CSK vs DC: ಸತತ 8ನೇ ಪಂದ್ಯದಲ್ಲೂ ಫೇಲ್; ಸೂರ್ಯನಿಗೆ ಗ್ರಹಣ

Suryakumar Yadav's Form Woes Continue: ಐಪಿಎಲ್ 2026ರ 44ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮುಂಬೈ ಇಂಡಿಯನ್ಸ್‌ನ ಸೂರ್ಯಕುಮಾರ್ ಯಾದವ್ ಕಳಪೆ ಫಾರ್ಮ್ ಮುಂದುವರಿದು ಸತತ 8ನೇ ಪಂದ್ಯದಲ್ಲೂ ವಿಫಲರಾದರು. ಸಿಎಸ್‌ಕೆ ಪರ ಚೊಚ್ಚಲ ಪಂದ್ಯವಾಡಿದ ರಾಮಕೃಷ್ಣ ಘೋಷ್ ತಮ್ಮ ಎರಡನೇ ಓವರ್‌ನಲ್ಲೇ ಸೂರ್ಯಕುಮಾರ್ ಅವರ ಮಹತ್ವದ ವಿಕೆಟ್ ಪಡೆದು ಗಮನ ಸೆಳೆದರು.

CSK vs DC: ಸತತ 8ನೇ ಪಂದ್ಯದಲ್ಲೂ ಫೇಲ್; ಸೂರ್ಯನಿಗೆ ಗ್ರಹಣ
Suryakumar

Updated on: May 02, 2026 | 10:16 PM

ಐಪಿಎಲ್ 2026 (IPL 2026) ರ 44ನೇ ಪಂದ್ಯ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ (CSK vs MI) ನಡುವೆ ನಡೆಯಿತು. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಮುಂಬೈ ತಂಡಕ್ಕೆ ಮತ್ತೆ ಬ್ಯಾಟಿಂಗ್‌ ವಿಭಾಗ ಕೈಕೊಟ್ಟಿತು. ನಮನ್ ಧೀರ್ ಅವರನ್ನು ಹೊರತುಪಡಿಸಿ ತಂಡದ ಯಾವೊಬ್ಬ ಆಟಗಾರನಿಗೂ ಒಂದೊಳ್ಳೆ ಇನ್ನಿಂಗ್ಸ್ ಆಡಲು ಸಾಧ್ಯವಾಗಲಿಲ್ಲ. ಅದರಲ್ಲೂ ಈ ಆವೃತ್ತಿಯ ಐಪಿಎಲ್‌ನಲ್ಲಿ ಕಳಪೆ ಫಾರ್ಮ್​ನಿಂದ ಬಳಲುತ್ತಿರುವ ಅನುಭವಿ ಸೂರ್ಯಕುಮಾರ್ ಯಾದವ್ (Suryakumar Yadav) ಸತತ 8ನೇ ಪಂದ್ಯದಲ್ಲೂ ನಿರಾಸೆ ಮೂಡಿಸಿದರು. ಸಿಎಸ್​ಕೆ ಪರ ಮೊದಲ ಪಂದ್ಯವನ್ನಾಡಿದ ರಾಮಕೃಷ್ಣ ಘೋಷ್ ಅವರ ಬೌಲಿಂಗ್​ನಲ್ಲಿ ಸೂರ್ಯ ಕ್ಯಾಚಿತ್ತು ನಿರ್ಗಮಿಸಿದರು.

ಚೊಚ್ಚಲ ಪಂದ್ಯದಲ್ಲೇ ವಿಕೆಟ್

ಮುಂಬೈ ಇನ್ನಿಂಗ್ಸ್‌ನ ಒಂಬತ್ತನೇ ಓವರ್‌ನಲ್ಲಿ ಬೌಲಿಂಗ್ ಮಾಡುವ ಅವಕಾಶ ಪಡೆದ ರಾಮಕೃಷ್ಣ ತಮ್ಮ ಮೊದಲ ಓವರ್‌ನಲ್ಲಿ ಬೌಂಡರಿ ಸೇರಿದಂತೆ ಕೇವಲ ಏಳು ರನ್‌ಗಳನ್ನು ಬಿಟ್ಟುಕೊಟ್ಟರು. ಮೊದಲ ಓವರ್‌ನಲ್ಲಿ ಅದ್ಭುತ ಬೌಲಿಂಗ್ ಮಾಡಿದ ರಾಮಕೃಷ್ಣ ಘೋಷ್ ಮುಂದಿನ ಓವರ್​ನಲ್ಲಿ ತಮ್ಮ ಚೊಚ್ಚಲ ಐಪಿಎಲ್ ವಿಕೆಟ್ ಪಡೆಯುವಲ್ಲೂ ಯಶಸ್ವಿಯಾದರು.

ರಾಮಕೃಷ್ಣ ಘೋಷ್ ತಮ್ಮ ಎರಡನೇ ಓವರ್‌ನ (ಇನಿಂಗ್ಸ್‌ನ 11ನೇ) ಮೊದಲ ಎರಡು ಎಸೆತಗಳಲ್ಲಿ ಬೌಂಡರಿಗಳನ್ನು ಬಿಟ್ಟುಕೊಟ್ಟರು, ಆದರೆ ನಾಲ್ಕನೇ ಎಸೆತದಲ್ಲಿ ಸೂರ್ಯಕುಮಾರ್ ಯಾದವ್ ಅವರನ್ನು ಪೆವಿಲಿಯನ್​ಗಟ್ಟುವಲ್ಲಿ ಯಶಸ್ವಿಯಾದರು. ಸೂರ್ಯ ಬಿಗ್ ಶಾಟ್ ಆಡಲು ಪ್ರಯತ್ನಿಸಿದರು, ಆದರೆ ಡೀಪ್ ಬ್ಯಾಕ್‌ವರ್ಡ್ ಪಾಯಿಂಟ್‌ನಲ್ಲಿ ನಿಂತಿದ್ದ ಡೆವಾಲ್ಡ್ ಬ್ರೆವಿಸ್ ಸುಲಭ ಕ್ಯಾಚ್ ಹಿಡಿದು ಸೂರ್ಯ ಇನ್ನಿಂಗ್ಸ್​ಗೆ ಅಂತ್ಯ ಹಾಡಿದರು. ಸೂರ್ಯ 12 ಎಸೆತಗಳಲ್ಲಿ 21 ರನ್ ಗಳಿಸಿ ಔಟಾದರು.

ಸೂರ್ಯನಿಗೆ ಗ್ರಹಣ

ಸೂರ್ಯಕುಮಾರ್ ಈ ರೀತಿಯ ಬೇಗನೇ ವಿಕೆಟ್ ಒಪ್ಪಿಸುತ್ತಿರುವುದು ಇದು 8ನೇ ಪಂದ್ಯ. ಈ ಬಾರಿಯ ಐಪಿಎಲ್‌ನಲ್ಲಿ ಸೂರ್ಯನಿಗೆ ಒಂದೇ ಒಂದು ಅರ್ಧಶತಕ ಬಾರಿಸಲು ಸಾಧ್ಯವಾಗಿಲ್ಲ. ಮಧ್ಯಮ ಕ್ರಮಾಂಕದಲ್ಲಿ ಮುಂಬೈ ತಂಡಕ್ಕೆ ಆಸರೆಯಾಗಬೇಕಿದ್ದ ಸೂರ್ಯ, ತಮ್ಮ ಕಳಪೆ ಪ್ರದರ್ಶನದಿಂದಾಗಿ ತಂಡಕ್ಕೆ ಹೊರೆಯಾಗಿದ್ದಾರೆ. ಸೂರ್ಯ ಅವರ ಸಪ್ಪೆ ಆಡ ಮುಂಬೈ ತಂಡದ ಸೋಲಿಗೆ ಪ್ರಮುಖ ಕಾರಣವಾಗಿದೆ. ಸೂರ್ಯ ಅವರ ಫಾರ್ಮ್​ ಇದೇ ರೀತಿ ಮುಂದುವರೆದರೆ ಅವರನ್ನು ತಂಡದಿಂದ ಹೊರಗಿಡುವ ಸಾಧ್ಯತೆಗಳು ಹೆಚ್ಚಿವೆ.

CSK vs MI IPL 2026 Live Score: ಚೆನ್ನೈ ಮೊದಲ ವಿಕೆಟ್ ಪತನ

ರಾಮಕೃಷ್ಣ ಘೋಷ್ ಯಾರು?

ಸೂರ್ಯ ಅವರ ವಿಕೆಟ್ ಪಡೆದ 28 ವರ್ಷದ ರಾಮಕೃಷ್ಣ ಘೋಷ್​ಗೆ ಇದು ಎರಡನೇ ಐಪಿಎಲ್‌ ಸೀಸನ್ ಆಗಿದೆ. ಕಳೆದ ಸೀಸನ್‌ನಲ್ಲಿ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ 50 ಲಕ್ಷ ರೂ.ಗೆ ಖರೀದಿಸಿತ್ತು ಆದರೆ ಇಡೀ ಸೀಸನ್‌ನಲ್ಲಿ ಆಡುವ ಅವಕಾಶ ಸಿಗಲಿಲ್ಲ. ಇನ್ನು ದೇಶೀಯ ಕ್ರಿಕೆಟ್‌ನಲ್ಲಿ ಮಹಾರಾಷ್ಟ್ರ ಪರ ಆಡುವ ರಾಮಕೃಷ್ಣ 2025-26ರ ವಿಜಯ್ ಹಜಾರೆ ಟ್ರೋಫಿಯಲ್ಲಿ ದಾಖಲೆಯ ಪ್ರದರ್ಶನ ನೀಡಿದ್ದರು. ಹಿಮಾಚಲ ಪ್ರದೇಶ ವಿರುದ್ಧದ ಪಂದ್ಯದಲ್ಲಿ, ಘೋಷ್ 9.4 ಓವರ್‌ಗಳಲ್ಲಿ 42 ರನ್‌ಗಳಿಗೆ 7 ವಿಕೆಟ್‌ಗಳನ್ನು ಪಡೆದಿದ್ದರು. ಇದು ಪಂದ್ಯಾವಳಿಯ ಇತಿಹಾಸದಲ್ಲಿ ಮಹಾರಾಷ್ಟ್ರದ ಅತ್ಯುತ್ತಮ ಬೌಲಿಂಗ್ ದಾಖಲೆಯಾಗಿದೆ. ಘೋಷ್ 13 ಪ್ರಥಮ ದರ್ಜೆ ಪಂದ್ಯಗಳಲ್ಲಿ 28 ವಿಕೆಟ್‌ಗಳು, 11 ಲಿಸ್ಟ್ ಎ ಪಂದ್ಯಗಳಲ್ಲಿ 21 ವಿಕೆಟ್‌ಗಳು ಮತ್ತು 9 ಟಿ20 ಪಂದ್ಯಗಳಲ್ಲಿ ಕೇವಲ 2 ವಿಕೆಟ್‌ಗಳನ್ನು ಪಡೆದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:14 pm, Sat, 2 May 26

Follow Us