
ಡೆಕ್ಕನ್ ಚಾರ್ಜರ್ಸ್ ತಂಡದ ಮಾಜಿ ನಾಯಕ, ಆಸ್ಟ್ರೇಲಿಯನ್ ಕ್ರಿಕೆಟಿಗ ಆ್ಯಡಂ ಗಿಲ್ಕ್ರಿಸ್ಟ್ ಐಪಿಎಲ್ನ ಸಾರ್ವಕಾಲಿಕ ಚಾಂಪಿಯನ್ ಇಲೆವೆನ್ ಹೆಸರಿಸಿದ್ದಾರೆ. ಈ ಇಲೆವೆನ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಕಾಣಿಸಿಕೊಂಡಿಲ್ಲ. ಇದಕ್ಕೆ ಮುಖ್ಯ ಕಾರಣ ಕಿಂಗ್ ಕೊಹ್ಲಿ ಈವರೆಗೆ ಐಪಿಎಲ್ ಟ್ರೋಫಿ ಗೆಲ್ಲದಿರುವುದು.
ಅಂದರೆ ಐಪಿಎಲ್ ಟ್ರೋಫಿ ಗೆದ್ದಿರುವ 11 ಆಟಗಾರರನ್ನು ಒಳಗೊಂಡಂತಹ ಚಾಂಪಿಯನ್ಸ್ ಇಲೆವೆನ್ ಅನ್ನು ಆ್ಯಡಂ ಗಿಲ್ಕ್ರಿಸ್ಟ್ ಹೆಸರಿಸಿದ್ದಾರೆ. ಈ ತಂಡದ ನಾಯಕನಾಗಿ 5 ಬಾರಿ ಟ್ರೋಫಿ ಎತ್ತಿ ಹಿಡಿದ ಮಹೇಂದ್ರ ಸಿಂಗ್ ಧೋನಿಯನ್ನು ಆಯ್ಕೆ ಮಾಡಿದ್ದಾರೆ.
ಈ ತಂಡದ ಆರಂಭಿಕ ಜೋಡಿಯಾಗಿ ಆ್ಯಡಂ ಗಿಲ್ಕ್ರಿಸ್ಟ್ ಆಯ್ಕೆ ಮಾಡಿದ್ದು ಡೇವಿಡ್ ವಾರ್ನರ್ ಹಾಗೂ ರೋಹಿತ್ ಶರ್ಮಾ ಅವರನ್ನು. ಇನ್ನು ಮೂರನೇ ಕ್ರಮಾಂಕದಲ್ಲಿ ಸುರೇಶ್ ರೈನಾ ಅವರನ್ನು ಹೆಸರಿಸಿದ್ದಾರೆ.
ನಾಲ್ಕನೇ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ ಕಾಣಿಸಿಕೊಂಡರೆ, ಐದನೇ ಕ್ರಮಾಂಕದಲ್ಲಿ ಕೀರನ್ ಪೊಲಾರ್ಡ್ ಇದ್ದಾರೆ. ಇನ್ನು ವಿಕೆಟ್ ಕೀಪರ್ ಆಗಿ ಆಯ್ಕೆಯಾಗಿರುವುದು ಮಹೇಂದ್ರ ಸಿಂಗ್ ಧೋನಿ.
ಹಾಗೆಯೇ ಆಲ್ರೌಂಡರ್ಗಳಾಗಿ ಸುನಿಲ್ ನರೈನ್ ಹಾಗೂ ರವೀಂದ್ರ ಜಡೇಜಾ ಅವರನ್ನು ಆಯ್ಕೆ ಮಾಡಿದ್ದಾರೆ. ವೇಗಿಗಳಾಗಿ ಜಸ್ಪ್ರೀತ್ ಬುಮ್ರಾ, ಲಸಿತ್ ಮಾಲಿಂಗ ಹಾಗೂ ಭುವನೇಶ್ವರ್ ಕುಮಾರ್ ಅವರನ್ನು ಹೆಸರಿಸಿದ್ದಾರೆ.
ಇದನ್ನೂ ಓದಿ: IPL 2025: RCB ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ CWI
ಈ ಎಲ್ಲಾ ಆಟಗಾರರು ಐಪಿಎಲ್ನಲ್ಲಿ ಚಾಂಪಿಯನ್ಸ್ ತಂಡದ ಭಾಗವಾಗಿದ್ದಾರೆ. ಹೀಗಾಗಿಯೇ ವಿರಾಟ್ ಕೊಹ್ಲಿ, ಕ್ರಿಸ್ ಗೇಲ್, ಎಬಿ ಡಿವಿಲಿಯರ್ಸ್ಗೆ ಚಾಂಪಿಯನ್ಸ್ ಇಲೆವೆನ್ನಲ್ಲಿ ಆ್ಯಡಂ ಗಿಲ್ಕ್ರಿಸ್ಟ್ ಸ್ಥಾನ ನೀಡಿಲ್ಲ. ಅದರಂತೆ ಗಿಲ್ಲಿಯ ಸಾರ್ವಕಾಲಿಕ ಚಾಂಪಿಯನ್ಸ್ ಇಲೆವೆನ್ ಈ ಕೆಳಗಿನಂತಿದೆ…
Published On - 9:54 am, Sat, 17 May 25