IPL 2025: ನಾಳೆಯಿಂದ ದ್ವಿತೀಯಾರ್ಧದ ಐಪಿಎಲ್ ಆರಂಭ; ಉಳಿದ ಪಂದ್ಯಗಳ ವೇಳಾಪಟ್ಟಿ ಹೀಗಿದೆ

IPL 2025 Back On: ಭಾರತ-ಪಾಕಿಸ್ತಾನ ಉದ್ವಿಗ್ನತೆಯಿಂದಾಗಿ ಒಂದು ವಾರ ಸ್ಥಗಿತಗೊಂಡಿದ್ದ ಐಪಿಎಲ್ 2025 ಮೇ 17 ರಿಂದ ಮತ್ತೆ ಆರಂಭವಾಗುತ್ತಿದೆ. ಬಿಸಿಸಿಐ ಹೊಸ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಉಳಿದ 17 ಪಂದ್ಯಗಳು 6 ನಗರಗಳಲ್ಲಿ ನಡೆಯಲಿವೆ. ಪ್ಲೇಆಫ್ ಪಂದ್ಯಗಳ ದಿನಾಂಕಗಳು ನಿಗದಿಯಾಗಿದ್ದು, ಫೈನಲ್ ಜೂನ್ 3 ರಂದು ನಡೆಯಲಿದೆ. ಡಬಲ್ ಹೆಡರ್ ಪಂದ್ಯಗಳನ್ನು ಎರಡು ಭಾನುವಾರಗಳಂದು ಆಡಲಾಗುವುದು.

IPL 2025: ನಾಳೆಯಿಂದ ದ್ವಿತೀಯಾರ್ಧದ ಐಪಿಎಲ್ ಆರಂಭ; ಉಳಿದ ಪಂದ್ಯಗಳ ವೇಳಾಪಟ್ಟಿ ಹೀಗಿದೆ
Ipl 2025

Updated on: May 16, 2025 | 2:50 PM

ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯಿಂದಾಗಿ 57 ಪಂದ್ಯಗಳ ನಂತರ 2025 ರ ಐಪಿಎಲ್ (IPL 2025) ಅನ್ನು ಬಿಸಿಸಿಐ ಒಂದು ವಾರ ಸ್ಥಗಿತಗೊಳಿಸಿತ್ತು. ಇದೀಗ ಪರಿಸ್ಥಿತಿ ತಿಳಿಯಾಗಿದ್ದು ಮಿಲಿಯನ್ ಡಾಲರ್ ಟೂರ್ನಿ ಇದೇ ಮೇ 17 ರಿಂದ ಅಂದರೆ ನಾಳೆಯಿಂದ ಆರ್‌ಸಿಬಿ ಹಾಗೂ ಕೆಕೆಆರ್ (RCB vs KKR) ನಡುವಿನ ಪಂದ್ಯದೊಂದಿಗೆ ಮತ್ತೆ ಪ್ರಾರಂಭವಾಗುತ್ತಿದೆ. ವಾಸ್ತವವಾಗಿ ಭಾರತ ಹಾಗೂ ಪಾಕಿಸ್ತಾನ ನಡುವೆ ಯುದ್ಧದ ಭೀತಿ ಎದುರಾಗಿದ್ದರಿಂದ ಮೇ 8 ರಂದು ನಡೆಯುತ್ತಿದ್ದ ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯವನ್ನು ಅರ್ಧಕ್ಕೆ ನಿಲ್ಲಿಸಿದ್ದ ಬಿಸಿಸಿಐ (BCCI), 2025 ರ ಐಪಿಎಲ್ ಅನ್ನು ಒಂದು ವಾರ ಮುಂದೂಡಿರುವುದಾಗಿ ಮೇ 9 ರಂದು ಘೋಷಿಸಿತ್ತು. ಆದರೀಗ ಎರಡೂ ದೇಶಗಳು ಕದನ ವಿರಾಮ ಘೋಷಿಸಿರುವ ಕಾರಣ ಬಿಸಿಸಿಐ ಉಳಿದ ಪಂದ್ಯಗಳಿಗೆ ಹೊಸ ವೇಳಾಪಟ್ಟಿಯನ್ನು ಮೇ 12 ರಂದು ಪ್ರಕಟಿಸಿದೆ. ಹೊಸ ವೇಳಾಪಟ್ಟಿಯ ಪ್ರಕಾರ ಉಳಿದ 17 ಪಂದ್ಯಗಳು 6 ಸ್ಥಳಗಳಲ್ಲಿ ನಡೆಯಲಿವೆ. ಹಾಗೆಯೇ ಫೈನಲ್ ಪಂದ್ಯವು ಜೂನ್ 3 ರಂದು ನಡೆಯಲಿದೆ.

ಹೊಸ ವೇಳಾಪಟ್ಟಿ ಪ್ರಕಟ

ಉಳಿದ ಪಂದ್ಯಗಳನ್ನು ಬೆಂಗಳೂರು, ದೆಹಲಿ, ಲಕ್ನೋ, ಮುಂಬೈ, ಅಹಮದಾಬಾದ್ ಮತ್ತು ಜೈಪುರ ಸೇರಿದಂತೆ 6 ಸ್ಥಳಗಳಲ್ಲಿ ನಡೆಸಲು ಬಿಸಿಸಿಐ ನಿರ್ಧರಿಸಿದೆ. ಈ ಅವಧಿಯಲ್ಲಿ, ಉಳಿದ ಲೀಗ್ ಪಂದ್ಯಗಳನ್ನು ಮೇ 17 ರಿಂದ ಮೇ 25 ರವರೆಗೆ ಆಡಲಾಗುವುದು, ಇದರಲ್ಲಿ 2 ಡಬಲ್ ಹೆಡರ್‌ ಪಂದ್ಯಗಳು ಸೇರಿವೆ. ಅಂದರೆ ಒಂದೇ ದಿನ 2 ಪಂದ್ಯಗಳು ನಡೆಯಲಿದ್ದು, ಈ ಡಬಲ್ ಹೆಡರ್ ಪಂದ್ಯಗಳನ್ನು ಎರಡು ಭಾನುವಾರಗಳಂದು ನಡೆಸಲು ತೀರ್ಮಾನಿಸಲಾಗಿದೆ. ಇದಲ್ಲದೆ, ಪ್ಲೇಆಫ್ ಪಂದ್ಯಗಳು ಮೇ 29 ರಿಂದ ಪ್ರಾರಂಭವಾಗಲಿದ್ದು, ಫೈನಲ್ ಪಂದ್ಯ ಜೂನ್ 3 ರಂದು ನಡೆಯಲಿದೆ. ಆದರೆ ಲೀಗ್ ಪಂದ್ಯಗಳಿಗೆ ಸ್ಥಳಗಳನ್ನು ಪ್ರಕಟಿಸಿರುವ ಬಿಸಿಸಿಐ ಪ್ಲೇಆಫ್ ಪಂದ್ಯಗಳ ಸ್ಥಳಗಳನ್ನು ಇನ್ನೂ ನಿರ್ಧರಿಸಿಲ್ಲ. ಆದಾಗ್ಯೂ ಪ್ಲೇ ಆಫ್ ಪಂದ್ಯಗಳ ದಿನಾಂಕ ನಿಗದಿಯಾಗಿದ್ದು, ಕ್ವಾಲಿಫೈಯರ್ 1- ಮೇ 29 ರಂದು, ಎಲಿಮಿನೇಟರ್- ಮೇ 30 ರಮದು, ಕ್ವಾಲಿಫೈಯರ್ 2- ಜೂನ್ 1 ರಂದು ಮತ್ತು ಫೈನಲ್ ಪಂದ್ಯ ಜೂನ್ 3 ರಂದು ನಡೆಯಲಿದೆ.

ಉಳಿದ ಪಂದ್ಯಗಳ ವೇಳಾಪಟ್ಟಿ

ದಿನಾಂಕ ಮುಖಾಮುಖಿ ಸಮಯ ಸ್ಥಳ
17-05-2025 ಆರ್​ಸಿಬಿ vs ಕೆಕೆಆರ್ ಸಂಜೆ 7:30 ಬೆಂಗಳೂರು
18-05-2025 ರಾಜಸ್ಥಾನ vs ಪಂಜಾಬ್ ಮಧ್ಯಾಹ್ನ 3:30 ಜೈಪುರ
18-05-2025 ಡೆಲ್ಲಿ vs ಗುಜರಾತ್ ಸಂಜೆ 7:30 ದೆಹಲಿ
19-05-2025 ಲಕ್ನೋ vs ಹೈದರಾಬಾದ್ ಸಂಜೆ 7:30 ಲಕ್ನೋ
20-05-2025 ಸಿಎಸ್​ಕೆ vs ರಾಜಸ್ಥಾನ್ ಸಂಜೆ 7:30 ದೆಹಲಿ
21-05-2025 ಮುಂಬೈ vs ಡೆಲ್ಲಿ ಸಂಜೆ 7:30 ಮುಂಬೈ
22-05-2025 ಗುಜರಾತ್ vs ಲಕ್ನೋ ಸಂಜೆ 7:30 ಅಹಮದಾಬಾದ್
23-05-2025 ಆರ್​ಸಿಬಿ vs ಹೈದರಾಬಾದ್ ಸಂಜೆ 7:30 ಬೆಂಗಳೂರು
24-05-2025 ಪಂಜಾಬ್ vs ಡೆಲ್ಲಿ ಸಂಜೆ 7:30 ಜೈಪುರ
25-05-2025 ಗುಜರಾತ್ vs ಸಿಎಸ್​ಕೆ ಮಧ್ಯಾಹ್ನ 3:30 ಅಹಮದಾಬಾದ್
25-05-2025 ಹೈದರಾಬಾದ್ vs ಕೋಲ್ಕತ್ತಾ ಸಂಜೆ 7:30 ದೆಹಲಿ
26-05-2025 ಪಂಜಾಬ್ vs ಮುಂಬೈ ಸಂಜೆ 7:30 ಜೈಪುರ
27-05-2025 ಲಕ್ನೋ vs ಆರ್​ಸಿಬಿ ಸಂಜೆ 7:30 ಲಕ್ನೋ
29-05-2025 ಕ್ವಾಲಿಫೈಯರ್ 1 ಸಂಜೆ 7:30 ಸ್ಥಳ ನಿಗದಿ ಪಡಿಸಿಲ್ಲ
30-05-2025 ಎಲಿಮಿನೇಟರ್ ಸಂಜೆ 7:30 ಸ್ಥಳ ನಿಗದಿ ಪಡಿಸಿಲ್ಲ
01-06-2025 ಕ್ವಾಲಿಫೈಯರ್ 2 ಸಂಜೆ 7:30 ಸ್ಥಳ ನಿಗದಿ ಪಡಿಸಿಲ್ಲ
03-06-2025 ಫೈನಲ್ ಪಂದ್ಯ ಸಂಜೆ 7:30 ಸ್ಥಳ ನಿಗದಿ ಪಡಿಸಿಲ್ಲ

Published On - 2:47 pm, Fri, 16 May 25