಿಸಿದೆ. ಈ ಬಾರಿಯ ಐಪಿಎಲ್ ಬಳಿಕ, ಮುಂಬರುವ ಸೀಸನ್ಗಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪ್ರಸಾರ ಹಕ್ಕುಗಳ ಬಿಡ್ಡಿಂಗ್ ಮಾಡಲಿದೆ. ಇದೀಗ ಈ ಪ್ರಸಾರ ಹಕ್ಕುಗಳ ಖರೀದಿಗೆ ಅಮೆಜಾನ್ ಮತ್ತು ಡಿಸ್ನಿ ಕಂಪೆನಿಗಳ ಜೊತೆಗೆ ಗೂಗಲ್ ಕೂಡ ಸೇರಿಕೊಂಡಿದೆ. ಒಟ್ಟಾರೆ ಅರ್ಧ ಡಜನ್ ಕಂಪನಿಗಳು ಬಿಸಿಸಿಐನಿಂದ ಬಿಡ್ಡಿಂಗ್ ದಾಖಲೆಗಳನ್ನು ಪಡೆದುಕೊಂಡಿವೆ. ಹೀಗಾಗಿ ಮುಂಬರುವ ಐಪಿಎಲ್ (IPL 2023) ಪ್ರಸಾರ ಹಕ್ಕುಗಳ ಬಿಡ್ಡಿಂಗ್ನಲ್ಲಿ ಭರ್ಜರಿ ಪೈಪೋಟಿ ಕಂಡು ಬರಲಿದೆ.
ಐಪಿಎಲ್ ವಿಶ್ವದಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಮೂರನೇ ಕ್ರೀಡಾಕೂಟವಾಗಿ ಗುರುತಿಸಿಕೊಂಡಿದೆ. ಬಿಸಿಸಿಐ ಈ ವರ್ಷ 2023 ರಿಂದ 2027 ರವರೆಗೆ ಐಪಿಎಲ್ ಪ್ರಸಾರ ಹಕ್ಕುಗಳನ್ನು ಹರಾಜು ಮಾಡಲಿದೆ. ಪ್ರಸ್ತುತ, ಐಪಿಎಲ್ ಪ್ರಸಾರದ ಹಕ್ಕುಗಳು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಕೈಯಲ್ಲಿದೆ. ಇದೀಗ ಐಪಿಎಲ್ ಪ್ರಸಾರ ಹಕ್ಕುಗಳ ಖರೀದಿಗೆ ವಿಶ್ವದ ಪ್ರಮುಖ ಕಂಪೆನಿಗಳು ಮುಂದಾಗಿರುವುದು ಕುತೂಹಲ ಮೂಡಿಸಿದೆ.
ಬ್ಲೂಮ್‌ಬರ್ಗ್ ವರದಿಯ ಪ್ರಕಾರ, “ಅಮೆರಿಕನ್ ಟೆಕ್ ಕಂಪನಿ ಆಲ್ಫಾಬೆಟ್ ಇಂಕ್, ಬಿಸಿಸಿಐನಿಂದ ಪ್ರಸಾರ ಹಕ್ಕುಗಳಿಗೆ ಸಂಬಂಧಿಸಿದ ಬಿಡ್ಡಿಂಗ್ ದಾಖಲೆಗಳನ್ನು ಖರೀದಿಸಿದೆ. ಇತ್ತ ಐಪಿಎಲ್ ನೇರ ಪ್ರಸಾರ ಹಕ್ಕುಗಳಿಗಾಗಿ ಗೂಗಲ್ ಮುಂದಾಗಿರುವುದು ಹೊಸ ಚರ್ಚೆಗೆ ಕಾರಣವಾಗಿದೆ. ಏಕೆಂದರೆ ಗೂಗಲ್ ಕಂಪೆನಿಯ ಸ್ಟ್ರೀಮಿಂಗ್ ವೆಬ್‌ಸೈಟ್ ಆಗಿ ಯೂಟ್ಯೂಬ್ (YouTube) ಅನ್ನು ಹೊಂದಿದೆ. ಹೀಗಾಗಿ ಗೂಗಲ್ ಯೂಟ್ಯೂಬ್ನಲ್ಲಿ ಐಪಿಎಲ್ ಅನ್ನು ಪ್ರಸಾರ ಮಾಡಲಿದೆಯಾ? ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.
ಮತ್ತೊಂದೆಡೆ ದಕ್ಷಿಣ ಆಫ್ರಿಕಾದ ಟೆಲಿವಿಷನ್ ಚಾನೆಲ್ ಗ್ರೂಪ್ ಸೂಪರ್ ಸ್ಪೋರ್ಟ್ಸ್ ಕೂಡ ಬಿಸಿಸಿಐನಿಂದ ಬಿಡ್ಡಿಂಗ್ ದಾಖಲೆಗಳನ್ನು ಪಡೆದುಕೊಂಡಿದೆ. ಹಾಗೆಯೇ Amazon.com Inc., The Walt Disney Company, Reliance Industries Lt., Sony Group Corp., Desi Zee Entertainment Enterprises Ltd. ಮತ್ತು ಫ್ಯಾಂಟಸಿ-ಸ್ಪೋರ್ಟ್ಸ್ ಪ್ಲಾಟ್‌ಫಾರ್ಮ್ Dream11 ಸಹ IPL ಮಾಧ್ಯಮ ಹಕ್ಕುಗಳನ್ನು ಖರೀದಿಸುವ ಇರಾದೆಯಲ್ಲಿದೆ.
ಐಪಿಎಲ್ ವೀಕ್ಷಕರ ದೃಷ್ಟಿಯಿಂದ ವಿಶ್ವದ ಮೂರನೇ ಅತಿ ದೊಡ್ಡ ಲೀಗ್ ಆಗಿದೆ. ಬಿಸಿಸಿಐ ಅಂಕಿಅಂಶಗಳ ಪ್ರಕಾರ, ಐಪಿಎಲ್‌ನ ಕೊನೆಯ ಸೀಸನ್ ಅನ್ನು ಸುಮಾರು 60 ಕೋಟಿ ಮಂದಿ ಪ್ರೇಕ್ಷಕರು ವೀಕ್ಷಿಸಿದ್ದರು. ಭಾರತೀಯ ಮನರಂಜನಾ ಮಾರುಕಟ್ಟೆಯಲ್ಲಿ IPL ಪ್ರಮುಖ ಪಾಲನ್ನು ಹೊಂದಿದೆ. ಹೀಗಾಗಿಯೇ ಈ ಬಾರಿಯ ಐಪಿಎಲ್ ಪ್ರಸಾರ ಹಕ್ಕುಗಳ ಹರಾಜಿನಿಂದ ಬಿಸಿಸಿಐ 32 ಸಾವಿರ ಕೋಟಿಗೂ ಅಧಿಕ ಮೊತ್ತ ಪಡೆಯಲಿದೆ ಎಂದು ಅಂದಾಜಿಸಲಾಗಿದೆ.
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.