
ಇಂಡಿಯನ್ ಪ್ರೀಮಿಯರ್ ಲೀಗ್‌ನ (IPL) ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹೊಸ ಮಾಲೀಕರು ಯಾರು? ಈ ಕುತೂಹಲಕಾರಿ ಪ್ರಶ್ನೆಗೆ ಶೀಘ್ರದಲ್ಲೇ ಉತ್ತರ ದೊರೆಯಲಿದೆ. ಏಕೆಂದರೆ RCB ಫ್ರಾಂಚೈಸಿ ಮಾರಾಟ ಪ್ರಕ್ರಿಯೆಯು ಇದೀಗ ಅಂತಿಮ ಹಂತಕ್ಕೆ ತಲುಪಿದೆ. ಆದರೆ ಈ ಹಿಂದೆ ಇದ್ದ ಪ್ರಮುಖ ಕಂಪೆನಿಗಳು ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯ ಖರೀದಿಯಿಂದ ಹಿಂದೆ ಸರಿದಿದ್ದಾರೆ ಎಂದು ವರದಿಯಾಗಿದೆ.
ಈ ಹಿಂದೆ ಮ್ಯಾಂಚೆಸ್ಟರ್ ಯುನೈಟೆಡ್ ಮಾಲೀಕ ಅವ್ರಾಮ್ ಗ್ಲೇಝರ್ ಮತ್ತು ಸೀರಮ್ ಇನ್‌ಸ್ಟಿಟ್ಯೂಟ್‌ನ ಅದಾರ್ ಪೂನಾವಾಲಾ ಅವರು ಆರ್‌ಸಿಬಿ ಫ್ರಾಂಚೈಸಿ ಖರೀದಿಗೆ ಆಸಕ್ತಿ ತೋರಿದ್ದರು. ಆದರೆ ಇದೀಗ ಇವರು ಅಂತಿಮ ಬಿಡ್ ಸಲ್ಲಿಸದೆ ಹಿಂದೆ ಸರಿದಿದ್ದಾರೆ.
ಇನ್ನು ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯ ಸಹ ಮಾಲೀಕರಾದ ಪಾರ್ಥ್ ಜಿಂದಾಲ್ ಕೂಡ ಆರ್‌ಸಿಬಿ ಮೇಲೆ ಕಣ್ಣಿಟ್ಟಿದ್ದಾರೆ ಎಂದು ವರದಿಯಾಗಿತ್ತು. ಆದರೀಗ ಅವರ ಹೆಸರು ಕೂಡ ಕಾಣಿಸುತ್ತಿಲ್ಲ.
ಇನ್ನೊಂದೆಡೆ ಅದಾನಿ ಗ್ರೂಪ್ ಕೂಡ ಆರ್‌ಸಿಬಿ ಫ್ರಾಂಚೈಸಿಯನ್ನು ಖರೀದಿಸಿ ಇಂಡಿಯನ್ ಪ್ರೀಮಿಯರ್ ಲೀಗ್ಗೆ ಎಂಟ್ರಿ ಕೊಡಲು ಪ್ಲ್ಯಾನ್ ಹೊಂದಿದ್ದರು. ಇದೀಗ ಅದಾನಿ ಗ್ರೂಪ್ ಕಡೆಯಿಂದಲೂ ಬಿಡ್ ಸಲ್ಲಿಕೆಯಾಗಿಲ್ಲ ಎಂದು ವರದಿಯಾಗಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಖರೀದಿಗಾಗಿ ಈಗ ಇಬ್ಬರು ಮಾತ್ರ ರೇಸ್ನಲ್ಲಿದ್ದಾರೆ. ಇಬ್ಬರೂ ಸಹ ಬೆಂಗಳೂರು ಮೂಲದವರು ಎಂಬುದು ವಿಶೇಷ. ಅವರೆಂದರೆ…
ಆರ್‌ಸಿಬಿ ಫ್ರಾಂಚೈಸಿಯ ಆರಂಭಿಕ ಬಿಡ್ಡಿಂಗ್ ಮೊತ್ತ ಸುಮಾರು $2 ಬಿಲಿಯನ್ (ಅಂದಾಜು ₹18,500 ಕೋಟಿ) ಎಂದು ಘೋಷಿಸಲಾಗಿದೆ. EQT ಮತ್ತು ಪ್ರೇಮ್‌ಜಿ ಇನ್ವೆಸ್ಟ್ ಕಂಪೆನಿಯು $2.1 ಬಿಲಿಯನ್ ಬಿಡ್ ಮಾಡಿವೆ ಎಂದು ವರದಿಯಾಗಿದೆ. ಇದಾಗ್ಯೂ ರಂಜನ್ ಪೈ ಮತ್ತು ಕೆಕೆಆರ್ (KKR) ಸಲ್ಲಿಸಿರುವ ಬಿಡ್ ಮೊತ್ತದ ಮಾಹಿತಿ ಬಹಿರಂಗವಾಗಿಲ್ಲ. ಹೀಗಾಗಿ ಆರ್‌ಸಿಬಿ ಯಾರ ಪಾಲಾಗಲಿದೆ ಎಂಬುದೇ ಕುತೂಹಲ.
ಇದನ್ನೂ ಓದಿ: IPL 2026: 10 ತಂಡಗಳು ರೆಡಿ: ಯಾರು ಬಲಿಷ್ಠ?