Virat Kohli: ಈ ಸಲ RCB ಕಪ್ ಗೆದ್ದರೆ…ಕಿಂಗ್ ಕೊಹ್ಲಿ ಭಾವುಕ ಮಾತು
IPL 2022: ಎಬಿ ಡಿವಿಲಿಯರ್ಸ್ ಐಪಿಎಲ್ನಲ್ಲಿ 184 ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ 151.69 ಸ್ಟ್ರೈಕ್ ರೇಟ್‌ನಲ್ಲಿ 5162 ರನ್ ಗಳಿಸಿದ್ದಾರೆ. ಅಲ್ಲದೆ ಕಳೆದ ಸೀಸನ್ನಲ್ಲೂ ಉತ್ತಮವಾಗಿ ಬ್ಯಾಟ್ ಬೀಸಿದ್ದ ಎಬಿಡಿ ದಿಢೀರಣೆ ನಿವೃತ್ತಿ ಘೋಷಿಸಿ ಅಚ್ಚರಿ ಮೂಡಿಸಿದ್ದರು.
RCB ಈ ಬಾರಿಯ ಐಪಿಎಲ್ ಅನ್ನು ಭರ್ಜರಿಯಾಗಿ ಆರಂಭಿಸಿದೆ. ಪಂಜಾಬ್ ಕಿಂಗ್ಸ್ ವಿರುದ್ದದ ಮೊದಲ ಪಂದ್ಯದಲ್ಲಿ ಸೋತರೂ ಆರ್ಸಿಬಿ ಬ್ಯಾಟ್ಸ್ಮನ್ಗಳು 205 ರನ್ ಕಲೆಹಾಕುವ ಮೂಲಕ ಅಬ್ಬರಿಸಿದ್ದಾರೆ. ಈ ಬೃಹತ್ ಮೊತ್ತ ಮೂಡಿಬರುತ್ತಿದ್ದಂತೆ ಆರ್ಸಿಬಿ ಅಭಿಮಾನಿಗಳಲ್ಲಿ ಮೂಡಿದ ಪ್ರಶ್ನೆಯೆಂದರೆ ಎಬಿಡಿ ಇಲ್ಲದೆ 205 ರನ್ ಬಾರಿಸಿದ್ದಾರೆ. ಹಾಗಿದ್ರೆ ಆರ್ಸಿಬಿ ತಂಡದಲ್ಲಿ ಎಬಿಡಿ ಇದ್ದಿದ್ರೆ ಇನ್ನಷ್ಟು ರನ್ಗಳ ಸುರಿಮಳೆಯಾಗುತ್ತಿತ್ತು ಎಂಬ ಚರ್ಚೆಗಳನ್ನು ಶುರು ಮಾಡಿಕೊಂಡಿದ್ದರು. ಅಂತಹದೊಂದು ಹವಾ ಸೃಷ್ಟಿಸಿ ಆರ್ಸಿಬಿಗೆ ಎಬಿಡಿ ವಿದಾಯ ಹೇಳಿದ್ದಾರೆ. ಇದಾಗ್ಯೂ ನೋವಿನ ಸಂಗತಿ ಎಂದರೆ ಎಬಿಡಿ ಐಪಿಎಲ್ ಟ್ರೋಫಿ ಗೆಲ್ಲದೆ ವಿದಾಯ ಹೇಳಿರುವುದು. ಹೀಗಾಗಿಯೇ ವಿರಾಟ್ ಕೊಹ್ಲಿ ಈ ಸಲ ಆರ್ಸಿಬಿ ಕಪ್ ಗೆದ್ದರೆ ನಾವು ಎಬಿ ಡಿವಿಲಿಯರ್ಸ್ ಅವರನ್ನು ನೆನೆಸಿಕೊಳ್ಳಲಿದ್ದೇವೆ ಎಂದು ತಿಳಿಸಿದ್ದಾರೆ.
2011 ರಿಂದ ಆರ್ಸಿಬಿ ಪರ ಆಡಿದ್ದ ಎಬಿಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಈ ವೇಳೆ ತಂಡವು 2 ಬಾರಿ ಫೈನಲ್ಗೆ ಪ್ರವೇಶಿಸಿದರೂ ಕಪ್ ಗೆಲ್ಲಲು ಮಾತ್ರ ಸಾಧ್ಯವಾಗಲಿಲ್ಲ. ಇದಾಗ್ಯೂ 11 ಸೀಸನ್ನಲ್ಲಿ ಆರ್ಸಿಬಿ ಪರ ಕಾಣಿಸಿಕೊಂಡ ಎಬಿಡಿ 360 ಡಿಗ್ರಿ ಬ್ಯಾಟಿಂಗ್ ಮೂಲಕ ಮನರಂಜನೆಯ ರಸದೌತಣ ಒದಗಿಸಿದ್ದರು. ಅಷ್ಟೇ ಅಲ್ಲದೆ ಕಳೆದ ವರ್ಷ ನವೆಂಬರ್ನಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿ ಅಚ್ಚರಿ ಮೂಡಿಸಿದ್ದರು.
ಇದಾಗ್ಯೂ ಆರ್ಸಿಬಿ ಅಭಿಮಾನಿಗಳು ಇನ್ನೂ ಕೂಡ ಎಬಿಡಿ ಜಪ ಮಾಡುತ್ತಿರುವುದು ಅವರ ಮೇಲಿರುವ ಅಭಿಮಾನಕ್ಕೆ ಸಾಕ್ಷಿ. ಅಭಿಮಾನಿಗಳು ಮಾತ್ರವಲ್ಲ ಖುದ್ದು ವಿರಾಟ್ ಕೊಹ್ಲಿ ಕೂಡ ಎಬಿಡಿಯ ಗುಂಗಿನಲ್ಲಿದ್ದಾರೆ. ಹೀಗಾಗಿಯೇ ಈ ಬಾರಿ ಆರ್ಸಿಬಿ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿದರೆ ನಾನು ಮೊದಲು ಎಬಿ ಡಿವಿಲಿಯರ್ಸ್ ಅವರನ್ನು ತುಂಬಾ ಭಾವನಾತ್ಮಕವಾಗಿ ನೆನಪಿಸಿಕೊಳ್ಳಲಿದ್ದೇನೆ ಎಂದು ತಿಳಿಸಿದ್ದಾರೆ.
ನನ್ನ ಪಾಲಿಗೆ ಎಬಿಡಿ ವಿಶೇಷ ವ್ಯಕ್ತಿ. ಅವರು ನಿವೃತ್ತರಾಗಲು ನಿರ್ಧರಿಸಿದಾಗ ನನಗೆ ವಾಯ್ಸ್ ಮೆಸೇಜ್ ಕಳುಹಿಸಿದ್ದರು. ಆಗಷ್ಟೇ ನಾನು ವಿಶ್ವಕಪ್ ಮುಗಿಸಿ ದುಬೈನಿಂದ ಬರುತ್ತಿದ್ದೆವು. ಆ ಸಂದೇಶ ಕೇಳಿ ನಾನು ತುಂಬಾ ಭಾವುಕನಾದೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.
ಎಬಿ ಡಿವಿಲಿಯರ್ಸ್ ಐಪಿಎಲ್ನಲ್ಲಿ 184 ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ 151.69 ಸ್ಟ್ರೈಕ್ ರೇಟ್‌ನಲ್ಲಿ 5162 ರನ್ ಗಳಿಸಿದ್ದಾರೆ. ಅಲ್ಲದೆ ಕಳೆದ ಸೀಸನ್ನಲ್ಲೂ ಉತ್ತಮವಾಗಿ ಬ್ಯಾಟ್ ಬೀಸಿದ್ದ ಎಬಿಡಿ ದಿಢೀರಣೆ ನಿವೃತ್ತಿ ಘೋಷಿಸಿ ಅಚ್ಚರಿ ಮೂಡಿಸಿದ್ದರು. ಇದೀಗ ಆರ್ಸಿಬಿ ಅಭಿಮಾನಿಗಳು ಎಬಿಡಿಯನ್ನು ಮಿಸ್ ಮಾಡಿಕೊಳ್ಳುತ್ತಿದೆ. ಅದರಲ್ಲೂ ಕಿಂಗ್ ಕೊಹ್ಲಿ ಎಬಿಡಿಯನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಕಿಂಗ್ ಕೊಹ್ಲಿಯ ಆಸೆಯಂತೆ ಈ ಬಾರಿ ಆರ್ಸಿಬಿ ಕಪ್ ಗೆಲ್ಲುವ ಮೂಲಕ ಅದನ್ನು ಎಬಿ ಡಿವಿಲಿಯರ್ಸ್ಗೆ ಅರ್ಪಿಸಲಿ ಎಂದು ಆಶಿಸೋಣ.
ಇದನ್ನೂ ಓದಿ: IPL ಆಡಿದ್ದ 11 ಪಾಕಿಸ್ತಾನಿ ಆಟಗಾರರು ಯಾರು ಗೊತ್ತಾ?
ಇದನ್ನೂ ಓದಿ: IPL 2022: ಇವರೇ RCB ಪರ ಹ್ಯಾಟ್ರಿಕ್ ವಿಕೆಟ್ ಪಡೆದ ಮೂವರು ಬೌಲರುಗಳು