
ಬೆಂಗಳೂರು (ಮೇ. 18): ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ತಂಡ ಪ್ಲೇಆಫ್ ರೇಸ್ ನಿಂದ ಹೊರಬಿದ್ದಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯ ಮಳೆಯಿಂದ ರದ್ದಾಗಿತ್ತು. 13 ಪಂದ್ಯಗಳ ನಂತರ, ಕೆಕೆಆರ್ ಕೇವಲ 12 ಅಂಕಗಳನ್ನು ಹೊಂದಿದೆ. ಹೀಗಾಗಿ ಈಗ ಕೆಕೆಆರ್ ತಂಡವು ಪ್ಲೇಆಫ್‌ಗೆ ಹೋಗಲು ಸಾಧ್ಯವಾಗದೆ ಟೂರ್ನಿಯಿಂದ ಹೊರಬಿದ್ದಿದೆ. ಈ ವರ್ಷ ಕೆಕೆಆರ್ ಪ್ರದರ್ಶನ ನಿರಾಶಾದಾಯಕವಾಗಿತ್ತು. ಈ ಹಿಂದೆ ಪಂಜಾಬ್ ವಿರುದ್ಧದ 112 ರನ್‌ಗಳ ಗುರಿಯನ್ನು ಕೂಡ ಬೆನ್ನಟ್ಟಲು ತಂಡಕ್ಕೆ ಸಾಧ್ಯವಾಗಲಿಲ್ಲ. ಇದಲ್ಲದೆ, ಹಲವು ಪಂದ್ಯಗಳಲ್ಲಿ ತಂಡ ಕಳಪೆ ಪ್ರದರ್ಶನ ತೋರಿತು. ಸದ್ಯ ಮುಂದಿನ ಋತುವಿಗೆ ಮುನ್ನ ಕೆಕೆಆರ್ ಬಿಡುಗಡೆ ಮಾಡಬಹುದಾದ 5 ಆಟಗಾರರ ಬಗ್ಗೆ ನಾವು ನಿಮಗೆ ಹೇಳುತ್ತೇವೆ.
ರಮಣದೀಪ್ ಸಿಂಗ್
ಕೆಕೆಆರ್ ತಂಡ ರಮಣದೀಪ್ ಸಿಂಗ್ ಅವರನ್ನು 4 ಕೋಟಿ ರೂ. ಗೆ ಉಳಿಸಿಕೊಂಡಿತ್ತು. ಆದರೆ, ಈ ಬಾರಿ ಇವರ ಪ್ರದರ್ಶನ ಕಳಪೆ ಆಗಿತ್ತು. ರಮಣದೀಪ್ 10 ಪಂದ್ಯಗಳಲ್ಲಿ ಕೇವಲ 34 ರನ್ ಗಳಿಸಿದ್ದರು. ಅವರ ಸರಾಸರಿ 8.50 ಮತ್ತು ಸ್ಟ್ರೈಕ್ ರೇಟ್ 113 ಆಗಿತ್ತು. ಈ ಕಾರಣದಿಂದಾಗಿ ಫ್ರಾಂಚೈಸಿ ಅವರನ್ನು ಬಿಡುಗಡೆ ಮಾಡಬಹುದು.
ವೆಂಕಟೇಶ್ ಅಯ್ಯರ್
ಐಪಿಎಲ್ 2025 ರ ಹರಾಜಿನಲ್ಲಿ, ವೆಂಕಟೇಶ್ ಅಯ್ಯರ್ ಅವರನ್ನು ಖರೀದಿಸಲು ಕೆಕೆಆರ್ ಬರೋಬ್ಬರಿ 23 ಕೋಟಿ 75 ಲಕ್ಷ ರೂಪಾಯಿ ಖರ್ಚು ಮಾಡಿತು. 11 ಪಂದ್ಯಗಳನ್ನು ಆಡಿದ್ದರೂ, ಅಯ್ಯರ್ ಕೇವಲ 142 ರನ್ ಗಳಿಸಲು ಮಾತ್ರ ಸಾಧ್ಯವಾಯಿತು. ಅವರು ಬೌಲಿಂಗ್ ಕೂಡ ಮೋಡಿ ಮಾಡಲಿಲ್ಲ. ಹೀಗಾಗಿ ಐಪಿಎಲ್ 2026ಕ್ಕೂ ಮುನ್ನ ಇವರ ಬಿಡುಗಡೆ ಖಚಿತವಾಗಿದೆ.
Virat Kohli: ಬಿಳಿ ಜೆರ್ಸಿಗಳಿಂದ ತುಂಬಿ ತುಳುಕಿದ ಚಿನ್ನಸ್ವಾಮಿ: ಇದು ವಿರಾಟ್ ಕೊಹ್ಲಿಗೆ ಅಭಿಮಾನಿಗಳ ಗೌರವ
ಎನ್ರಿಚ್ ನಾರ್ಟ್ಜೆ
ದಕ್ಷಿಣ ಆಫ್ರಿಕಾದ ಅನ್ರಿಚ್ ನಾರ್ಟ್ಜೆ ಅವರನ್ನು ಖರೀದಿಸಲು ಕೆಕೆಆರ್ 6.5 ಕೋಟಿ ರೂ. ಗಳನ್ನು ಖರ್ಚು ಮಾಡಿತ್ತು. ಆದರೆ, ಹೆಚ್ಚಿನ ಅವಕಾಶ ಸಿಗಲಿಲ್. ಐಪಿಎಲ್ 2025 ರಲ್ಲಿ ಇವರು ಆಡಿದ್ದು ಒಂದೇ ಒಂದು ಪಂದ್ಯ ಮಾತ್ರ. ಇದರಲ್ಲಿಯೂ ಅವನಿಗೆ ಫೇಲ್ ಆದರು. ಇದೇ ಕಾರಣಕ್ಕೆ ಕೆಕೆಆರ್ ಅವರ ಸ್ಥಾನದಲ್ಲಿ ಮತ್ತೊಬ್ಬ ಆಟಗಾರನನ್ನು ಖರೀದಿಸಬಹುದು.
ಕ್ವಿಂಟನ್ ಡಿ ಕಾಕ್
ದಕ್ಷಿಣ ಆಫ್ರಿಕಾದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಕ್ವಿಂಟನ್ ಡಿ ಕಾಕ್ ಅವರನ್ನು ಕೆಕೆಆರ್ ತಂಡವು ಹರಾಜಿನಲ್ಲಿ 3.6 ಕೋಟಿ ರೂ. ಗೆ ಖರೀದಿಸಿತು. ಅವರು 7 ಪಂದ್ಯಗಳಲ್ಲಿ ಆಡಲು ಅವಕಾಶ ಪಡೆದರು ಮತ್ತು ಕೇವಲ 143 ರನ್ ಗಳಿಸಿದರು. ಇದರಲ್ಲಿ 97 ರನ್‌ಗಳು ಒಂದೇ ಪಂದ್ಯದಲ್ಲಿ ಬಂದವು. ಕೆಕೆಆರ್ ತಂಡವು ಡಿ ಕಾಕ್ ಅವರನ್ನು ಆಡುವ ಹನ್ನೊಂದರಿಂದಲೂ ಕೈಬಿಟ್ಟಿದೆ.
ಸ್ಪೆನ್ಸರ್ ಜಾನ್ಸನ್
ಆಸ್ಟ್ರೇಲಿಯಾದ ಸ್ಪೆನ್ಸರ್ ಜಾನ್ಸನ್ ಬಿಗ್ ಬ್ಯಾಷ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದರು. ಆದರೆ ಐಪಿಎಲ್‌ನಲ್ಲಿ ಅದನ್ನು ಪುನರಾವರ್ತಿಸಲು ಸಾಧ್ಯವಾಗಲಿಲ್ಲ. ಕೆಕೆಆರ್ ಪರ 4 ಪಂದ್ಯಗಳಲ್ಲಿ ಎಡಗೈ ವೇಗಿ 11.74 ಎಕಾನಮಿಯಲ್ಲಿ ರನ್ ನೀಡಿದ್ದಾರೆ. ಈ ಅವಧಿಯಲ್ಲಿ, ಅವರು ಒಬ್ಬ ಬ್ಯಾಟ್ಸ್‌ಮನ್‌ನನ್ನು ಮಾತ್ರ ಔಟ್ ಮಾಡಲು ಸಾಧ್ಯವಾಯಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ