
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನ ಫೈನಲ್ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾನುವಾರ (ಮೇ 31) ನಡೆಯಲಿರುವ ಅಂತಿಮ ಹಣಾಹಣಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಲಿದೆ. ವಿಶೇಷ ಎಂದರೆ ಫೈನಲ್ ಪಂದ್ಯ ನಡೆಯುತ್ತಿರುವುದು ಗುಜರಾತ್ ಟೈಟಾನ್ಸ್ ತಂಡದ ತವರು ಮೈದಾನದಲ್ಲಿ. ಇದುವೇ ಗುಜರಾತ್ ಟೈಟಾನ್ಸ್ ಪಾಲಿಗೆ ಪ್ಲಸ್ ಪಾಯಿಂಟ್.
ಗುಜರಾತ್ ಟೈಟಾನ್ಸ್ ತಂಡಕ್ಕೆ ಹೀಗೊಂದು ಅನುಕೂಲಕರ ವಾತಾವರಣ ಸೃಷ್ಟಿಯಾಗಲು ಮುಖ್ಯ ಕಾರಣ ಬಿಸಿಸಿಐ ತೆಗೆದುಕೊಂಡ ಒಂದು ನಿರ್ಧಾರ. ಅದುವೇ ಫೈನಲ್ ಪಂದ್ಯ ಶಿಫ್ಟ್..!
ಆದರೆ ನಿರ್ದಿಷ್ಟ ಕಾರಣಗಳನ್ನು ಮುಂದಿಟ್ಟು ಬಿಸಿಸಿಐ, ಐಪಿಎಲ್ ಫೈನಲ್ ಪಂದ್ಯವನ್ನು ಅಹಮದಾಬಾದ್ಗೆ ಸ್ಥಳಾಂತರಿಸಿದ್ದಾರೆ. ಇದಕ್ಕೆ ಬಿಸಿಸಿಐ ನೀಡಿರುವ ಕಾರಣಗಳೆಂದರೆ, ಸ್ಥಳೀಯ ಶಾಸಕರ ಫ್ರೀ ಟಿಕೆಟ್ ಡಿಮ್ಯಾಂಡ್ ಮತ್ತು ಸಾರ್ವಜನಿಕ ಸುರಕ್ಷತೆ.
ಇಲ್ಲಿ ಗಮನಿಸಬೇಕಾದ ಮತ್ತೊಂದು ಮುಖ್ಯ ಅಂಶವೆಂದರೆ, ಮೇ 30 ಮತ್ತು ಮೇ 31 ರಂದು ಅಹಮದಾಬಾದ್ನಲ್ಲಿ ಐಸಿಸಿ ಮಂಡಳಿ ಮತ್ತು ಮುಖ್ಯ ಕಾರ್ಯನಿರ್ವಾಹಕರ ಸಮಿತಿಯ ಈ ಹೈ-ಪ್ರೊಫೈಲ್ ಸಭೆಯನ್ನು ಆಯೋಜಿಸಲಾಗಿರುವುದು.
ಅಂದರೆ ಐಪಿಎಲ್ ಫೈನಲ್ ಪಂದ್ಯದ ವೇಳೆ ವಿಶ್ವ ಕ್ರಿಕೆಟ್ ಮಂಡಳಿಯ ಪ್ರಮುಖರು ಅಹಮದಾಬಾದ್ನಲ್ಲಿ ಇರಲಿದ್ದಾರೆ ಎಂಬುದು. ಇದಕ್ಕಾಗಿಯೇ ಫೈನಲ್ ಮ್ಯಾಚ್ ಅನ್ನು ಬೆಂಗಳೂರಿನಿಂದ ಅಹಮದಾಬಾದ್ಗೆ ಶಿಫ್ಟ್ ಮಾಡಲಾಗಿದೆ ಎಂಬ ಮಾತುಗಳು ಕೂಡ ಕೇಳಿ ಬರುತ್ತಿದೆ.
ಅದೇನಾಗಿದ್ದರೂ ಇದೀಗ ಐಪಿಎಲ್ ಫೈನಲ್ ಪಂದ್ಯದ ಶಿಫ್ಟ್ ಆರ್ಸಿಬಿ ಪಾಲಿಗೆ ಅಭಿಶಾಪವಾಗಲಿದೆಯಾ ಎಂಬುದೇ ಪ್ರಶ್ನೆ. ಏಕೆಂದರೆ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆರ್ಸಿಬಿ ತಂಡದ ಪ್ರದರ್ಶನ ಅಷ್ಟಕ್ಕಷ್ಟೇ. ಇದಕ್ಕೆ ಸಾಕ್ಷಿ ಈ ಅಂಕಿ ಅಂಶಗಳು.
ಅಂದರೆ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆರ್ಸಿಬಿ ಗೆಲುವು ಅಂದುಕೊಂಡಷ್ಟು ಸುಲಭವಲ್ಲ. ಅದರಲ್ಲೂ ತವರಿನ ಸಾಮ್ರಾಟರೆಂದೇ ಗುರುತಿಸಿಕೊಂಡಿರುವ ಗುಜರಾತ್ ಪಡೆಯನ್ನು ಸೋಲಿಸುವುದು ದೊಡ್ಡ ಸವಾಲೇ ಸರಿ. ಏಕೆಂದರೆ…
ಈ ಎಲ್ಲಾ ಕಾರಣಗಳಿಂದಾಗಿ ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಗುಜರಾತ್ ಟೈಟಾನ್ಸ್ ತಂಡವು ಗೆಲ್ಲುವ ಫೇವರೇಟ್ ಆಗಿ ಗುರುತಿಸಿಕೊಂಡಿದೆ. ಈ ಗುರುತಿಸಿಕೊಳ್ಳುವಿಕೆಗೆ ಮುಖ್ಯ ಕಾರಣ ಫೈನಲ್ ಮ್ಯಾಚ್ನ ಶಿಫ್ಟ್.
ಇದನ್ನೂ ಓದಿ: Vaibhav Sooryavanshi: 440 ಎಸೆತಗಳಲ್ಲಿ ಸಾರ್ವಕಾಲಿಕ ದಾಖಲೆ ಧೂಳೀಪಟ!
ಅಂದರೆ ಆರ್ಸಿಬಿ ತಂಡದ ತವರು ಮೈದಾನದಲ್ಲಿ ನಡೆಯಬೇಕಿದ್ದ ಫೈನಲ್ ಪಂದ್ಯಕ್ಕೆ ಇದೀಗ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂ ಆತಿಥ್ಯವಹಿಸಲು ಅಣಿಯಾಗಿ ನಿಂತಿದೆ. ಇದುವೇ ಆರ್ಸಿಬಿ ಪಾಲಿಗೆ ಅಭಿಶಾಪವಾಗಲಿದೆಯಾ ಎಂಬುದೇ ಈಗ ದೊಡ್ಡ ಯಕ್ಷ ಪ್ರಶ್ನೆ.