AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2025: ಆರ್​ಸಿಬಿಗೆ ಲಕ್ನೋ ಸವಾಲು; ಗೆದ್ದರೆ ಪ್ಲೇಆಫ್‌ ಟಿಕೆಟ್ ಖಚಿತ

RCB vs LSG IPL 2025: ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವಿನ ಐಪಿಎಲ್ 2025ರ ಹೈ-ವೋಲ್ಟೇಜ್ ಪಂದ್ಯ ಮೇ 9 ರಂದು ಲಕ್ನೋದ ಏಕಾನಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಎರಡೂ ತಂಡಗಳು ಬಲಿಷ್ಠ ಬ್ಯಾಟಿಂಗ್ ಹೊಂದಿದ್ದು, ಹೆಚ್ಚಿನ ಸ್ಕೋರ್ ನಿರೀಕ್ಷಿಸಬಹುದು. ಆರ್‌ಸಿಬಿಗೆ ಗೆಲುವು ಪ್ಲೇಆಫ್‌ಗೆ ಖಾತರಿ ನೀಡಿದರೆ, ಲಕ್ನೋಗೆ ಸೋಲು ಪ್ಲೇಆಫ್ ಕನಸು ಕೊಲ್ಲುತ್ತದೆ. ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ನೋಡಬಹುದು.

IPL 2025: ಆರ್​ಸಿಬಿಗೆ ಲಕ್ನೋ ಸವಾಲು; ಗೆದ್ದರೆ ಪ್ಲೇಆಫ್‌ ಟಿಕೆಟ್ ಖಚಿತ
Rcb Vs Lsg
ಪೃಥ್ವಿಶಂಕರ
|

Updated on: May 08, 2025 | 8:40 PM

Share

ಐಪಿಎಲ್ 2025 (IPL 2025) ರ ಹೈ-ವೋಲ್ಟೇಜ್ ಪಂದ್ಯ ಅಗ್ರ ತಂಡಗಳಲ್ಲಿ ಒಂದಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಪ್ಲೇಆಫ್‌ ರೇಸ್​ನಲ್ಲಿ ಜೀವಂತವಾಗಿರಲು ಹೆಣಗಾಡುತ್ತಿರುವ ಲಕ್ನೋ ಸೂಪರ್ ಜೈಂಟ್ಸ್ (LSG) ನಡುವೆ ಲಕ್ನೋದ ಏಕಾನಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಎರಡೂ ತಂಡಗಳು ಬಲಿಷ್ಠ ಬ್ಯಾಟಿಂಗ್ ಕ್ರಮಾಂಕವನ್ನು ಹೊಂದಿರುವುದರಿಂದ ಈ ಪಂದ್ಯವು ಹೆಚ್ಚಿನ ಸ್ಕೋರಿಂಗ್ ಆಗುವ ನಿರೀಕ್ಷೆಯಿದೆ. ಒಂದೆಡೆ ಆರ್​ಸಿಬಿ ಸತತ ಗೆಲುವುಗಳೊಂದಿಗೆ ಬರುತ್ತಿದ್ದರೆ, ಇತ್ತ ಲಕ್ನೋ ತಂಡ ಸೋಲಿನೊಂದಿಗೆ ಪಂದ್ಯಕ್ಕೆ ಕಾಲಿಡುತ್ತಿದೆ. ಈ ಪಂದ್ಯವನ್ನು ಆರ್​ಸಿಬಿ ಗೆದ್ದರೆ ಅದು ಪ್ಲೇಆಫ್‌ಗೆ ತನ್ನ ಸ್ಥಾನವನ್ನು ಖಚಿತಪಡಿಸಿಕೊಳ್ಳಲಿದೆ. ಇತ್ತ ಲಕ್ನೋ ಸೋತರೆ ಅದರ ಪ್ಲೇಆಫ್‌ ಕನಸು ಭಗ್ನವಾಗಲಿದೆ.

ಲಕ್ನೋ ಹಾಗೂ ಆರ್​ಸಿಬಿ ನಡುವಿನ ಐಪಿಎಲ್ 59ನೇ ಪಂದ್ಯ ಯಾವಾಗ ನಡೆಯಲಿದೆ?

ಲಕ್ನೋ ಹಾಗೂ ಆರ್​ಸಿಬಿ ನಡುವಿನ ಐಪಿಎಲ್ 59ನೇ ಪಂದ್ಯ ಮೇ 9 ರಂದು ನಡೆಯಲಿದೆ.

ಲಕ್ನೋ ಹಾಗೂ ಆರ್​ಸಿಬಿ ನಡುವಿನ ಐಪಿಎಲ್ 59ನೇ ಪಂದ್ಯ ಎಲ್ಲಿ ನಡೆಯಲಿದೆ?

ಲಕ್ನೋ ಹಾಗೂ ಆರ್​ಸಿಬಿ ನಡುವಿನ ಐಪಿಎಲ್ 59ನೇ ಪಂದ್ಯ ಲಕ್ನೋದ ಏಕಾನಾ ಕ್ರೀಡಾಂಗಣದಲ್ಲಿ ನಡೆಯಲಿದೆ

ಲಕ್ನೋ ಹಾಗೂ ಆರ್​ಸಿಬಿ ನಡುವಿನ ಐಪಿಎಲ್ 59ನೇ ಪಂದ್ಯ ಎಷ್ಟು ಗಂಟೆಗೆ ಆರಂಭವಾಗಲಿದೆ?

ಲಕ್ನೋ ಹಾಗೂ ಆರ್​ಸಿಬಿ ನಡುವಿನ ಐಪಿಎಲ್ 59ನೇ ಪಂದ್ಯ ರಾತ್ರಿ 7:30 ಕ್ಕೆ ಆರಂಭವಾಗಲಿದೆ.

ಲಕ್ನೋ ಹಾಗೂ ಆರ್​ಸಿಬಿ ನಡುವಿನ ಐಪಿಎಲ್ 59ನೇ ಪಂದ್ಯದ ನೇರಪ್ರಸಾರ ವೀಕ್ಷಿಸುವುದು ಹೇಗೆ?

ಲಕ್ನೋ ಹಾಗೂ ಆರ್​ಸಿಬಿ ನಡುವಿನ ಐಪಿಎಲ್ 59ನೇ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್​ನ ವಿವಿದ ಚಾನೆಲ್​ಗಳಲ್ಲಿ ವೀಕ್ಷಿಸಬಹುದಾಗಿದೆ.

ಹೆಡ್-ಟು-ಹೆಡ್ ರೆಕಾರ್ಡ್​

ಲಕ್ನೋ ಸೂಪರ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಹೆಡ್-ಟು-ಹೆಡ್ ಅಂಕಿಅಂಶಗಳ ಬಗ್ಗೆ ಹೇಳುವುದಾದರೆ, ಈ ಎರಡೂ ತಂಡಗಳ ನಡುವೆ ಇಲ್ಲಿಯವರೆಗೆ ಒಟ್ಟು 5 ಪಂದ್ಯಗಳು ನಡೆದಿವೆ. ಇದರಲ್ಲಿ ಇಬ್ಬರ ನಡುವೆ ಸಮಾನ ಪೈಪೋಟಿ ಕಂಡುಬಂದಿದೆ. ಆದಾಗ್ಯೂ ಆರ್​ಸಿಬಿ ಮೇಲುಗೈ ಸಾಧಿಸಿದ್ದು ಆಡಿರುವ 5 ಪಂದ್ಯಗಳಲ್ಲಿ 3 ಪಂದ್ಯಗಳನ್ನು ಗೆದ್ದುಕೊಂಡಿದೆ. ಉಳಿದಿರುವ 2 ಪಂದ್ಯಗಳನ್ನು ಲಕ್ನೋ ಗೆದ್ದುಕೊಂಡಿದೆ.

IPL 2025: ಆರ್​​ಸಿಬಿಗೆ ಆಘಾತ; ಟೂರ್ನಿಯಿಂದ ಹೊರಬಿದ್ದ ಪಡಿಕ್ಕಲ್..! ಬದಲಿಯಾಗಿ ಬಂದ ಮತ್ತೊಬ್ಬ ಕನ್ನಡಿಗ

ಉಭಯ ತಂಡಗಳು

ಲಕ್ನೋ ತಂಡ: ಐಡೆನ್ ಮಾರ್ಕ್ರಾಮ್, ನಿಕೋಲಸ್ ಪೂರನ್, ರಿಷಭ್ ಪಂತ್ (ನಾಯಕ), ಅಬ್ದುಲ್ ಸಮದ್, ಆಯುಷ್ ಬಡೋನಿ, ಡೇವಿಡ್ ಮಿಲ್ಲರ್, ಆಕಾಶ್ ಮಹಾರಾಜ್ ಸಿಂಗ್, ದಿಗ್ವೇಶ್ ಸಿಂಗ್ ರಾಠಿ, ಅವೇಶ್ ಖಾನ್, ಮಯಾಂಕ್ ಯಾದವ್, ಪ್ರಿನ್ಸ್ ಯಾದವ್, ಮಿಚೆಲ್ ಮಾರ್ಷ್, ರವಿ ಬಿಷ್ಣೋಯ್, ಯುವರಾಜ್ ಚೌಧರಿ, ಶಹಬಾಜ್ ಅಹ್ಮದ್, ಹಿಮ್ಮತ್ ಸಿಂಗ್, ಮ್ಯಾಥ್ಯೂ ಬ್ರೀಟ್ಜ್ಕೆ, ಶಾರ್ದೂಲ್ ಠಾಕೂರ್, ಮಣಿಮಾರನ್ ಸಿದ್ಧಾರ್ಥ್, ಆರ್ಯನ್ ಜುಯಲ್, ಆರ್ ಎಸ್ ಹಂಗರ್ಗೇಕರ್, ಆಕಾಶ್ ದೀಪ್, ಶಮರ್ ಜೋಸೆಫ್, ಅರ್ಶಿನ್ ಕುಲಕರ್ಣಿ

ಆರ್​ಸಿಬಿ: ಜಾಕೋಬ್ ಬೆಥೆಲ್, ವಿರಾಟ್ ಕೊಹ್ಲಿ, ಮಯಾಂಕ್ ಅಗರ್ವಾಲ್, ರಜತ್ ಪಾಟಿದಾರ್ (ನಾಯಕ), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ರೊಮಾರಿಯೋ ಶೆಫರ್ಡ್, ಭುವನೇಶ್ವರ್ ಕುಮಾರ್, ಲುಂಗಿ ಎನ್‌ಗಿಡಿ, ಯಶ್ ದಯಾಲ್, ಸುಯಶ್ ಶರ್ಮಾ, ರಸಿಖ್ ದಾರ್ ಸಲಾಂ, ಮನೋಜ್ ಭಾಂಡಗೆ, ಲಿಯಾಮ್ ಲಿವಿಂಗ್‌ಸ್ಟೋನ್, ಸ್ವಪ್ನಿಲ್ ಸಿಂಗ್, ಜೋಶ್ ಹ್ಯಾಜಲ್‌ವುಡ್, ಫಿಲಿಪ್ ಸಾಲ್ಟ್, ನುವಾನ್ ತುಷಾರ, ಮೋಹಿತ್ ರಾಠಿ, ಸ್ವಸ್ತಿಕ್ ಚಿಕಾರಾ, ಅಭಿನಂದನ್ ಸಿಂಗ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಡ್ರ್ಯಾಗನ್ ಬೋಟಿಂಗ್​​: ಮೈಸೂರಿಗೆ ಬರುವವರು ಇದನ್ನು ಮಿಸ್ ಮಾಡ್ಬೇಡಿ
ಡ್ರ್ಯಾಗನ್ ಬೋಟಿಂಗ್​​: ಮೈಸೂರಿಗೆ ಬರುವವರು ಇದನ್ನು ಮಿಸ್ ಮಾಡ್ಬೇಡಿ
ಆಂಧ್ರದ ಶ್ರೀಕಾಕುಳಂನಲ್ಲಿ ರೈಲಿನ ಮೇಲೆ ಹತ್ತಿದ ಯುವಕನ ಹುಚ್ಚಾಟ
ಆಂಧ್ರದ ಶ್ರೀಕಾಕುಳಂನಲ್ಲಿ ರೈಲಿನ ಮೇಲೆ ಹತ್ತಿದ ಯುವಕನ ಹುಚ್ಚಾಟ
ಚಿಕ್ಕಮಗಳೂರು ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು: ವಿಡಿಯೋ ನೋಡಿ
ಚಿಕ್ಕಮಗಳೂರು ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು: ವಿಡಿಯೋ ನೋಡಿ
ಕುಡಿದ ಮತ್ತಿನಲ್ಲಿ ಮಗನನ್ನೇ ಕಡಿದ ಅಪ್ಪ, ಛಿದ್ರವಾದ ಕುಟುಂಬ
ಕುಡಿದ ಮತ್ತಿನಲ್ಲಿ ಮಗನನ್ನೇ ಕಡಿದ ಅಪ್ಪ, ಛಿದ್ರವಾದ ಕುಟುಂಬ
ಕೊಪ್ಪಳ ಅಜ್ಜನ ಜಾತ್ರೆ ದ್ರೋಣ್ ಕ್ಯಾಮೆರಾದಲ್ಲಿ ಕಂಡಿದ್ದು ಹೀಗೆ
ಕೊಪ್ಪಳ ಅಜ್ಜನ ಜಾತ್ರೆ ದ್ರೋಣ್ ಕ್ಯಾಮೆರಾದಲ್ಲಿ ಕಂಡಿದ್ದು ಹೀಗೆ
ಬಿಗ್ ಬಾಸ್ ಫಿನಾಲೆಗೆ ಗಿಲ್ಲಿ, ಧನುಷ್: ಭವಿಷ್ಯ ನುಡಿದ ಸ್ಪಂದನಾ ಸೋಮಣ್ಣ
ಬಿಗ್ ಬಾಸ್ ಫಿನಾಲೆಗೆ ಗಿಲ್ಲಿ, ಧನುಷ್: ಭವಿಷ್ಯ ನುಡಿದ ಸ್ಪಂದನಾ ಸೋಮಣ್ಣ
ಸಿದ್ದರಾಮಯ್ಯ ಹೊಸ ದಾಖಲೆ: ಬೆಂಬಲಿಗರಿಂದ ನಾಟಿ ಕೋಳಿ ಔತಣ
ಸಿದ್ದರಾಮಯ್ಯ ಹೊಸ ದಾಖಲೆ: ಬೆಂಬಲಿಗರಿಂದ ನಾಟಿ ಕೋಳಿ ಔತಣ
ಆಂಧ್ರದಲ್ಲಿ ಭಾರಿ ಅನಿಲ ಸೋರಿಕೆಯಾಗಿ ಬೆಂಕಿ ದುರಂತ; ಸ್ಥಳೀಯರ ಸ್ಥಳಾಂತರ
ಆಂಧ್ರದಲ್ಲಿ ಭಾರಿ ಅನಿಲ ಸೋರಿಕೆಯಾಗಿ ಬೆಂಕಿ ದುರಂತ; ಸ್ಥಳೀಯರ ಸ್ಥಳಾಂತರ
ಗವಿಸಿದ್ದೇಶ್ವರ ಮಹಾರಥೋತ್ಸವ: ಪುಣ್ಯ ಕ್ಷಣಕ್ಕೆ ಸಾಕ್ಷಿಯಾದ 5 ಲಕ್ಷ ಮಂದಿ
ಗವಿಸಿದ್ದೇಶ್ವರ ಮಹಾರಥೋತ್ಸವ: ಪುಣ್ಯ ಕ್ಷಣಕ್ಕೆ ಸಾಕ್ಷಿಯಾದ 5 ಲಕ್ಷ ಮಂದಿ
ಮೂಳೆ ಬಿದ್ದು ಹೋಗೋಕಿಂತ ಮೊದಲು ಮದುವೆ ಆಗು: ಗಿಲ್ಲಿ ಮೇಲೆ ಅಶ್ವಿನಿ ಆಕ್ರೋಶ
ಮೂಳೆ ಬಿದ್ದು ಹೋಗೋಕಿಂತ ಮೊದಲು ಮದುವೆ ಆಗು: ಗಿಲ್ಲಿ ಮೇಲೆ ಅಶ್ವಿನಿ ಆಕ್ರೋಶ