AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2022: ಸೌತ್ ಆಫ್ರಿಕಾ ಏಕದಿನ ತಂಡ ಪ್ರಕಟ: ಐಪಿಎಲ್​ನ ಆರಂಭಿಕ ಪಂದ್ಯಗಳಿಗೆ 8 ಆಟಗಾರರು ಅಲಭ್ಯ..!

South Africa ODI squad: ಟೆಂಬಾ ಬವುಮಾ (ನಾಯಕ), ಕೇಶವ್ ಮಹಾರಾಜ್ (ಉಪನಾಯಕ), ಕ್ವಿಂಟನ್ ಡಿ ಕಾಕ್, ಜುಬೇರ್ ಹಮ್ಜಾ, ಮಾರ್ಕೊ ಜಾನ್ಸನ್, ಜಾನ್ನೆಮನ್ ಮಲಾನ್, ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್

IPL 2022: ಸೌತ್ ಆಫ್ರಿಕಾ ಏಕದಿನ ತಂಡ ಪ್ರಕಟ: ಐಪಿಎಲ್​ನ ಆರಂಭಿಕ ಪಂದ್ಯಗಳಿಗೆ 8 ಆಟಗಾರರು ಅಲಭ್ಯ..!
IPL 2022 South Africa Players
TV9 Web
| Edited By: |

Updated on:Mar 08, 2022 | 10:36 PM

Share

ಬಾಂಗ್ಲಾದೇಶ ವಿರುದ್ದದ ಸರಣಿಗೆ ಸೌತ್ ಆಫ್ರಿಕಾ (South Africa ODI squad)  ತಂಡವನ್ನು ಪ್ರಕಟಿಸಲಾಗಿದೆ. ಮಾರ್ಚ್​ 18 ರಿಂದ ಆರಂಭವಾಗಲಿರುವ ಏಕದಿನ ಸರಣಿಗಾಗಿ 16 ಸದಸ್ಯರನ್ನು ಆಯ್ಕೆ ಮಾಡಲಾಗಿದೆ. ವಿಶೇಷ ಎಂದರೆ ದಕ್ಷಿಣ ಆಫ್ರಿಕಾ ತಂಡದಲ್ಲಿ ಸ್ಥಾನ ಪಡೆದ ಆಟಗಾರರಲ್ಲಿ 8 ಮಂದಿ ಐಪಿಎಲ್​ಗೆ (IPL 2022) ಆಯ್ಕೆಯಾಗಿದ್ದಾರೆ. ಹೀಗಾಗಿ ಈ ಆಟಗಾರರು ಐಪಿಎಲ್​ನ ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗುವುದು ಖಚಿತ ಎಂದೇ ಹೇಳಬಹುದು. ಏಕೆಂದರೆ ಸೌತ್ ಆಫ್ರಿಕಾ-ಬಾಂಗ್ಲಾದೇಶ ನಡುವಣ ಏಕದಿನ ಸರಣಿಯು ಮಾರ್ಚ 23 ರಂದು ಮುಕ್ತಾಯವಾಗಲಿದೆ. ಇತ್ತ ಐಪಿಎಲ್ ಮಾರ್ಚ್ 26 ರಿಂದ ಶುರುವಾಗಲಿದೆ. ಬಾಂಗ್ಲಾ ಸರಣಿ ಮುಗಿಸಿ ಈ 8 ಆಟಗಾರರು ಐಪಿಎಲ್​ಗೆ ಆಗಮಿಸಿದರೂ 3 ದಿನಗಳ ಕಾಲ ಕ್ವಾರಂಟೈನ್​ನಲ್ಲಿರಬೇಕಾಗುತ್ತದೆ. ಹೀಗಾಗಿ ಆರಂಭಿಕ ಪಂದ್ಯಗಳಿಗೆ ಈ ಆಟಗಾರರು ಅಲಭ್ಯರಾಗಲಿದ್ದಾರೆ.

ಅದರಂತೆ ಐಪಿಎಲ್​ನ ಆರಂಭಿಕ ಪಂದ್ಯಗಳಿಗೆ ಕಗಿಸೊ ರಬಾಡ, ಲುಂಗಿ ಎನ್‌ಗಿಡಿ, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಡೇವಿಡ್ ಮಿಲ್ಲರ್, ಕ್ವಿಂಟನ್ ಡಿ ಕಾಕ್, ಐಡೆನ್ ಮಾರ್ಕ್ರಾಮ್, ಡ್ವೈನ್ ಪ್ರಿಟೋರಿಯಸ್ ಮತ್ತು ಮಾರ್ಕೊ ಜಾನ್ಸನ್ ಗೈರಾಗಲಿದ್ದಾರೆ. ಹಾಗೆಯೇ ಗಾಯದಿಂದ ಚೇತರಿಸಿಕೊಳ್ಳದ ಕಾರಣ ಅನ್ರಿಕ್ ನೋಕಿಯಾ ಅವರು ಬಾಂಗ್ಲಾ ಸರಣಿಯಿಂದ ಹೊರಗುಳಿದಿದ್ದಾರೆ.

ಇನ್ನು ಏಕದಿನ ಸರಣಿ ಬಳಿಕ ಸೌತ್ ಆಫ್ರಿಕಾ ಬಾಂಗ್ಲಾ ವಿರುದ್ದ ಟೆಸ್ಟ್ ಸರಣಿ ಕೂಡ ಆಡಬೇಕಿದೆ. ಒಂದು ವೇಳೆ ಈ ಆಟಗಾರರು ಟೆಸ್ಟ್ ತಂಡಕ್ಕೆ ಆಯ್ಕೆಯಾದರೆ ಐಪಿಎಲ್​ನ ಮೊದಲಾರ್ಧದಿಂದ ಹೊರಬೀಳುವುದು ಬಹುತೇಕ ಖಚಿತ. ಏಕೆಂದರೆ ಬಾಂಗ್ಲಾದೇಶದ ವಿರುದ್ದ ಟೆಸ್ಟ್ ಸರಣಿ ಮುಗಿಯುವುದು ಏಪ್ರಿಲ್ 12 ಕ್ಕೆ, ಹೀಗಾಗಿ ಇದೀಗ ಸೌತ್ ಆಫ್ರಿಕಾ ಆಟಗಾರರನ್ನು ಒಳಗೊಂಡಿರುವ ಐಪಿಎಲ್ ಫ್ರಾಂಚೈಸಿಗಳಿಗೆ ಚಿಂತೆ ಶುರುವಾಗಿದೆ.

ಸೌತ್ ಆಫ್ರಿಕಾ ಏಕದಿನ ತಂಡ ಹೀಗಿದೆ: ಟೆಂಬಾ ಬವುಮಾ (ನಾಯಕ), ಕೇಶವ್ ಮಹಾರಾಜ್ (ಉಪನಾಯಕ), ಕ್ವಿಂಟನ್ ಡಿ ಕಾಕ್, ಜುಬೇರ್ ಹಮ್ಜಾ, ಮಾರ್ಕೊ ಜಾನ್ಸನ್, ಜಾನ್ನೆಮನ್ ಮಲಾನ್, ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಲುಂಗಿ ಎನ್‌ಗಿಡಿ, ವೇಯ್ನ್ ಪಾರ್ನೆಲ್, ಆಂಡಿಲ್ ಫೆಹ್ಲುಕ್ವಾಯೊ, ಡ್ವೈನ್ ಪ್ರಿಟೋರಿಯಸ್, ಕಗಿಸೊ ರಬಾಡ, ತಬ್ರೈಜ್ ಶಮ್ಸಿ, ರಸ್ಸಿ ವಾನ್ ಡೆರ್ ಡುಸ್ಸೆನ್, ಕೈಲ್ ವೆರ್ರೆನ್ನೆ

IPL 2022ನಲ್ಲಿರುವ ದಕ್ಷಿಣ ಆಫ್ರಿಕಾದ ಆಟಗಾರರು: ಕಗಿಸೊ ರಬಾಡ (ಪಂಜಾಬ್ ಕಿಂಗ್ಸ್​), ಕ್ವಿಂಟನ್ ಡಿ ಕಾಕ್ (ಲಕ್ನೋ ಸೂಪರ್ ಜೈಂಟ್ಸ್​), ಅನ್ರಿಕ್ ನೋಕಿಯಾ (ಡೆಲ್ಲಿ ಕ್ಯಾಪಿಟಲ್ಸ್), ಮಾರ್ಕೊ ಜಾನ್ಸನ್ (ಸನ್​ರೈಸರ್ಸ್​ ಹೈದರಾಬಾದ್), ಡೇವಿಡ್ ಮಿಲ್ಲರ್ (ಗುಜರಾತ್ ಜೈಂಟ್ಸ್), ಐಡೆನ್ ಮಾರ್ಕ್ರಾಮ್ (ಸನ್​ರೈಸರ್ಸ್​ ಹೈದರಾಬಾದ್), ರಸ್ಸೀ ವ್ಯಾನ್ ಡೆರ್ ಡುಸ್ಸೆನ್ (ರಾಜಸ್ಥಾನ್ ರಾಯಲ್ಸ್), ಲುಂಗಿ ಎನ್ಗಿಡಿ (ಡೆಲ್ಲಿ ಕ್ಯಾಪಿಟಲ್ಸ್), ಡ್ವೈನ್ ಪ್ರಿಟೋರಿಯಸ್ (ಸಿಎಸ್​ಕೆ)

ಇದನ್ನೂ ಓದಿ: Ipl 2022 Rcb Schedule: RCB ತಂಡ ಸಂಪೂರ್ಣ ವೇಳಾಪಟ್ಟಿ ಹೀಗಿದೆ

ಇದನ್ನೂ ಓದಿ: Ab de villiers: IPL ನಲ್ಲಿ ಎಬಿಡಿ ಹೆಸರಿನಲ್ಲಿರುವ ಅಪರೂಪದ ದಾಖಲೆಗಳಿವು..!

ಇದನ್ನೂ ಓದಿ: RCB ತಂಡವನ್ನು ಮುನ್ನಡೆಸಿದ 5 ನಾಯಕರುಗಳು ಯಾರೆಲ್ಲಾ ಗೊತ್ತಾ?

(IPL 2022: South Africa name 8 IPL-bound players in ODI squad for Bangladesh series)

Published On - 10:34 pm, Tue, 8 March 22