IPL 2023: ನ.15 ಕೊನೆ ದಿನ; 10 ತಂಡಗಳಲ್ಲಿ ಯಾರು ಸೇಫ್, ಯಾರಿಗೆ ಗೇಟ್​ಪಾಸ್? ಇಲ್ಲಿದೆ ವಿವರ

| Updated By: ಪೃಥ್ವಿಶಂಕರ

Updated on: Nov 14, 2022 | 1:28 PM

IPL 2023 Retention: ಮಿನಿ ಹರಾಜಿಗೂ ಮುನ್ನ ಎಲ್ಲಾ ತಂಡಗಳು ಆಟಗಾರರ ಟ್ರೇಡಿಂಗ್ ಮಾಡಬೇಕಿದ್ದು, ಇದಕ್ಕೆ ನವೆಂಬರ್ 15 ಕೊನೆಯ ದಿನವಾಗಿದೆ. ಹೀಗಾಗಿ ಎಲ್ಲಾ ಫ್ರಾಂಚೈಸಿಗಳು ತಾವು ತಮ್ಮಲ್ಲೇ ಉಳಿಸಿಕೊಂಡ ಆಟಗಾರರು ಹಾಗೂ ಬಿಡುಗಡೆಗೊಳಿಸಿದ ಆಟಗಾರರ ಹೆಸರುಗಳನ್ನು ಅಂತಿಮಗೊಳಿಸಿವೆ.

IPL 2023: ನ.15 ಕೊನೆ ದಿನ; 10 ತಂಡಗಳಲ್ಲಿ ಯಾರು ಸೇಫ್, ಯಾರಿಗೆ ಗೇಟ್​ಪಾಸ್? ಇಲ್ಲಿದೆ ವಿವರ
Follow us on

ಐಪಿಎಲ್ 2023 (IPL 2023)ರ ಸಂಭ್ರಮ ಶುರುವಾಗಿದೆ. ಮಿನಿ ಹರಾಜು ಯಾವಾಗ ಮತ್ತು ಎಲ್ಲಿ ಎಂಬುದು ಖಚಿತವಾಗಿದ್ದು, ಡಿಸೆಂಬರ್ 23 ರಂದು ಕೊಚ್ಚಿಯಲ್ಲಿ ಈ ಮೆಗಾ ಈವೆಂಟ್ ನಡೆಯಲಿದೆ. ಆದರೆ ಮಿನಿ ಹರಾಜಿಗೂ ಮುನ್ನ ಎಲ್ಲಾ ತಂಡಗಳು ಆಟಗಾರರ ಟ್ರೇಡಿಂಗ್ ಮಾಡಬೇಕಿದ್ದು, ಇದಕ್ಕೆ ನವೆಂಬರ್ 15 ಕೊನೆಯ ದಿನವಾಗಿದೆ. ಹೀಗಾಗಿ ಎಲ್ಲಾ ಫ್ರಾಂಚೈಸಿಗಳು ತಾವು ತಮ್ಮಲ್ಲೇ ಉಳಿಸಿಕೊಂಡ ಆಟಗಾರರು ಹಾಗೂ ಬಿಡುಗಡೆಗೊಳಿಸಿದ ಆಟಗಾರರ ಹೆಸರುಗಳನ್ನು ಅಂತಿಮಗೊಳಿಸುವ ತಯಾರಿಯಲ್ಲಿವೆ.

ಐಪಿಎಲ್ 2022ರಂತೆ, ಐಪಿಎಲ್ 2023ರಲ್ಲಿ ಒಟ್ಟು 10 ತಂಡಗಳು ಆಡಲಿವೆ. 2023 ಮಿನಿ ಹರಾಜಿಗೂ ಮೊದಲು ತಮ್ಮ ಪರ್ಸ್‌ನಲ್ಲಿ ಹಣವನ್ನು ಹೆಚ್ಚು ಮಾಡಿಕೊಳ್ಳುವ ಸಲುವಾಗಿ ಎಲ್ಲಾ ತಂಡಗಳು ತಮಗೆ ಬೇಡವಾದ ಆಟಗಾರರನ್ನು ತಂಡದಿಂದ ಬಿಡುಗಡೆ ಮಾಡುತ್ತಿವೆ ಅಥವಾ ಇತರ ತಂಡಗಳಿಗೆ ಖರೀದಿಸಿದ ಮೊತ್ತಕ್ಕೆ ಮಾರಾಟ ಮಾಡುತ್ತವೆ. ಇದರಲ್ಲಿ ಇಲ್ಲಿಯವರೆಗೆ ಯಾವ ತಂಡ ಯಾವ ಆಟಗಾರರನ್ನು ಉಳಿಸಿಕೊಂಡಿದೆ ಹಾಗೂ ತಂಡದಿಂದ ಬಿಡುಗಡೆಗೊಳಿಸಿದೆ ಎಂಬುದರ ವಿವರ ಇಲ್ಲಿದೆ.

ಚೆನ್ನೈ ಸೂಪರ್ ಕಿಂಗ್ಸ್ (CSK)

4 ಬಾರಿಯ ಐಪಿಎಲ್ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತನ್ನ ತಂಡದ ಬಲವನ್ನು ಹೆಚ್ಚಿಸಲು ಉತ್ತಮ ಆಟಗಾರರನ್ನು ಹುಡುಕುತ್ತಿದೆ. ಹೀಗಾಗಿ ಐಪಿಎಲ್ 2023 ರ ಕಿರು ಹರಾಜಿನಲ್ಲಿ ಈ ಹುಡುಕಾಟವನ್ನು ಕೊನೆಗೊಳಿಸುವ ಸಲುವಾಗಿ ಈ ಫ್ರಾಂಚೈಸಿ ಹರಾಜಿಗೂ ಮುನ್ನ ತಂಡದಿಂದ ನಾಲ್ಕು ಆಟಗಾರರನ್ನು ಕೈಬಿಟ್ಟಿದೆ.

ಚೆನ್ನೈ ಉಳಿಸಿಕೊಂಡಿರುವ ಆಟಗಾರರು: ಎಂಎಸ್ ಧೋನಿ, ರವೀಂದ್ರ ಜಡೇಜಾ, ಮೊಯಿನ್ ಅಲಿ, ಶಿವಂ ದುಬೆ, ರುತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೆ, ಮುಖೇಶ್ ಚೌಧರಿ, ಡ್ವೇನ್ ಪ್ರಿಟೋರಿಯಸ್, ದೀಪಕ್ ಚಾಹರ್

ಬಿಡುಗಡೆ ಮಾಡಿರುವ ಆಟಗಾರರು: ಕ್ರಿಸ್ ಜೋರ್ಡಾನ್, ಆಡಮ್ ಮಿಲ್ನೆ, ನಾರಾಯಣ್ ಜಗದೀಶನ್, ಮಿಚೆಲ್ ಸ್ಯಾಂಟ್ನರ್

ಮುಂಬೈ ಇಂಡಿಯನ್ಸ್ (MI)

ಕಳೆದ ಬಾರಿಯ ಐಪಿಎಲ್​ನಲ್ಲಿ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್‌ ಪ್ರದರ್ಶನ ಅಷ್ಟು ಉತ್ತಮವಾಗಿರಲಿಲ್ಲ. ಹೀಗಾಗಿ ಐಪಿಎಲ್ 2023ರಲ್ಲಿ ಈ ತಂಡ ಉತ್ತಮ ಪ್ರದರ್ಶನ ನೀಡುವ ಉತ್ಸಾಹದಲ್ಲಿದೆ. ಇದಕ್ಕಾಗಿ ಮುಂಬೈ ಜೇಸನ್ ಬೆಹ್ರೆಂಡಾರ್ಫ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಿಂದ ಟ್ರೇಡ್ ಮಾಡಿಕೊಂಡಿದೆ.

ಮುಂಬೈ ಉಳಿಸಿಕೊಂಡಿರುವ ಆಟಗಾರರು: ರೋಹಿತ್ ಶರ್ಮಾ, ಡೆವಾಲ್ಡ್ ಬ್ರೇವಿಸ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಡೇನಿಯಲ್ ಸಾಮ್ಸ್, ಟಿಮ್ ಡೇವಿಡ್, ಜೋಫ್ರಾ ಆರ್ಚರ್, ಜಸ್ಪ್ರೀತ್ ಬುಮ್ರಾ, ಟ್ರಿಸ್ಟಾನ್ ಸ್ಟಬ್ಸ್, ತಿಲಕ್ ವರ್ಮಾ.

ಬಿಡುಗಡೆ ಮಾಡಿದ ಆಟಗಾರರು: ಫ್ಯಾಬಿಯನ್ ಅಲೆನ್, ಕೀರಾನ್ ಪೊಲಾರ್ಡ್, ಟಿಮಲ್ ಮಿಲ್ಸ್, ಮಯಾಂಕ್ ಮಾರ್ಕಾಂಡೆ, ಹೃತಿಕ್ ಶೋಕೀನ್

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB)

ಐಪಿಎಲ್‌ನಲ್ಲಿ ಇದುವರೆಗೆ 15 ಸೀಸನ್​ಗಳು ಮುಗಿದಿದ್ದರೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇನ್ನೂ ತನ್ನ ಮೊದಲ ಟ್ರೋಫಿಗಾಗಿ ಕಾಯುತ್ತಿದೆ. ಈ ಕಾಯುವಿಕೆಯನ್ನು ಕೊನೆಗೊಳಿಸುವ ಸಲುವಾಗಿ ಐಪಿಎಲ್ ಆರಂಭಕ್ಕೂ ಮುನ್ನ ತಂಡವನ್ನು ಬಲಿಷ್ಠಗೊಳಿಸಲು ತಯಾರಿ ಆರಂಭಿಸಿದೆ.

ಆರ್​ಸಿಬಿ ಉಳಿಸಿಕೊಂಡಿರುವ ಆಟಗಾರರು: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್, ವನಿಂದು ಹಸರಂಗ, ದಿನೇಶ್ ಕಾರ್ತಿಕ್, ಮೊಹಮ್ಮದ್ ಸಿರಾಜ್, ಹರ್ಷಲ್ ಪಟೇಲ್, ಶಹಬಾಜ್ ಅಹ್ಮದ್, ರಜತ್ ಪಾಟಿದಾರ್

ಬಿಡುಗಡೆ ಮಾಡಿದ ಆಟಗಾರರು: ಸಿದ್ದಾರ್ಥ್ ಕೌಲ್, ಕರಣ್ ಶರ್ಮಾ, ಡೇವಿಡ್ ವಿಲ್ಲಿ, ಆಕಾಶ್ ದೀಪ್

ಗುಜರಾತ್ ಟೈಟಾನ್ಸ್ (GT)

ಕಳೆದ ಐಪಿಎಲ್​ನಲ್ಲಿ ಮೊದಲ ಬಾರಿಗೆ ಐಪಿಎಲ್​ಗೆ ಎಂಟ್ರಿಕೊಟ್ಟಿದ್ದ ಗುಜರಾತ್ ಟೈಟಾನ್ಸ್ ತಂಡ ತಾನು ಆಡಿದ ಮೊದಲ ಸೀಸನ್​ನಲ್ಲಿಯೇ ಚಾಂಪಿಯನ್ ಆಗಿ ಹೊರಹೊಮ್ಮಿತು. ಈಗ ಆ ಯಶಸ್ಸನ್ನು ಉಳಿಸಿಕೊಳ್ಳಲು, ಈ ತಂಡವು ಮಿನಿ ಹರಾಜಿನ ಸಹಾಯದಿಂದ ಇನ್ನೂ ಕೆಲವು ಆಟಗಾರರನ್ನು ತಮ್ಮ ಶಸ್ತ್ರಾಗಾರಕ್ಕೆ ಸೇರಿಸಲು ಬಯಸುತ್ತದೆ.

ಗುಜರಾತ್ ಉಳಿಸಿಕೊಂಡಿರುವ ಆಟಗಾರರು: ಹಾರ್ದಿಕ್ ಪಾಂಡ್ಯ, ಡೇವಿಡ್ ಮಿಲ್ಲರ್, ಶುಭಮನ್ ಗಿಲ್, ಅಭಿನವ್ ಮನೋಹರ್, ವೃದ್ಧಿಮಾನ್ ಸಹಾ, ರಶೀದ್ ಖಾನ್, ಮೊಹಮ್ಮದ್ ಶಮಿ, ರಾಹುಲ್ ತೆವಾಟಿಯಾ. ರೆಹಮಾನುಲ್ಲಾ ಗುರ್ಬಾಜ್

ಬಿಡುಗಡೆ ಮಾಡಿದ ಆಟಗಾರರು: ಮ್ಯಾಥ್ಯೂ ವೇಡ್, ವಿಜಯ್ ಶಂಕರ್, ಗುರುಕೀರತ್ ಮಾನ್ ಸಿಂಗ್, ಜಯಂತ್ ಯಾದವ್, ಪ್ರದೀಪ್ ಸಾಂಗ್ವಾನ್, ನೂರ್ ಅಹ್ಮದ್, ಸಾಯಿ ಕಿಶೋರ್, ವರುಣ್ ಆರೋನ್

ದೆಹಲಿ ಕ್ಯಾಪಿಟಲ್ಸ್ (DC)

ದೆಹಲಿ ಕ್ಯಾಪಿಟಲ್ಸ್ ಐಪಿಎಲ್ 2022 ರಲ್ಲಿ ಕಡಿಮೆ ಬಜೆಟ್‌ನಲ್ಲಿ ಉತ್ತಮ ತಂಡವನ್ನು ಕಟ್ಟಿತ್ತು. ಈಗ ಮಿನಿ ಹರಾಜಿನ ಮೂಲಕ, ತಂಡದ ಉಳಿದ ಕೆಲವು ಲೋಪದೋಷಗಳನ್ನು ತೆಗೆದುಹಾಕುವುದು ಅವರ ಉದ್ದೇಶವಾಗಿದೆ.

ಡೆಲ್ಲಿ ಉಳಿಸಿಕೊಂಡಿರುವ ಆಟಗಾರರು: ರಿಷಭ್ ಪಂತ್, ಡೇವಿಡ್ ವಾರ್ನರ್, ಪೃಥ್ವಿ ಶಾ, ರೋವ್ಮನ್ ಪೊವೆಲ್, ಅಕ್ಷರ್ ಪಟೇಲ್, ಮಿಚೆಲ್ ಮಾರ್ಷ್, ಸರ್ಫರಾಜ್ ಖಾನ್, ಅನ್ರಿಕ್ ನೋಕಿಯಾ, ಕುಲದೀಪ್ ಯಾದವ್

ಬಿಡುಗಡೆ ಮಾಡಿದ ಆಟಗಾರರು: ಶಾರ್ದೂಲ್ ಠಾಕೂರ್, ಟಿಮ್ ಸಿಫೆರ್ಟ್, ಕೆಎಸ್ ಭರತ್, ಮಂದೀಪ್ ಸಿಂಗ್, ಅಶ್ವಿನ್ ಹೆಬರ್

ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್)

ಕೋಲ್ಕತ್ತಾ ನೈಟ್ ರೈಡರ್ಸ್ ಐಪಿಎಲ್ 2023 ಗಾಗಿ ಲಾಕಿ ಫರ್ಗುಸನ್ ಮತ್ತು ರಹಮಾನುಲ್ಲಾ ಗುರ್ಬಾಜ್ ಅವರನ್ನು ಟ್ರೇಡಿಂಗ್ ಮೂಲಕ ಖರೀದಿಸಿದೆ. ಕಳೆದ ಆವೃತ್ತಿಯಲ್ಲಿ ಶ್ರೇಯಸ್ ಅಯ್ಯರ್ ನಾಯಕತ್ವದ ಕೆಕೆಆರ್​ಗೆ ಪ್ರಶಸ್ತಿ ಸುತ್ತಿಗೆ ಎಂಟ್ರಿಕೊಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಎರಡು ಬಾರಿಯ ಚಾಂಪಿಯನ್​ಗಳು ಈ ಹರಾಜಿನಲ್ಲಿ ತಂಡವನ್ನು ಮತ್ತಷ್ಟು ಬಲಿಷ್ಠಗೊಳಿಸಲು ಪ್ರಯತ್ನಿಸಲಿದ್ದಾರೆ.

ಕೆಕೆಆರ್ ಉಳಿಸಿಕೊಂಡಿರುವ ಆಟಗಾರರು: ಶ್ರೇಯಸ್ ಅಯ್ಯರ್, ಸುನಿಲ್ ನರೈನ್, ಆಂಡ್ರೆ ರಸೆಲ್, ವರುಣ್ ಚಕ್ರವರ್ತಿ, ಪ್ಯಾಟ್ ಕಮಿನ್ಸ್, ನಿತೀಶ್ ರಾಣಾ, ಶೆಲ್ಡನ್ ಜಾಕ್ಸನ್, ರಿಂಕು ಸಿಂಗ್, ಉಮೇಶ್ ಯಾದವ್

ಕೆಕೆಆರ್ ಬಿಡುಗಡೆಗೊಳಿಸಬಹುದಾದ ಆಟಗಾರರು: ಶಿವಂ ಮಾವಿ, ಮೊಹಮ್ಮದ್ ನಬಿ, ಚಾಮಿಕಾ ಕರುಣರತ್ನೆ, ರಮೇಶ್ ಕುಮಾರ್, ಅಜಿಂಕ್ಯ ರಹಾನೆ, ಆರೋನ್ ಫಿಂಚ್

ರಾಜಸ್ಥಾನ್ ರಾಯಲ್ಸ್ (RR)

ಐಪಿಎಲ್ 2023 ರ ಕಿರು ಹರಾಜಿನ ಮೂಲಕ, ರಾಜಸ್ಥಾನ್ ರಾಯಲ್ಸ್ ತಮ್ಮ ತಂಡದ ಕೆಲವು ನ್ಯೂನತೆಗಳನ್ನು ಸರಿಪಡಿಸಲು ಬಯಸುತ್ತದೆ. ಇದಕ್ಕಾಗಿ ಈ ತಂಡ ಕೆಲ ಆಟಗಾರರನ್ನು ಬಿಡುಗಡೆ ಮಾಡುವುದಕ್ಕೂ ಮುಂದಾಗಿದೆ.

ರಾಜಸ್ಥಾನ್ ಉಳಿಸಿಕೊಂಡಿರುವ ಆಟಗಾರರು: ಸಂಜು ಸ್ಯಾಮ್ಸನ್, ಯಶಸ್ವಿ ಜೈಸ್ವಾಲ್, ಆರ್. ಅಶ್ವಿನ್, ಯುಜ್ವೇಂದ್ರ ಚಾಹಲ್, ಶಿಮ್ರೋನ್ ಹೆಟ್ಮೆಯರ್, ಟ್ರೆಂಟ್ ಬೌಲ್ಟ್, ಜಿಮ್ಮಿ ನೀಶಮ್, ಪ್ರಸಿದ್ಧ್ ಕೃಷ್ಣ, ಓಬೆಡ್ ಮೆಕಾಯ್

ಬಿಡುಗಡೆಗೊಳಿಸಬಹುದಾದ ಆಟಗಾರರು: ನವದೀಪ್ ಸೈನಿ, ಡ್ಯಾರಿಲ್ ಮಿಚೆಲ್, ರಾಸಿ ವ್ಯಾನ್ ಡೆರ್ ಡಸ್ಸೆನ್, ಕಾರ್ಬಿನ್ ಬಾಸ್

ಉಳಿದಂತೆ ಲಕ್ನೋ ಸೂಪರ್ ಜೈಂಟ್ಸ್, ಪಂಜಾಬ್ ಕಿಂಗ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಗಳು ತಾವು ಉಳಿಸಿಕೊಂಡಿರುವ ಆಟಗಾರರು ಹಾಗೂ ಬಿಡುಗಡೆಗೊಳಿಸಿದ ಆಟಗಾರರ ಬಗ್ಗೆ ಯಾವುದೇ ಮಾಹಿತಿಯನ್ನು ಇನ್ನೂ ಹೊರಹಾಕಿಲ್ಲ.

Published On - 1:27 pm, Mon, 14 November 22