Ipl 2022: ಕೆಎಲ್ ರಾಹುಲ್ ಅತ್ಯುತ್ತಮ ನಾಯಕ ಎಂದ ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ
ಕಳೆದ ಎರಡು ಸೀಸನ್‌ಗಳಲ್ಲಿ ಕೆಎಲ್ ರಾಹುಲ್ ಪಂಜಾಬ್ ಕಿಂಗ್ಸ್‌ಗೆ ನಾಯಕತ್ವ ವಹಿಸಿದ್ದರು. ಈ ವೇಳೆ ಪಂಜಾಬ್ ತಂಡವು ಪ್ಲೇಆಫ್ ತಲುಪಲಿಲ್ಲ. 27 ಐಪಿಎಲ್ ಪಂದ್ಯಗಳಲ್ಲಿ ನಾಯಕರಾಗಿದ್ದ ರಾಹುಲ್ 11 ಪಂದ್ಯಗಳಲ್ಲಿ ಮಾತ್ರ ಗೆದ್ದಿದ್ದಾರೆ.
ಕೆಎಲ್ ರಾಹುಲ್ ಅತ್ಯುತ್ತಮ ಟೆಸ್ಟ್ ಬ್ಯಾಟರ್, ಅತ್ಯುತ್ತಮ ಏಕದಿನ ಆಟಗಾರ ಮತ್ತು ಟಿ20 ಕ್ರಿಕೆಟ್ನಲ್ಲೂ ಹೆಸರು ಮಾಡಿದ್ದಾರೆ. ಬಹುಶಃ ಯಾವುದೇ ಕ್ರಿಕೆಟ್ ತಜ್ಞರು ಅಥವಾ ಅಭಿಮಾನಿಗಳು ಈ ವಿಷಯದಲ್ಲಿ ಭಿನ್ನಾಭಿಪ್ರಾಯ ಹೊಂದಿರುವುದಿಲ್ಲ. ಆದರೆ ನಾವು ಅವರ ನಾಯಕತ್ವದ ಬಗ್ಗೆ ಚರ್ಚಿಸಿದರೆ, ಭಿನ್ನ ವಾದಗಳು ಕೇಳಿ ಬರುತ್ತಿರುವುದು ಸಾಮಾನ್ಯ. ಇದಕ್ಕೆ ತಾಜಾ ಉದಾಹರಣೆ ಎಂದರೆ ಕೆಎಲ್ ರಾಹುಲ್ ನಾಯಕತ್ವದಲ್ಲಿ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ದ ನಾಲ್ಕು ಪಂದ್ಯಗಳಲ್ಲಿ ಸೋತಿರುವುದು. ಆದಾಗ್ಯೂ, ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಕೆಎಲ್ ರಾಹುಲ್ ಅವರನ್ನು ಅತ್ಯುತ್ತಮ ನಾಯಕ ಎಂದು ಬಣ್ಣಿಸಿದ್ದಾರೆ.
ಐಪಿಎಲ್ 2022 ರಲ್ಲಿ ಲಕ್ನೋ ತಂಡವನ್ನು ಮುನ್ನಡೆಸಲಿರುವ ರಾಹುಲ್ ಉತ್ತಮ ನಾಯಕ ಎಂದು ಗೌತಮ್ ಗಂಭೀರ್ ಬಣ್ಣಿಸಿದ್ದಾರೆ. ಗೌತಮ್ ಗಂಭೀರ್ ಪ್ರಕಾರ, ‘ರಾಹುಲ್ ಉತ್ತಮ ಬ್ಯಾಟ್ಸ್‌ಮನ್ ಮಾತ್ರವಲ್ಲದೆ ಉತ್ತಮ ನಾಯಕ ಕೂಡ ಎಂಬುದರಲ್ಲಿ ಸಂದೇಹವಿಲ್ಲ. ಅವರು ಮೂರು ಜವಾಬ್ದಾರಿಯನ್ನು ನಿಭಾಯಿಸುತ್ತಾರೆ. ವಿಕೆಟ್ ಕೀಪಿಂಗ್ ಮಾಡುತ್ತಾರೆ, ಅವರ ಬ್ಯಾಟಿಂಗ್ ಕೂಡ ಅದ್ಭುತವಾಗಿದೆ. ನಾಯಕನಾಗಿ ಕೂಡ ಉತ್ತಮವಾಗಿ ಆಡಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ಅವರು ಪ್ರತಿ ವಿಷಯದಲ್ಲೂ ತಮ್ಮನ್ನು ತಾವು ಸಾಬೀತುಪಡಿಸಿದ್ದಾರೆ. ಈಗ ಇದಕ್ಕಿಂತ ಇನ್ನೇನು ಬೇಕು ಎಂದು ಗೌತಮ್ ಗಂಭೀರ್ ಪ್ರಶ್ನಿಸಿದ್ದಾರೆ.
ಅಂದಹಾಗೆ ಗೌತಮ್ ಗಂಭೀರ್ ಲಕ್ನೋ ತಂಡದ ಮಾರ್ಗದರ್ಶಕರು. ಹೀಗಾಗಿ ಕೆಎಲ್ ರಾಹುಲ್ ಅವರ ನಾಯಕತ್ವವನ್ನು ಗಂಭೀರ್ ಹೊಗಳಿದಿದ್ದಾರೆ. ಈ ಬಾರಿ ಲಕ್ನೋ ತಂಡವು ಕೆಎಲ್ ರಾಹುಲ್ ಅವರನ್ನು 17 ಕೋಟಿಗೆ ಖರೀದಿಸಿದೆ. ಆದರೆ ರಾಹುಲ್ ನಾಯಕತ್ವದ ದಾಖಲೆಗಳು ಉತ್ತಮವಾಗಿಲ್ಲ ಎಂಬುದೇ ಸತ್ಯ. ಏಕೆಂದರೆ ಕಳೆದ ಎರಡು ಸೀಸನ್‌ಗಳಲ್ಲಿ ಕೆಎಲ್ ರಾಹುಲ್ ಪಂಜಾಬ್ ಕಿಂಗ್ಸ್‌ಗೆ ನಾಯಕತ್ವ ವಹಿಸಿದ್ದರು. ಈ ವೇಳೆ ಪಂಜಾಬ್ ತಂಡವು ಪ್ಲೇಆಫ್ ತಲುಪಲಿಲ್ಲ. 27 ಐಪಿಎಲ್ ಪಂದ್ಯಗಳಲ್ಲಿ ನಾಯಕರಾಗಿದ್ದ ರಾಹುಲ್ 11 ಪಂದ್ಯಗಳಲ್ಲಿ ಮಾತ್ರ ಗೆದ್ದಿದ್ದಾರೆ. ಅಂದರೆ ರಾಹುಲ್ ಗೆಲುವಿನ ಶೇಕಡಾವಾರು ಕೇವಲ 44 ರಷ್ಟಿದೆ.
ಇನ್ನು ಲಕ್ನೋ ತಂಡಕ್ಕೆ ಆಯ್ಕೆಯಾದ ರವಿ ಬಿಷ್ಣೋಯ್ ಮತ್ತು ಮಾರ್ಕಸ್ ಸ್ಟೊಯಿನಿಸ್ ಅವರನ್ನು ಕೂಡ ಗೌತಮ್ ಗಂಭೀರ್ ಮ್ಯಾಚ್ ವಿನ್ನರ್ ಎಂದು ಬಣ್ಣಿಸಿದ್ದಾರೆ. ಗಂಭೀರ್ ಪ್ರಕಾರ, ಬೆನ್ ಸ್ಟೋಕ್ಸ್ ಐಪಿಎಲ್ ಹರಾಜಿನಲ್ಲಿ ಭಾಗವಹಿಸದಿದ್ದರೆ, ಮಧ್ಯಮ ಕ್ರಮಾಂಕದಲ್ಲಿ ಪಂದ್ಯಗಳನ್ನು ಗೆಲ್ಲಬಲ್ಲ ಪಂದ್ಯಾವಳಿಯ ಅತ್ಯುತ್ತಮ ಆಲ್ ರೌಂಡರ್‌ಗಳಲ್ಲಿ ಮಾರ್ಕಸ್ ಸ್ಟೋನಿಸ್ ಒಬ್ಬರು. ಇದರೊಂದಿಗೆ ಬುದ್ದಿವಂತಿಕೆಯಿಂದ ಬೌಲಿಂಗ್ ಮಾಡುವ ಕೌಶಲವನ್ನೂ ಹೊಂದಿದ್ದಾರೆ. ಹಾಗೆಯೇ ರವಿ ಬಿಷ್ಣೋಯ್ ಉದಯೋನ್ಮುಖ ತಾರೆ. ಅವರ ಲೆಗ್ ಸ್ಪಿನ್ಗೆ ಆಡುವುದು ಸುಲಭವಲ್ಲ. ಹೀಗಾಗಿ ಲಕ್ನೋ ತಂಡದ ಆಯ್ಕೆ ಮಾಡಿಕೊಂಡಿರುವ ಮೂವರು ಆಟಗಾರರು ಅತ್ಯುತ್ತಮ ಪ್ಲೇಯರ್ಸ್ ಎಂದು ಲಕ್ನೋ ತಂಡದ ಮೆಂಟರ್ ಗೌತಮ್ ಗಂಭೀರ್ ಬಣ್ಣಿಸಿದ್ದಾರೆ.
ಇದನ್ನೂ ಓದಿ: Ind vs SA: ಭರ್ಜರಿ ಶತಕ ಸಿಡಿಸಿ ಸಚಿನ್, ಸೆಹ್ವಾಗ್ ದಾಖಲೆ ಮುರಿದ ಕ್ವಿಂಟನ್ ಡಿಕಾಕ್
ಇದನ್ನೂ ಓದಿ: ICC Mens ODI Team: ಐಸಿಸಿ ಏಕದಿನ ತಂಡ ಪ್ರಕಟ: ಟೀಮ್ ಇಂಡಿಯಾದ ಆಟಗಾರರಿಗಿಲ್ಲ ಸ್ಥಾನ
ಇದನ್ನೂ ಓದಿ: IPL 2022: ಹೊಸ ಎರಡು ತಂಡಗಳು ಆಯ್ಕೆ ಮಾಡಿದ 6 ಆಟಗಾರರು ಇವರೇ..!
(Ipl 2022 gautam gambhir says kl rahul is a phenomenal captain)