
ಐಪಿಎಲ್ 2026 (IPL 2026) ರಲ್ಲಿ ರಾಜಸ್ಥಾನ್ ರಾಯಲ್ಸ್ (RR) ತಂಡದ ಬ್ಯಾಟಿಂಗ್ ಬೆನ್ನೆಲುಬಾಗಿರುವ ವೈಭವ್ ಸೂರ್ಯವಂಶಿ (Vaibhav Sooryavanshi) ನಿರಂತರವಾಗಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ವೈಭವ್ ಅವರ ಸ್ಫೋಟಕ ಬ್ಯಾಟಿಂಗ್ನಿಂದಾಗಿ ರಾಜಸ್ಥಾನ್ ಪಂದ್ಯಗಳನ್ನು ಗೆದ್ದುಕೊಂಡಿದೆ. ಆದರೆ ವೈಭವ್ ಅವರ ಫೀಲ್ಡಿಂಗ್ ಬಗ್ಗೆ ಭಾರತದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಪ್ರಶ್ನೆಗಳನ್ನು ಎತ್ತಿದ್ದಾರೆ. ವಾಸ್ತವವಾಗಿ ಸೀಸನ್ ಆರಂಭದಲ್ಲಿ ವೈಭವ್ ಅವರನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡಿಸಲಾಗುತ್ತಿತ್ತು. ಆದರೆ ದೆಹಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಫೀಲ್ಡಿಂಗ್ ಮಾಡಿದ್ದ ವೈಭವ್ ಅವರ ಕಳಪೆ ಫೀಲ್ಡಿಂಗ್ ಬಗ್ಗೆ ಕೈಫ್ ಪ್ರಶ್ನೆಗಳನ್ನು ಎತ್ತಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ತಂಡದ ಫೀಲ್ಡಿಂಗ್ ಬಗ್ಗೆ ನಿರಾಶೆ ವ್ಯಕ್ತಪಡಿಸಿ ಮೊಹಮ್ಮದ್ ಕೈಫ್ ಮಾಜಿ ಪೋಸ್ಟ್ ಮಾಡಿದ್ದು, ‘ಐಪಿಎಲ್ ಉದ್ದಕ್ಕೂ ವೈಭವ್ ಒಂದೇ ಒಂದು ಕ್ಯಾಚ್ ಹಿಡಿದಿಲ್ಲ ಎಂದು ಅವರು ತಮ್ಮ ಪೋಸ್ಟ್ನಲ್ಲಿ ಪ್ರಶ್ನಿಸಿದ್ದಾರೆ. ಪ್ರಸ್ತುತ ಐಪಿಎಲ್ ಆವೃತ್ತಿಯಲ್ಲಿ ವೈಭವ್ ಒಂದೇ ಒಂದು ಕ್ಯಾಚ್ ತೆಗೆದುಕೊಂಡಿಲ್ಲ. ಇನ್ನೊಂದು ಗಮನಿಸಬೇಕಾದ ಸಂಗತಿಯೆಂದರೆ ವೈಭವ್ ಅವರನ್ನು ಕ್ಯಾಚಿಂಗ್ ಸ್ಥಾನದಲ್ಲಿ ನಿಯೋಜಿಸಲಾಗಿಲ್ಲ ಎಂದಿದ್ದಾರೆ.
“ಪ್ರಸ್ತುತ ಐಪಿಎಲ್ನಲ್ಲಿ ಫೀಲ್ಡಿಂಗ್ ಮಟ್ಟವನ್ನು ನೋಡುವುದು ನೋವಿನ ಸಂಗತಿ” ಎಂದಿರುವ ಕೈಫ್, ಭಾನುವಾರದ ಪಂದ್ಯದಲ್ಲಿ ಯಶ್ರಾಜ್, ಕೆಎಲ್ ರಾಹುಲ್ ಸೊನ್ನೆಗ ನೀಡಿದ ಕ್ಯಾಚ್ ಅನ್ನು ಕೈಬಿಟ್ಟರು. ಇತ್ತ ವೈಭವ್ ಸೂರ್ಯವಂಶಿ ಕೂಡ ಕಳಪೆ ಫೀಲ್ಡಿಂಗ್ ಮಾಡಿದರು. ವೈಭವ್ ಈ ಆವೃತ್ತಿಯಲ್ಲಿ ಒಂದೇ ಒಂದು ಕ್ಯಾಚ್ ತೆಗೆದುಕೊಂಡಿಲ್ಲ. ಅವರು ಭಾರತದ ಪರ ಆಡಲು ಬಯಸಿದರೆ, ಅವರು ಫೀಲ್ಡಿಂಗ್ನಲ್ಲಿ ಹೆಚ್ಚು ಚುರುಕಾಗಿರಬೇಕು. ಯುವಕರಿಗೆ ಫೀಲ್ಡಿಂಗ್ ಕೌಶಲ್ಯಗಳನ್ನು ಕಲಿಸುವುದು ತಂಡದ ತರಬೇತುದಾರರ ಕರ್ತವ್ಯ. ಯುವಕರು ಫೀಲ್ಡಿಂಗ್ ಅನ್ನು ಆನಂದಿಸಬೇಕು ಎಂದಿದ್ದಾರೆ.
ಮೊಹಮ್ಮದ್ ಕೈಫ್ ಕಳವಳಕ್ಕೆ ಕಾರಣವೂ ಇದ್ದು, ಅಂಕಿಅಂಶಗಳ ಪ್ರಕಾರ ಐಪಿಎಲ್ 2026 ರಲ್ಲಿ ಇದುವರೆಗೆ 153 ಕ್ಯಾಚ್ಗಳನ್ನು ಕೈಬಿಡಲಾಗಿದೆ. ಪಂಜಾಬ್ ಕಿಂಗ್ಸ್ ಮತ್ತು ಸನ್ರೈಸರ್ಸ್ ಹೈದರಾಬಾದ್ ಈ ವಿಷಯದಲ್ಲಿ ಅಗ್ರಸ್ಥಾನದಲ್ಲಿವೆ. ಕೆಲವು ತಂಡಗಳು ಪ್ರಮುಖ ಆಟಗಾರರ ಕ್ಯಾಚ್ ಕೈಚೆಲ್ಲಿದ ಪರಿಣಾಮವಾಗಿ ಪಂದ್ಯವನ್ನು ಸೋತಿವೆ. ಹೀಗಾಗಿ ಈ ಬಗ್ಗೆ ಅನೇಕ ಮಾಜಿ ಆಟಗಾರರು ಪ್ರಶ್ನೆಗಳನ್ನು ಎತ್ತಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ