ತವರಿನ ಹೊರಗೆ ಆಡಿದ್ದ ಮೊದಲೆರಡು ಪಂದ್ಯಗಳನ್ನು ಸೋತಿದ್ದ ಹಾರ್ದಿಕ್ ಪಾಂಡ್ಯ ನಾಯಕತ್ವದ ಮುಂಬೈ ಇಂಡಿಯನ್ಸ್ (Mumbai Indians) ತಂಡಕ್ಕೆ ತವರಿಗೆ ಮರಳಿದ ಕೂಡಲೇ ತನ್ನ ಹಳೆಯ ಲಯಕ್ಕೆ ಮರಳಿದಂತೆ ಕಾಣುತ್ತಿದೆ. ವಾಂಖೆಡೆಯಲ್ಲಿ ನಡೆಯುತ್ತಿರುವ ಐಪಿಎಲ್ನ 12ನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡ ಪೂರ್ಣ 20 ಓವರ್ಗಳನ್ನು ಆಡಲು ಸಾಧ್ಯವಾಗದೆ 16.2 ಓವರ್‌ಗಳಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು ಕೇವಲ 116 ರನ್ ಕಲೆಹಾಕಿದೆ. ಕೆಕೆಆರ್ ತಂಡ ಇಷ್ಟು ಕಡಿಮೆ ಮೊತ್ತಕ್ಕೆ ಆಲೌಟ್ ಆಗಲು ಪ್ರಮುಖ ಕಾರಣ, ಮುಂಬೈ ಪರ ಚೊಚ್ಚಲ ಐಪಿಎಲ್ ಪಂದ್ಯವನ್ನು ಆಡುತ್ತಿರುವ ಯುವ ಎಡಗೈ ವೇಗಿ ಅಶ್ವನಿ ಕುಮಾರ್ (Ashwani Kumar).
ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಪರ ಮೊದಲ ಪಂದ್ಯವನ್ನಾಡುವ ಅವಕಾಶ ಪಡೆದ ಅಶ್ವನಿ ಕುಮಾರ್, ತಾವು ಎಸೆದ ಮೊದಲ ಓವರ್ನ ಮೊದಲ ಎಸೆತದಲ್ಲೇ ವಿಕೆಟ್ ಉರುಳಿಸಿ ದಾಖಲೆ ನಿರ್ಮಿಸಿದರು. ಅಶ್ವನಿ ಕುಮಾರ್ ತಮ್ಮ ಐಪಿಎಲ್ ವೃತ್ತಿಜೀವನದ ಮೊದಲ ಎಸೆತದಲ್ಲೇ ಕೋಲ್ಕತ್ತಾ ನಾಯಕ ಅಜಿಂಕ್ಯ ರಹಾನೆ ಅವರನ್ನು ಔಟ್ ಮಾಡಿದರು. ಈ ವಿಕೆಟ್‌ನೊಂದಿಗೆ, ಅವರು ತಮ್ಮ ಚೊಚ್ಚಲ ಪಂದ್ಯದ ಮೊದಲ ಎಸೆತದಲ್ಲೇ ವಿಕೆಟ್ ಪಡೆದ ಮುಂಬೈ ಇಂಡಿಯನ್ಸ್‌ನ ಮೊದಲ ಭಾರತೀಯ ಆಟಗಾರ ಎಂಬ ದಾಖಲೆ ಬರೆದರು.
ಇಷ್ಟೇ ಅಲ್ಲ, ಅಶ್ವನಿ ತಮ್ಮ ಎರಡನೇ ಓವರ್‌ನಲ್ಲಿ ಪ್ರಮುಖ ಎರಡು ವಿಕೆಟ್‌ಗಳನ್ನು ಕಬಳಿಸಿದರು. ಅಶ್ವನಿ ತಮ್ಮ ಎರಡನೇ ಓವರ್‌ನಲ್ಲಿ ಸ್ಫೋಟಕ ಬ್ಯಾಟರ್ಗಳಾದ ರಿಂಕು ಸಿಂಗ್ ಮತ್ತು ಮನೀಶ್ ಪಾಂಡೆ ಅವರನ್ನೂ ಬಲಿಪಶುಗಳನ್ನಾಗಿ ಮಾಡಿಕೊಂಡರು. ಆ ಬಳಿಕ ತಮ್ಮ ಮೂರನೇ ಓವರ್‌ನಲ್ಲಿ ವಿಕೆಟ್ ಬೇಟೆ ನೆಡೆಸಿದ ಅಶ್ವನಿ, ಅಪಾಯಕಾರಿ ಬ್ಯಾಟ್ಸ್‌ಮನ್ ಆಂಡ್ರೆ ರಸೆಲ್ರನ್ನು ಪೆವಿಲಿಯನ್ಗಟ್ಟಿದರು. ಒಟ್ಟಾರೆ ಅಶ್ವನಿ, ಕೇವಲ 3 ಓವರ್‌ಗಳಲ್ಲಿ 24 ರನ್ ನೀಡಿ ಪ್ರಮುಖ 4 ವಿಕೆಟ್ ಉರುಳಿಸಿದರು.
Debut straight out of a storybook 📖
The perfect first chapter for Ashwani Kumar 👌👌
Updates ▶ https://t.co/iEwchzDRNM#TATAIPL | #MIvKKR | @mipaltan pic.twitter.com/npaynbIViX
— IndianPremierLeague (@IPL) March 31, 2025
2025 ರ ಮೆಗಾ ಹರಾಜಿನಲ್ಲಿ ಅಶ್ವನಿ ಕುಮಾರ್ ಅವರನ್ನು ಮುಂಬೈ ಇಂಡಿಯನ್ಸ್ ಮೂಲ ಬೆಲೆ 30 ಲಕ್ಷ ರೂ.ಗೆ ಖರೀದಿಸಿತು. ಡೆತ್ ಓವರ್ ಸ್ಪೆಷಲಿಸ್ಟ್ ಎನಿಸಿಕೊಂಡಿರುವ ಅಶ್ವನಿ, 2022 ರಲ್ಲಿ ನಡೆದ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಪಂಜಾಬ್ ಪರ ಪಾದಾರ್ಪಣೆ ಮಾಡಿದರು. ಇದುವರೆಗೆ 4 ಟಿ20 ಪಂದ್ಯಗಳಲ್ಲಿ 3 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಅಲ್ಲದೆ ಅಶ್ವನಿ ಪಂಜಾಬ್ ಪರ 2 ಪ್ರಥಮ ದರ್ಜೆ ಮತ್ತು 4 ಲಿಸ್ಟ್ ಎ ಪಂದ್ಯಗಳನ್ನು ಆಡಿದ್ದಾರೆ.
ಅಶ್ವನಿ ಕುಮಾರ್ 29 ಆಗಸ್ಟ್ 2001 ರಂದು ಮೊಹಾಲಿಯ ಸಣ್ಣ ಹಳ್ಳಿಯಾದ ಝಂಝೇರಿಯಲ್ಲಿ ಜನಿಸಿದರು. ಅಶ್ವನಿ ಕುಮಾರ್ ಮಧ್ಯಮ ವರ್ಗದ ಕುಟುಂಬದಿಂದ ಬಂದವರಾಗಿದ್ದು, ತುಂಬಾ ಚಿಕ್ಕ ವಯಸ್ಸಿನಲ್ಲಿಯೇ ಕ್ರಿಕೆಟ್ ಆಡಲು ಆರಂಭಿಸಿದರು. ಶೇರ್-ಎ-ಪಂಜಾಬ್ ಟಿ20 ಕಪ್‌ನಲ್ಲಿ ಮುನ್ನೆಲೆಗೆ ಬಂದ ಅಶ್ವನಿ, ಆ ಕಪ್‌ನಲ್ಲಿ 6 ಪಂದ್ಯಗಳಲ್ಲಿ 11 ವಿಕೆಟ್‌ಗಳನ್ನು ಕಬಳಿಸಿದ್ದರು.
IPL 2025: ಮುಂಬೈಗೆ ಮರ್ಮಾಘಾತ; ಇನ್ನೇರಡು ವಾರ ಐಪಿಎಲ್ನಿಂದ ಬುಮ್ರಾ ಔಟ್..!
ಅಶ್ವನಿ ಕುಮಾರ್ ಅವರ ವಿಶೇಷತೆಯೆಂದರೆ ಅವರ ವಿಭಿನ್ನ ಶೈಲಿಯ ಬೌಲಿಂಗ್. ವೇಗ ಬದಲಾವಣೆಯ ಹೊರತಾಗಿ, ಈ ಆಟಗಾರ ಬೌನ್ಸರ್‌ಗಳು ಮತ್ತು ಯಾರ್ಕರ್‌ಗಳನ್ನು ಎಸೆಯುವುದರಲ್ಲಿಯೂ ಪರಿಣಿತರು. ಇದಲ್ಲದೆ, ಅವರು ಕೆಳ ಕ್ರಮಾಂಕದಲ್ಲಿ ದೊಡ್ಡ ಹೊಡೆತಗಳನ್ನು ಸಹ ಆಡಬಲ್ಲರು. ಈ ಆಟಗಾರ ಒತ್ತಡದಲ್ಲಿ ಉತ್ತಮ ಪ್ರದರ್ಶನ ನೀಡುವುದಕ್ಕೆ ಹೆಸರುವಾಸಿ. ಇದೇ ಕಾರಣಕ್ಕೆ ಮುಂಬೈ ಇಂಡಿಯನ್ಸ್ ಈ ಆಟಗಾರನ ಖರೀದಿಸುವ ಮನಸು ಮಾಡಿತ್ತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:18 pm, Mon, 31 March 25