IPL ಮುಕ್ತಾಯದ ಬೆನ್ನಲ್ಲೇ RCB ತಂಡದ ಮಾಸ್ಟರ್ ಪ್ಲ್ಯಾನ್ ರೆಡಿ!

IPL 2027: ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಮೂರು ತಂಡಗಳು ಮಾತ್ರ ಬ್ಯಾಕ್ ಟು ಬ್ಯಾಕ್ ಟ್ರೋಫಿ ಗೆದ್ದಿದೆ. ಈ ಸಾಧನೆ ಮಾಡಿದ ಮೊದಲ ತಂಡ ಚೆನ್ನೈ ಸೂಪರ್ ಕಿಂಗ್ಸ್​ (2010, 2011). ಇದಾದ ಬಳಿಕ ಮುಂಬೈ ಇಂಡಿಯನ್ಸ್ (2019, 2020) ಈ ಸಾಧನೆ ಮಾಡಿದ್ದರು. ಇದೀಗ ಈ ಪಟ್ಟಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (2025, 2026) ಕೂಡ ಸೇರ್ಪಡೆಯಾಗಿದೆ. ಈ ಸೇರ್ಪಡೆಯೊಂದಿಗೆ ಆರ್​ಸಿಬಿ ಭರ್ಜರಿ ದಾಖಲೆ ಬರೆಯಲು ಪ್ಲ್ಯಾನ್ ರೂಪಿಸಿದ್ದಾರೆ.

IPL ಮುಕ್ತಾಯದ ಬೆನ್ನಲ್ಲೇ RCB ತಂಡದ ಮಾಸ್ಟರ್ ಪ್ಲ್ಯಾನ್ ರೆಡಿ!
Andy - Virat - Mo Bobat
Image Credit source: RCB

Updated on: Jun 03, 2026 | 9:26 PM

ಬ್ಯಾಕ್-ಟು-ಬ್ಯಾಕ್ ಟ್ರೋಫಿ ಗೆದ್ದು ಐಪಿಎಲ್ 2026 ರ ಚಾಂಪಿಯನ್ ಆಗಿ ಹೊರಹೊಮ್ಮಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ, ಈಗಲೇ 2027 ರ ಸೀಸನ್‌ ಮೇಲೆ ಕಣ್ಣಿಟ್ಟಿದೆ. ಗುಜರಾತ್ ಟೈಟಾನ್ಸ್ ವಿರುದ್ಧದ ಫೈನಲ್ ಪಂದ್ಯದ ಭರ್ಜರಿ ಗೆಲುವಿನ ನಂತರ ಡ್ರೆಸ್ಸಿಂಗ್ ರೂಮ್​ನಲ್ಲಿ ಮಾತನಾಡಿದ ಆರ್‌ಸಿಬಿ ಕ್ರಿಕೆಟ್ ನಿರ್ದೇಶಕ ಮೊ ಬೊಬಾಟ್ ಇತಿಹಾಸ ಸೃಷ್ಟಿಸುವ ಹೊಸ ಗುರಿಯನ್ನು ತಂಡದ ಮುಂದೆ ಇಟ್ಟಿದ್ದಾರೆ.

ಆರ್​ಸಿಬಿ ಮುನ್ನುಡಿ:

ಗೆಲುವಿನ ಖುಷಿಯಲ್ಲಿದ್ದ ಆಟಗಾರರನ್ನು ಉದ್ದೇಶಿಸಿ ಮಾತನಾಡಿದ ಮೊ ಬೊಬಾಟ್, “ನಾನು ಕೊನೆಯದಾಗಿ ಒಂದು ಮಾತು ಹೇಳಲು ಬಯಸುತ್ತೇನೆ, ಐಪಿಎಲ್ ಇತಿಹಾಸದಲ್ಲಿ ಇದುವರೆಗೆ ಯಾವ ತಂಡವೂ ಸತತ ಮೂರು ಬಾರಿ ಟ್ರೋಫಿ ಗೆದ್ದಿಲ್ಲ… ಕ್ಯಾಪ್ಟನ್, ನಿಮ್ಮ ಪ್ರಕಾರ ಏನಂತೀರಾ? ಮುಂದಿನ ವರ್ಷ ಮೂರನೇ ಟ್ರೋಫಿ ಗೆಲ್ಲೋಣವಾ?” ಎಂದು ಸವಾಲು ಎಸೆದರು.

ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದ ನಾಯಕ ರಜತ್ ಪಾಟಿದಾರ್, “ಖಂಡಿತವಾಗಿಯೂ ಗೆಲ್ಲಲಿದ್ದೇವೆ!” ಎಂದು ಆತ್ಮವಿಶ್ವಾಸದಿಂದ ಉತ್ತರಿಸಿದ್ದಾರೆ.

ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಂದಿನ ಸೀಸನ್​ಗಾಗಿ ಮುನ್ನುಡಿ ಬರೆದಿದ್ದಾರೆ. ಈ ಮುನ್ನುಡಿಯೊಂದಿಗೆ ಐಪಿಎಲ್ 2027 ರಲ್ಲಿ ಆರ್​ಸಿಬಿ ಪಡೆ ಕಣಕ್ಕಿಳಿಯಲಿದೆ. ಈ ಸ್ಪಷ್ಟ ಗುರಿಯೊಂದಿಗೆ ಐಪಿಎಲ್ ಇತಿಹಾಸದಲ್ಲಿ ಹ್ಯಾಟ್ರಿಕ್ ಟ್ರೋಫಿ ಗೆದ್ದ ಹೊಸ ಇತಿಹಾಸ ಬರೆಯಲು ಆರ್​ಸಿಬಿ ಭರ್ಜರಿ ಪ್ಲ್ಯಾನ್ ಹಾಕಿಕೊಂಡಿದ್ದಾರೆ.

ಬೊಬಾಟ್ ಬೊಂಬಾಟ್ ಪ್ಲ್ಯಾನ್:

ಮೊ ಬೊಬಾಟ್ ಐಪಿಎಲ್ ಮುಕ್ತಾಯದ ಬೆನ್ನಲ್ಲೇ ಆಟಗಾರರಿಗೆ ಹೊಸ ಗುರಿಯ ಸ್ಪಷ್ಟ ಸಂದೇಶ ನೀಡುತ್ತಿರುವುದು ಇದು ಮೊದಲೇನಲ್ಲ. 2025 ರಲ್ಲಿ ಆರ್​ಸಿಬಿ ತಂಡ ಟ್ರೋಫಿ ಗೆದ್ದಾಗಲೂ ಕೊನೆಯ ಡ್ರೆಸ್ಸಿಂಗ್ ರೂಮ್ ಸಂಭಾಷಣೆಯಲ್ಲಿ ಬೊಬಾಟ್ ತಮ್ಮ ಮುಂದಿನ ಗುರಿಯನ್ನು ಒತ್ತಿ ಹೇಳಿದ್ದರು.

ಈ ವೇಳೆ ಮಾತನಾಡಿದ್ದ ಮೊ ಬೊಬಾಟ್ “ಇದು ಕೇವಲ ಆರಂಭ ಅಷ್ಟೇ. ಐಪಿಎಲ್ ಇತಿಹಾಸದಲ್ಲಿ ಬ್ಯಾಕ್-ಟು-ಬ್ಯಾಕ್ ಟ್ರೋಫಿ ಗೆದ್ದ ತಂಡಗಳು ಬಹಳ ಕಮ್ಮಿ. ಇದುವರೆಗೆ ಕೇವಲ ಎರಡು ಬಾರಿ ಮಾತ್ರ ಹಾಗೆ ನಡೆದಿದೆ. ಮುಂದಿನ ವರ್ಷ ಬೆಂಗಳೂರಿನಲ್ಲೇ ಫೈನಲ್ ಇರಲಿದೆ, ನಾವು ಮತ್ತೊಮ್ಮೆ ಗೆಲ್ಲಲಿದ್ದೇವೆ. ಆದ್ದರಿಂದ ಈ ಗೆಲುವಿನ ಅಮಲನ್ನು ಇಂದಿನ ರಾತ್ರಿಯೇ ಮೈಗೂಡಿಸಿಕೊಳ್ಳಿ, ಏಕೆಂದರೆ ಇದೇ ಹಸಿವು ಮುಂದಿನ ವರ್ಷವೂ ನಮ್ಮನ್ನು ಮುನ್ನಡೆಸುತ್ತದೆ.” ಎಂದಿದ್ದರು.

ಅವರ ನಿರೀಕ್ಷೆ ಹುಸಿಯಾಗಲಿಲ್ಲ. ಕಳೆದ ಬಾರಿಯ ಚಾಂಪಿಯನ್ ಪಟ್ಟದೊಂದಿಗೆ ಕಣಕ್ಕಿಳಿದಿದ್ದ ಆರ್​ಸಿಬಿ ಈ ಬಾರಿ ರಣ ಉತ್ಸಾಹದಲ್ಲಿ ಪಂದ್ಯವಾಡಿದ್ದರು. ಅಷ್ಟೇ ಅಲ್ಲದೆ ಫೈನಲ್ ಮ್ಯಾಚ್​ನಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಮಣಿಸಿ ಎರಡನೇ ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: IPL 2027: RCB ರಿಲೀಸ್ ಮಾಡಲಿರುವ ಸಂಭಾವ್ಯ ಆಟಗಾರರ ಪಟ್ಟಿ ಇಲ್ಲಿದೆ

ಇದೀಗ ಮತ್ತೊಮ್ಮೆ ಹ್ಯಾಟ್ರಿಕ್ ಟ್ರೋಫಿಯ ಕನಸು ಬಿತ್ತಿ ಮೊ ಬೊಬಾಟ್ ಐಪಿಎಲ್ ಕೊನೆಗೊಳಿಸಿದ್ದಾರೆ. ಹೀಗಾಗಿ ಮುಂದಿನ ಸೀಸನ್​ನಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಡೆಯಿಂದ ಭರ್ಜರಿ ಪ್ರದರ್ಶನವನ್ನು ನಿರೀಕ್ಷಿಸಬಹುದು. ಈ ಪ್ರದರ್ಶನದೊಂದಿಗೆ ಆರ್​ಸಿಬಿ ಹ್ಯಾಟ್ರಿಕ್ ಟ್ರೋಫಿ ಗೆದ್ದು ಇತಿಹಾಸ ನಿರ್ಮಿಸಲಿದ್ದಾರಾ ಕಾದು ನೋಡಬೇಕಿದೆ.

Published On - 2:15 pm, Wed, 3 June 26

Loading...
Unable to load recommendations.
Follow Us