IPL 2022: RCB ತಂಡದ ಆರಂಭಿಕ ಜೋಡಿ ಫಿಕ್ಸ್..!
IPL 2022: ಆರ್ಸಿಬಿ ತಂಡ ಹೀಗಿದೆ: ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಶಹಬಾಜ್ ಅಹ್ಮದ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಝಲ್ವುಡ್,
ಐಪಿಎಲ್ ಸೀಸನ್ 15 (IPL 2022) ಆರ್ಸಿಬಿ (RCB) ತಂಡವು ಭರ್ಜರಿ ಅಭ್ಯಾಸವನ್ನು ಮುಂದುವರೆಸಿದೆ. ಮೊದಲ ಇಂಟ್ರಾ ಸ್ಕ್ವಾಡ್ ಪಂದ್ಯದಲ್ಲಿ ಆರ್ಸಿಬಿ ಕೋಚ್ ಸಂಜಯ್ ಬಂಗಾರ್ ಆಟಗಾರರಿಗೆ ವಿಶೇಷ ಟಾರ್ಗೆಟ್ಗಳನ್ನು ನೀಡಿದ್ದರು. ಅದರಂತೆ ಮೊದಲ 10 ಓವರ್ಗಳಲ್ಲಿ 80 ರಿಂದ 90 ರನ್ಗಳ ಟಾರ್ಗೆಟ್ ನೀಡಲಾಗಿತ್ತು. ಈ ವೇಳೆ ಆರ್ಸಿಬಿ ಕಣಕ್ಕಿಳಿಸಿದ್ದು ಫಾಫ್ ಡುಪ್ಲೆಸಿಸ್ ಹಾಗೂ ಯುವ ಎಡಗೈ ಬ್ಯಾಟ್ಸ್ಮನ್ ಅನೂಜ್ ರಾವತ್ ಅವರನ್ನು ಎಂಬುದು ವಿಶೇಷ. ಅಂದರೆ ಆರ್ಸಿಬಿ ಪರ ಫಾಫ್ ಡುಪ್ಲೆಸಿಸ್ ಆರಂಭಿಕನಾಗಿ ಆಡುವುದು ಖಚಿತ. ಆದರೆ ಜೊತೆಗಾರ ಯಾರಾಗಲಿದ್ದಾರೆ ಎಂಬ ಪ್ರಶ್ನೆಗೆ ಸದ್ಯದ ಉತ್ತರ ಅನೂಜ್ ರಾವತ್.
ಏಕೆಂದರೆ ಕೋಚ್ ನೀಡಿದ 90 ರನ್ಗಳ ಟಾರ್ಗೆಟ್ ಅನ್ನು ಅನೂಜ್ ಹಾಗೂ ಡುಪ್ಲೆಸಿಸ್ ಜೋಡಿ ಚೇಸ್ ಮಾಡಿದೆ. ಅಷ್ಟೇ ಅಲ್ಲದೆ ಮೊದಲ 10 ಓವರ್ಗಳಲ್ಲಿ 117 ರನ್ ಬಾರಿಸಿದ್ದಾರೆ. ಈ ಮೂಲಕ ಸ್ಪೋಟಕ ಆರಂಭ ನೀಡಿದ್ದರು. ಈ ವೇಳೆ ಡುಪ್ಲೆಸಿಸ್ 77 ರನ್ ಬಾರಿಸಿದರೆ, ಅನೂಜ್ 44 ರನ್ ಬಾರಿಸಿ 10ನೇ ಓವರ್ನಲ್ಲಿ ಔಟಾಗಿದ್ದರು.
ಇನ್ನು ಮತ್ತೊಂದು ಪಂದ್ಯದಲ್ಲೂ ಸಂಜಯ್ ಬಂಗಾರ್ ಅನೂಜ್ ರಾವತ್ ಅವರನ್ನೇ ಡುಪ್ಲೆಸಿಸ್ ಜೊತೆ ಆರಂಭಿಕನಾಗಿ ಕಣಕ್ಕಿಳಿಸಿದ್ದಾರೆ. ಈ ವೇಳೆ ಕೂಡ ಡುಪ್ಲೆಸಿಸ್ ಹಾಗೂ ಅನೂಜ್ ಜೋಡಿ ಮೊದಲ ವಿಕೆಟ್ಗೆ 100 ರನ್ಗಳ ಜೊತೆಯಾಟವಾಡಿದ್ದಾರೆ. ಬ್ಯಾಕ್ ಟು ಬ್ಯಾಕ್ ಇದೇ ಜೋಡಿಯನ್ನೇ ಆರಂಭಿಕರಾಗಿ ಆಡಿಸುತ್ತಿರುವುದರಿಂದ ಈ ಸಲ ಆರ್ಸಿಬಿ ಪರ ಅನೂಜ್ ರಾವತ್ ಹಾಗೂ ಫಾಫ್ ಡುಪ್ಲೆಸಿಸ್ ಓಪನರ್ಸ್ ಆಗಿ ಕಣಕ್ಕಿಳಿಯಲಿದ್ದಾರೆ ಎನ್ನಬಹುದು.
ಏಕೆಂದರೆ ಕಳೆದ ಸೀಸನ್ನಲ್ಲೂ ಆರ್ಸಿಬಿ ತಂಡವು ದೇವದತ್ ಪಡಿಕ್ಕಲ್ ಹಾಗೂ ವಿರಾಟ್ ಕೊಹ್ಲಿಯನ್ನು ಆರಂಭಿಕರಾಗಿ ಆಡಿಸಿತ್ತು. ಇಲ್ಲಿ ಪಡಿಕ್ಕಲ್ ಎಡಗೈ ಬ್ಯಾಟ್ಸ್ಮನ್ ಆಗಿದ್ದರೆ, ಕೊಹ್ಲಿ ಬಲಗೈ ದಾಂಡಿಗನಾಗಿ ಕಣಕ್ಕಿಳಿದಿದ್ದರು. ಆಗ ಆರ್ಸಿಬಿ ತಂಡದ ಬ್ಯಾಟಿಂಗ್ ಕೋಚ್ ಆಗಿದ್ದದ್ದು ಇದೇ ಸಂಜಯ್ ಬಂಗಾರ್. ಇದೀಗ ಮತ್ತೊಮ್ಮೆ ಎಡಗೈ ದಾಂಡಿಗ ಅನೂಜ್ ರಾವತ್ ಹಾಗೂ ಬಲಗೈ ಬ್ಯಾಟ್ಸ್ಮನ್ ಫಾಫ್ ಡುಪ್ಲೆಸಿಸ್ ಅವರನ್ನು ಅಭ್ಯಾಸ ಪಂದ್ಯಗಳಲ್ಲಿ ಆರಂಭಿಕರಾಗಿ ಆಡಿಸುತ್ತಿದ್ದಾರೆ. ಈ ಜೋಡಿ ಮೊದಲೆರಡು ಪಂದ್ಯಗಳಲ್ಲೂ ಯಶಸ್ವಿಯಾಗಿದ್ದಾರೆ.
ಹೀಗಾಗಿ ಆರ್ಸಿಬಿ ಪರ ಅನುಭವಿ ಆರಂಭಿಕ ಆಟಗಾರ ಫಾಫ್ ಡುಪ್ಲೆಸಿಸ್ ಹಾಗೂ ಯುವ ಎಡಗೈ ಆಟಗಾರ ಅನೂಜ್ ರಾವತ್ ಆರಂಭಿಕರಾಗಿ ಆಡಲಿದ್ದಾರೆ ಎಂದೇ ಹೇಳಬಹುದು. ಇನ್ನು ವಿರಾಟ್ ಕೊಹ್ಲಿ ಮೂರನೇ ಕ್ರಮಾಂಕದಲ್ಲಿ ಕಾಣಿಸಿಕೊಳ್ಳಬಹುದು. ನಾಲ್ಕನೇ ಕ್ರಮಾಂಕದಲ್ಲಿ ಮಹಿಪಾಲ್ ಲೋಮ್ರರ್ ಅಥವಾ ಶೆರ್ಫಾನ್ ರುದರ್ಫೋರ್ಡ್ಗೆ ಅವಕಾಶ ಸಿಗುವ ಸಾಧ್ಯತೆಯಿದೆ. ಒಟ್ಟಿನಲ್ಲಿ ಐಪಿಎಲ್ ಆರಂಭಕ್ಕೆ ದಿನಗಳು ಮಾತ್ರ ಉಳಿದಿರುವಾಗ ಆರ್ಸಿಬಿ ಭರ್ಜರಿ ಪ್ಲ್ಯಾನ್ನೊಂದಿಗೆ ಪ್ಲೇಯಿಂಗ್ 11 ಸೆಟ್ ಮಾಡುತ್ತಿದೆ.
ಆರ್ಸಿಬಿ ತಂಡ ಹೀಗಿದೆ: ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಶಹಬಾಜ್ ಅಹ್ಮದ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಝಲ್ವುಡ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ಸುಯಶ್ ಪ್ರಭುದೇಸಾಯಿ, ಲುವ್ನಿತ್ ಸಿಸೋಡಿಯಾ, ಅನೀಶ್ವರ್ ಗೌತಮ್, ಕರ್ಣ್ ಶರ್ಮಾ, ಜೇಸನ್ ಬೆಹ್ರೆಡ್ರಾರ್ಫ್, ಸಿದ್ದಾರ್ಥ್ ಕೌಲ್, ಚಾಮಾ ಮಿಲಿಂದ್, ಮಹಿಪಾಲ್ ಲೊಮ್ರೋರ್, ಶೆರ್ಫೇನ್ ರುದರ್‌ಫೋರ್ಡ್, ಫಿನ್ ಅಲೆನ್, ಡೇವಿಡ್ ವಿಲ್ಲಿ.
ಇದನ್ನೂ ಓದಿ: IPL 2022: ಐಪಿಎಲ್ನಲ್ಲಿ ಅಂದು ಪರ್ಪಲ್ ಕ್ಯಾಪ್ ವಿನ್ನರ್, ಇಂದು ನೆಟ್ ಬೌಲರ್..!
ಇದನ್ನೂ ಓದಿ: IPL 2022: ಐಪಿಎಲ್ನಲ್ಲಿ ಅತೀ ವೇಗವಾಗಿ ಅರ್ಧಶತಕ ಬಾರಿಸಿದ 10 ಬ್ಯಾಟರ್ಗಳು ಇವರೇ..!
ಇದನ್ನೂ ಓದಿ: IPL 2022: ಐಪಿಎಲ್ ಪಂದ್ಯವೊಂದರಲ್ಲಿ ಅತೀ ಹೆಚ್ಚು ಸಿಕ್ಸ್ ಸಿಡಿಸಿದ ಬ್ಯಾಟರ್ ಯಾರು ಗೊತ್ತಾ?