IPL 2023: ಐಪಿಎಲ್​ಗೆ ಮತ್ತೆ ಕೋವಿಡ್​ ಭೀತಿ..!

| Updated By: ಝಾಹಿರ್ ಯೂಸುಫ್

Updated on: Mar 19, 2023 | 4:09 PM

IPL 2023 Kannada: ಇಂಡಿಯನ್ ಪ್ರೀಮಿಯರ್ ಲೀಗ್​ನ 16ನೇ ಆವೃತ್ತಿಯು ಮಾರ್ಚ್ 31 ರಿಂದ ಶುರುವಾಗಲಿದೆ. ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಗುಜರಾತ್ ಟೈಟಾನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿದೆ.

IPL 2023: ಐಪಿಎಲ್​ಗೆ ಮತ್ತೆ ಕೋವಿಡ್​ ಭೀತಿ..!
ಸಾಂದರ್ಭಿಕ ಚಿತ್ರ
Follow us on

IPL 2023: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 16 ಆರಂಭಕ್ಕೆ ಇನ್ನು ದಿನಗಳು ಮಾತ್ರ ಉಳಿದಿವೆ. ಇದರ ಬೆನ್ನಲ್ಲೇ ಐಪಿಎಲ್ ಆಡಳಿತ ಮಂಡಳಿ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಈ ಮಾರ್ಗಸೂಚಿಗಳಲ್ಲಿ ಮುಖ್ಯವಾಗಿ ಉಲ್ಲೇಖಿಸಿರುವುದು ಕೋವಿಡ್​ಗೆ ಸಂಬಂಧಿಸಿದ ನಿಯಮಗಳು ಎಂಬುದು ವಿಶೇಷ. ಅಂದರೆ ಈ ಬಾರಿಯ ಕೊರೋನಾ ಭೀತಿಯಿಲ್ಲದೆ ಐಪಿಎಲ್ ಆಯೋಜಿಸಲು ಮುಂದಾಗಿದ್ದ ಬಿಸಿಸಿಐಗೆ ಇದೀಗ ಕೋವಿಡ್ ಭಯ ಶುರುವಾಗಿದೆ. ಇದಕ್ಕಾಗಿ ಆಟಗಾರರಿಗೆ ವಿಶೇಷ ವೈದ್ಯಕೀಯ ಮಾರ್ಗಸೂಚಿಗಳನ್ನು ಪ್ರಕಟಿಸಲಾಗಿದೆ. ಈ ಮಾರ್ಗಸೂಚಿಯಲ್ಲಿ ತಿಳಿಸಿರುವಂತೆ ಐಪಿಎಲ್​ ವೇಳೆ ಯಾವುದಾದರು ಆಟಗಾರನು ಕೋವಿಡ್ ಪಾಸಿಟಿವ್ ಆದರೆ ಕೂಡಲೇ ತಂಡವನ್ನು ತೊರೆಯಬೇಕು. ಅಲ್ಲದೆ ಒಂದು ವಾರಗಳ ಕಾಲ ಕ್ವಾರಂಟೈನ್​ನಲ್ಲಿರಬೇಕಾಗುತ್ತದೆ. ಈ ನಿಯಮಗಳನ್ನು ಎಲ್ಲಾ ಫ್ರಾಂಚೈಸಿಗಳು ಕಡ್ಡಾಯವಾಗಿ ಪಾಲಿಸಬೇಕೆಂದು ತಿಳಿಸಲಾಗಿದೆ.

ಭಾರತದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದ್ದರೂ, ವಿಭಿನ್ನ ರೂಪಾಂತರ ವೈರಸ್​ಗಳ ಬಗ್ಗೆ ಎಚ್ಚರಿಕೆಯಿಂದರಲು ಈ ನಿಯಮಗಳನ್ನು ರೂಪಿಸಲಾಗಿದೆ. ಹೀಗಾಗಿಯೇ ಈ ಹಿಂದಿನಂತೆ ಕೊರೋನಾ ಸೋಂಕು ತಗುಲಿದ ಆಟಗಾರರನ್ನು ಗರಿಷ್ಠ ಏಳು ದಿನಗಳವರೆಗೆ ಪತ್ಯೇಕವಾಗಿ ಇರಿಸಲಾಗುತ್ತದೆ. ಈ ಕ್ವಾರಂಟೈನ್​ ಅವಧಿಯಲ್ಲಿ ಸೋಂಕು ತಗುಲಿರುವ ಆಟಗಾರನು ತಂಡದೊಂದಿಗಿನ ಎಲ್ಲಾ ಚಟುವಟಿಕೆಗಳು ಮತ್ತು ಈವೆಂಟ್‌ಗಳಿಂದ ದೂರವಿರಬೇಕು ಎಂದು ತಿಳಿಸಲಾಗಿದೆ.

ಇನ್ನು ಕೋವಿಡ್ ಪಾಸಿಟಿವ್ ಆದ ಆಟಗಾರನ ಟೆಸ್ಟ್ ರಿಪೋರ್ಟ್​ ಐದನೇ ದಿನಗಳಲ್ಲಿ ನೆಗೆಟಿವ್ ಬಂದರೆ, ಮತ್ತೊಮ್ಮೆ ಪರೀಕ್ಷೆಗೆ ಒಳಪಡಿಸಲಾಗುತ್ತದೆ. 24 ಗಂಟೆಯೊಳಗೆ ನಡೆಯಲಿರುವ ಎರಡನೇ ಟೆಸ್ಟ್ ವರದಿಯು ನೆಗೆಟಿವ್ ಬಂದರೆ, ಅವರನ್ನು ತಂಡಕ್ಕೆ ಸೇರಿಸಿಕೊಳ್ಳಬಹುದು ಎಂದು ತಿಳಿಸಲಾಗಿದೆ. ಅಂದರೆ ಕೋವಿಡ್ ಪಾಸಿಟಿವ್ ಆದರೆ 5 ದಿನಗಳ ಕ್ವಾರಂಟೈನ್ ಕಡ್ಡಾಯವಾಗಿದೆ.

ಇದನ್ನೂ ಓದಿ
Ravindra Jadeja: 500 ವಿಕೆಟ್ ಕಬಳಿಸಿ ಮತ್ತೊಂದು ದಾಖಲೆ ಬರೆದ ರವೀಂದ್ರ ಜಡೇಜಾ
Rishabh Pant: ಅಪಘಾತದ ಬಳಿಕ ಜೀವನ ಹೇಗಿದೆ? ಮುಕ್ತವಾಗಿ ಮಾತನಾಡಿದ ರಿಷಭ್ ಪಂತ್
IPL 2023: ಐಪಿಎಲ್​ ವೇಳೆ ಜೊತೆಯಾಗಿ ಕಾಣಿಸಿಕೊಳ್ಳಲಿದ್ದಾರೆ RCB ತ್ರಿಮೂರ್ತಿಗಳು
IPL 2023: ಐಪಿಎಲ್​ನಿಂದ ಬುಮ್ರಾ ಔಟ್: ಮುಂಬೈ ಇಂಡಿಯನ್ಸ್​ ಮುಂದಿದೆ 3 ಆಯ್ಕೆಗಳು

ಕೊರೋನಾ ಭೀತಿ ಹಿನ್ನೆಲೆಯಲ್ಲಿ ಕಳೆದ ಮೂರು ಸೀಸನ್ ಐಪಿಎಲ್​ ಅನ್ನು ವಿವಿಧ ನಗರಗಳಲ್ಲಿ ಆಯೋಜಿಸಲಾಗಿತ್ತು. ಇದೀಗ ಮೂರು ವರ್ಷಗಳ ಆಯಾ ತಂಡಗಳ ಹೋಮ್​ ಗ್ರೌಂಡ್​ನಲ್ಲಿ ಐಪಿಎಲ್ ಪಂದ್ಯಗಳು ನಡೆಯುತ್ತಿದೆ. ಹೀಗಾಗಿಯೇ ಕ್ರಿಕೆಟ್ ಪ್ರೇಮಿಗಳು ಕೂಡ ತಮ್ಮ ತಂಡಗಳಿಗೆ ಬೆಂಬಲ ವ್ಯಕ್ತಪಡಿಸಲು ಸ್ಟೇಡಿಯಂಗೆ ಆಗಮಿಸಲಿದ್ದಾರೆ. ಇತ್ತ ದೇಶದಲ್ಲಿ ಕೋವಿಡ್‌ ಉಪತಳಿ XBB1.16 ಪತ್ತೆಯಾಗಿದ್ದು, ಇದರ ಬೆನ್ನಲ್ಲೇ ಬಿಸಿಸಿಐ ಐಪಿಎಲ್ ಆಟಗಾರರಿಗಾಗಿ ವಿಶೇಷ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

ಇದನ್ನೂ ಓದಿ: RCB ತಂಡದ ಮೊದಲ ಪ್ಲೇಯಿಂಗ್ ಇಲೆವೆನ್​ನಲ್ಲಿ ಯಾರೆಲ್ಲಾ ಇದ್ದರು ಗೊತ್ತಾ?

ಐಪಿಎಲ್ ಆರಂಭಕ್ಕೆ ದಿನಗಣನೆ:

ಇಂಡಿಯನ್ ಪ್ರೀಮಿಯರ್ ಲೀಗ್​ನ 16ನೇ ಆವೃತ್ತಿಯು ಮಾರ್ಚ್ 31 ರಿಂದ ಶುರುವಾಗಲಿದೆ. ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಗುಜರಾತ್ ಟೈಟಾನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿದೆ. ಇನ್ನು ಆರ್​ಸಿಬಿ ತಂಡವು ತನ್ನ ಮೊದಲ ಪಂದ್ಯವನ್ನು ಏಪ್ರಿಲ್ 2 ರಂದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಡಲಿದ್ದು,  ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಸೆಣಲಿಸಲಿದೆ.