CSK vs GT IPL 2026 Highlights: ಸಿಎಸ್ಕೆ ವಿರುದ್ಧ ಗುಜರಾತ್ಗೆ ಸುಲಭ ಜಯ
Chennai Super Kings vs Gujarat Titans, IPL 2026 Highlights: ಇಂಡಿಯನ್ ಪ್ರೀಮಿಯರ್ ಲೀಗ್ 2026 ರ 37 ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್, ತನ್ನ ತವರು ನೆಲದಲ್ಲಿ ಆಡುತ್ತಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ 2026 ರ 37 ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್, ತನ್ನ ತವರು ನೆಲದಲ್ಲಿ ಆಡುತ್ತಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 158 ರನ್ ಗಳಿಸಿತು. ತಂಡದ ಪರ ರುತುರಾಜ್ ಗಾಯಕ್ವಾಡ್ ಅಜೇಯ ಅರ್ಧಶತಕವನ್ನು ಆಡಿದರು. 159 ರನ್‌ಗಳ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಗುಜರಾತ್ ಟೈಟಾನ್ಸ್ ಆರಂಭದಿಂದಲೇ ಆಕ್ರಮಣಕಾರಿಯಾಗಿ ಆಡಿತು. ಆರಂಭಿಕರಾದ ಶುಭಮನ್ ಗಿಲ್ ಮತ್ತು ಸಾಯಿ ಸುದರ್ಶನ್ ಮೊದಲ ವಿಕೆಟ್‌ಗೆ ಉತ್ತಮ ಜೊತೆಯಾಟ ನೀಡಿದರು. ಹೀಗಾಗಿ ಗುಜರಾತ್ 16.4 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು ಗುರಿ ಬೆನ್ನಟ್ಟಿತು.
LIVE NEWS & UPDATES
-
CSK vs GT IPL 2026: ಗುಜರಾತ್ಗೆ 8 ವಿಕೆಟ್ ಜಯ
ಗುಜರಾತ್ ಟೈಟಾನ್ಸ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸಿತು. ಗುಜರಾತ್ ಟೈಟಾನ್ಸ್ 16.4 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 162 ರನ್‌ಗಳ ಗುರಿ ಬೆನ್ನಟ್ಟಿತು. ಜೋಸ್ ಬಟ್ಲರ್ 39 ಮತ್ತು ವಾಷಿಂಗ್ಟನ್ ಸುಂದರ್ 1 ರನ್ ಗಳಿಸಿ ಅಜೇಯರಾಗಿ ಉಳಿದರು.
-
CSK vs GT IPL 2026: 12 ಓವರ್ ಪೂರ್ಣ
ಗುಜರಾತ್ ಟೈಟಾನ್ಸ್ 12 ಓವರ್‌ಗಳಲ್ಲಿ 1 ವಿಕೆಟ್‌ಗೆ 102 ರನ್ ಗಳಿಸಿದೆ. ಗೆಲ್ಲಲು 48 ಎಸೆತಗಳಲ್ಲಿ 57 ರನ್‌ಗಳ ಅವಶ್ಯಕತೆಯಿದೆ. ಸಾಯಿ ಸುದರ್ಶನ್ 51 ರನ್‌ಗಳೊಂದಿಗೆ ಮತ್ತು ಜೋಸ್ ಬಟ್ಲರ್ 17 ರನ್‌ಗಳೊಂದಿಗೆ ಕ್ರೀಸ್‌ನಲ್ಲಿದ್ದಾರೆ.
-
-
CSK vs GT IPL 2026: 8 ಓವರ್ ಪೂರ್ಣ
ಗುಜರಾತ್ ಟೈಟಾನ್ಸ್ 8 ಓವರ್‌ಗಳಲ್ಲಿ 1 ವಿಕೆಟ್‌ಗೆ 69 ರನ್ ಗಳಿಸಿದೆ. ಗೆಲ್ಲಲು 72 ಎಸೆತಗಳಲ್ಲಿ 90 ರನ್ ಗಳಿಸಬೇಕಾಗಿದೆ. ಸಾಯಿ ಸುದರ್ಶನ್ 32 ಮತ್ತು ಜೋಸ್ ಬಟ್ಲರ್ 3 ರನ್ ಗಳಿಸಿದ್ದಾರೆ.
-
CSK vs GT IPL 2026: ಗಿಲ್ ಔಟ್
ಶುಭಮನ್ ಗಿಲ್ ಸ್ಟಂಪ್ ಔಟ್ ಆದರು. ಗಿಲ್ 23 ಎಸೆತಗಳಲ್ಲಿ 33 ರನ್ ಗಳಿಸಿ ಔಟಾದರು. ಸಾಯಿ ಸುದರ್ಶನ್ 24 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ. ಗುಜರಾತ್ ಟೈಟಾನ್ಸ್ 6.2 ಓವರ್ ಗಳಲ್ಲಿ 1 ವಿಕೆಟ್ ಗೆ 58 ರನ್ ಗಳಿಸಿದೆ. ಗೆಲ್ಲಲು 82 ಎಸೆತಗಳಲ್ಲಿ 101 ರನ್ ಗಳ ಅವಶ್ಯಕತೆಯಿದೆ.
-
CSK vs GT IPL 2026: ಗುಜರಾತ್ ಬ್ಯಾಟಿಂಗ್ ಆರಂಭ
ಗುಜರಾತ್ ಟೈಟಾನ್ಸ್ ಮೂರು ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 30 ರನ್ ಗಳಿಸಿದೆ. ಗೆಲ್ಲಲು 129 ರನ್‌ಗಳ ಅವಶ್ಯಕತೆಯಿದೆ. ಶುಭಮನ್ ಗಿಲ್ 21 ರನ್‌ಗಳೊಂದಿಗೆ ಮತ್ತು ಸಾಯಿ ಸುದರ್ಶನ್ 9 ರನ್‌ಗಳೊಂದಿಗೆ ಕ್ರೀಸ್‌ನಲ್ಲಿದ್ದಾರೆ.
-
-
CSK vs GT IPL 2026: 159 ರನ್‌ಗಳ ಗುರಿ
ಚೆನ್ನೈ ಸೂಪರ್ ಕಿಂಗ್ಸ್ 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 158 ರನ್ ಗಳಿಸಿತು. ರುತುರಾಜ್ ಗಾಯಕ್ವಾಡ್ ಅಜೇಯ ಅರ್ಧಶತಕ ಗಳಿಸಿದರು, ಬಹಳ ನಿಧಾನವಾಗಿ ಬ್ಯಾಟಿಂಗ್ ಮಾಡಿ, 60 ಎಸೆತಗಳಲ್ಲಿ 74 ರನ್ ಗಳಿಸಿದರು.
-
CSK vs GT IPL 2026: ಓವರ್ಟನ್ ಔಟ್
ಜೇಮಿ ಓವರ್ಟನ್ 18 ರನ್ ಗಳಿಸಿ ಔಟ್ ಆದರು. ರುತುರಾಜ್ ಗಾಯಕ್ವಾಡ್ 60 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ 19 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 143 ರನ್ ಗಳಿಸಿದೆ.
-
CSK vs GT IPL 2026: 6ನೇ ವಿಕೆಟ್ ಪತನ
ಕಾರ್ತಿಕ್ ಶರ್ಮಾ 9 ಎಸೆತಗಳಲ್ಲಿ 15 ರನ್ ಗಳಿಸಿ ಕಗಿಸೊ ರಬಾಡ ಬೌಲಿಂಗ್ ನಲ್ಲಿ ಔಟ್ ಆದರು. ಚೆನ್ನೈ ಸೂಪರ್ ಕಿಂಗ್ಸ್ 18 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 122 ರನ್ ಗಳಿಸಿದೆ.
-
CSK vs GT IPL 2026: ಗಾಯಕ್ವಾಡ್ 49 ಎಸೆತಗಳಲ್ಲಿ ಅರ್ಧಶತಕ
ರುತುರಾಜ್ ಗಾಯಕ್ವಾಡ್ 49 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಚೆನ್ನೈ ಸೂಪರ್ ಕಿಂಗ್ಸ್ 16.1 ಓವರ್‌ಗಳಲ್ಲಿ 5 ವಿಕೆಟ್‌ಗೆ 104 ರನ್ ಗಳಿಸಿದೆ. ಕಾರ್ತಿಕ್ ಶರ್ಮಾ 6 ರನ್‌ಗಳೊಂದಿಗೆ ಕ್ರೀಸ್‌ನಲ್ಲಿದ್ದಾರೆ.
-
CSK vs GT IPL 2026: 12 ಓವರ್ ಪೂರ್ಣ
ಚೆನ್ನೈ ಸೂಪರ್ ಕಿಂಗ್ಸ್ 12 ಓವರ್‌ಗಳಲ್ಲಿ 4 ವಿಕೆಟ್‌ಗೆ 51 ರನ್ ಗಳಿಸಿದೆ. ರುತುರಾಜ್ ಗಾಯಕ್ವಾಡ್ 20 ರನ್‌ಗಳೊಂದಿಗೆ ಮತ್ತು ಶಿವಂ ದುಬೆ 10 ರನ್‌ಗಳೊಂದಿಗೆ ಕ್ರೀಸ್‌ನಲ್ಲಿದ್ದಾರೆ.
-
CSK vs GT IPL 2026: 7 ಓವರ್ ಪೂರ್ಣ
ಚೆನ್ನೈ ಸೂಪರ್ ಕಿಂಗ್ಸ್ 7 ಓವರ್‌ಗಳಲ್ಲಿ 3 ವಿಕೆಟ್‌ಗೆ 33 ರನ್ ಗಳಿಸಿದೆ. ರುತುರಾಜ್ ಗಾಯಕ್ವಾಡ್ 15 ರನ್‌ಗಳೊಂದಿಗೆ ಮತ್ತು ಡೆವಾಲ್ಡ್ ಬ್ರೆವಿಸ್ 2 ರನ್‌ಗಳೊಂದಿಗೆ ಕ್ರೀಸ್‌ನಲ್ಲಿದ್ದಾರೆ. ಗುಜರಾತ್ ಟೈಟಾನ್ಸ್ ಅದ್ಭುತ ಬೌಲಿಂಗ್ ಮಾಡಿದೆ.
-
CSK vs GT IPL 2026: ಸರ್ಫರಾಜ್ ಔಟ್
ಸರ್ಫರಾಜ್ ಖಾನ್ ಅವರನ್ನು ಮೊಹಮ್ಮದ್ ಸಿರಾಜ್ ಔಟ್ ಮಾಡಿದರು. ಸರ್ಫರಾಜ್ ಖಾತೆ ತೆರೆಯುವಲ್ಲಿ ವಿಫಲರಾದರು. ಚೆನ್ನೈ ಸೂಪರ್ ಕಿಂಗ್ಸ್ 4.4 ಓವರ್‌ಗಳಲ್ಲಿ 3 ವಿಕೆಟ್‌ಗೆ 26 ರನ್ ಗಳಿಸಿದೆ. ಡೆವಾಲ್ಡ್ ಬ್ರೆವಿಸ್ ಹೊಸ ಬ್ಯಾಟ್ಸ್‌ಮನ್.
-
CSK vs GT IPL 2026: ಸಂಜು ಸ್ಯಾಮ್ಸನ್ ಔಟ್
ಸಂಜು ಸ್ಯಾಮ್ಸನ್ 15 ಎಸೆತಗಳಲ್ಲಿ 11 ರನ್ ಗಳಿಸಿ ಕಗಿಸೊ ರಬಾಡ ಬೌಲಿಂಗ್ ನಲ್ಲಿ ಔಟಾದರು. ಚೆನ್ನೈ ಸೂಪರ್ ಕಿಂಗ್ಸ್ 3.3 ಓವರ್ ಗಳಲ್ಲಿ 1 ವಿಕೆಟ್ ಗೆ 21 ರನ್ ಗಳಿಸಿದೆ.
-
CSK vs GT IPL 2026: 3 ಓವರ್ ಪೂರ್ಣ
ರುತುರಾಜ್ ಗಾಯಕ್ವಾಡ್ ಎರಡು ಬೌಂಡರಿಗಳೊಂದಿಗೆ ತಮ್ಮ ಖಾತೆಯನ್ನು ತೆರೆದರು. ಚೆನ್ನೈ ಸೂಪರ್ ಕಿಂಗ್ಸ್ 3 ಓವರ್‌ಗಳಲ್ಲಿ ವಿಕೆಟ್ ಇಲ್ಲದೆ 21 ರನ್ ಗಳಿಸಿದೆ. ಸಂಜು ಸ್ಯಾಮ್ಸನ್ 11 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.
-
CSK vs GT IPL 2026: ಗುಜರಾತ್ ಟೈಟಾನ್ಸ್
ಸಾಯಿ ಸುದರ್ಶನ್, ಶುಭಮನ್ ಗಿಲ್ (ನಾಯಕ), ಜೋಸ್ ಬಟ್ಲರ್ (ವಿಕೆಟ್ ಕೀಪರ್), ಶಾರುಖ್ ಖಾನ್, ವಾಷಿಂಗ್ಟನ್ ಸುಂದರ್, ಜೇಸನ್ ಹೋಲ್ಡರ್, ರಶೀದ್ ಖಾನ್, ಅರ್ಷದ್ ಖಾನ್, ಕಗಿಸೊ ರಬಾಡ, ಮೊಹಮ್ಮದ್ ಸಿರಾಜ್ ಮತ್ತು ಮಾನವ್ ಸುತಾರ್.
-
CSK vs GT IPL 2026: ಚೆನ್ನೈ ಸೂಪರ್ ಕಿಂಗ್ಸ್
ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ರುತುರಾಜ್ ಗಾಯಕ್ವಾಡ್ (ನಾಯಕ), ಉರ್ವಿಲ್ ಪಟೇಲ್, ಡೆವಾಲ್ಡ್ ಬ್ರೆವಿಸ್, ಶಿವಂ ದುಬೆ, ಕಾರ್ತಿಕ್ ಶರ್ಮಾ, ಜೇಮೀ ಓವರ್ಟನ್, ಅಕೇಲ್ ಹೊಸೈನ್, ನೂರ್ ಅಹ್ಮದ್, ಅನ್ಶುಲ್ ಕಾಂಬೋಜ್ ಮತ್ತು ಗುರ್ಜಪ್ನೀತ್ ಸಿಂಗ್.
-
CSK vs GT IPL 2026: ಟಾಸ್ ಗೆದ್ದ ಗುಜರಾತ್
ಟಾಸ್ ಗೆದ್ದ ಗುಜರಾತ್ ನಾಯಕ ಶುಭ್ಮನ್ ಗಿಲ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
Published On - Apr 26,2026 3:02 PM
