AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2025: ಟಾಸ್ ಸೋತರೂ ಪಂದ್ಯ ಗೆದ್ದ ಖುಷಿಯಲ್ಲಿ ಆರ್​ಸಿಬಿ ನಾಯಕ ರಜತ್ ಹೇಳಿದ್ದಿದು

RCB Breaks Losing Streak: ಸತತ ಮೂರು ಪಂದ್ಯಗಳ ಟಾಸ್ ಸೋಲಿನ ನಂತರ, ಆರ್‌ಸಿಬಿ ತನ್ನ ನಾಲ್ಕನೇ ಪಂದ್ಯದಲ್ಲೂ ಟಾಸ್ ಸೋತರೂ, ರಾಜಸ್ಥಾನ ವಿರುದ್ಧ ರೋಮಾಂಚಕ ಗೆಲುವು ಸಾಧಿಸಿತು. ಪಂದ್ಯದ ನಂತರ ಮಾತನಾಡಿದ ಆರ್​ಸಿಬಿ ನಾಯಕ ರಜತ್ ಪಾಟಿದರ್ ಈ ಗೆಲುವಿನ ಶ್ರೇಯ ಬೌಲರ್​ಗಳಿಗೆ ಸಲ್ಲಬೇಕು ಎಂದರು. ಹಾಗೆಯೇ ರಾಜಸ್ಥಾನ್ ಆರಂಭಿಕರ ಬಗ್ಗೆಯೂ ಮೆಚ್ಚುಗೆಯ ಮಾತುಗಳನ್ನಾಡಿದರು.

IPL 2025: ಟಾಸ್ ಸೋತರೂ ಪಂದ್ಯ ಗೆದ್ದ ಖುಷಿಯಲ್ಲಿ ಆರ್​ಸಿಬಿ ನಾಯಕ ರಜತ್ ಹೇಳಿದ್ದಿದು
Rajat Patidar
ಪೃಥ್ವಿಶಂಕರ
|

Updated on:Apr 25, 2025 | 7:49 AM

Share

ಸತತ ಮೂರು ಪಂದ್ಯಗಳಲ್ಲಿ ಟಾಸ್ ಸೋತು ಪಂದ್ಯ ಸೋತಿದ್ದ ಆರ್​ಸಿಬಿ (RCB), ತನ್ನ ತವರು ಮೈದಾನದಲ್ಲಿ ಆಡಿದ ನಾಲ್ಕನೇ ಪಂದ್ಯದಲ್ಲೂ ಟಾಸ್ ಸೋಲಬೇಕಾಯಿತು. ಆದಾಗ್ಯೂ ಟಾಸ್ ಸೋತರೂ ಪಂದ್ಯದ ಫಲಿತಾಂಶವನ್ನು ಬದಲಿಸುವಲ್ಲಿ ಯಶಸ್ವಿಯಾದ ಆರ್​ಸಿಬಿ ತನ್ನ ಸಾಂಘಿಕ ಪ್ರದರ್ಶನದಿಂದ ತವರಿನಲ್ಲಿ ಸತತ ಮೂರು ಪಂದ್ಯಗಳ ಸೋಲಿನ ಸರಣಿಗೆ ಬ್ರೇಕ್ ಹಾಕಿತು. ಈ ಪಂದ್ಯದಲ್ಲಿ ಮತ್ತೊಮ್ಮೆ ಮೊದಲು ಬ್ಯಾಟಿಂಗ್‌ ಮಾಡಿದ ಆರ್​ಸಿಬಿ ವಿರಾಟ್ ಕೊಹ್ಲಿ (Virat Kohli) ಮತ್ತು ದೇವದತ್ ಪಡಿಕ್ಕಲ್ ಅವರ ಅದ್ಭುತ ಅರ್ಧಶತಕಗಳ ಆಧಾರದ ಮೇಲೆ 20 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 205 ರನ್ ಗಳಿಸಿತು. ಇದು ಈ ತಂಡದ ವಿರುದ್ಧ ಆರ್‌ಸಿಬಿ ಗಳಿಸಿದ ಅತ್ಯಧಿಕ ಸ್ಕೋರ್ ಆಗಿತ್ತು. ಇದಕ್ಕೆ ಉತ್ತರವಾಗಿ ಗುರಿ ಬೆನ್ನಟ್ಟಿದ ರಾಜಸ್ಥಾನ್ ನಿಗದಿತ ಓವರ್‌ಗಳಲ್ಲಿ ಒಂಬತ್ತು ವಿಕೆಟ್‌ಗಳ ನಷ್ಟಕ್ಕೆ 194 ರನ್ ಗಳಿಸಲಷ್ಟೇ ಶಕ್ತವಾಯಿತು. ವಾಸ್ತವವಾಗಿ ರಾಜಸ್ಥಾನ್ ಇನ್ನಿಂಗ್ಸ್​ನ ಮೊದಲಾರ್ಧದಲ್ಲಿ ಗೆಲುವಿನ ಫೇವರೇಟ್ ಎನಿಸಿಕೊಂಡಿತ್ತು. ಆದರೆ ಆ ಬಳಿಕ ಕರಾರುವಕ್ಕಾದ ದಾಳಿ ನಡೆಸಿದ ಆರ್​ಸಿಬಿ ಬೌಲರ್​ಗಳು ತಂಡಕ್ಕೆ ಗೆಲುವು ತಂದುಕೊಟ್ಟರು.

ನಮ್ಮ ಬೌಲರ್​ಗಳಿಗೆ ಸಲ್ಲುತ್ತದೆ

ಪಂದ್ಯ ಮುಗಿದ ಬಳಿಕ ಮಾತನಾಡಿದ ಆರ್​ಸಿಬಿ ನಾಯಕ ರಜತ್ ಪಾಟಿದರ್ ಕೂಡ ಈ ಗೆಲುವಿನ ಕ್ರೆಡಿಟ್ ನಮ್ಮ ಬೌಲರ್​ಗಳಿಗೆ ಸಲ್ಲುತ್ತದೆ ಎಂದರು. ಮುಂದುವರೆದು ಮಾತನಾಡಿದ ಅವರು, ‘ಈ ಗೆಲುವು ನಮಗೆ ತುಂಬಾ ಅಗತ್ಯವಾದ ಗೆಲುವಾಗಿತ್ತು. ಇಂದು ಸಹ ವಿಕೆಟ್ ನಾವು ನಿರೀಕ್ಷಿಸಿದಂತೆ ವಿಭಿನ್ನವಾಗಿತ್ತು. ಆದಾಗ್ಯೂ ರಾಜಸ್ಥಾನ್ ಇನ್ನಿಂಗ್ಸ್​ನ 10 ನೇ ಓವರ್ ನಂತರ ನಮ್ಮ ಬೌಲರ್​ಗಳು ಲಯಕಂಡುಕೊಂಡಿದ್ದು ಅದ್ಭುತವಾಗಿತ್ತು. ಹೀಗಾಗಿ ಈ ಗೆಲುವಿನ ಎಲ್ಲಾ ಕ್ರೆಡಿಟ್ ನಮ್ಮ ಬೌಲರ್‌ಗಳಿಗೆ ಸಲ್ಲುತ್ತದೆ. ಅವರು ಧೈರ್ಯ ತೋರಿಸಿದ ರೀತಿ ಅದ್ಭುತವಾಗಿತ್ತು.

ಕ್ರೆಡಿಟ್ ಅವರಿಗೂ ಸಲ್ಲುತ್ತದೆ

205 ರನ್​ಗಳ ಗುರಿ ಬೆನ್ನಟ್ಟಿದ ರಾಜಸ್ಥಾನ್​ಗೆ ಆರಂಭಿಕರು ಉತ್ತಮ ಆರಂಭ ಒದಗಿಸಿಕೊಟ್ಟರು. ಅವರ ಹೊಡಿಬಡಿ ಆಟದಿಂದಾಗಿ ಆರ್‌ಸಿಬಿ ಸ್ವಲ್ಪ ಒತ್ತಡದಲ್ಲಿತ್ತು. ಆದರೆ ನಿಯಮಿತ ಅಂತರದಲ್ಲಿ ವಿಕೆಟ್‌ಗಳನ್ನು ಪಡೆಯುವ ಮೂಲಕ ಆರ್‌ಸಿಬಿ, ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ನಿಯಂತ್ರಿಸಲು ಸಹಾಯವಾಯಿತು ಎಂದರು. ಈ ಗೆಲುವಿನ ಹೊರತಾಗಿಯೂ ರಾಜಸ್ಥಾನ್ ತಂಡದ ಆರಂಭಿಕರ ಬ್ಯಾಟಿಂಗ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ರಜತ್, ಆರಂಭದಲ್ಲಿ ರಾಜಸ್ಥಾನ್ ಸುಂದರವಾಗಿ ಬ್ಯಾಟಿಂಗ್ ಮಾಡಿತು, ಕ್ರೆಡಿಟ್ ಅವರಿಗೆ ಸಲ್ಲುತ್ತದೆ ಎಂದು ನಾನು ಭಾವಿಸುತ್ತೇನೆ.

ಇದನ್ನೂ ಓದಿ
Image
ಮತ್ತೊಂದು ಗೆಲ್ಲುವ ಪಂದ್ಯ ಕೈಚೆಲ್ಲಿದ ರಾಜಸ್ಥಾನ್; ನಾಯಕ ಹೇಳಿದ್ದೇನು?
Image
ತವರಿನಲ್ಲಿ ಗೆದ್ದ ಆರ್​ಸಿಬಿ; ಮುಗಿಲು ಮುಟ್ಟಿದ ಫ್ಯಾನ್ಸ್ ಸಂಭ್ರಮ
Image
ರೋಚಕ ಪಂದ್ಯದಲ್ಲಿ ಗೆದ್ದು 3ನೇ ಸ್ಥಾನಕ್ಕೇರಿದ ಆರ್​ಸಿಬಿ
Image
ಚಿನ್ನಸ್ವಾಮಿಯಲ್ಲಿ ಕೊನೆಗೂ ಅಬ್ಬರಿಸಿದ ವಿರಾಟ್ ಕೊಹ್ಲಿ

ಆರಂಭಿಕರ ಆಕ್ರಮಣಕಾರಿ ಆಟ ನೋಡಿದ ನಮಗೆ ಒಂದು ಹಂತದಲ್ಲಿ ಪಂದ್ಯ ಕೈಜಾರುವಂತೆ ತೋರುತ್ತಿತ್ತು. ಹೀಗಾಗಿ ನಾವು ವಿಕೆಟ್‌ಗಳನ್ನು ಹುಡುಕುತ್ತಿದ್ದೆವು. ವಿಕೆಟ್‌ಗಳನ್ನು ಪಡೆದರೆ ಮಾತ್ರ ರನ್‌ಗಳಿಗೆ ಕಡಿವಾಣ ಹಾಕಬಹುದು ಎಂಬುದು ನಮಗೆ ಗೊತ್ತಿತ್ತು. ನಮ್ಮಲ್ಲಿ ಉತ್ತಮ ನಾಯಕರ ಗುಂಪಿದೆ, ಆದ್ದರಿಂದ ಅವರ ಆಲೋಚನೆಗಳು ಮತ್ತು ಸಲಹೆಗಳು ನಮಗೆ ನಿಜವಾಗಿಯೂ ಸಹಾಯ ಮಾಡುತ್ತಿವೆ ಎಂದು ಪಾಟಿದಾರ್ ಹೇಳಿದರು.

IPL 2025: ‘ನಮ್ಮ ತಪ್ಪನ್ನು ಒಪ್ಪಿಕೊಳ್ಳಬೇಕು’; ಸೋಲಿಗೆ ಇವರೇ ನೇರ ಹೊಣೆ ಎಂದ ರಿಯಾನ್ ಪರಾಗ್

ಆರ್​ಸಿಬಿಗೆ ಮೂರನೇ ಸ್ಥಾನ

ಇನ್ನು ಪಾಯಿಂಟ್ ಪಟ್ಟಿಯ ವಿಚಾರಕ್ಕೆ ಬರುವುದಾದರೆ, ತವರಿನಲ್ಲಿ ಮೊದಲ ಗೆಲುವು ದಾಖಲಿಸಿರುವ ಆರ್​ಸಿಬಿ ಮತ್ತೆ ಮೂರನೇ ಸ್ಥಾನಕ್ಕೇರುವಲ್ಲಿ ಯಶಸ್ವಿಯಾಗಿದೆ. ಹೈದರಾಬಾದ್‌ ತಂಡವನ್ನು ಮಣಿಸಿ ಮೂರನೇ ಸ್ಥಾನಕ್ಕೇರಿದ್ದ ಮುಂಬೈ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ. ಈ ಆವೃತ್ತಿಯಲ್ಲಿ ಇದುವರೆಗೆ ಆಡಿರುವ ಒಂಬತ್ತು ಪಂದ್ಯಗಳಲ್ಲಿ ಆರರಲ್ಲಿ ಜಯ ಸಾಧಿಸಿರುವ ಬೆಂಗಳೂರು ತಂಡ, 12 ಅಂಕಗಳು ಮತ್ತು 0.482 ನೆಟ್ ರನ್ ರೇಟ್​ನೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದೆ. ಇತ್ತ ಸತತ ಐದು ಪಂದ್ಯಗಳಲ್ಲಿ ಸೋತ ರಾಜಸ್ಥಾನ್ ಎಂಟನೇ ಸ್ಥಾನದಲ್ಲಿದ್ದು ಅದರ ನೆಟ್​ ರನ್​ರೇಟ್ -0.625 ಆಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:46 am, Fri, 25 April 25