IPL 2022: RCB ಇಬ್ಬರು ಫೈನಲ್: ಮತ್ತಿಬ್ಬರು ಯಾರು..?
IPL 2022 RCB: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೀಗಿದೆ: ವಿರಾಟ್ ಕೊಹ್ಲಿ, ಯುಜ್ವೇಂದ್ರ ಚಹಲ್, ದೇವದತ್ ಪಡಿಕ್ಕಲ್, ಹರ್ಷಲ್ ಪಟೇಲ್, ಡೇನಿಯಲ್ಸ್ ಸ್ಯಾಮ್ಸ್, ವಾಷಿಂಗ್ಟನ್ ಸುಂದರ್, ಮೊಹಮ್ಮದ್ ಸಿರಾಜ್, ನವದೀಪ್ ಸೈನಿ, ಶಹಬಾಜ್ ಅಹ್ಮದ್, ಪವನ್ ದೇಶಪಾಂಡೆ, ಗ್ಲೆನ್ ಮ್ಯಾಕ್ಸ್ ವೆಲ್.

RCB IPL 2022 Retained Players: ಇಂಡಿಯನ್ ಪ್ರೀಮಿಯರ್ ಲೀಗ್ (IPL 2022) ಮೆಗಾ ಹರಾಜಿಗೂ ಮುನ್ನ ಉಳಿಸಿಕೊಂಡ ಆಟಗಾರರ ಪಟ್ಟಿ ಸಲ್ಲಿಸಲು ಇಂದು ಕೊನೆಯ ದಿನ. ಹೀಗಾಗಿಯೇ ಹಳೆಯ 8 ಫ್ರಾಂಚೈಸಿಗಳು ರಿಟೈನ್ ಆಟಗಾರರ ಪಟ್ಟಿಯನ್ನು ಸಿದ್ಧಪಡಿಸುತ್ತಿದೆ. ಅದರಲ್ಲೂ ಈ ಬಾರಿ ಕೆಲ ಸ್ಟಾರ್ ಆಟಗಾರರು ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳುವುದು ಬಹುತೇಕ ಖಚಿತ. ಏಕೆಂದರೆ ಐಪಿಎಲ್ ರಿಟೈನ್ ನಿಯಮದ ಪ್ರಕಾರ ಗರಿಷ್ಠ 4 ಆಟಗಾರರನ್ನು ಮಾತ್ರ ಉಳಿಸಿಕೊಳ್ಳಬಹುದು. ಒಂದು ವೇಳೆ ಫ್ರಾಂಚೈಸಿ ಜೊತೆಗಿನ ಮಾತುಕತೆ ಫಲಪ್ರದವಾಗದಿದ್ದಲ್ಲಿ, ಆಟಗಾರರು ಕೂಡ ತಂಡದಿಂದ ಹೊರಬರಬಹುದು. ಹೀಗಾಗಿ ಕೆಲ ಸ್ಟಾರ್ ಆಟಗಾರರು ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲು ಬಯಸಿದ್ದಾರೆ. ಇನ್ನೊಂದೆಡೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಈಗಾಗಲೇ ಇಬ್ಬರು ಆಟಗಾರರನ್ನು ರಿಟೈನ್ ಮಾಡಿಕೊಂಡಿರುವುದು ಖಚಿತವಾಗಿದೆ. ಅದರಂತೆ ಆರ್ಸಿಬಿ ಪರ ಮುಂದಿನ ಸೀಸನ್ನಲ್ಲೂ ವಿರಾಟ್ ಕೊಹ್ಲಿ (Virat Kohli) ಆಡಲಿದ್ದಾರೆ.
ಆರ್ಸಿಬಿ ತಂಡದ ಸ್ಟಾರ್ ಪ್ಲೇಯರ್ ಎನಿಸಿಕೊಂಡಿರುವ ವಿರಾಟ್ ಕೊಹ್ಲಿಯನ್ನು ತಂಡದಲ್ಲಿ ಉಳಿಸಿಕೊಳ್ಳಲು ಫ್ರಾಂಚೈಸಿ ಬಯಸಿದ್ದಾರೆ. ಹೀಗಾಗಿ ಮೊದಲ ಆಯ್ಕೆಯಾಗಿ ಆರ್ಸಿಬಿ ಕೊಹ್ಲಿಯನ್ನು ಆರಿಸಿಕೊಂಡಿದೆ. ಅಂದರೆ ಮೊದಲ ಆಯ್ಕೆಯಾಗಿ ರಿಟೈನ್ ಮಾಡಿಕೊಂಡ ಆಟಗಾರನಿಗೆ ಫ್ರಾಂಚೈಸಿ 16 ಕೋಟಿ ರೂ. ನೀಡಬೇಕಾಗುತ್ತದೆ. ಅದರಂತೆ ಮುಂದಿನ ಸೀಸನ್ಗಾಗಿ ಕೊಹ್ಲಿ 16 ಕೋಟಿ ರೂ. ಪಡೆಯುವುದು ಖಚಿತ.
ಇನ್ನೊಂದೆಡೆ ಆರ್ಸಿಬಿ ಆಯ್ಕೆ ಮಾಡಿಕೊಂಡಿರುವ ಎರಡನೇ ಆಟಗಾರ ವಿದೇಶಿ ಪ್ಲೇಯರ್ ಎಂಬುದು ವಿಶೇಷ. ಈ ಬಾರಿಯ ರಿಟೈನ್ ನಿಯಮದಂತೆ ಒಂದು ಫ್ರಾಂಚೈಸಿ ನಾಲ್ವರು ಆಟಗಾರರನ್ನು ಉಳಿಸಿಕೊಂಡರೆ ಮೂವರು ಭಾರತೀಯ ಆಟಗಾರರು ಹಾಗೂ ಒಬ್ಬ ವಿದೇಶಿ ಆಟಗಾರನನ್ನು ಉಳಿಸಿಕೊಳ್ಳಬಹುದು. ಅದರಂತೆ ಆರ್ಸಿಬಿ 2ನೇ ಆಯ್ಕೆಯಾಗಿ ವಿದೇಶಿ ಆಟಗಾರ ಗ್ಲೆನ್ ಮ್ಯಾಕ್ಸ್ವೆಲ್ ಅವರನ್ನು ಆಯ್ಕೆ ಮಾಡಿಕೊಂಡಿದೆ.
ಕಳೆದ ಸೀಸನ್ನಲ್ಲಿ ಹರಾಜಿನಲ್ಲಿ ಆರ್ಸಿಬಿ 14.25 ಕೋಟಿ ನೀಡಿ ಗ್ಲೆನ್ ಮ್ಯಾಕ್ಸ್ವೆಲ್ ಅವರನ್ನು ಖರೀದಿಸಿತ್ತು. ಈ ಬಾರಿ ಬಿಡುಗಡೆ ಮಾಡಿದರೆ ಮತ್ತೆ ಖರೀದಿಗೆ ಪೈಪೋಟಿ ಕಂಡುಬರಲಿದೆ. ಹೀಗಾಗಿ 2ನೇ ಆಯ್ಕೆಯಾಗಿ 12 ಕೋಟಿ ರೂ. ನೀಡಿ ಆರ್ಸಿಬಿ ಗ್ಲೆನ್ ಮ್ಯಾಕ್ಸ್ವೆಲ್ ಅವರನ್ನು ತಂಡದಲ್ಲೇ ಉಳಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಇದಾಗ್ಯೂ ಆರ್ಸಿಬಿ ತಂಡವು ಉಳಿಸಿಕೊಂಡಿರುವ ಮೂರನೇ ಹಾಗೂ ನಾಲ್ಕನೇ ಆಟಗಾರ ಯಾರೆಂಬುದು ಇನ್ನೂ ಕೂಡ ಬಹಿರಂಗವಾಗಿಲ್ಲ.
ಒಂದೆಡೆ ಆರ್ಸಿಬಿ ತಂಡವು ಹೊಸ ನಾಯಕನ ಹುಡುಕಾಟದಲ್ಲೂ ಇದ್ದು, ಇತ್ತ ತಂಡದಲ್ಲಿ ಕೆಲ ಸ್ಟಾರ್ ಆಟಗಾರರೂ ಕೂಡ ಇದ್ದಾರೆ. ಹೀಗಾಗಿ ಆರ್ಸಿಬಿಗೆ 3ನೇ ಹಾಗೂ 4ನೇ ಆಟಗಾರನ ಆಯ್ಕೆ ಹೊಸ ಸವಾಲಾಗಿ ಪರಿಣಮಿಸಿದೆ. ಏಕೆಂದರೆ ತಂಡದಲ್ಲಿ ಯುಜುವೇಂದ್ರ ಚಹಲ್, ದೇವದತ್ ಪಡಿಕ್ಕಲ್, ಮೊಹಮ್ಮದ್ ಸಿರಾಜ್, ಹರ್ಷಲ್ ಪಟೇಲ್ ಹಾಗೂ ಕೆಎಸ್ ಭರತ್ ಇದ್ದಾರೆ. ಇವರೆಲ್ಲರೂ ಆರ್ಸಿಬಿ ಪರ ಅತ್ಯುತ್ತಮ ಪ್ರದರ್ಶನವನ್ನೇ ನೀಡಿದ್ದಾರೆ. ಹಾಗಾಗಿ ಇವರಲ್ಲಿ ಇಬ್ಬರನ್ನು ಆಯ್ಕೆ ಮಾಡುವುದು ಕೂಡ ದೊಡ್ಡ ಸವಾಲಾಗಿದೆ.
ಒಂದು ವೇಳೆ ಚಹಲ್ ಹಾಗೂ ಹರ್ಷಲ್ ಪಟೇಲ್ ಅವರನ್ನು ಆರ್ಸಿಬಿ ಉಳಿಸಿಕೊಂಡರೆ ಸಿರಾಜ್ ಹಾಗೂ ದೇವದತ್ ಪಡಿಕ್ಕಲ್ ಮತ್ತೆ ಆರ್ಸಿಬಿ ಸಿಗುವುದು ಅನುಮಾನ. ಏಕೆಂದರೆ ಈ ಇಬ್ಬರಿಗಾಗಿ ಮೆಗಾ ಹರಾಜಿನಲ್ಲಿ ಉತ್ತಮ ಪೈಪೋಟಿ ಕಂಡು ಬರಲಿದೆ. ಹಾಗೆಯೇ ಹರ್ಷಲ್ ಪಟೇಲ್ ಅವರನ್ನು ರಿಲೀಸ್ ಮಾಡಿದರೂ ಕೂಡ ಇದೇ ಪರಿಸ್ಥಿತಿ ಇರಲಿದೆ. ಇನ್ನು ಚಹಲ್ ಅವರು ಆರ್ಸಿಬಿ ತಂಡದಿಂದ ಹೊರಬಂದರೆ ಅವರ ಖರೀದಿಗಾಗಿ ಹೊಸ ಫ್ರಾಂಚೈಸಿಗಳು ಮುಂದಾಗುವುದರಲ್ಲಿ ಡೌಟೇ ಇಲ್ಲ ಎನ್ನಬಹುದು. ಹೀಗಾಗಿ ಆರ್ಸಿಬಿ ಇವರಲ್ಲಿ ಯಾರನ್ನು ಉಳಿಸಿಕೊಳ್ಳಲಿದೆ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.
ಐಪಿಎಲ್ ರಿಟೆನ್ಶನ್ ನಿಯಮದ ಪ್ರಕಾರ, ಹಳೆಯ ಫ್ರಾಂಚೈಸಿಗಳು 42 ಕೋಟಿಯೊಳಗೆ ನಾಲ್ವರು ಆಟಗಾರರನ್ನು ಉಳಿಸಿಕೊಳ್ಳಬಹುದು. ಇನ್ನು ಮೂವರು ಆಟಗಾರರನ್ನು ಉಳಿಸಿಕೊಳ್ಳಬೇಕಿದ್ದರೆ 33 ಕೋಟಿ ನೀಡಬೇಕಾಗುತ್ತದೆ. ಹಾಗೆಯೇ ಇಬ್ಬರನ್ನು ಉಳಿಸಿದರೆ 24 ಕೋಟಿ ರೂ ವ್ಯಯಿಸಬೇಕು. ಇನ್ನು ಒಬ್ಬ ಆಟಗಾರನನ್ನು ಮಾತ್ರ ಉಳಿಸಿಕೊಂಡರೆ ಆತನಿಗೆ 14 ಕೋಟಿ ಕೊಡಬೇಕಾಗುತ್ತದೆ. ಇದಾಗ್ಯೂ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸದ ಆಟಗಾರನನ್ನು ಉಳಿಸಿಕೊಂಡರೆ 4 ಕೋಟಿ ನೀಡಬೇಕಾಗುತ್ತದೆ. ಅಂದರೆ ಇಲ್ಲಿ ಉಳಿಸಿಕೊಂಡ ಆಟಗಾರರ ಮೊತ್ತಕ್ಕನುಗುಣವಾಗಿ ಒಟ್ಟು ಹರಾಜು ಮೊತ್ತ 90 ಕೋಟಿಯಿಂದ ರಿಟೈನ್ ಮೊತ್ತವನ್ನು ಕಡಿತ ಮಾಡಲಾಗುತ್ತದೆ. ಉದಾಹರಣಗೆ ಆರ್ಸಿಬಿ ನಾಲ್ವರು ಆಟಗಾರನ್ನು ಉಳಿಸಿಕೊಂಡರೆ 42 ಕೋಟಿ ನೀಡಬೇಕು. ಅದರಂತೆ 90-42=48 ಕೋಟಿ. ಅಂದರೆ ಆರ್ಸಿಬಿ ನಾಲ್ವರನ್ನು ಉಳಿಸಿಕೊಂಡರೆ ಆ ಬಳಿಕ ಮೆಗಾ ಹರಾಜಿನಲ್ಲಿ 48 ಕೋಟಿಯಲ್ಲಿ ಉಳಿದ ಆಟಗಾರರನ್ನು ಖರೀದಿಸಬೇಕಾಗುತ್ತದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೀಗಿದೆ: ವಿರಾಟ್ ಕೊಹ್ಲಿ, ಯುಜ್ವೇಂದ್ರ ಚಹಲ್, ದೇವದತ್ ಪಡಿಕ್ಕಲ್, ಹರ್ಷಲ್ ಪಟೇಲ್, ಡೇನಿಯಲ್ಸ್ ಸ್ಯಾಮ್ಸ್, ವಾಷಿಂಗ್ಟನ್ ಸುಂದರ್, ಮೊಹಮ್ಮದ್ ಸಿರಾಜ್, ನವದೀಪ್ ಸೈನಿ, ಶಹಬಾಜ್ ಅಹ್ಮದ್, ಪವನ್ ದೇಶಪಾಂಡೆ, ಗ್ಲೆನ್ ಮ್ಯಾಕ್ಸ್ ವೆಲ್, ರಜತ್ ಪಾಟಿದಾರ್, ಮೊಹಮ್ಮದ್ ಅಜರುದ್ದೀನ್, ಕೈಲ್ ಜೇಮಿಸನ್, ಡಾನ್ ಕ್ರಿಶ್ಚಿಯನ್, ದುಷ್ಮಂತ್ ಚಮೀರಾ, ವನಿಂದು ಹಸರಂಗ, ಸುಯೇಶ್ ಪ್ರಭುದೇಸಾಯಿ, ಕೆ.ಎಸ್.ಭರತ್
ಇದನ್ನೂ ಓದಿ: IPL 2022: ಮೆಗಾ ಹರಾಜಿನಲ್ಲಿ ಈ 10 ಸ್ಟಾರ್ ಆಟಗಾರರು ಕಾಣಿಸಿಕೊಳ್ಳುವುದು ಬಹುತೇಕ ಖಚಿತ..!
ಇದನ್ನೂ ಓದಿ: IPL 2022 Retained Players: ಐಪಿಎಲ್ ರಿಟೈನ್ ಪಟ್ಟಿಯಲ್ಲಿರುವ 18 ಆಟಗಾರರ ಹೆಸರು ಬಹಿರಂಗ..!
ಇದನ್ನೂ ಓದಿ: IPL 2022: ಐಪಿಎಲ್ನ 5 ತಂಡಗಳಿಗೆ ಹೊಸ ನಾಯಕ..?
(IPL 2022: RCB set to retain Kohli and Maxwell In ipl 2022)
