CSK vs GT: 8 ಎಸೆತಗಳಲ್ಲಿ 3 ವಿಕೆಟ್‌; ಪರಿಣಾಮ ಬೀರದ ಇಂಪ್ಯಾಕ್ಟ್ ಪ್ಲೇಯರ್

IPL 2026 Match 37: ಐಪಿಎಲ್ 2026 ರ 37ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್, ಗುಜರಾತ್ ಟೈಟಾನ್ಸ್ ಎದುರು ತವರಿನಲ್ಲಿ ಬ್ಯಾಟಿಂಗ್ ಕುಸಿತ ಕಂಡಿತು. ಕೇವಲ 8 ಎಸೆತಗಳಲ್ಲಿ 3 ವಿಕೆಟ್ ಕಳೆದುಕೊಂಡು ಪವರ್‌ಪ್ಲೇನಲ್ಲಿಯೇ ಕಳಪೆ ಆರಂಭ ಪಡೆಯಿತು. ಇದರಿಂದಾಗಿ ಸಿಎಸ್‌ಕೆ 5ನೇ ಓವರ್‌ನಲ್ಲೇ ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ಬಳಸುವ ಅನಿವಾರ್ಯತೆಗೆ ಸಿಲುಕಿತು. ಆವೃತ್ತಿಯಲ್ಲಿ ಸಿಎಸ್‌ಕೆ ಅತಿ ಬೇಗ ಇಂಪ್ಯಾಕ್ಟ್ ಪ್ಲೇಯರ್ ಬಳಸಿದ ಎರಡನೇ ಘಟನೆ ಇದಾಗಿದೆ.

CSK vs GT: 8 ಎಸೆತಗಳಲ್ಲಿ 3 ವಿಕೆಟ್‌; ಪರಿಣಾಮ ಬೀರದ ಇಂಪ್ಯಾಕ್ಟ್ ಪ್ಲೇಯರ್
Csk

Updated on: Apr 26, 2026 | 5:34 PM

ಐಪಿಎಲ್ 2026 (IPL 2026) ರ 37 ನೇ ಪಂದ್ಯದಲ್ಲಿ, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ (CSK vs GT) ತಂಡಗಳು MA ಚಿದಂಬರಂ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಿದ್ದವು. ತವರಿನಲ್ಲಿ ಟಾಸ್ ಸೋತ ಸಿಎಸ್​​ಕೆ ಮೊದಲು ಬ್ಯಾಟಿಂಗ್‌ ಮಾಡಬೇಕಾಯಿತು. ತವರು ಮೈದಾನವಾಗಿದ್ದರಿಂದ ಸಿಎಸ್​ಕೆ ಉತ್ತಮ ಆರಂಭ ಪಡೆಯುವ ನಿರೀಕ್ಷೆ ಇತ್ತು. ಆದರೆ ಗುಜರಾತ್​​ನ ಸಾಂಘಿಕ ದಾಳಿಗೆ ತತ್ತರಿಸಿದ ಸಿಎಸ್​​ಕೆ ಬ್ಯಾಟಿಂಗ್‌ ವಿಭಾಗ ಪವರ್‌ಪ್ಲೇನಲ್ಲಿಯೇ ಪವರ್ ಕಳೆದುಕೊಂಡಿತು. ಪರಿಣಾಮವಾಗಿ, ತಂಡವು ಪಂದ್ಯದ ಆರಂಭದಲ್ಲಿಯೇ ಅಂದರೆ 5 ಓವರ್​ಗಳ ಒಳಗೆಯೇ ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ಬಳಸಬೇಕಾಯಿತು.

8 ಎಸೆತಗಳಲ್ಲಿ 3 ವಿಕೆಟ್‌

ಎಂದಿನಂತೆ ಸಿಎಸ್​ಕೆ ತಂಡ ಉತ್ತಮ ಆರಂಭ ಪಡೆಯುವಲ್ಲಿ ಮತ್ತೊಮ್ಮೆ ಎಡವಿತು. ಫಾರ್ಮ್‌ನಲ್ಲಿರುವ ಸಂಜು ಸ್ಯಾಮ್ಸನ್ ಕೇವಲ 15 ಎಸೆತಗಳಲ್ಲಿ 11 ರನ್‌ಗಳಿಸಿ ವಿಕೆಟ್ ಒಪ್ಪಿಸಿದರು. ಹೀಗಾಗಿ ಚೆನ್ನೈ ಸೂಪರ್ ಕಿಂಗ್ಸ್ ನಾಲ್ಕನೇ ಓವರ್‌ನಲ್ಲಿ ತನ್ನ ಮೊದಲ ವಿಕೆಟ್ ಕಳೆದುಕೊಂಡಿತು. ಅದೇ ಓವರ್‌ನ ಕೊನೆಯ ಎಸೆತದಲ್ಲಿ ಉರ್ವಿಲ್ ಪಟೇಲ್ ಕೂಡ ರಬಾಡಗೆ ಬಲಿಯಾದರು. ಹೀಗಾಗಿ ಸಿಎಸ್​ಕೆ ಒಂದೇ ಓವರ್​​ನಲ್ಲಿ ಎರಡು ವಿಕೆಟ್ ಕಳೆದುಕೊಂಡಿತು. ಆದ್ದರಿಂದ ಸಿಎಸ್​​ಕೆ ಐದನೇ ಓವರ್​ನಲ್ಲಿಯೇ ಇಂಪ್ಯಾಕ್ಟ್ ಪ್ಲೇಯರ್ ಆಗಿ ಸರ್ಫರಾಜ್ ಖಾನ್ ಅವರನ್ನು ಕಣಕ್ಕಿಳಿಸಬೇಕಾಯಿತು.

ಪರಿಣಾಮಕಾರಿಯಾಗದ ಇಂಪ್ಯಾಕ್ಟ್ ಪ್ಲೇಯರ್

ಆದರೆ ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಂದ ಸರ್ಫರಾಜ್ ಖಾನ್ ಕೂಡ ತಂಡಕ್ಕೆ ನೆರವಾಗಲಿಲ್ಲ. ಸಿರಾಜ್ ಬೌಲ್ ಮಾಡಿದ ಐದನೇ ಓವರ್​ನಲ್ಲಿ ಸರ್ಫರಾಜ್ ಖಾನ್ ಶೂನ್ಯಕ್ಕೆ ಔಟಾದರು. ಹೀಗಾಗಿ ಸಿಎಸ್‌ಕೆ ಕೇವಲ 8 ಎಸೆತಗಳಲ್ಲಿ ತನ್ನ ಮೊದಲ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು. ಗಮನಿಸಬೇಕಾದ ಸಂಗತಿಯೆಂದರೆ, ಸಿಎಸ್​ಕೆ ಇಂಪ್ಯಾಕ್ಟ್ ಪ್ಲೇಯರ್ ಅನ್ನು ಇಷ್ಟು ಬೇಗ ಕಣಕ್ಕಿಳಿಸಿದ್ದು, ಈ ಆವೃತ್ತಿಯಲ್ಲಿ ಇದು ಎರಡನೇ ಬಾರಿ.

CSK vs GT IPL 2026 Live Score: ಗುಜರಾತ್​ಗೆ 159 ರನ್ ಗುರಿ

ಇದಕ್ಕೂ ಮೊದಲು, ಗುವಾಹಟಿಯಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಆಯುಷ್ ಮ್ಹಾತ್ರೆ ಬದಲಿಗೆ ಸರ್ಫರಾಜ್ ಖಾನ್ ಅವರನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡಿಸಲಾಗಿತ್ತು. ಆಗಲೂ ತಂಡವು ನಾಲ್ಕನೇ ಓವರ್‌ನಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಅನ್ನು ಕಣಕ್ಕಿಳಿಸಿತ್ತು. ಆದರೆ, ಚೆನ್ನೈ ಸೂಪರ್ ಕಿಂಗ್ಸ್ ಆ ಪಂದ್ಯವನ್ನು ಸೋತಿತ್ತು. ಇನ್ನು ಈ ಪಂದ್ಯದಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡಿದ ಉರ್ವಿಲ್ ಪಟೇಲ್ ಕೂಡ ಯಾವುದೇ ಪರಿಣಾಮ ಬೀರದೆ ಪೆವಿಲಿಯನ್ ಸೇರಿಕೊಂಡರು. ಉರ್ವಿಲ್ ಪಟೇಲ್ 3 ಎಸೆತಗಳಲ್ಲಿ ಒಂದು ಬೌಂಡರಿ ಸಹಿತ 4 ರನ್ ಗಳಿಸಲಷ್ಟೇ ಶಕ್ತರಾಗಿ ವಿಕೆಟ್ ಒಪ್ಪಿಸಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:26 pm, Sun, 26 April 26

Follow Us