IR-W vs SL-W: ಏಷ್ಯನ್ ಚಾಂಪಿಯನ್ ಶ್ರೀಲಂಕಾ ವಿರುದ್ಧ ಚೊಚ್ಚಲ ಏಕದಿನ ಸರಣಿ ಗೆದ್ದ ಐರ್ಲೆಂಡ್
IR-W vs SL-W: ಏಕದಿನ ಸರಣಿಯ ಮೊದಲೆರಡು ಪಂದ್ಯಗಳನ್ನು ಗೆದ್ದುಕೊಂಡಿರುವ ಐರ್ಲೆಂಡ್ ಮಹಿಳಾ ತಂಡ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಸರಣಿಯನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಸರಣಿಯ ಮೊದಲನೇ ಪಂದ್ಯವನ್ನು 3 ವಿಕೆಟ್ಗಳಿಂದ ಗೆದ್ದುಕೊಂಡಿದ್ದ ಐರ್ಲೆಂಡ್ ತಂಡ, ಇದೀಗ ಎರಡನೇ ಏಕದಿನ ಪಂದ್ಯದಲ್ಲಿ 15 ರನ್‌ಗಳ ರೋಚಕ ಜಯ ಸಾಧಿಸಿದೆ. ಇದರೊಂದಿಗೆ ಶ್ರೀಲಂಕಾ ವಿರುದ್ಧ ಮೊದಲ ಏಕದಿನ ಸರಣಿ ಗೆದ್ದ ದಾಖಲೆಯನ್ನು ಐರ್ಲೆಂಡ್ ಮಹಿಳಾ ಪಡೆ ನಿರ್ಮಿಸಿದೆ.

ಏಕದಿನ ಹಾಗೂ ಟಿ20ಸರಣಿಗಾಗಿ ಐರ್ಲೆಂಡ್ ಪ್ರವಾಸ ಮಾಡಿದ್ದ ಶ್ರೀಲಂಕಾ ಮಹಿಳಾ ತಂಡ ಸರಣಿ ಸೋಲಿನ ಮುಖಭಂಗದೊಂದಿಗೆ ತವರಿಗೆ ವಾಪಸ್ಸಾಗಲಿದೆ. ಉಭಯ ತಂಡಗಳ ನಡುವೆ ನಡೆದ ಟಿ20 ಸರಣಿ 1-1 ರಿಂದ ಸಮಬಲಗೊಂಡಿತ್ತು. ಆ ಬಳಿಕ ನಡೆದ ಏಕದಿನ ಸರಣಿಯ ಮೊದಲೆರಡು ಪಂದ್ಯಗಳನ್ನು ಗೆದ್ದುಕೊಂಡಿರುವ ಐರ್ಲೆಂಡ್ ಮಹಿಳಾ ತಂಡ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಸರಣಿಯನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಸರಣಿಯ ಮೊದಲನೇ ಪಂದ್ಯವನ್ನು 3 ವಿಕೆಟ್ಗಳಿಂದ ಗೆದ್ದುಕೊಂಡಿದ್ದ ಐರ್ಲೆಂಡ್ ತಂಡ, ಇದೀಗ ಎರಡನೇ ಏಕದಿನ ಪಂದ್ಯದಲ್ಲಿ 15 ರನ್‌ಗಳ ರೋಚಕ ಜಯ ಸಾಧಿಸಿದೆ. ಇದರೊಂದಿಗೆ ಶ್ರೀಲಂಕಾ ವಿರುದ್ಧ ಮೊದಲ ಏಕದಿನ ಸರಣಿ ಗೆದ್ದ ದಾಖಲೆಯನ್ನು ಐರ್ಲೆಂಡ್ ಮಹಿಳಾ ಪಡೆ ನಿರ್ಮಿಸಿದೆ.
255 ರನ್ ಕಲೆಹಾಕಿದ ಐರ್ಲೆಂಡ್
ಎರಡನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಐರ್ಲೆಂಡ್ ತಂಡ 5 ವಿಕೆಟ್ ನಷ್ಟಕ್ಕೆ 255 ರನ್ ಕಲೆಹಾಕಿತು. ಆದರೆ ತಂಡಕ್ಕೆ ನಿರೀಕ್ಷಿತ ಆರಂಭ ಸಿಗಲಿಲ್ಲ. ತಂಡ 10 ರನ್ ಗಳಿಸುವಷ್ಟರಲ್ಲಿ ಮೊದಲ ವಿಕೆಟ್ ಕಳೆದುಕೊಂಡಿತು. ಆ ಬಳಿಕ 134 ರನ್ ಗಳಿಸುವಷ್ಟರಲ್ಲಿ ತಂಡದ ಪ್ರಮುಖ 4 ವಿಕೆಟ್ಗಳು ಪತನಗೊಂಡಿದ್ದವು. ಇಲ್ಲಿಂದ, ಲಿಯಾ ಪಾಲ್ ಹಾಗೂ ರೆಬೆಕಾ ಸ್ಟೋಕೆಲ್ ಉತ್ತಮ ಜೊತೆಯಾಟವನ್ನಾಡಿ ಐದನೇ ವಿಕೆಟ್‌ಗೆ 100 ಕ್ಕೂ ಹೆಚ್ಚು ರನ್ ಸೇರಿಸಿದರು. ಈ ಇಬ್ಬರ ಜೊತೆಯಾಟದ ಆಧಾರದ ಮೇಲೆ ಐರ್ಲೆಂಡ್ ತಂಡ 50 ಓವರ್‌ಗಳಲ್ಲಿ 255 ರನ್ ಕಲೆಹಾಕಿತು. ಅಂತಿಮವಾಗಿ ಲಿಯಾ ಪೌಲ್ 81 ರನ್‌ಗಳ ಇನ್ನಿಂಗ್ಸ್ ಆಡಿದರೆ, ರೆಬೆಕಾ ಸ್ಟೋಕೆಲ್ ಅಜೇಯ 53 ರನ್ ಬಾರಿಸಿದರು. ಆಮಿ ಹಂಟರ್ ಕೂಡ 66 ರನ್‌ಗಳ ಪ್ರಮುಖ ಇನ್ನಿಂಗ್ಸ್ ಆಡಿದರು.
A historic series win for Ireland in Belfast after they scripted an amazing turnaround in the second ODI 🌟
Details 👇#IREvSL | #IWChttps://t.co/5M3CaEF3uf
— ICC (@ICC) August 18, 2024
ಹರ್ಷಿತಾ- ಕವಿಶಾ ಅಮೋಘ ಜೊತೆಯಾಟ
ಇನ್ನು 256 ರನ್‌ಗಳ ಗುರಿ ಬೆನ್ನತ್ತಿದ್ದ ಶ್ರೀಲಂಕಾ ಮಹಿಳಾ ತಂಡ ಎರಡನೇ ಏಕದಿನ ಪಂದ್ಯದಲ್ಲಿ 4 ರನ್ ಗಳಿಸುವಷ್ಟರಲ್ಲಿ ತನ್ನ ಮೊದಲ ವಿಕೆಟ್ ಕಳೆದುಕೊಂಡಿತು. ಇದಾದ ಬಳಿಕ ಎರಡನೇ ವಿಕೆಟ್‌ಗೆ ನಾಯಕಿ ಚಾಮರಿ ಅಟಪಟ್ಟು ಮತ್ತು ಹರ್ಷಿತಾ ಸಮರವಿಕ್ರಮ ನಡುವೆ 42 ರನ್‌ಗಳ ಜೊತೆಯಾಟ ಕಂಡುಬಂದಿತು. ಆದರೆ 22 ರನ್‌ಗಳ ಇನ್ನಿಂಗ್ಸ್ ಆಡಿದ ನಂತರ ಅಟಪಟ್ಟು ಪೆವಿಲಿಯನ್ ಸೇರಿಕೊಂಡರು. ಇಲ್ಲಿಂದ ಹರ್ಷಿತಾ ಅವರು ಕವಿಶಾ ದಿಲ್ಹರಾ ಜೊತೆಗೂಡಿ ತಂಡದ ಮೊತ್ತವನ್ನು 172 ರನ್‌ಗಳಿಗೆ ಕೊಂಡೊಯ್ದರು.
ವ್ಯರ್ಥವಾಯ್ತು ಹರ್ಷಿತಾ ಸಿಡಿಸಿದ ಶತಕ
ಈ ಜೊತೆಯಾಟವನ್ನು ಮುರಿಯುವ ಮೂಲಕ ಐರ್ಲೆಂಡ್ ಮಹಿಳಾ ತಂಡ ಮತ್ತೆ ಪಂದ್ಯದಲ್ಲಿ ಪುನರಾಗಮನ ಮಾಡಿತು. ಈ ಪಂದ್ಯದಲ್ಲಿ ತಂಡದ ಪರ ಏಕಾಂಗಿ ಹೋರಾಟ ನಡೆಸಿದ ಹರ್ಷಿತಾ 105 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರಾದರೂ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ. ಐರ್ಲೆಂಡ್ ತಂಡದ ಪರ ಬೌಲಿಂಗ್ನಲ್ಲಿ ಮಿಂಚಿದ ಅರ್ಲೀನ್ ಕೆಲ್ಲಿ 3 ವಿಕೆಟ್ ಪಡೆದರೆ, ಜೇನ್ ಮ್ಯಾಗೈರ್ 2 ವಿಕೆಟ್ ಪಡೆದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:36 pm, Mon, 19 August 24
