AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2025: ದೇಶ ಮುಖ್ಯ, ಐಪಿಎಲ್ ಅಲ್ಲ..! 8 ಆಫ್ರಿಕಾ ಆಟಗಾರರು ಪ್ಲೇಆಫ್‌ಗೆ ಅಲಭ್ಯ

IPL 2025 Playoffs Disrupted: ದಕ್ಷಿಣ ಆಫ್ರಿಕಾದ 8 ಆಟಗಾರರು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗಾಗಿ ಐಪಿಎಲ್ 2025 ರ ಪ್ಲೇಆಫ್‌ಗೂ ಮುನ್ನ ತಮ್ಮ ದೇಶಕ್ಕೆ ಮರಳುತ್ತಿದ್ದಾರೆ. ಬಿಸಿಸಿಐ ಮತ್ತು ಕ್ರಿಕೆಟ್ ದಕ್ಷಿಣ ಆಫ್ರಿಕಾ ಈ ಬಗ್ಗೆ ಒಪ್ಪಂದಕ್ಕೆ ಬಂದಿದ್ದು, ಗುಜರಾತ್ ಟೈಟನ್ಸ್, ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳಿಗೆ ಇದು ದೊಡ್ಡ ಹೊಡೆತವಾಗಿದೆ. ಆಟಗಾರರ ನಿರ್ಗಮನದಿಂದ ಪ್ಲೇಆಫ್ ಸ್ಪರ್ಧೆಗೆ ತೀವ್ರ ಪರಿಣಾಮ ಬೀರಲಿದೆ.

IPL 2025: ದೇಶ ಮುಖ್ಯ, ಐಪಿಎಲ್ ಅಲ್ಲ..! 8 ಆಫ್ರಿಕಾ ಆಟಗಾರರು ಪ್ಲೇಆಫ್‌ಗೆ ಅಲಭ್ಯ
South Africa
ಪೃಥ್ವಿಶಂಕರ
|

Updated on: May 16, 2025 | 10:13 PM

Share

ಈ ಬಾರಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ (World Test Championship Final), 2025 ರ ​​ಐಪಿಎಲ್​ಗೆ ಅಡ್ಡಗೋಡೆಯಾಗಿ ಮಾರ್ಪಟ್ಟಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯಿಂದಾಗಿ ಐಪಿಎಲ್ (IPL 2025) ಅನ್ನು ಸ್ಥಗಿತಗೊಳಿಸಿರುವುದರಿಂದ ಸಮಸ್ಯೆಗಳು ಹೆಚ್ಚಿವೆ. ಈ ಮೊದಲು ಈ ಲೀಗ್ ಮೇ 25 ರೊಳಗೆ ಕೊನೆಗೊಳ್ಳಬೇಕಿತ್ತು, ಆದರೆ ಈಗ ಪಂದ್ಯಾವಳಿ ಜೂನ್ 3 ರಂದು ಕೊನೆಗೊಳ್ಳಲಿದೆ. ಇಂತಹ ಪರಿಸ್ಥಿತಿಯಲ್ಲಿ, ಡಬ್ಲ್ಯುಟಿಸಿ ಫೈನಲ್ ಆಡುವ ಎರಡೂ ದೇಶಗಳ ಆಟಗಾರರು ಈ ಲೀಗ್‌ನ ಪ್ಲೇಆಫ್‌ನಲ್ಲಿ ಆಡುವುದು ಕಷ್ಟಕರವಾಗಿದೆ. ಇದೀಗ ಬಿಸಿಸಿಐ (BCCI) ಮನವೊಲಿಸುವಲ್ಲಿ ಯಶಸ್ವಿಯಾಗಿರುವ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ, ಐಪಿಎಲ್​ನಲ್ಲಿ ಆಡುತ್ತಿರುವ ತನ್ನ ತಂಡದ 8 ಆಟಗಾರರನ್ನು ಪ್ಲೇಆಫ್‌ಗೂ ಮುಂಚೆಯೇ ತನ್ನ ದೇಶಕ್ಕೆ ವಾಪಸ್ ಕರೆಸಿಕೊಳ್ಳುತ್ತಿದೆ.

ಲೀಗ್ ಹಂತದ ನಂತರ ದೇಶಕ್ಕೆ ವಾಪಸ್

ಐಪಿಎಲ್ 2025 ರಲ್ಲಿ ದಕ್ಷಿಣ ಆಫ್ರಿಕಾದ 8 ಆಟಗಾರರು ಆಡುತ್ತಿದ್ದು, ಅವರಲ್ಲೆರು ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್‌ಗೆ ತಂಡದ ಭಾಗವಾಗಿದ್ದಾರೆ. ಇಎಸ್‌ಪಿಎನ್-ಕ್ರಿಕ್‌ಇನ್ಫೋ ವರದಿಯ ಪ್ರಕಾರ, ಕ್ರಿಕೆಟ್ ದಕ್ಷಿಣ ಆಫ್ರಿಕಾ ಐಪಿಎಲ್ 2025 ರಲ್ಲಿ ಆಡುತ್ತಿರುವ ಈ 8 ಆಟಗಾರರನ್ನು ಮೇ 27 ರೊಳಗೆ ದೇಶಕ್ಕೆ ಮರಳಲು ಕೇಳಿಕೊಂಡಿದೆ. ಈ ಬಗ್ಗೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ, ಬಿಸಿಸಿಐ ಜೊತೆಗೆ ಚರ್ಚೆ ನಡೆಸಿದೆ ಎಂದು ವರದಿಯಾಗಿದೆ. ದಕ್ಷಿಣ ಆಫ್ರಿಕಾ ಇದೇ ಮೊದಲ ಬಾರಿಗೆ ಡಬ್ಲ್ಯುಟಿಸಿ ಫೈನಲ್ ಆಡುತ್ತಿರುವುದರಿಂದ ಬಿಸಿಸಿಐ ಕೂಡ ಕ್ರಿಕೆಟ್ ದಕ್ಷಿಣ ಆಫ್ರಿಕಾದ ಕೋರಿಕೆಯನ್ನು ಒಪ್ಪಿಕೊಂಡಂತೆ ಕಾಣುತ್ತಿದೆ.

ಹೀಗಾಗಿ ಆಫ್ರಿಕಾದ 8 ಆಟಗಾರರು ಮೇ 30 ರಂದು ತಂಡದ ಇತರ ಸದಸ್ಯರೊಂದಿಗೆ ಇಂಗ್ಲೆಂಡ್‌ಗೆ ತೆರಳಲಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಅವರು ಜೂನ್ 3 ರಿಂದ ಅರುಂಡೆಲ್‌ನಲ್ಲಿ ಜಿಂಬಾಬ್ವೆ ವಿರುದ್ಧ ಅಭ್ಯಾಸ ಪಂದ್ಯವನ್ನು ಆಡಲಿದ್ದಾರೆ. ಡಬ್ಲ್ಯುಟಿಸಿ ಫೈನಲ್ ಜೂನ್ 11 ರಂದು ಲಾರ್ಡ್ಸ್ ಮೈದಾನದಲ್ಲಿ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆಯಲಿದೆ.

8 ಆಫ್ರಿಕಾ ಆಟಗಾರರು ಇವರೇ..

ಐಪಿಎಲ್‌ನಲ್ಲಿ ಆಡುತ್ತಿರುವ ಆ 8 ಆಟಗಾರರು ಆಫ್ರಿಕನ್ ಆಟಗಾರರು ಯಾರು ಎಂಬುದನ್ನು ನೋಡುವುದಾದರೆ.. ಕಗಿಸೊ ರಬಾಡ (ಜಿಟಿ), ಐಡೆನ್ ಮಾರ್ಕ್ರಾಮ್ (ಎಲ್‌ಎಸ್‌ಜಿ), ಮಾರ್ಕೊ ಯಾನ್ಸೆನ್ (ಪಿಬಿಕೆಎಸ್), ಟ್ರಿಸ್ಟಾನ್ ಸ್ಟಬ್ಸ್ (ಡಿಸಿ), ಲುಂಗಿ ಎನ್‌ಗಿಡಿ (ಆರ್‌ಸಿಬಿ), ವಿಯಾನ್ ಮುಲ್ಡರ್ (ಎಸ್‌ಆರ್‌ಹೆಚ್), ರಯಾನ್ ರಿಕಲ್ಟನ್ ಮತ್ತು ಕಾರ್ಬಿನ್ ಬಾಷ್ (ಎಂಐ). ಇವರನ್ನು ಹೊರತುಪಡಿಸಿ, ದಕ್ಷಿಣ ಆಫ್ರಿಕಾದ ಉಳಿದ ಆಟಗಾರರು ಮೇ 17 ರಿಂದ ಮತ್ತೆ ಪ್ರಾರಂಭವಾಗುವ ಐಪಿಎಲ್ 2025 ರಲ್ಲಿ ಆಡುವುದನ್ನು ಮುಂದುವರಿಸುತ್ತಾರೆ.

ಯಾವ ತಂಡಗಳ ಮೇಲೆ ಹೆಚ್ಚು ಪರಿಣಾಮ?

ಐಪಿಎಲ್ 2025 ರ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಗುಜರಾತ್ ಟೈಟಾನ್ಸ್, ಈ ಸೀಸನ್‌ನಲ್ಲಿ ಕಗಿಸೊ ರಬಾಡ ಇಲ್ಲದೆ ಹಲವು ಪಂದ್ಯಗಳನ್ನು ಆಡಿದೆ. ರಬಾಡ ಕೊನೆಯ ಬಾರಿಗೆ ಮಾರ್ಚ್ 29 ರಂದು ಮುಂಬೈ ವಿರುದ್ಧ ಆಡಿದ್ದರು. ಜಿಟಿ ಪ್ಲೇಆಫ್‌ಗೆ ತಲುಪಲು ಕೇವಲ ಒಂದು ಹೆಜ್ಜೆ ದೂರದಲ್ಲಿದೆ. ಈ ಲೀಗ್‌ನಿಂದ ದಕ್ಷಿಣ ಆಫ್ರಿಕಾದ ಆಟಗಾರರ ನಿರ್ಗಮನದಿಂದ ಹೆಚ್ಚು ಪರಿಣಾಮ ಬೀರುವುದು ಮುಂಬೈ ಇಂಡಿಯನ್ಸ್ ತಂಡಕ್ಕೆ ಮಾತ್ರ. ತಂಡದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ರಯಾನ್ ರಿಕಲ್ಟನ್ ಉತ್ತಮ ಫಾರ್ಮ್‌ನಲ್ಲಿದ್ದು, ಆಡಿರುವ 12 ಇನ್ನಿಂಗ್ಸ್‌ಗಳಲ್ಲಿ 336 ರನ್ ಗಳಿಸಿದ್ದಾರೆ. ಇವರ ಜೊತೆಗೆ ಕಾರ್ಬಿನ್ ಬಾಷ್ ಕೂಡ ಆಡಿರುವ ಮೂರು ಪಂದ್ಯಗಳಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಉತ್ತಮ ಪ್ರದರ್ಶನ ನೀಡಿದ್ದಾರೆ.

IPL 2025: ಗುಜರಾತ್, ಆರ್​ಸಿಬಿಗೂ ಟಿಕೆಟ್ ಖಚಿತವಾಗಿಲ್ಲ; ಹೀಗಿದೆ 7 ತಂಡಗಳ ಪ್ಲೇಆಫ್‌ ಲೆಕ್ಕಾಚಾರ

ಪಂಜಾಬ್ ತಂಡಕ್ಕೆ ಭಾರಿ ಹಿನ್ನಡೆ

ಪಂಜಾಬ್ ಕಿಂಗ್ಸ್ ಆಲ್‌ರೌಂಡರ್ ಮಾರ್ಕೊ ಯಾನ್ಸೆನ್ ನಿರ್ಗಮನವು ತಂಡಕ್ಕೆ ದೊಡ್ಡ ಹೊಡೆತವಾಗಲಿದೆ. ಏಕೆಂದರೆ ಪಂಜಾಬ್ ಕಿಂಗ್ಸ್ ಪ್ಲೇಆಫ್ ತಲುಪಲು ಉಳಿದಿರುವ ಮೂರು ಪಂದ್ಯಗಳಲ್ಲಿ 2 ಪಂದ್ಯಗಳನ್ನು ಗೆಲ್ಲಬೇಕು. ಪಂಜಾಬ್ ಕಿಂಗ್ಸ್ ಪರ ಯಾನ್ಸನ್ ಇದುವರೆಗೆ 11 ವಿಕೆಟ್ ಕಬಳಿಸಿದ್ದಾರೆ. ಇದಲ್ಲದೆ, ಡೆಲ್ಲಿ ಕ್ಯಾಪಿಟಲ್ಸ್‌ನ ಟ್ರಿಸ್ಟಾನ್ ಸ್ಟಬ್ಸ್ ಕೂಡ ಈ ಸೀಸನ್​ನಲ್ಲಿ ಅನೇಕ ಅದ್ಭುತ ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ. ಅವರು ಪ್ರಸ್ತುತ ತಂಡಕ್ಕೆ ಫಿನಿಷರ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಆಡಿರುವ 10 ಇನ್ನಿಂಗ್ಸ್‌ಗಳಲ್ಲಿ 151.46 ಸ್ಟ್ರೈಕ್ ರೇಟ್‌ನಲ್ಲಿ 259 ರನ್ ಗಳಿಸಿದ್ದಾರೆ.

ಲಕ್ನೋ ಸೂಪರ್ ಜೈಂಟ್ಸ್ ತಂಡದ ಆರಂಭಿಕ ಆಟಗಾರ ಐಡೆನ್ ಮಾರ್ಕ್ರಾಮ್ ಪ್ರಸ್ತುತ ಉತ್ತಮ ಫಾರ್ಮ್‌ನಲ್ಲಿದ್ದಾರೆ. ತಂಡಕ್ಕೆ ಅವರ ಅವಶ್ಯಕತೆ ತುಂಬಾ ಇದೆ. ಮಾರ್ಕ್ರಾಮ್ ಎಲ್‌ಎಸ್‌ಜಿ ಪರ 11 ಇನ್ನಿಂಗ್ಸ್‌ಗಳಲ್ಲಿ 348 ರನ್ ಗಳಿಸಿದ್ದಾರೆ. ಎಲ್‌ಎಸ್‌ಜಿ ಪ್ರಸ್ತುತ ಪಾಯಿಂಟ್ಸ್ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದ್ದು, ಉಳಿದಿರುವ ಎಲ್ಲಾ ಪಂದ್ಯಗಳನ್ನು ಗೆಲ್ಲಬೇಕಾಗಿದೆ. ಆದಾಗ್ಯೂ, ಇದರ ನಂತರವೂ ಅವರು ಪ್ಲೇಆಫ್ ತಲುಪುವುದು ಕಷ್ಟ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ