AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

MI vs CSK: ಬರೋಬ್ಬರಿ 103 ರನ್..! ಐಪಿಎಲ್ ಇತಿಹಾಸದಲ್ಲೇ ಅತಿ ಹೀನಾಯ ಸೋಲು ಕಂಡ ಮುಂಬೈ

Mumbai Indians Suffers Biggest IPL Defeat: ಐಪಿಎಲ್ 2026 ರ 33ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ತಂಡ ವಾಂಖೆಡೆ ಕ್ರೀಡಾಂಗಣದಲ್ಲಿ 103 ರನ್‌ಗಳ ಹೀನಾಯ ಸೋಲು ಅನುಭವಿಸಿದೆ. ಮೊದಲು ಬ್ಯಾಟ್ ಮಾಡಿದ ಸಿಎಸ್‌ಕೆ 207 ರನ್ ಗಳಿಸಿದರೆ, ಮುಂಬೈ ಕೇವಲ 104 ರನ್‌ಗಳಿಗೆ ಆಲೌಟ್ ಆಯಿತು. ಇದು ಐಪಿಎಲ್ ಇತಿಹಾಸದಲ್ಲೇ ಮುಂಬೈಗೆ ದಾಖಲಾದ ಅತಿ ದೊಡ್ಡ ಸೋಲಾಗಿದ್ದು, ಬ್ಯಾಟಿಂಗ್ ವೈಫಲ್ಯವೇ ಪ್ರಮುಖ ಕಾರಣ.

MI vs CSK: ಬರೋಬ್ಬರಿ 103 ರನ್..! ಐಪಿಎಲ್ ಇತಿಹಾಸದಲ್ಲೇ ಅತಿ ಹೀನಾಯ ಸೋಲು ಕಂಡ ಮುಂಬೈ
Mumbai Indians
ಪೃಥ್ವಿಶಂಕರ
|

Updated on:Apr 23, 2026 | 11:36 PM

Share

ಐಪಿಎಲ್ 2026 (IPL 2026) ರ 33 ನೇ ಪಂದ್ಯ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ (MI vs CSK) ನಡುವೆ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಿತು. ಮುಂಬೈನ ತವರು ಮೈದಾನವಾದ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಆತಿಥೇಯ ಮುಂಬೈ 103 ರನ್​​ಗಳ ಹೀನಾಯ ಸೋಲು ಅನುಭವಿಸಿತು. ಈ ಆವೃತ್ತಿಯಲ್ಲಿ ಮುಂಬೈ ತಂಡದ 5ನೇ ಸೋಲು ಇದಾದರೆ, ಸಿಎಸ್​​ಕೆ ತಂಡದ ಮೂರನೇ ಗೆಲುವಾಗಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಸಿಎಸ್​​ಕೆ ತಂಡ 20 ಓವರ್​ಗಳಲ್ಲಿ 207 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಮುಂಬೈ ತಂಡ ಬ್ಯಾಟಿಂಗ್‌ ವಿಭಾಗದ ವೈಫಲ್ಯದಿಂದಾಗಿ ಕೇವಲ 104 ರನ್​ ಕಲೆಹಾಕಲಷ್ಟೇ ಶಕ್ತವಾಗಿ ಐಪಿಎಲ್ ಇತಿಹಾಸದಲ್ಲೇ ಅತಿ ದೊಡ್ಡ ಸೋಲು ದಾಖಲಿಸಿತು.

ಸಿಎಸ್​​ಕೆಗೆ ಸಂಜು ಶತಕದ ಬಲ

ಚೆನ್ನೈ ತಂಡದ ಈ ದಾಖಲೆಯ ಗೆಲುವಿನ ಹೀರೋ ಎಂದರೆ ಅದು ಸಂಜು ಸ್ಯಾಮ್ಸನ್. ಸಂಜು ಕೇವಲ 54 ಎಸೆತಗಳಲ್ಲಿ 10 ಬೌಂಡರಿ ಮತ್ತು 6 ಸಿಕ್ಸರ್‌ಗಳ ಸಹಾಯದಿಂದ ಅಜೇಯ 101 ರನ್ ಗಳಿಸಿದರು. ಸತತ 7ನೇ ಪಂದ್ಯದಲ್ಲೂ ಬಿಗ್ ಇನ್ನಿಂಗ್ಸ್ ಆಡುವಲ್ಲಿ ಎಡವಿದ ನಾಯಕ ರುತುರಾಜ್ ಗಾಯಕ್ವಾಡ್ ಕೂಡ 22 ರನ್‌ಗಳ ಕಾಣಿಕೆ ನೀಡಿದರು. ಡೆವಾಲ್ಡ್ ಬ್ರೆವಿಸ್ 21 ರನ್‌ ಮತ್ತು ಕಾರ್ತಿಕ್ ಶರ್ಮಾ 18 ರನ್‌ಗಳ ಇನ್ನಿಂಗ್ಸ್ ಆಡುವ ಮೂಲಕ ಸಂಜು ಇನ್ನಿಂಗ್ಸ್​​ಗೆ ಬಲ ತುಂಬಿದರು.

ಮುಂಬೈ ತಂಡದ ಕಳಪೆ ಬ್ಯಾಟಿಂಗ್

ಈ ಬೃಹತ್ ಗುರಿಯನ್ನು ಬೆನ್ನಟ್ಟಿದ ಮುಂಬೈ ತಂಡ ಕಳಪೆ ಆರಂಭವನ್ನೇ ಪಡೆಯಿತು. ಪವರ್‌ಪ್ಲೇನಲ್ಲಿ ಮೂರು ವಿಕೆಟ್‌ಗಳನ್ನು ಕಳೆದುಕೊಂಡು ತಂಡ ಸಂಕಷ್ಟದಲ್ಲಿ ಸಿಲುಕಿತು. ತಿಲಕ್ ವರ್ಮಾ 37 ರನ್ ಮತ್ತು ಸೂರ್ಯಕುಮಾರ್ ಯಾದವ್ 35 ರನ್ ಗಳಿಸಿದರಾದರೂ ಅವರು ಕೂಡ ಬಿಗ್ ಇನ್ನಿಂಗ್ಸ್ ಆಡಲಿಲ್ಲ. ಈ ಇಬ್ಬರನ್ನು ಹೊರತುಪಡಿಸಿ ಮುಂಬೈ ತಂಡದ ಯಾವುದೇ ಬ್ಯಾಟ್ಸ್‌ಮನ್ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ. ಪರಿಣಾಮವಾಗಿ, ತಂಡವು 19 ಓವರ್‌ಗಳಲ್ಲಿ 104 ರನ್‌ಗಳಿಗೆ ಆಲೌಟ್ ಆಯಿತು.

MI vs CSK IPL 2026 Highlights: ಸಿಎಸ್​​ಕೆ ವಿರುದ್ಧ ಮುಂಬೈಗೆ 103 ರನ್​ಗಳ ಹೀನಾಯ ಸೋಲು

ಮಿಂಚಿದ ಹುಸೇನ್ – ನೂರ್

ಚೆನ್ನೈ ಪರ ಬೌಲಿಂಗ್‌ನಲ್ಲಿ ಅಕೀಲ್ ಹುಸೇನ್ ಮತ್ತು ನೂರ್ ಅಹ್ಮದ್ ಪ್ರಾಬಲ್ಯ ಮೆರೆದರು. ಹುಸೇನ್ ನಾಲ್ಕು ಓವರ್‌ಗಳಲ್ಲಿ ಕೇವಲ 17 ರನ್‌ಗಳಿಗೆ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದರು. ಅವರ ಮಾರಕ ಸ್ಪಿನ್ ಮುಂಬೈ ತಂಡದ ಬ್ಯಾಟಿಂಗ್ ವಿಭಾಗವನ್ನು ಸಂಪೂರ್ಣವಾಗಿ ನಾಶಮಾಡಿತು. ನೂರ್ ಅಹ್ಮದ್ ಕೂಡ ಎರಡು ವಿಕೆಟ್‌ಗಳನ್ನು ಪಡೆದರು. ಮುಖೇಶ್ ಚೌಧರಿ, ಅನ್ಶುಲ್ ಕಾಂಬೋಜ್, ಜೇಮಿ ಓವರ್ಟನ್ ಮತ್ತು ಗುರ್ಜಪ್ನೀತ್ ಸಿಂಗ್ ತಲಾ ಒಂದು ವಿಕೆಟ್ ಪಡೆದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:24 pm, Thu, 23 April 26

Follow Us
pruthvi Shankar
pruthvi Shankar

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
ಗಿನ್ನಿಸ್ ದಾಖಲೆ ಪುಟ ಸೇರಲಿದೆಯಾ ಕಾಂಗ್ರೆಸ್​​ ಸಾಧನಾ ಸಮಾವೇಶ?
ಗಿನ್ನಿಸ್ ದಾಖಲೆ ಪುಟ ಸೇರಲಿದೆಯಾ ಕಾಂಗ್ರೆಸ್​​ ಸಾಧನಾ ಸಮಾವೇಶ?
33ನೇ ವಯಸ್ಸಿಗೆ ದುರಂತ ಅಂತ್ಯ ಕಂಡ ಟ್ವಿಶಾ ಶರ್ಮಾ ಜೀವನ; ಸಾವಿಗೆ ಕಾರಣ ಏನು?
33ನೇ ವಯಸ್ಸಿಗೆ ದುರಂತ ಅಂತ್ಯ ಕಂಡ ಟ್ವಿಶಾ ಶರ್ಮಾ ಜೀವನ; ಸಾವಿಗೆ ಕಾರಣ ಏನು?
ಇಂಡಿಗೋ ವಿಮಾನದೊಳಗೆ ಎಸಿ, ಕರೆಂಟ್ ಇಲ್ಲದೆ ಒದ್ದಾಡಿದ ಪ್ರಯಾಣಿಕರು
ಇಂಡಿಗೋ ವಿಮಾನದೊಳಗೆ ಎಸಿ, ಕರೆಂಟ್ ಇಲ್ಲದೆ ಒದ್ದಾಡಿದ ಪ್ರಯಾಣಿಕರು
ನಾರ್ವೆಯಲ್ಲಿ ಭಾರತೀಯ ವಲಸಿಗರಿಂದ ಪ್ರಧಾನಿ ಮೋದಿಗೆ ಭವ್ಯ ಸ್ವಾಗತ
ನಾರ್ವೆಯಲ್ಲಿ ಭಾರತೀಯ ವಲಸಿಗರಿಂದ ಪ್ರಧಾನಿ ಮೋದಿಗೆ ಭವ್ಯ ಸ್ವಾಗತ
ಯೂತ್ ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಮಾರಾಮಾರಿ; ಬಿಂದುಗೌಡ ಹೇಳಿದ್ದಿಷ್ಟು
ಯೂತ್ ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಮಾರಾಮಾರಿ; ಬಿಂದುಗೌಡ ಹೇಳಿದ್ದಿಷ್ಟು
ರೈತರಿಗೆ ಗುಡ್​ ನ್ಯೂಸ್: ಜೂನ್ ಮೊದಲ ವಾರದಲ್ಲೇ ಮುಂಗಾರು ಮಳೆ
ರೈತರಿಗೆ ಗುಡ್​ ನ್ಯೂಸ್: ಜೂನ್ ಮೊದಲ ವಾರದಲ್ಲೇ ಮುಂಗಾರು ಮಳೆ
ರೈತರಿಗೂ ತಟ್ಟಿದ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬಿಸಿ!
ರೈತರಿಗೂ ತಟ್ಟಿದ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬಿಸಿ!
ಉದ್ಯಮಿಗೆ ಬೆದರಿಕೆ ಹಾಕಿ 10 ಲಕ್ಷ ರೂ. ಹಫ್ತಾಗೆ ಬೇಡಿಕೆ ಇಟ್ಟ ಲೇಡಿ ಡಾನ್!
ಉದ್ಯಮಿಗೆ ಬೆದರಿಕೆ ಹಾಕಿ 10 ಲಕ್ಷ ರೂ. ಹಫ್ತಾಗೆ ಬೇಡಿಕೆ ಇಟ್ಟ ಲೇಡಿ ಡಾನ್!
ಕೆಪಿಸಿಸಿ ಕಚೇರಿಯಲ್ಲಿಯೇ ಯೂತ್​​ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ
ಕೆಪಿಸಿಸಿ ಕಚೇರಿಯಲ್ಲಿಯೇ ಯೂತ್​​ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ
ಕಲಬುರ್ಗಿಯಲ್ಲಿ ಮೃಗಾಲಯ ಉದ್ಘಾಟಿಸಿದ ಸಚಿವ ಖಂಡ್ರೆ!
ಕಲಬುರ್ಗಿಯಲ್ಲಿ ಮೃಗಾಲಯ ಉದ್ಘಾಟಿಸಿದ ಸಚಿವ ಖಂಡ್ರೆ!