IPL 2025: ಪಂಜಾಬ್ ಪರ… ಪಿಚ್​ ಬಗ್ಗೆ ಆಕ್ರೋಶ ಹೊರಹಾಕಿದ ಝಹೀರ್ ಖಾನ್

|

Updated on: Apr 02, 2025 | 12:10 PM

IPL 2025 LSG vs PBKS: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡವು ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 171 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಪಂಜಾಬ್ ಕಿಂಗ್ಸ್ ತಂಡವು 16.2 ಓವರ್​ಗಳಲ್ಲಿ 2 ವಿಕೆಟ್ ಕಳೆದುಕೊಂಡು 177 ರನ್ ಬಾರಿಸಿ 8 ವಿಕೆಟ್​ಗಳ ಅಮೋಘ ಗೆಲುವು ದಾಖಲಿಸಿದೆ.

IPL 2025: ಪಂಜಾಬ್ ಪರ... ಪಿಚ್​ ಬಗ್ಗೆ ಆಕ್ರೋಶ ಹೊರಹಾಕಿದ ಝಹೀರ್ ಖಾನ್
Zaheer Khan
Follow us on

IPL 2025: ಐಪಿಎಲ್​ ಸೀಸನ್​-18 ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವು ಈವರೆಗೆ 3 ಪಂದ್ಯಗಳನ್ನಾಡಿದೆ. ಈ ಮೂರು ಮ್ಯಾಚ್​ಗಳಲ್ಲಿ ತವರಿನಲ್ಲಿ ಆಡಿದ ಮೊದಲ ಪಂದ್ಯದಲ್ಲೇ ಎಲ್​ಎಸ್​ಜಿ ಮುಗ್ಗರಿಸಿದೆ. ಮಂಗಳವಾರ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ 8 ವಿಕೆಟ್​ಗಳಿಂದ ಪರಾಜಯಗೊಂಡಿದೆ. ಈ ಸೋಲಿನ ಬೆನ್ನಲ್ಲೇ ಎಲ್​ಎಸ್​ಜಿ ತಂಡದ ಮೆಂಟರ್ ಝಹೀರ್ ಖಾನ್ ಪಿಚ್ ಬಗ್ಗೆ ಚಕಾರವೆತ್ತಿದ್ದಾರೆ.

ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಝಹೀರ್ ಖಾನ್, ಸೋಲಿನಿಂದ ನನಗೆ ಸ್ವಲ್ಪ ನಿರಾಶೆಯಾಗಿದೆ. ಇದು ನಮ್ಮ ತವರಿನ ಪಂದ್ಯವಾಗಿತ್ತು. ಹೀಗೆ ನೋಡಿದ್ರೆ, ಐಪಿಎಲ್‌ನಲ್ಲಿ ತಂಡಗಳು ತವರಿನ ಲಾಭವನ್ನು ಪಡೆಯುತ್ತವೆ. ಆದರೆ ಆ ಲಾಭ ನಮಗೆ ಸಿಕ್ಕಿಲ್ಲ ಎಂಬುದೇ ಸತ್ಯ.

ಏಕೆಂದರೆ ತವರಿನ ಪಂದ್ಯಗಳಿಗೆ ಕ್ಯುರೇಟರ್ ಆಯಾ ತಂಡಕ್ಕೆ ಅನುಕೂಲವಾಗುವಂತಹ ಪಿಚ್ ರೂಪಿಸುತ್ತಾರೆ. ಆದರೆ ಲಕ್ನೋ ಕ್ಯುರೇಟರ್ ನಿಜವಾಗಿಯೂ ಇದು ತವರು ಪಂದ್ಯ ಎಂದು ಯೋಚಿಸುತ್ತಿಲ್ಲ. ಬಹುಶಃ ಇದು ಲಕ್ನೋ ಮೈದಾನದ ಕ್ಯುರೇಟರ್, ಪಂಜಾಬ್ ಕ್ಯುರೇಟರ್ ಆಗಿರಬಹುದು ಎಂಬುದು ನನ್ನ ಭಾವನೆ ಎಂದು ಝಹೀರ್ ಖಾನ್ ಹೇಳಿದ್ದಾರೆ.

ಇದನ್ನೂ ಓದಿ
ಯುಜ್ವೇಂದ್ರ ಚಹಲ್-ಧನಶ್ರೀ ವರ್ಮಾ ವಿಚ್ಛೇದನಕ್ಕೆ ಇದುವೇ ಅಸಲಿ ಕಾರಣ
RCB ದಾಖಲೆ ಧೂಳೀಪಟ ಮಾಡಿದ ಡೆಲ್ಲಿ ಬಾಯ್ಸ್
David Warner: ಡೇವಿಡ್ ವಾರ್ನರ್​ಗೆ ಒಲಿದ ನಾಯಕತ್ವ..!
VIDEO: ಎಂಎಸ್ ಧೋನಿ ಎಂಟ್ರಿಗೆ ಕಿವಿ ಮುಚ್ಚಿ ಕೂತ ನೀತಾ ಅಂಬಾನಿ

ಪ್ರತಿ ಪಂದ್ಯಕ್ಕೂ ನಾವು ಪಿಚ್ ಲೆಕ್ಕಾಚಾರವನ್ನು ಮಾಡುತ್ತೇವೆ. ಆದರೆ ಇಲ್ಲಿನ ವಿಷಯಕ್ಕೆ ಬಂದಾಗ ಇದು ಮೊದಲ ಮತ್ತು ಕೊನೆಯ ಪಂದ್ಯ ಎಂದು ನಾನು ಭಾವಿಸುತ್ತೇನೆ. ಏಕೆಂದರೆ ತವರಿನ ತಂಡದ ಅನುಕೂಲಕ್ಕೆ ತಕ್ಕಂತೆ ಪಿಚ್ ರೂಪಿಸದಿದ್ದರೆ, ನೀವು ಲಕ್ನೋ ಅಭಿಮಾನಿಗಳನ್ನೂ ನಿರಾಶೆಗೊಳಿಸುತ್ತಿದ್ದೀರಿ ಎಂದರ್ಥ.

ನಾವು ಲಕ್ನೋದಲ್ಲಿ ಮೊದಲ ಪಂದ್ಯವನ್ನು ಗೆಲ್ಲುವ ವಿಶ್ವಾಸದಲ್ಲಿದ್ದೆವು. ಆದರೆ ನಾವು ಪಂದ್ಯವನ್ನು ಸೋತಿದ್ದೇವೆ. ಇದನ್ನು ಒಪ್ಪಿಕೊಳ್ಳುತ್ತೇವೆ. ಅಲ್ಲದೆ ತವರಿನ ಪಂದ್ಯದಲ್ಲಿ ಪರಿಣಾಮಕಾರಿಯಾಗಿ ಎದುರಿಸಲು ನಾವು ಏನು ಬೇಕಾದರೂ ಮಾಡುತ್ತೇವೆ. ಇಲ್ಲಿ ನಮಗೆ ಇನ್ನೂ ಆರು ಪಂದ್ಯಗಳು ಬಾಕಿ ಇವೆ. ಹೀಗಾಗಿ ಮುಂದಿನ ಪಂದ್ಯಗಳ ವೇಳೆ ನಮ್ಮ ಸಾಮರ್ಥ್ಯಕ್ಕೆ ತಕ್ಕಂತಹ ಪಿಚ್ ರೂಪಿಸಲಿದ್ದೇವೆ ಎಂದು ಝಹೀರ್ ಖಾನ್ ಹೇಳಿದ್ದಾರೆ.

ಇದನ್ನೂ ಓದಿ: IPL 2025: ಬ್ಯಾನ್ ಬ್ಯಾನ್ ಬ್ಯಾನ್… ಐಪಿಎಲ್ ಆಟಗಾರರಿಗೆ ಬ್ಯಾನ್ ಭೀತಿ

ಇದಕ್ಕೂ ಮುನ್ನ ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿ ಕೂಡ ತವರು ಮೈದಾನದಲ್ಲಿ ಕ್ಯುರೇಟರ್ ತಂಡಕ್ಕೆ ಅನುಕೂಲವಾಗುವಂತಹ ಪಿಚ್ ರೂಪಿಸಿಲ್ಲ ಎಂದು ದೂರಿದ್ದರು. ಇದೀಗ ಲಕ್ನೋ ಸೂಪರ್ ಜೈಂಟ್ಸ್ ಕೂಡ ಕ್ಯುರೇಟರ್ ಎದುರಾಳಿಗೆ ಅನುಕೂಲವಾಗುವಂತಹ ಪಿಚ್ ರೂಪಿಸಿದ್ದಾರೆ ಎಂಬ ವಾದವನ್ನು ಮುಂದಿಟ್ಟಿದ್ದಾರೆ.

 

Published On - 11:56 am, Wed, 2 April 25