IPL 2025: 5+1, ಐವರಿಗೆ 75 ಕೋಟಿ..! ಪರ್ಸ್​ ಗಾತ್ರ ಹೆಚ್ಚಳ; ಮೆಗಾ ಹರಾಜಿಗೂ ಮುನ್ನ ಬಿಸಿಸಿಐ ಮಹತ್ವದ ನಿರ್ಧಾರ

IPL 2025: ಬೆಂಗಳೂರಿನಲ್ಲಿ ಐಪಿಎಲ್ ಆಡಳಿತ ಮಂಡಳಿ ಸಭೆ ನಡೆದಿದ್ದು, ಅದರಲ್ಲಿ ಧಾರಣ ನೀತಿಯ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ. ಮಂಡಳಿಯು ಈ ಹಿಂದೆ ಜುಲೈನಲ್ಲಿ ಎಲ್ಲಾ 10 ಫ್ರಾಂಚೈಸಿ ಮಾಲೀಕರೊಂದಿಗೆ ಈ ವಿಷಯದ ಬಗ್ಗೆ ಸಭೆ ನಡೆಸಿತ್ತು. ಅಲ್ಲಿ ಮಂಡಳಿಯು ಫ್ರಾಂಚೈಸಿ ಮಾಲೀಕರಿಂದ ಧಾರಣಕ್ಕೆ ಸಂಬಂಧಿಸಿದಂತೆ ಅಭಿಪ್ರಾಯಗಳನ್ನು ಸ್ವೀಕರಿಸಿತ್ತು.

IPL 2025: 5+1, ಐವರಿಗೆ 75 ಕೋಟಿ..! ಪರ್ಸ್​ ಗಾತ್ರ ಹೆಚ್ಚಳ; ಮೆಗಾ ಹರಾಜಿಗೂ ಮುನ್ನ ಬಿಸಿಸಿಐ ಮಹತ್ವದ ನಿರ್ಧಾರ
ಐಪಿಎಲ್ ಹರಾಜು
Follow us
|

Updated on:Sep 28, 2024 | 10:39 PM

2025 ರ ಐಪಿಎಲ್​ಗೂ ಮುನ್ನ ಮೆಗಾ ಹರಾಜು ನಡೆಯಲ್ಲಿದೆ. ಇದರರ್ಥ ಎಲ್ಲಾ ತಂಡಗಳು ಕೆಲವೇ ಕೆಲವು ಆಟಗಾರರನ್ನು ತಂಡದಲ್ಲಿ ಉಳಿಸಿಕೊಂಡು ಮಿಕ್ಕವರನ್ನು ತಂಡದಿಂದ ಬಿಡುಗಡೆ ಮಾಡಬೇಗಾಕಿದೆ. ಅದರಂತೆ ಈ ಹಿಂದೆ ಪ್ರತಿ ತಂಡಗಳು ನಾಲ್ಕು ಆಟಗಾರರನ್ನು ತಂಡದಲ್ಲಿ ಉಳಿಸಿಕೊಳ್ಳಬಹುದಾಗಿತ್ತು. ಆದರೆ ಮುಂದಿನ ಐಪಿಎಲ್​ ಹರಾಜಿಗೂ ಮುನ್ನ ಮಹತ್ವದ ನಿರ್ಧಾರ ತೆಗೆದುಕೊಂಡಿರುವ ಬಿಸಿಸಿಐ, ಹರಾಜಿಗೂ ಮುನ್ನ ತಂಡದಲ್ಲಿ ಉಳಿಸಿಕೊಳ್ಳುವ ಆಟಗಾರರ ಸಂಖ್ಯೆಯನ್ನು ನಾಲ್ಕರಿಂದ ಇದೀಗ ಐದಕ್ಕೆ ಏರಿಸಿದೆ. ಇದಲ್ಲದೆ ಒಬ್ಬ ಆಟಗಾರರನ್ನು ರೈಟ್ ಟು ಮ್ಯಾಚ್ ಅಂದರೆ ಆರ್ ಟಿಎಂ ಆಯ್ಕೆಯ ಮೂಲಕ ಉಳಿಸಿಕೊಳ್ಳಲು ಅನುಮತಿ ನೀಡಿದೆ. ಅಂದರೆ ಪ್ರತಿ ಫ್ರಾಂಚೈಸಿಯೂ ಇದೀಗ ತನ್ನ ತಂಡದಲ್ಲಿ ಒಟ್ಟು 6 ಆಟಗಾರರನ್ನು ಉಳಿಸಿಕೊಳ್ಳಬಹುದಾಗಿದೆ. ಆದರೆ ಬಿಸಿಸಿಐ ಇಲ್ಲೊಂದು ಟ್ವಿಸ್ಟ್ ಇಟ್ಟಿದೆ.

ಐವರಿಗೆ 75 ಕೋಟಿ

ಬಿಸಿಸಿಐ ಹೇಳಿರುವ ಪ್ರಕಾರ ಇದೀಗ ಪ್ರತಿ ಫ್ರಾಂಚೈಸಿಗಳು ತಮ್ಮ ತಂಡದಲ್ಲಿ ಐವರು ಆಟಗಾರ ಉಳಿಸಿಕೊಳ್ಳಬಹುದಾಗಿದೆ. ಆದರೆ ಬಿಸಿಸಿಐ ಇದಕ್ಕೊಂದು ಷರತ್ತು ವಿಧಿಸಿದೆ. ಅದೆನೆಂದರೆ ಯಾವ ಫ್ರಾಂಚೈಸಿ ಐದು ಆಟಗಾರರನ್ನು ತಂಡದಲ್ಲಿ ಉಳಿಸಿಕೊಳ್ಳಲು ಬಯುಸತ್ತದೋ, ಆ ಫ್ರಾಂಚೈಸಿ ಈ ಐದು ಆಟಗಾರರಿಗೆ ಬರೋಬ್ಬರಿ 75 ಕೋಟಿ ರೂ.ಗಳನ್ನು ವ್ಯಯಿಸಬೇಕಿದೆ. ಅಂದರೆ ಈಗಿನ ನಿಯಮದ ಪ್ರಕಾರ, ಪ್ರತಿ ಫ್ರಾಂಚೈಸಿಗೆ ಬಿಸಿಸಿಐನಿಂದ 100 ಕೋಟಿ ರೂ. ಹಣ ಸಿಗುತ್ತಿದೆ. ಈ 100 ಕೋಟಿ ರೂಗಳಲ್ಲಿ ಬರೋಬ್ಬರಿ 75 ಕೋಟಿ ರೂಗಳನ್ನು ಕೇವಲ 5 ಆಟಗಾರರಿಗೆ ವ್ಯಯಿಸಬೇಕಿದೆ.

ಸೆಪ್ಟೆಂಬರ್ 28 ರಂದು ಅಂದರೆ ಶನಿವಾರದಂದು ಬೆಂಗಳೂರಿನಲ್ಲಿ ಐಪಿಎಲ್ ಆಡಳಿತ ಮಂಡಳಿ ಸಭೆ ನಡೆದಿದ್ದು, ಅದರಲ್ಲಿ ಧಾರಣ ನೀತಿಯ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ. ಮಂಡಳಿಯು ಈ ಹಿಂದೆ ಜುಲೈನಲ್ಲಿ ಎಲ್ಲಾ 10 ಫ್ರಾಂಚೈಸಿ ಮಾಲೀಕರೊಂದಿಗೆ ಈ ವಿಷಯದ ಬಗ್ಗೆ ಸಭೆ ನಡೆಸಿತ್ತು. ಅಲ್ಲಿ ಮಂಡಳಿಯು ಫ್ರಾಂಚೈಸಿ ಮಾಲೀಕರಿಂದ ಧಾರಣಕ್ಕೆ ಸಂಬಂಧಿಸಿದಂತೆ ಅಭಿಪ್ರಾಯಗಳನ್ನು ಸ್ವೀಕರಿಸಿತ್ತು. ಇದೀಗ ಸುಮಾರು 2 ತಿಂಗಳ ಬಳಿಕ ಆಡಳಿತ ಮಂಡಳಿ ಸಭೆಯಲ್ಲಿ ಈ ಕುರಿತು ಅಂತಿಮ ನಿರ್ಧಾರ ಕೈಗೊಂಡು ಫ್ರಾಂಚೈಸಿಗಳಿಗೆ ಸಿಹಿ ಸುದ್ದಿ ನೀಡಿದೆ.

ಒಟ್ಟು 6 ಆಟಗಾರರನ್ನು ಉಳಿಸಿಕೊಳ್ಳಬಹುದು

ವರದಿಗಳ ಪ್ರಕಾರ, ಇದೀಗ ರೈಟ್ ಮ್ಯಾಚ್ ಕಾರ್ಡ್​ ಸೇರಿದಂತೆ ಒಟ್ಟು 6 ಆಟಗಾರರನ್ನು ತಂಡದಲ್ಲಿ ಉಳಿಸಿಕೊಳ್ಳಲು ಬಿಸಿಸಿಐ ಅನುಮತಿ ನೀಡಿದೆ. ಇದಕ್ಕೂ ಮುನ್ನ ಬಿಸಿಸಿಐ 2018 ರ ಮೆಗಾ ಹರಾಜಿನಲ್ಲಿ 3 ಆಟಗಾರರನ್ನು ಮತ್ತು ರೈಟ್ ಟು ಮ್ಯಾಚ್ ಮೂಲಕ ಇಬ್ಬರು ಆಟಗಾರರನ್ನು ತಂಡದಲ್ಲಿ ಉಳಿಸಿಕೊಳ್ಳಲು ಅನುಮತಿ ನೀಡಿತ್ತು. ಆದರೆ 2022 ರ ಮೆಗಾ ಹರಾಜಿನಲ್ಲಿ ಈ ನಿಯಮವನ್ನು ಬದಲಿಸಿದ್ದ ಬಿಸಿಸಿಐ, ಪ್ರತಿ ತಂಡಗಳು ಕೇವಲ 4 ಆಟಗಾರರನ್ನು ಉಳಿಸಿಕೊಳ್ಳುವಂತೆ ನಿಯಮ ರೂಪಿಸಿತ್ತು. ಇದರ ಜೊತೆಗೆ ರೈಟ್ ಮ್ಯಾಚ್ ಕಾರ್ಡ್​ ನಿಯಮವನ್ನು ತೆಗೆದು ಹಾಕಿತ್ತು. ಆದರೀಗ ರೈಟ್ ಮ್ಯಾಚ್ ಕಾರ್ಡ್​ ನಿಯಮವನ್ನು ಮತ್ತೆ ಅಸ್ತಿತ್ವಕ್ಕೆ ತಂದಿದ್ದು, ಐವರು ಆಟಗಾರರನ್ನು ಉಳಿಸಿಕೊಳ್ಳುವುದಕ್ಕೂ ಅನುಮತಿ ನೀಡಿದೆ.

ಯಾರ್ಯಾರಿಗೆ ಎಷ್ಟು ಕೊಡಬೇಕು

ಅಷ್ಟೇ ಅಲ್ಲ. ಬಿಸಿಸಿಐ ಉಳಿಸಿಕೊಳ್ಳಬೇಕಾದ ಆಟಗಾರರ ವೇತನದ ಸ್ಲ್ಯಾಬ್ ಅನ್ನು ಸಹ ನಿಗದಿಪಡಿಸಿದೆ. ಅದರಂತೆ ಫ್ರಾಂಚೈಸಿ ತಾನು ಉಳಿಸಿಕೊಳ್ಳಲು ಬಯಸುವ ಮೊದಲ ಆಟಗಾರನಿಗೆ ಬರೋಬ್ಬರಿ 18 ಕೋಟಿ ರೂ. ಗಳನ್ನು ವೇತನವನ್ನಾಗಿ ನೀಡಬೇಕು. ಎರಡನೇ ಆಟಗಾರನಿಗೆ 14 ಕೋಟಿ ರೂ. ಮತ್ತು ಮೂರನೇ ಆಟಗಾರನಿಗೆ 11 ಕೋಟಿ ರೂ. ನೀಡಬೇಕು. ಯಾವುದೇ ಫ್ರಾಂಚೈಸಿ ನಾಲ್ಕನೇ ಮತ್ತು ಐದನೇ ಆಟಗಾರರನ್ನು ತಂಡದಲ್ಲಿ ಉಳಿಸಿಕೊಳ್ಳಲು ಬಯಸಿದರೆ ಅದು ಹೆಚ್ಚು ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಅಂದರೆ, ಫ್ರಾಂಚೈಸಿ ಉಳಿಸಿಕೊಳ್ಳುವ 4ನೇ ಆಟಗಾರನಿಗೆ ಮೊದಲ ಆಟಗಾರನಂತೆ 18 ಕೋಟಿ ರೂಗಳನ್ನು ನೀಡಬೇಕು. ಹಾಗೆಯೇ ಫ್ರಾಂಚೈಸಿ ಉಳಿಸಿಕೊಳ್ಳಲು ಬಯಸುವ ಐದನೇ ಆಟಗಾರನಿಗೂ 14 ಕೋಟಿ ರೂ. ವೇತನ ನೀಡಬೇಕು.

ಪರ್ಸ್​ ಗಾತ್ರ ಹೆಚ್ಚಳ

ಇಷ್ಟೇ ಅಲ್ಲ, ಈ ಬಾರಿಯ ಆಡಳಿತ ಮಂಡಳಿಯು ಫ್ರಾಂಚೈಸಿಯ ಪರ್ಸ್ ಗಾತ್ರದಲ್ಲೂ ಸಹ ಹೆಚ್ಚಳ ಮಾಡಿದೆ. ಅದರಂತೆ ಮುಂದಿನ ಆವೃತ್ತಿಯಿಂದ ಪ್ರತಿಯೊಂದು ಫ್ರಾಂಚೈಸಿಗಳ ಪರ್ಸ್​ ಗಾತ್ರ 100 ಕೋಟಿಯಿಂದ 120 ಕೋಟಿಗೆ ಹೆಚ್ಚಳವಾಗಲಿದೆ. ಆದಾಗ್ಯೂ, ಉಳಿಸಿಕೊಂಡಿರುವ ಆಟಗಾರರ ಮೊತ್ತವನ್ನು ಈ ಹರಾಜು ಪರ್ಸ್‌ನಿಂದ ಕಡಿತಗೊಳಿಸಲಾಗುತ್ತದೆ. ಈ ರೀತಿಯಾಗಿ, ಫ್ರಾಂಚೈಸಿಯು ಎಲ್ಲಾ 5 ಆಟಗಾರರನ್ನು ಉಳಿಸಿಕೊಂಡರೆ, ಅದರ ಹರಾಜು ಪರ್ಸ್‌ನ 120 ಕೋಟಿ ರೂಪಾಯಿಗಳಿಂದ ಈಗಾಗಲೇ 75 ಕೋಟಿ ರೂಪಾಯಿಗಳನ್ನು ಕಡಿತಗೊಳಿಸಲಾಗುತ್ತದೆ. ಇನ್ನುಳಿದ 45 ಕೋಟಿ ರೂಗಳಲ್ಲೇ ಉಳಿದ 20 ಆಟಗಾರರನ್ನು ಖರೀದಿಸಬೇಕಾಗುತ್ತದೆ.

ಧಾರಣ ನೀತಿಯಲ್ಲಿ ಮಹತ್ವದ ಬದಲಾವಣೆ

ಈ 120 ಕೋಟಿ ರೂಪಾಯಿಗಳ ಹೊರತಾಗಿ, ಬಿಸಿಸಿಐ 12.60 ಕೋಟಿ ರೂಪಾಯಿಗಳನ್ನು ಮೀಸಲಿಡಲು ಫ್ರಾಂಚೈಸಿಗಳಿಗೆ ಆದೇಶಿಸಿದೆ.  ಏಕೆಂದರೆ ಮುಂಬರುವ ಐಪಿಎಲ್‌ನಿಂದ ಪಂದ್ಯವನ್ನಾಡುವ ಆಟಗಾರರಿಗೆ 7.5 ಲಕ್ಷ ರೂಪಾಯಿಗಳನ್ನು ಪಂದ್ಯ ಶುಲ್ಕವನ್ನಾಗಿ ನೀಡಲು ತೀರ್ಮಾನಿಸಲಾಗಿದೆ. ಈ ಮೂಲಕ ಆಟಗಾರನೊಬ್ಬ ಇಡೀ ಆವೃತ್ತಿಯಲ್ಲಿ ಎಲ್ಲ 14 ಪಂದ್ಯಗಳನ್ನು ಆಡಿದರೆ ಹೆಚ್ಚುವರಿಯಾಗಿ 1.05 ಕೋಟಿ ರೂ. ಸಂಭಾವನೆ ಪಡೆಯಲಿದ್ದಾನೆ. ಅಲ್ಲದೆ, ಇದೇ ಮೊದಲ ಬಾರಿಗೆ ಧಾರಣ ನೀತಿಯಲ್ಲಿ ಮಹತ್ವದ ಬದಲಾವಣೆ ಮಾಡಿರುವ ಬಿಸಿಸಿಐ,  ಭಾರತೀಯ ಅಥವಾ ವಿದೇಶಿ ಆಟಗಾರರನ್ನು ಉಳಿಸಿಕೊಳ್ಳುವ ಮಿತಿಯನ್ನು ಸಹ ತೆಗೆದುಹಾಕಿದೆ. ಅಂದರೆ, ಫ್ರಾಂಚೈಸಿ ಬಯಸಿದಲ್ಲಿ, ಐವರು ಭಾರತೀಯ ಆಟಗಾರರನ್ನೇ ಉಳಿಸಿಕೊಳ್ಳಬಹುದು ಅಥವಾ ಐವರು ವಿದೇಶಿ ಆಟಗಾರರನ್ನು ಬೇಕಾದರೂ ಉಳಿಸಿಕೊಳ್ಳಬಹುದು.  ಆದರೆ ಕಳೆದ ಮೆಗಾ ಹರಾಜಿನಲ್ಲಿ, 4 ಆಟಗಾರರಲ್ಲಿ ಗರಿಷ್ಠ 3 ಭಾರತೀಯರು ಅಥವಾ 2 ವಿದೇಶಿ ಆಟಗಾರರನ್ನು ತಂಡದಲ್ಲಿ ಉಳಿಸಿಕೊಳ್ಳಲು ಅನುಮತಿ ನೀಡಲಾಗಿತ್ತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:26 pm, Sat, 28 September 24

ಉಡುಪಿಯ ಹೆಬ್ರಿಯಲ್ಲಿ ಮೇಘಸ್ಫೋಟ; ಭೀಕರ ಪ್ರವಾಹ ಸೃಷ್ಟಿ
ಉಡುಪಿಯ ಹೆಬ್ರಿಯಲ್ಲಿ ಮೇಘಸ್ಫೋಟ; ಭೀಕರ ಪ್ರವಾಹ ಸೃಷ್ಟಿ
‘ಡೆವಿಲ್​’ ಎದುರು ‘ಕರ್ನಾಟಕದ ಅಳಿಯ’ ಸಿನಿಮಾ ಬರೋದು ಫಿಕ್ಸ್: ಪ್ರಥಮ್
‘ಡೆವಿಲ್​’ ಎದುರು ‘ಕರ್ನಾಟಕದ ಅಳಿಯ’ ಸಿನಿಮಾ ಬರೋದು ಫಿಕ್ಸ್: ಪ್ರಥಮ್
ಉತ್ತರ ಕನ್ನಡ: ಮುರುಡೇಶ್ವರ ಕಡಲತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧ
ಉತ್ತರ ಕನ್ನಡ: ಮುರುಡೇಶ್ವರ ಕಡಲತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧ
ಬಿಗ್​ಬಾಸ್​ನಲ್ಲಿ ಮನೆಯಲ್ಲಿ ಯಾರು ಹಿಟ್? ಫ್ಲಾಪ್ ಆಗಿದ್ದು ಯಾರು?
ಬಿಗ್​ಬಾಸ್​ನಲ್ಲಿ ಮನೆಯಲ್ಲಿ ಯಾರು ಹಿಟ್? ಫ್ಲಾಪ್ ಆಗಿದ್ದು ಯಾರು?
ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಚಿವ ವಿ ಸೋಮಣ್ಣ
ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಚಿವ ವಿ ಸೋಮಣ್ಣ
ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ದರಲ್ಲ ಈಗೇನಾಯ್ತು: ಹೆಚ್​ಡಿಕೆ
ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ದರಲ್ಲ ಈಗೇನಾಯ್ತು: ಹೆಚ್​ಡಿಕೆ
ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು
ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು
‘ಬಿಗ್​ಬಾಸ್ ಏನು ಅಂಗಡಿಯಲ್ಲಿ ಸಿಗುವ ಒಳ ಉಡುಪಾ ಖರೀದಿ ಮಾಡೋಕೆ’
‘ಬಿಗ್​ಬಾಸ್ ಏನು ಅಂಗಡಿಯಲ್ಲಿ ಸಿಗುವ ಒಳ ಉಡುಪಾ ಖರೀದಿ ಮಾಡೋಕೆ’
ಸಿದ್ದರಾಮಯ್ಯ ವಾಹನಕ್ಕೆ ವಿರುದ್ಧ ದಿಕ್ಕಿನಲ್ಲಿ ಬಂದ ಜನಾರ್ದನ ರೆಡ್ಡಿ ಕಾರು
ಸಿದ್ದರಾಮಯ್ಯ ವಾಹನಕ್ಕೆ ವಿರುದ್ಧ ದಿಕ್ಕಿನಲ್ಲಿ ಬಂದ ಜನಾರ್ದನ ರೆಡ್ಡಿ ಕಾರು
ಅಕ್ಟೋಬರ್ 07 ರಿಂದ 13 ರವರೆಗಿನ ವಾರ ಭವಿಷ್ಯ ತಿಳಿಯಿರಿ
ಅಕ್ಟೋಬರ್ 07 ರಿಂದ 13 ರವರೆಗಿನ ವಾರ ಭವಿಷ್ಯ ತಿಳಿಯಿರಿ