IPL 2022 Prize Money: ಚಾಂಪಿಯನ್​ಗೆ 20 ಕೋಟಿ, ರನ್ನರ್ ಅಪ್​ಗೆ 13 ಕೋಟಿ! ಆರ್​ಸಿಬಿಗೆ ಸಿಕ್ಕಿದ್ದೆಷ್ಟು?

| Updated By: ಪೃಥ್ವಿಶಂಕರ

Updated on: May 28, 2022 | 2:57 PM

IPL 2022 Prize Money: ಐಪಿಎಲ್‌ನ ಮೊದಲ ಸೀಸನ್ 2008 ರಲ್ಲಿ ವಿಜೇತ ತಂಡ ರಾಜಸ್ಥಾನ್ ರಾಯಲ್ಸ್ 4.8 ಕೋಟಿ ರೂ. ಬಹುಮಾನವಾಗಿ ಪಡೆದಿತ್ತು. ಫೈನಲ್‌ನಲ್ಲಿ ಸೋತ ತಂಡಕ್ಕೆ 2.4 ಕೋಟಿ ರೂ. ಸಿಕ್ಕಿತ್ತು. ಜೊತೆಗೆ 3ನೇ ಸ್ಥಾನ ಪಡೆದಿದ್ದ ತಂಡಕ್ಕೆ 1.2 ಕೋಟಿ ರೂ. ಸಿಕ್ಕಿತ್ತು.

IPL 2022 Prize Money: ಚಾಂಪಿಯನ್​ಗೆ 20 ಕೋಟಿ, ರನ್ನರ್ ಅಪ್​ಗೆ 13 ಕೋಟಿ! ಆರ್​ಸಿಬಿಗೆ ಸಿಕ್ಕಿದ್ದೆಷ್ಟು?
ಐಪಿಎಲ್ ಟ್ರೋಪಿ
Follow us on

ಐಪಿಎಲ್ 2022 (IPL 2022)ರ ಫೈನಲ್ ಪಂದ್ಯವು ಭಾನುವಾರ, ಮೇ 29 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ (Narendra Modi Stadium)ನಲ್ಲಿ ನಡೆಯಲಿದೆ. ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ತಮ್ಮ ಮೊದಲ ಲೀಗ್ ಪಂದ್ಯವನ್ನು ಆಡುತ್ತಿರುವ ಗುಜರಾತ್ ಟೈಟಾನ್ಸ್‌ (Gujarat Titans) ಹಾಗೂ ರಾಜಸ್ಥಾನ್ ರಾಯಲ್ಸ್ (Rajasthan Royals) ನಡುವೆ ನಡೆಯಲಿದೆ. ಅಂಕಪಟ್ಟಿಯಲ್ಲಿ ಉಭಯ ತಂಡಗಳು ಅಗ್ರ-2ರಲ್ಲಿ ಸ್ಥಾನ ಪಡೆದಿವೆ. ಮೊದಲ ಸೀಸನ್ ನಂತರ ರಾಜಸ್ಥಾನ ತಂಡ ಫೈನಲ್ ತಲುಪಿರಲಿಲ್ಲ. ಮತ್ತೊಂದೆಡೆ, ಹಾರ್ದಿಕ್ ಪಾಂಡ್ಯ ಈ ಹಿಂದೆ ಆಟಗಾರನಾಗಿ ನಾಲ್ಕು ಟ್ರೋಫಿಗಳನ್ನು ಗೆದ್ದಿದ್ದಾರೆ. ಅವರು ಪ್ರಸ್ತುತ ನಾಯಕನಾಗಿ ತಮ್ಮ ಮೊದಲ, ಒಟ್ಟಾರೆ 5 ನೇ ಟ್ರೋಫಿಯನ್ನು ಗೆಲ್ಲಲು ಎದುರು ನೋಡುತ್ತಿದ್ದಾರೆ. IPL 2022 ರ ವರದಿಗಳ ಪ್ರಕಾರ, ವಿಜೇತ ತಂಡದ ಬಹುಮಾನದ ಹಣದಲ್ಲಿ (IPL 2022 Prize Money) ಯಾವುದೇ ಬದಲಾವಣೆಯಿಲ್ಲ. ಆದರೆ, ರನ್ನರ್ ಅಪ್ ತಂಡಕ್ಕೆ ಕಳೆದ ವರ್ಷಕ್ಕಿಂತ 50 ಲಕ್ಷ ರೂ. ಹೆಚ್ಚು ನೀಡಲಾಗುತ್ತಿದೆ. ಇದಲ್ಲದೆ, ಇತರ ವೈಯಕ್ತಿಕ ಪ್ರಶಸ್ತಿಗಳ ಮೊತ್ತವನ್ನು ಸಹ ಬಹಳ ಹೆಚ್ಚಿಸಲಾಗಿದೆ. ಕಳೆದ ವರ್ಷದ ವಿಜೇತ ಚೆನ್ನೈ ಸೂಪರ್ ಕಿಂಗ್ಸ್ ಪ್ರಶಸ್ತಿ ಮೊತ್ತ ರೂ. 20 ಕೋಟಿ ಆಗಿದ್ದರೆ, ರನ್ನರ್ ಅಪ್ ಕೋಲ್ಕತ್ತಾ ನೈಟ್ ರೈಡರ್ಸ್​ಗೆ ರೂ. 13 ಕೋಟಿ ಸಿಕ್ಕಿತ್ತು.

ಈ ಐಪಿಎಲ್​ನ ಬಹುಮಾನದ ವಿವರಗಳು ..

 

ಇದನ್ನೂ ಓದಿ
IPL 2022 Final: 14 ವರ್ಷಗಳ ನಂತರ ರಾಜಸ್ಥಾನ ಫೈನಲ್‌ಗೆ! ಟೇಬಲ್ ಟಾಪರ್ ಗುಜರಾತ್ ಮುಂದಿನ ಎದುರಾಳಿ
IPL 2022: 2011, 2015, ಈಗ 2022 ರಲ್ಲೂ ಅದೇ ಕಥೆ; ವಾಡಿಕೆಯಂತೆ ಕ್ವಾಲಿಫೈಯರ್ ಪಂದ್ಯದಲ್ಲಿ ಕೈಕೊಟ್ಟ ಕೊಹ್ಲಿ!

ಪ್ರಶಸ್ತಿ

ಒಟ್ಟು ಮೊತ್ತ

ವಿಜೇತ ತಂಡ

20 ಕೋಟಿ ರೂ

ಫೈನಲ್​ನಲ್ಲಿ ಸೋತ ತಂಡ​

13 ಕೋಟಿ

ನಂ. 3 ತಂಡ (RCB)

7 ಕೋಟಿ

ನಂ. 4 ತಂಡ (LSG)

6.5 ಕೋಟಿ

ಉದಯೋನ್ಮುಖ ಆಟಗಾರ

20 ಲಕ್ಷ

ಆರೆಂಜ್ ಕ್ಯಾಪ್

15 ಲಕ್ಷ

ಪರ್ಪಲ್ ಕ್ಯಾಪ್

15 ಲಕ್ಷ

ಮೊದಲ ಸೀಸನ್ ಬಹುಮಾನದ ಮೊತ್ತ ಎಷ್ಟು?

ಐಪಿಎಲ್‌ನ ಮೊದಲ ಸೀಸನ್ 2008 ರಲ್ಲಿ ವಿಜೇತ ತಂಡ ರಾಜಸ್ಥಾನ್ ರಾಯಲ್ಸ್ 4.8 ಕೋಟಿ ರೂ. ಬಹುಮಾನವಾಗಿ ಪಡೆದಿತ್ತು. ಫೈನಲ್‌ನಲ್ಲಿ ಸೋತ ತಂಡಕ್ಕೆ 2.4 ಕೋಟಿ ರೂ. ಸಿಕ್ಕಿತ್ತು. ಜೊತೆಗೆ 3ನೇ ಸ್ಥಾನ ಪಡೆದಿದ್ದ ತಂಡಕ್ಕೆ 1.2 ಕೋಟಿ ರೂ. ಸಿಕ್ಕಿತ್ತು. ಫೈನಲ್‌ನಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ರಾಜಸ್ಥಾನ್ ರಾಯಲ್ಸ್ ಮಣಿಸಿ ಚೊಚ್ಚಲ ಪ್ರಶಸ್ತಿ ಎತ್ತಿಹಿಡಿದಿತ್ತು. ಡೆಲ್ಲಿ ಮತ್ತು ಪಂಜಾಬ್ ತಂಡಗಳು ಸೆಮಿಸ್‌ನಲ್ಲಿ ಸೋತು ಟೂರ್ನಮೆಂಟ್​ನಿಂದ ಹೊರಬಿದ್ದಿದ್ದವು.